ಅರಿತೆ ನಾನು ಅರಿತೆ ನಾನು
ನಿಜದ ನೆಲೆಯನರಿತೆನು|
ಭಾವದಂತರಂಗವರಿತ
ವ್ಯಕ್ತಿಯೊಬ್ಬ ದೊರೆತನು||
ಎಂದೆಂದೂ ಇರುಳಿಲ್ಲದ
ಬೆಳಕಿನೂರಿನಿಂದ ಅವನು
ನಮ್ಮಲ್ಲಿಗೆ ಬಂದನು|
ಅವನ ಸಂಗದಿಂದ ನಾನು
ಹಗಲಾವುದು ಇರುಳಾವುದು
ಎಂಬುದನೂ ತಿಳಿಯೆನು||
ಜಪತಪಾದಿ ಕರ್ಮಗಳೂ
ನೀರಸವೆಂದರಿತೆ ನಾನು
ಹಳೆಯ ನಿದ್ರೆ ಹರಿಯಿತು|
ತೂಕಡಿಸುವುದೆಲ್ಲಿ ಬಂತು
ನಿರಂತರವು ಯೋಗದಲ್ಲಿ
ಎಚ್ಚರಿರುವುದಾಯಿತು||
—ವಚನವೇದ