ಅರಿತು ಭಜಿಪರ್ಯಾರಯ್ಯ ರಂಗಯ್ಯ

ಅರಿತು ಭಜಿಪರ್ಯಾರಯ್ಯ ರಂಗಯ್ಯ ನಿನ್ನ
ಸಿರಿದೇವಿಯು ಕಿರುಬೆರಳಲ್ಲಿರುವ ಸೊಬಗನ್ನುಅರಿಯಲಾರಳೊ ದೇವ

ಇಂದಿರಾದೇವಿಯು ಅರಿಯಲಾರಳು ದೇವಬೃಂದಾರಕರೆಲ್ಲ ನಿಂದು ಯೋಚಿಪರುನಂದತೀರ್ಥರ ಮತದೊಳಗೆ ಬಂದವರೆಲ್ಲಎಂದಿಗಾದರು ಪರಮಾನಂದ ಪೊಂದುವರು||1||

ಮಾನವರು ಹೀನಮಾರ್ಗದೊಳು ಮುಳುಗಿಹರುಜ್ಞಾನಿಂದು ಧ್ಯಾನಿಪರು ನಿನ್ನನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣಕಾನನದೊಳು ಕಣ್ಣುಮುಚ್ಚಿ ಬಿಟ್ಟಿಹರೊ|| 2||

ಜಲದೊಳಗಿನ ಕಪ್ಪೆ ಜಲದ ಸವಿಯರಿಯದುಜಲದ ಸುಗಂಧವ ಜಲವರಿಯದುನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆಸುಲಲಿತ ತತ್ತ್ವವನು ಸುಲಭ ಮಾರ್ಗದಿ ತೋರೊ ||3||

Leave a Comment

Your email address will not be published. Required fields are marked *