ಸಪ್ತಋಷಿ ಭುವನದಿಂದ
ಇಳೆಗಿಳಿದು ಬಂದ|
ಶ್ರೀಗುರುದೇವನ ಕಂದ
ವಿವೇಕಾನಂದ||
ತ್ಯಾಗವಿರಾಗದ ಕಡಲು
ಭೋಗಗಳ ಸಿಡಿಲು|
ಜಗಜನರಿಗೆ ತಾಯ್ಮಡಿಲು
ಹರನ ನರನೊಡಲು||
ಆತ್ಮಜ್ಞಾನದ ಕಾಂತಿ
ಮೋಹದುಪಶಾಂತಿ|
ಬಳಲಿದರಿಗೆ ವಿಶ್ರಾಂತಿ
ನೀಗಿರುವೆ ಭ್ರಾಂತಿ||
ಮಿರುಗುವ ವಿದ್ಯಾಸೂರ್ಯ
ನಿಸ್ಸೀಮವೀರ್ಯ|
ಮೇರೆಯ ಅರಿಯದ ಧೈರ್ಯ
ಎಸಗೆ ಗುರುಕಾರ್ಯ||
—-ಸ್ವಾಮಿ ತದ್ರೂಪಾನಂದ