ವಿಗ್ರಹವನು ನಿಲಿಸೊ ವೆಂಕಟ ಗಗ-
ನಾಗ್ರಕ್ಕೆ ಬೆಳೆದು ಗಂಗೆಯ ಪಡೆವ ನಿನ್ನ
ರನ್ನದ ಮಕುಟ ಸುವರ್ಣ ಕುಂಡಲ ತೇಜ
ಚೆನ್ನ ಗಂಡಸ್ಥಳದಿ ತೂಗಿ ಪೊಳೆವ ನಿನ್ನ||1||
ಕೊರಳ ತ್ರಿರೇಖೆಯು ಉರು ಕೌಸ್ತುಭಹಾರ
ಉರದಲ್ಲಿ ಶ್ರೀ ವತ್ಸಧರಿಸಿ ಮೆರೆವ ನಿನ್ನ ||2||
ಕುಕ್ಷಿಯೊಳಗೆ ಲಕ್ಷ ಲೋಕವನಡಗಿಸಿ ಅ-
ಪೇಕ್ಷೆಯಿಂ ಸುಜನರ ರಕ್ಷಿಸುವ ನಿನ್ನ||3||
ನಖದೊಳನಂತ ಬ್ರಹ್ಮಾಂಡವನಡಗಿಸಿ
ಮಕ್ಕಳಾಟಿಕೆಯಂತೆ ಮರುಳುಮಾಡುವ ನಿನ್ನ||4||
ಉತ್ಪತ್ತಿ ಸ್ಥಿತಿ ಲಯ ಕಾರಣಕರ್ತ, ಜ-
ಗತ್ಪತಿ ವಿಜಯವಿಠ್ಠಲ ವೆಂಕಟ ||5||