ಅಗ್ನಿಮಂತ್ರ ದೀಕ್ಷೆಯ

ಅಗ್ನಿಮಂತ್ರ ದೀಕ್ಷೆಯ ಕೊಡು ನಿನ್ನ ಸಂತಾನಕಿಂದು|
ಆಶೀರ್ವಾದ ಕವಚ ತೊಡಿಸು ದೈನ್ಯವಸನದಿಂ ಬಿಡಿಸು||

ಕುದಿಸು ಎಮ್ಮ ಹೃದಯ ರುಧಿರ
ಒರಸು ಭಯದ ಅಶ್ರು ಜಲವ
ನಿಲಿಸು ಎಮ್ಮ ಜಗದ ಸಭೆಯೊಳ್
ನ್ನಿನ ಸುತ್ತ ತಾಯಿ ||

ನರರು ನಾವು ಕುರಿಗಳಲ್ತು
ನಿನ್ನ ಸುತರು ದೀನರೆಂತು
ವ್ಯರ್ಥ ಭೀತಿ ಏಕೆ ಇನ್ನು
ಮಿಥ್ಯವಲ್ತೆ ಈ ಲಜ್ಜೆ||

ಬಾರಮ್ಮ ಬಾರಮ್ಮ ಬಾರೆಮ್ಮ ತಾಯಿ
ದಶಪ್ರಹರಣ ಧಾರಿಣೀ
ನಗುತ ಅಟ್ಟ ಅಟ್ಟಹಾಸದಿ
ದಿವಿಯ ಭುವಿಯ ತುಂಬಿ ನೀ
ಸಾಧಿಸಿ ನಿನ್ನ ಕಾರ್ಯವನ್ನು
ಭೇದ ಸ್ವಾರ್ಥ ಕಳೆವೆವು||

Leave a Comment

Your email address will not be published. Required fields are marked *