ಮಂಗಳಂ ಸರ್ವಜೀವ ರಕ್ಷಕಗೆಮಂಗಳಂ ಅಂಬುಜದಳಾಕ್ಷಗೆ
ಜಲಪ ಒಮ್ಮೆಗೆ ತಂದವಗೆ ಮಂಗಳಂಕುಲಗಿರಿಯನು ಕಾಯ್ದವಗೆ ಮಂಗಳಂನೆಲನ ಕದ್ದ ಚೋರನ ಗೆಲಿದಗೆ ಮಂಗಳಂಸುಲಭ ನರಸಿಂಹನಿಗೆ ಶುಭ ಮಂಗಳಂ ||1||
ವಸುಧೆ ಈರಡಿ ಗೈದವಗೆ ಮಂಗಳಂವಸುಧೇಶ ಕುಲವನಳಿದಗೆ ಮಂಗಳಂದಶಕಂಧರನನು ಗೆಲಿದಗೆ ಮಂಗಳಂಪಶುಗಳ ಕಾಯ್ದವಗೆ ಮಂಗಳಂ ||2||
ಪುರತ್ರಯ ವಧು ವ್ರತವಳಿದಗೆ ಮಂಗಳಂತುರಗ ವಾಹನನಿಗೆ ಮಂಗಳಂಗರುಡ ವಾಹನ ವಾರಿಧಿ ಶಯನವರ ಕಾಗಿನೆಲೆಯಾದಿಕೇಶವಗೆ ಮಂಗಳಂ ||3||