ಆರು ಬಾಳಿದರೇನು ಆರು ಬದುಕಿದರೇನು

ಆರು ಬಾಳಿದರೇನು ಆರು ಬದುಕಿದರೇನುನಾರಾಯಣನ ಸ್ಮರಣೆ ನಮಗಿಲ್ಲದನಕ

ಉಣ್ಣ ಬರದವರಲ್ಲಿ ಊರೂಟವಾದರೇನುಹಣ್ಣುಬಿಡದ ಮರಗಳು ಹಾಳಾದರೇನುಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನುಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು ||1||

ಅಕ್ಕರಿಲ್ಲದವಗೆ ಮಕ್ಕಳಿದ್ದು ಫಲವೇನುಹೊಕ್ಕು ನಡೆಯದ ನಂಟತನದೊಳೇನುರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನುಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು ||2||

ಅಲ್ಪ ದೊರೆಗಳ ಜೀತ ಎಷ್ಟು ಮಾಡಿದರೇನುಬಲ್ಪಂಥವಿಲ್ಲದವನ ಬಾಳ್ವೆಯೇನುಕಲ್ಪಕಲ್ಪಿತ ಕಾಗಿನೆಲೆಯಾದಿಕೇಶವನಸ್ವಲ್ಪವೂ ನೆನೆಯದ ನರನಿದ್ದರೇನು ||3||

Leave a Comment

Your email address will not be published. Required fields are marked *