ಅರಿದಿಹೆನೆಂದಡೆ ಅರಿವಿಂಗಸಾಧ್ಯ,
ನೆನೆದಿಹೆನೆಂದಡೆ ನೆನಹಿಂಗಸಾಧ್ಯ,
ಭಾವಿಸಿಹೆನೆಂದಡೆ ಭಾವಕ್ಕಸಾಧ್ಯ,
ವಾಙ್ಮನಕ್ಕಗೋಚರ ಲಿಂಗವನರಿವ ಪರಿಯೆಂತಯ್ಯಾ,
ಗುರು ತೋರದನ್ನಕ್ಕರ ? ಗುರುಶಿಷ್ಯರ ಮಥನದಲ್ಲಿ
ಸ್ವಯಂಜ್ಯೋತಿಲಿಂಗವು ಉದಯವಪ್ಪುದೆಂಬ ಶ್ರುತಿ
ಹುಸಿಯೆ ಕೂಡಲಸಂಗಮದೇವಾ, ನಿಮ್ಮ ಮಹಾನುಭಾವರ
ಮಥನದಿಂದ ಎನ್ನಲ್ಲಿ ನಿಜವ ನೆಲೆಗೊಳಿಸಾ, ಪ್ರಭುವೆ.