ಅಂಜಿಕಿನ್ಯಾತಕ್ಕಯ್ಯಾ

ಅಂಜಿಕಿನ್ಯಾತಕ್ಕಯ್ಯಾ ಸಜ್ಜನರಿಗೆ
ಅಂಜಿಕಿನ್ಯಾತಕ್ಕಯ್ಯಾ||

ಸಂಜೀವರಾಯರ ಸ್ಮರಣೆಮಾಡಿದಮೇಲೆ||

ಕನಸಲಿ ಮನದಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೆ ಪಾಪ||

ರೋಮರೋಮಕೆ ಕೋಟಿ ಲಿಂಗವುದುರಿಸಿದ
ಭೀಮನ ನೆನೆದರೆ ಬಿಟ್ಟುಹೋಗದೆ ಪಾಪ||

ಪುರಂದರವಿಟ್ಠಲ ಪೂಜೆಯ ಮಾಡುವ
ಗುರು ಮಧ್ವರಾಯರ ಸ್ಮರಣೆಮಾಡಿದಮೇಲೆ||

                                                         —-ಪುರಂದರದಾಸರು

Leave a Comment

Your email address will not be published. Required fields are marked *