ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ

ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ
ದಾತನು ನೀನೆಂದು ಬಯಸಿ ಬಂದೆನು ಮಾತನಾಡೈ

ಊದುವ ಸಿರಿ ಪೊಂಗೊಳಲೊ ಜಗ-|
ದಾಧಾರದ ನಿಜ ಹೊಳೆಯೋ ||
ಪಾದದ ಪೊಂಗೆಜ್ಜೆ ಥಳಿಲೊ ಸರ್ವ |
ವೇದಗಳರಸುವ ಕಲ್ಪಕ ಸೆಳಲೊ ||1||

ಕಸ್ತೂರಿ ತಿಲಕದ ಮದವೊ ಮ-
ಕುಟ ಮಸ್ತಕದಿ ಝಗಝಗವೊ ||
ವಿಸ್ತರದಿ ಪೊತ್ತ ಜಗವೊ ಪರ- |
ವಸ್ತುವು ನಂದ ಯಶೋದೆಯ ಮಗುವೊ ||2||

ನವನೀತವ ಪಿಡಿದ ಕರವೊ ನವ-|
ನವ ಮೋಹನ ಶೃಂಗಾರವೊ ||
ಅವತರಿಸಿದ ಸುರತರುವೊ ಶತ-
ರವಿಯಂದದಿ ಉಂಗುರವಿಟ್ಟ ಭರವೊ ||3||

ಆನಂದ e್ಞÁನದ ಹೃದವೊ ಶುಭ-|
ಮಾನವರಿಗೆ ಬಲು ಮೃದುವೊ ||
ಆನನ ಛವಿಯೊಳು ಮಿದುವೊ ಪಾಪ-|
ಕಾನನ ದಹಿಸುವ ಪಾವಕ ಪದವೊ ||4||

ತ್ರಿಜಗದಧಿಕ ಪಾವನನೊ ಪಂ-|
ಕಜ ನೇತ್ರೆಯ ನಾಯಕನೊ ||
ಅಜಭವಾದಿಗಳ ಜನಕನೊ ನಮ್ಮ |
ವಿಜಯವಿಠ್ಠಲ ಯದುಕುಮಾರಕನೊ ||5||

Leave a Comment

Your email address will not be published. Required fields are marked *