ಸೀತೆಯ ಭೂಮಿಜಾತೆಯ ಜಗ-|
ನ್ಮಾತೆಯ ಸ್ಮರಿಸಿ ವಿಖ್ಯಾತೆಯ
ಕ್ಷೀರ ವಾರಿಧಿಯ ಕುಮಾರಿಯ ತನ್ನ |
ಸೇರಿದವರ ಭಯಹಾರಿಯ ||
ತೋರುವಳು ಮುಕ್ತಿಹಾರಿಯ ಸರ್ವ |
ಸಾರ ಸುಂದರ ಶ್ರೀನಾರಿಯ ||1||
ಈಶಕೋಟಿಯೊಳ್ ಗಣನೆಯ ಸ್ವಪ್ರ-|
ಕಾಶವಾದ ಗುಣಶ್ರೇಣಿಯ ||
ಈಶಾದ್ಯರ ಪೆತ್ತ ಕರುಣಿಯ ನಿ-|
ರ್ದೋಷ ವಾರಿಧಿಕಲ್ಯಾಣಿಯ||2||
ವಿಜಯವಿಠ್ಠಲನ್ನ ರಾಣಿಯ ಪಂ-|
ಕಜಮಾಲೆ ಪಿಡಿದ ಪಾಣಿಯ ||
ವಿಜಯಲಕ್ಷ್ಮಿ ಗಜಗಮನೆಯ ನಿತ್ಯ |
ಸುಜನವಂದಿತೆ ಅಹಿವೇಣಿಯ ||3||