ಮಂದರಧರ ಪಾವನ ಇಂದಿರಾರಮಣನ _ ಗೋವಿಂದ ಎನ್ನಿರೋ
ನಂದನ ಕಂದ ಮುಕುಂದಾಬ್ಧಿಶಯನನ – ಗೋವಿಂದ ಎನ್ನಿರೋ
ಗರಳ ಕಂಧರ ಸಖನನುಜನ ಕೊಂದನ – ಗೋವಿಂದ ಎನ್ನಿರೋಸುರಮುನಿಯನುಜನ ಪಾದವ ಪಿಡಿದನ – ಗೋವಿಂದ ಎನ್ನಿರೋಪರಮ ವೈಷ್ಣವರ ಕೈಲಿ ದಾನವ ಪಿಡಿದನ _ ಗೋವಿಂದ ಎನ್ನಿರೋಉರಗನ ಮಗಳ ಗಂಡಗೆ ಪ್ರಾಣವಿತ್ತನ – ಗೋವಿಂದ ಎನ್ನಿರೋ ||1||
ಸತಿ ರುಕ್ಮಿಣಿಯ ರಾಧೆಯ ಚುಂಬಿಸಿದಾತನ – ಗೋವಿಂದ ಎನ್ನಿರೋಅತಿಶಯದಿಂದ ಸತಿ ರೂಪ ತಾಳ್ದನ _ ಗೋವಿಂದ ಎನ್ನಿರೋಪಿತನ ಮಾತನು ಶಿರದೊಳಗಾಂತು ನಡೆದನ – ಗೋವಿಂದ ಎನ್ನಿರೋಮತಿವಂತನಾಗಿ ಮಾತೆಯ ಶಿರವ ತರಿದನ – ಗೋವಿಂದ ಎನ್ನಿರೋ ||2||
ಕರೆತರಿಸಿದ ಮಾವನ ಕೊಂದಾತನ – ಗೋವಿಂದ ಎನ್ನಿರೋಧರೆಯ ಒಯ್ದನ ಕಾಯಗಳೆದನ – ಗೋವಿಂದ ಎನ್ನಿರೋಈರೇಳು ಭುವನಗಳ ಉದರದೊಳಿಟ್ಟಹನ – ಗೋವಿಂದ ಎನ್ನಿರೋಮಾರಜನಕ ಕಾಗಿನೆಲೆಯಾದಿಕೇಶವನ – ಗೋವಿಂದ ಎನ್ನಿರೋ ||3||