ಸುರನದಿ ಪೆತ್ತವನೆ ನಿನಗೆ ಮಜ್ಜನವೆ |
ಪಾಲಾರಮನೆಪುಳುವನೇ ನಿನಗೀ ಕ್ಷೀರಾಭಿಷೇಕವೇ ?
ಸರಸಿಜಕುಸುಮ ಗಂಧಾ ಪರಿಮಳದಿಂದ
ಪೊಡೆದಾ ದೈವವೇ | ಅವರೆ
ಯೊಳಗಿನ ಕುಸುಮ ನಿನಗೆ ಮೆಚ್ಚೆ |
ಎರಡು ಕಂಗಾಳಿಂದ ಲೋಕ ಬೆಳಗಿಸುವವನ
ವಿರಚೇ ಶಿವ ದೀಪದಿಂವೆಗ್ಗಳವೇನೊ ನಿನಗೆ | ||1||
ಕರದೊಳಗೆ ಮುನಿಗೆ ರಸಾಯನವುಳ್ಳ ಶ್ರೀ ತೋರಿ
ಶಿರವನೆ ತರಿಸಿ ತೊಲಗಿದ ಪದಾರ್ಥದಿಂದೇನಯ್ಯಾ | ಹಂಸ ಕು
ಬೇರ ನಿನ್ನವರಾಗಿದೆ | ಬರಿದೆಯಲಾ ಯೆನ್ನ ಸುವರ್ಣ ಪುಷ್ಪವೆ |
ಪರಿಪರಿಗಾಯನ ನಾರದಾದ್ಯರು ಪಾಡೆ
ಪೊಗಳಬಲ್ಲನೆ ನಿನ್ನನಗಣಿತ ಸ್ತೋ
ತ್ರಗಳಿಂದಯೀ ಹೇಳಿಕೆಯೇನೋ |
ಸುಗುಣ ಸುಹಸವಲ್ಲ ವಿಜಯವಿಠ್ಠಲದೊರೆಯೆ
ನಿನಗೆರಗಿ ಕೈಮುಗಿವೆನೊ ತರಳತನದಲ್ಲಿ ನಾನು||2||