ಆರೂ ಸಮಯಕ್ಕೊದಗಲಿಲ್ಲ

ಆರೂ ಸಮಯಕ್ಕೊದಗಲಿಲ್ಲಮೋರೆ ನೋಡುತ ಸುಮ್ಮನಿಹರೆಲ್ಲ

ಮಗಳು ಮಹಲಕುಮಿ ಮೊಮ್ಮಗನು ಸರಸಿಜಭವನುಖಗರಾಜವಾಹನನು ತನ್ನಳಿಯನುಅಗಜನಂದು ತನ್ನೊಡಲೊಳಿಂಬಿಟ್ಟು ಮೂ-ರ್ಬೊಗಸೆ ಮಾಡಿದ ಮುನಿಯ ಬಿಡಿಸಲಿಲ್ಲ||1||

ಶ್ರೀದೇವಿ ಭೂದೇವಿ ಮಾತೆಯರು ತಾವಿರಲುಯಾದವರಾಯ ಮೋಹದ ತಂದೆಯುವೇದಮುಖದಣ್ಣನಿರೆ ಉರಿ ನಯನದಿಂದ ಸ್ಮರಬೂದಿಯಾಗುವಾಗ ಬಿಡಿಸಲಿಲ್ಲವೇಕೆ||2||

ಪಿತನು ಸಾಗರನು ಹಿತದಾಕೆ ಶ್ರೀದೇವಿಅತಿ ಬೀಗನಾದವ ನಾರಾಯಣಜತೆ ಅಳಿಯರು ಬೊಮ್ಮಮನ್ಮಥರಿರಲಾಗಿಕ್ಷಿತಿಯೊಳಗೆ ಶಶಿ ಕ್ಷೀಣವಾಗುವ ಸಮಯದಿ ||3||

ತೆತ್ತೀಸ ಕೋಟಿ ದೇವರ್ಕಳು ತಾವಿರಲುಒತ್ತಿನಲಿ ಇಂದ್ರ ಉಪೇಂದ್ರರಿರಲುಮತ್ತೆ ಪಾರ್ವತಿ ಪುತ್ರ ವೀರೇಶ ದಕ್ಷನನೆತ್ತಿ ಹರಿಗಡಿವಾಗ ನೋಡುತಿಹರೆಲ್ಲ|| 4||

ಇಂಥಿಂಥ ದೊಡ್ಡವರು ಈ ಪಾಡು ಪಡಲಾಗಿಭ್ರಾಂತ ಮನುಜರಿಗೆ ಪೇಳಲಿನ್ನೆಷ್ಟುಕಂತುಪಿತ ಕಾಗಿನೆಲೆಯಾದಿಕೇಶವನಸಂತೋಷದಿಂ ನೆನೆದು ಸುಖಿಯಾಗೊ ಮನುಜ||5||

Leave a Comment

Your email address will not be published. Required fields are marked *