ಅಡಿಗಳಿಗೊಂದಿಪೆ ಪುರಂದರ

ಅಡಿಗಳಿಗೊಂದಿಪೆ ಪುರಂದರ ಗುರುವೆ
ಕಡು e್ಞÁನ-ಭಕ್ತಿ-ವೈರಾಗ್ಯದ ನಿಧಿಯೆ
ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ |
ಗುರು ವ್ಯಾಸರಾಯರಿಂದುಪದೇಶಗೊಂಡೆ ||
ಎರಡೆರಡು ಲಕ್ಷದಿಪ್ಪತೈದು ಸಾವಿರ |
ವರ ನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ||1||

ಗಂಗಾದಿ ಸಕಲ ತೀರ್ಥಂಗಳ ಚರಿಸಿತು |
ರಂಗವದನ ವೇದವಾಸ್ಯನ ||
ಹಿಂಗದೆ ಮನದಲ್ಲಿ ನೆನೆದು ನೆನೆದು ಮರೆವ |
ಮಂಗಳ ಮಹಿಮೆಯ ನುತಿಸಿ ನುತಿಸಿ ನಾ ||2||

ನಿನ್ನತಿಶಯಗುಣ ವರ್ಣಿಸಲಳವಲ್ಲ |
ನಿನ್ನ ಸೇವಕನ ಸೇವಕನೆಂತೆಂದು ||
ಪನ್ನಗಶಯನ ಮುಕುಂದ ಕರುಣ ಪ್ರ |
ಸನ್ನ ವಿಜಯವಿಠ್ಠಲ ಸಂಪನ್ನ ||3||

Leave a Comment

Your email address will not be published. Required fields are marked *