ನಾನೀಗ ಅಜ್ಞಾನದಡಿಗೆಯನು ಮಾಡಬೇಕಣ್ಣ
ಅಡಿಗೆಯನ್ನು ಮಾಡಬೇಕುಮಡಿಸಬೇಕು ಮದಗಳನ್ನುಒಡೆಯನಾಜ್ಞೆಯಿಂದ ಒಳ್ಳೆಸಡಗರದಲಿ ಮನೆಯ ಸಾರಿಸಿ
ತನ್ನ ಗುರುವ ನೆನೆಯ ಬೇಕಣ್ಣತನುಭಾವವೆಂಬ ಭಿನ್ನ ಕಲ್ಮಶವಳಿಯ ಬೇಕಣ್ಣಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ|| 1||
ತತ್ವಭಾಂಡವ ತೊಳೆಯ ಬೇಕಣ್ಣ – ಸತ್ಯಾತ್ಮನಾಗಿಅರ್ತಿ ಅಕ್ಕಿಯ ಮಥಿಸಬೇಕಣ್ಣಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನುಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ ||2||
ಜನನ ಸೊಂಡಿಗೆ ಹುರಿಯಬೇಕಣ್ಣ – ನಿಜವಾಗಿ ನಿಂತುತನುವು ತುಪ್ಪವ ಕಾಸಬೇಕಣ್ಣಕನಕಗಿರಿ ಕಾಗಿನೆಲೆಯಾದಿಕೇಶವನ ದಾಸಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ ||3||