ಸಾಗುತಿಹುದು ಚಿತ್ತಭೃಂಗ
ಕಾಳೀಪದ ನೀಲಕಮಲ ಮಧುಪಾನದ ಆಸೆಗೆ|
ಸಕಲ ವಿಷಯ-ಕುಸುಮರಸವು
ಎಷ್ಟಾದರು ತುಚ್ಚವೆಂದು
ತಿಳಿಯಿತಿಂದು ಮನಸಿಗೆ||
ತಾಯ ಪಾದಕಮಲ ನೀಲ
ಮಧು ಕುಡಿಯುವ ಭೃಂಗ ನೀಲ
ನೀಲದಲ್ಲಿ ನೀಲ ಸೇರಿ
ನೀಲವಾದ ಪರಿಯನು
ಕಂಡು ಬೆರಗುವಡುವನು||
ಸುಖ ಬಂದರೆ ಹಿಗ್ಗದೆ
ನೋವಿನಲ್ಲಿ ಕುಗ್ಗದೆ
ಆನಂದಸಿಂಧುವಿನಲಿ
ನಿರುತ ತೇಲುತಿರುವನು
ಭಕ್ತ ಕಮಲಾಕಾಂತನು||
—-ವಚನವೇದ