ನೋಡಿ ಮರುಳಾಗದಿರು ಪರಸತಿಯರ
ನಾಡೊಳಗೆ ಕೆಟ್ಟವರ ಪರಿಯ ನೀನರಿತು
ಶತಮಖವ ಮಾಡಿ ಸುರಸಭೆಗೈದ ನಹುಷ ತಾನಾತುರದಿ ಶಚಿಗೆ ಮನಸೋತು ಭ್ರಮಿಸಿಅತಿ ಬೇಗ ಚಲಿಸೆಂದು ಬೆಸಸಲಾ ಮುನಿಯಿಂದಗತಿಗೆಟ್ಟು ಉರಗನಾಗಿದ್ದ ಪರಿಯರಿತು ||1||
ಸುರಪತಿಯು ಗೌತಮನ ಸತಿಗಾಗಿ ಕಪಟದಿಂಧರೆಗೆ ಮಾಯಾವೇಷ ಧರಿಸಿ ಬಂದುಪರಮ ಮುನಿಯ ಶಾಪದಿಂದಂಗದೊಳು ಸಾ-ಸಿರ ಕಣ್ಗಳಾಗಿರ್ದ ಪರಿಯ ನೀನರಿತು ||2||
ಸ್ಮರನ ಶರತಾಪವನು ಪರಿಹರಿಸಲರಿಯದೆದುರುಳ ಕೀಚಕನು ದ್ರೌಪದಿಯ ತುಡುಕಿಮರುತ ಸುತ ಭೀಮನಿಂದಿರುಳೊಳಗೆ ಹತನಾಗೆನರಗುರಿಯೆ ನಿನ್ನ ಪಾಡೇನು ಧರೆಯೊಳಗೆ||3||
ಹರನ ವರವನು ಪಡೆದು ಶರಧಿ ಮಧ್ಯದೊಳಿದ್ದುದುರುಳ ದಶಶಿರನು ಜಾನಕಿಯನೊಯ್ಯೆಧುರದೊಳಗೆ ರಘುವರನ ಶರದಿಂದ ಈರೈದುಶಿರಗಳನೆ ಹೋಗಾಡಿಸಿದ ಪರಿಯನರಿತು ||4||
ಇಂತಿಂಥವರು ಕೆಟ್ಟು ಹೋದರೆಂಬುದನರಿತುಭ್ರಾಂತಿಯನೆ ಬಿಟ್ಟು ಭಯಭಕ್ತಿಯಿಂದಕಂತುಪಿತ ಕಾಗಿನೆಲೆಯಾದಿಕೇಶವನ ನಿ-ರಂತರದಿ ಭಜಿಸಿ ನೀ ನಿತ್ಯಸುಖಿಯಾಗು ||5||