ಅಂಧಂತಮಸು ಇನ್ನಾರಿಗೆ ಗೋ-ವಿಂದನ ನಿಂದಿಸುವರಿಗೆ
ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ
ಮಾತುಮಾತಿಗೆ ಹರಿಯ ನಿಂದಿಸಿ ಸ-ರ್ವೋತ್ತಮ ಶಿವನೆಂದು ವಾದಿಸಿಧಾತುಗ್ರಂಥಗಳೆಲ್ಲ ತೋರಿಸಿ ವೇ-ದಾಂತ ಪ್ರಮಾಣಗಳ ಹಾರಿಸಿಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟುನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ ||1||
ಮೂಲಕವತಾರಕ್ಕೆ ಭೇದವು – ಮುಖ್ಯಶೀಲ ಪಂಡಿತರೊಳಗೆ ವಿವಾದವುಲೀಲಾ ಸಾದೃಶ್ಯವ ತೋರುತ – ಲಿಂಗಭಂಗವಿಲ್ಲದ ದೇಹ ಹಾರುತಮೂಲ ಗುರುವು ಕುಂತೀಬಾಲನೆನ್ನದೆ ವೃಥಾಶೀಲಗೆಟ್ಟಂಥ ಖೂಳರಿಗಲ್ಲದೆ ಮತ್ತೆ ||2||
ವ್ಯಾಸರ ಮಾತುಗಳಾಡುತ ವಿ-ಶ್ವಾಸ ಘಾತಕತನ ಮಾಡುತದೋಷವೆಂದರೆ ನುಡಿ ಕೇಳದೆ ಸಂ-ತೋಷವೆಂದರೆ ನೋಡಿ ಬಾಳದೆಶೇಷಶಯನನಾದಿಕೇಶವರಾಯನದಾಸರೊಡೆಯ ಮಧ್ವದ್ವೇಷಿಗಳಿಗಲ್ಲದೆ ||3||