ಅಭ್ಯಾಸವನು ಮಾಡಬೇಕು ಬಿಡದೆ…. ಶ್ರೀ ಗು-ರುಭ್ಯೋನಮಃ ಎಂಬ ದಿವ್ಯನಾಮಂಗಳಂ
ಕೇಶವ ನಾರಾಯಣ ಮಾಧವ ಗೋವಿಂದ ಭವನಾಶ ಭಕ್ತ ಹೃದಯ ಕಮಲಾಬ್ಜದ್ಯುಮಣಿದೋಷರಹಿತ ವಿಷ್ಣು ಮದುಸೂದನ ತ್ರಿವಿಕ್ರಮ ಸು-ರೇಶ ಸರ್ವೋತ್ತಮ ದಿವ್ಯ ನಾಮಂಗಳನು ||1||
ವಾಮನ ಶ್ರೀಧರ ಹೃಷಿಕೇಶ……….ಪುಣ್ಯೋದರ ಹಿರಣ್ಯವಾಸದಾಮೋದರಾಮಲ ಕೌಸ್ತುಭರತ್ನ ವನಮಾಲಿರಾಮ ರಘುಪುಂಗವನ ನಾಮಂಗಳನು ||2||
ಸಂಕರ್ಷಣ ವಾಸುದೇವ ಪ್ರದ್ಯುಮ್ನ ನಿಖಿ-ಳಾಂಕ ಪಂಕೇಜ ಪತ್ರಾಯತಾಕ್ಷಕಿಂಕರ ರಕ್ಷಕ ಅನಿರುದ್ಧಪುರುಷೋತ್ತಮಶಂಕರಪ್ರಿಯ ಅಧೋಕ್ಷಜ ನಾಮಂಗಳಂ||3||
ನಾರಸಿಂಹಾಚ್ಯುತ ಜನಾರ್ದನ ಉಪೇಂದ್ರಸಾರ ಭವಭಯ ಹರ ಕೃಷ್ಣ ವಿಶ್ವೋ-ದ್ಧಾರ………….. ವನಮಾಲಿ ಆಮೂರುತಿಯ ನಾಮಂಗಳಂ ||4||
ಅಸಮಪಟು ಬಲಿಯ ಕಾಳೆಗದಿ ನುಂಗಿದ ನಿಜಪಾದರಸವಿರುದ್ಧ ತಾವಿಗೊದಗುವ ತೆರದೊಳುಬಿಸಜಾಕ್ಷ ಕಾಗಿನೆಲೆಯಾದಿಕೇಶವ ಎನ್ನಅಸುವಳಿದು ಪೋಪಾಗ ಜಿಹ್ವೆಗೊದಗುವಂತೆ||5||