ಸುಬ್ಬರಾಯ ಶುಭ ಕಾಯಾ |
ಸುಬ್ಬರಾಯ ಶುಭ ಕಾಯಂಗಜ ನೀನೆ ||
ನಿಬ್ಬರ ಮಹಿಮಾ ದಯಾಂಬುಧಿ ಸ್ಕಂದಾ
ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು
ಮಾರಾ ಸಾಂಬಾ ||
ಸಾರಿದೆ ನಿನ್ನವತಾರ ಮೂಲರೂಪ ||
ಸಾರಿಸಾರಿಗೆ ಸಂಸಾರಮನ ವಿ ||
ಸ್ತಾರವಾಗದಂತೆ
ಹಾರಿಸುದುರವ್ಯಾಪಾರ ಗುಣ ಪಾರಾವಾರಾ ||1||
ಮಾಡುವೆ ವಂದನೆ ಸತತ | ಸಜ್ಜನರೊಳ |
ಗಾಡಿಸು ಭಕ್ತ ಪ್ರೀತಾ ||
ಪಾಡಿದವರ ಕಾ | ಪಾಡುವ ರತಿ-ಪತಿ |
ಈಡಾರು ನಿನಗೇ ನಾಡಿನೊಳಗೆಲ್ಲ |
ಬೇಡುವೆ ದಯವನ್ನು | ಮಾಡುವಿರಕುತಿಯ |
ನೀಡು ಬಿಡದಲೆ ನೋಡು||2||
ಕುಕ್ಕೆಪುರಿಯ ನಿಲಯಾ | ಶ್ರೀಧರ ಬೊಮ್ಮ |
ಮುಕ್ಕಣ್ಣಗಳ ತನಯ ||
ಸೊಕ್ಕಿದ ತಾರಕ ರಕ್ಕಸ ಹರ ದೇ |
ವಕ್ಕಳ ನಿಜ ದಳಕೆ ನಾಯಕನಾದೆ ||
ಪಕ್ಕಿವಾಹನ ಸಿರಿ ವಿಜಯವಿಠ್ಠಲನ |
ಚಕ್ರ ಐದೊಂದು ವಕ್ರಾ ||3||