ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ
ಕೃಪಾಕರಿ ಶಂಕರಿ|
ಶ್ರಿತಜನಪಾಲಿನಿ ಮಹಾಬಲಾದ್ರಿವಾಸಿನಿ
ಮಹಿಷಾಸುರಮರ್ದಿನಿ||

ವಾಚಾಮಗೋಚರ-ಮಹಿಮವಿರಾಜಿತೇ
ವರಗುಣಭರಿತೇ|
ವಾಕ್ಪತಿಮುಖಸುರವಂದಿತೇ
ವಾಸುದೇವ-ಸಹಜಾತೇ||

ರಾಕಾ-ನಿಶಾಕರ-ಸನ್ನಿಭವದನೇ
ರಾಜೀವಲೋಚನೇ| ರಮಣೀಯ-
ಕುಂದರದನೇ | ರಕ್ಷಿತಭುವನೇ
ಮಣಿರಸನೇ||

ಮೂಕವಾಕ್ಪ್ರದಾನವಿಖ್ಯಾತೇ
ಮುನಿಜನನುತ-ಸುಪ್ರೀತೇ|
ಶ್ರೀಕರ-ತಾರಕ-ಮಂತ್ರಪೋಷಿತ -ಚಿತ್ತೇ
ಸದಾ ನಮಸ್ತೇ||

—-ಮೈ.ವಾಸುದೇವಾಚಾರ್ಯ

Leave a Comment

Your email address will not be published. Required fields are marked *