ಅಲೆದಲೆದು ಅತಿದಣಿದು ನೆಲೆಗಾಣ್ದೆ ನಿನ್ನಡಿಗೆ
ಎಲೆ ತಾಯೆ ಕಡೆಗಿಂದು ಬಂದೆಮ್ಮಸಲಹು||
ಕೊನೆಯಿಲ್ಲ ಕೊರೆಯಿಲ್ಲ ಈ ನಮ್ಮ ದುಃಖಕ್ಕೆ
ಮನದಲ್ಲಿ ಬನದಲ್ಲಿ ನೆಮ್ಮದಿಯು ಇನಿತಿಲ್ಲ|
ಜನುಮಗಳು ಕಳೆಕಳೆದು ದುಃಖ ಮಿತಿಮೀರುತಿದೆ
ಜನನಿ ಮಂಗಳಮೂರ್ತಿ ಕಳೆಯೆಮ್ಮ ಕಲುಷಾರ್ತಿ||
ಪರಮಹಂಸರ ಕರುಣೆರೂಪಿಣಿಯೆ ನೀ ತಾಯೆ
ಪರತನವನರಿಯದಿಹ ಪ್ರೇಮದಂಬುಧಿ ಜಲವ|
ಎರೆದೆಮ್ಮನುದ್ಧರಿಸು ಪತಿತಪಾವನೆ ಮಾತೆ
ಸಾರದಾಯಿನಿ ಪರಮೆ ಅಕಳಂಕಚರಿತೆ||
——ಸ್ವಾಮಿ ತದ್ರೂಪಾನಂದ