ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ
ಘನ್ನಗಿರಿಯ ವಾಸ ಕಮಲಾಸನ ಜನಕ ತಿರುಮಲೇಶಾ
ಹರುವ ಸರ್ಪಯಿರುವ ಚೋರ
ಮುರುವ ಮೀರಿ ಬರುವ ಶರಧಿ ಉರೆವ ಕಿಚ್ಚು
ಕರೆವ ಮೃತ್ಯು ಸುರಿವ ಮಳೆ ಬಿರುವನೆಲ್ಲ
ಹೊಡೆವ ದೈತ್ಯಾ ತೊರೆವ ಸನ್ನ್ಯಾವ
ಮೇರೆ ತಪ್ಪಿ ಭರದಿ ತನಗೆ ಇದಿರು
ಬಂದವ ಕಾಣುತತಿ ಹರಿಯ
ನಾಮ ಮುಟ್ಟುವ ದೇವ ಶ್ರೀನಿವಾಸಾ||1||
ಸೃಷ್ಟಿ ಜನರಿಗೊಂದು ಆಳು
ಕೊಟ್ಟು ವೇಗದಿಂದ ಕರಿಯ
ಲಟ್ಟಿದವರ ಕಾಣೆನಯ್ಯಾ
ಎಷ್ಟೆಷ್ಟು ದೂರದಿಂದಲಿ
ಕಟ್ಟಿಕೊಂಡು ಹೊನ್ನು ಹಣಗಳ ತಮಗೆ ತಾನೆ
ಅಟ್ಟಹಾಸದಿಂದ ಮಂಗಳವ ಪಾಡಿ ಪೊರ
ಮಟ್ಟ ಒಪ್ಪ ತಿರುವೆಂಗಳಾ||2||
ಹದಿನೆಂಟು ಜಾತಿಯವರು
ಒದಗಿ ಮುದದಿಂದ ಕುಣಿದು
ಪದೋಪದಿಗೆ ಹಾಡಿ ಪಾಡುತ
ಹದುಳವಾದ ಪಂಚವಾದ್ಯ
ಎದುರುನಿಂದು ಧ್ವನಿಯ ಮಾಡುತಾ
ದಾಸರೆಂಬೊ ಅಟ್ಟಹಾಸದ ಮಾತು ನುಡಿಯುತ್ತ
ನಿತ್ಯ ನಿನ್ನ ಮದುವೆಯೆಂದು ಸುಖವು ಸುರಿಯುತ್ತಾ ||3||
ಎಲ್ಲರಿಲ್ಲಿಗೆ ಬಂದರೇನು ಯಿಲ್ಲ ಪು
ಣ್ಯಲೇಶ ಮಾತ್ರ ಸಲ್ಲದಯ್ಯಾ ಮುಕ್ತಿಗವರು
ಇಲ್ಲೆ ಸುಖವು ಬಟ್ಟು ಕಡಿಗೆ
ಎಲ್ಲೆಲ್ಲಿ ಜನಿಸಿ ಬಹು ಭವದ
ಪಲ್ಲಡಿಯೊಳಗೆ ಜನಿಸಿ ಜ್ಞಾನ
ವಿಲ್ಲದೆ ಸಲ್ಲುವರು ದುರಿತವ ವಹಿಸಿ ||4||
ಮನುಜರೆಣಿಕೆ ಏನು ಮತ್ತೆ
ವನಜ ಸಂಭವ ಈಶ ಮುಖ್ಯ
ಅನಿಮಿಷರೆಲ್ಲ ಬಂದು ಭಯದಿ
ಮನಸಿನಲಿ ನಿನ್ನ ಅರಸುತನದ ಶೌರ್ಯ
ವನ್ನು ಎಣಿಸುತ ನೆಲೆಗಾಣದೆ
ಮಣಿದು ನಮಸ್ಕರಿಸುತಾ ವಾಲ್ಗೈಸುತಾ
ಹೊಣಿಯೊ ವಿಜಯವಿಠ್ಠಲ ಎನುತಾ ||5||