ಅರಗಿನ ಪುತ್ಥಳಿಯನುರಿಯ ನಾಲಗೆ ಹೊಯಿದು

ಅರಗಿನ ಪುತ್ಥಳಿಯನುರಿಯ ನಾಲಗೆ ಹೊಯಿದು
ಮಾತಾಡುವ ಸರಸ ಬೇಡ ! ಬೆಣ್ಣೆಯ ಬೆನಕಂಗೆ
ಕೆಂಡದುಂಡಲಿಗೆಯ ಮಾಡಿ ಚಲ್ಲವಾಡಿದಡೆ ಹಲ್ಲು
ಹೋಹುದು ! ಕೂಡಲಸಂಗನ ಶರಣರೊಡನೆ ಸರಸವಾಡಿದಡೆ
ಅದು ವಿರಸ ಕಾಣಿರಯ್ಯಾ.

Leave a Comment

Your email address will not be published. Required fields are marked *