ಅಟ್ಟು ಇಕ್ಕದವರ ಮನೆ ಪಾಯಸ ಕಜ್ಜಾಯವಅಟ್ಟರೇನು ಅಡದಿದ್ದರೇನು
ನಿಚ್ಚಣಿಗೆ ದೋಟಿಗೆ ನಿಲುಕದ ಹಣ್ಣಿನ ವೃಕ್ಷನಿಚ್ಚ ನಿಚ್ಚವು ಬಾಗಿ ಫಲವಾದರೇನುಔಚಿತ್ಯ ವಿದ್ಯೆಯನರಿಯದ ದೊರೆ ತಾನುಮೆಚ್ಚಿದರೇನು ಮೆಚ್ಚದಿದ್ದರೇನು ||1||
ದಾರಿದ್ರ್ಯಕ್ಕೊದಗದ ದ್ರವ್ಯ ಪದಾರ್ಥದಏರಿ ಇದ್ದರೇನು ಪರ್ವತವಿದ್ದರೇನುಶರೀರ ಸೌಖ್ಯ ಶಮನಕ್ಕಾಗದ ಹೆಣ್ಣುಊರಲಿದ್ದರೇನು ತೌರೂರಲಿದ್ದರೇನು ||2||
ಉರಗಾದ್ರಿ ವಾಸ ನಾರಾಯಣಾದಿಕೇಶವನಚರಣ ಕಮಲವನು ಸೇರಿಕೊಳ್ಳದೆವರ ಶಾಪವಿಲ್ಲದ ಬಣಗುದೈವಗಳಿಗೆಶರಣೆಂದರೇನು ಶರಣೆನದಿದ್ದರೇನು|| 3||