ಶಿವಗಣಂಗಳ ಮನೆಯಂಗಳ

ಶಿವಗಣಂಗಳ ಮನೆಯಂಗಳ
ವಾರಣಾಸಿಯೆಂಬುದು ಹುಸಿಯೆ,
ಪುರಾತನರ ಮನೆಯಂಗಳದಲ್ಲಿ
ಅಷ್ಟಾಷಷ್ಟಿ ತೀರ್ಥಂಗಳು ನೆಲೆಸಿಪ್ಪವಾಗಿ.
ಅದೆಂತೆಂದಡೆ ಅದಕ್ಕೆ ಆಗಮ ಸಾಕ್ಷಿ
‘ಕೇದಾರಸ್ಯೋದಕೆ ಪೀತೇ ವಾರಣಾಸ್ಯಾ ಮೃತೇ ಸತೀ’
ಶ್ರೀಶೈಲಶಿಖರೇ ದೃಷ್ಟೇ ಪುನರ್ಜನ್ಮ ನ ವಿದ್ಯತೇ ||ú
ಎಂಬ ಶಬ್ದಕ್ಕಧಿಕವು.
ಸುತ್ತಿಬರಲು ಶ್ರೀಶೈಲ, ಕೆಲಬಲದಲ್ಲಿ ಕೇದಾರ,
ಅಲ್ಲಿಂದ ಹೊರಗೆ ವಾರಣಾಸಿ.
ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗೆ,
ಎನ್ನ ದೇವ ಚೆನ್ನಮಲ್ಲಿಕಾರ್ಜುನಾ
ನಿಮ್ಮ ಭಕ್ತರ ಮನೆಯಂಗಳ ಪ್ರಯಾಗದಿಂದ ಗುರುಗಂಜಿಯಧಿಕ ನೋಡಾ ?

Leave a Comment

Your email address will not be published. Required fields are marked *