ಅರಿವಿನ ಆಪ್ಯಾಯನಕ್ಕೆ ಅನುಭಾವವೆ ತೃಪ್ತಿ,

ಅರಿವಿನ ಆಪ್ಯಾಯನಕ್ಕೆ ಅನುಭಾವವೆ ತೃಪ್ತಿ,
ಅರಿವು ನೆರೆ ಕೂಡಿ, ಆ[ಚಾ]ರವೆ ಪ್ರಾಣವಾಗಿ
ವಿಶ್ರಮಿಸಿದ ಬಳಿಕ, ಶ್ರೀಗುರು ಕೃಪೆಯ ಮಾಡಿದ
ಪ್ರಾಣಲಿಂಗದ ಘನವೆಂತೆಂದಡೆ: ಮತ್ಸ್ಯನುಂಗಿದ ಮಾಣಿಕ್ಯದಂತೆ,
ಮುತ್ತುನುಂಗಿದ ನೀರಿನಂತೆ, ಕಣ್ಣಾಲಿ ನುಂಗಿದ ನೋಟದಂತೆ,
ಬಯಲನೊಳಕೊಂಡ ಬ್ರಹ್ಮಾಂಡದೊಳಗಿಪ್ಪ ಸ್ವಯಾನುಭಾವಿಗಳ
ಅನುಭಾವವ ತೋರಿ ಬದುಕಿಸಾ, ಕೂಡಲಸಂಗಮದೇವಾ

Leave a Comment

Your email address will not be published. Required fields are marked *