ತಿರುದುಂಬುವ ನೀನು ತಿರುಮಲೇಶಾ

ತಿರುದುಂಬುವ ನೀನು ತಿರುಮಲೇಶಾ
ಮರುಗಲ್ಯಾತಕೆ ಇನ್ನು ಮನಸಿನೊಳಗೆ ಪ್ರತಿದಿನವು

ಬಲಿರಾಯ ಬಲು ದಾನವನು ಮಾಡುತಿರಲಾಗಿ
ಇಳಿಯ ಸುರÀವೇಷವನು ಧರಿಸಿ ಪೋಗಿ
ಹಲುಬಿ ಬಾಯಿದೆರದು ತ್ರಿಪಾದ ತಿರಕೆ ಕೊಂಡು
ನಿಳಿಯ ಬಾಗಿಲ ಕಾಯ್ದೊ ನಿಗಮ ಕುಲದಾತಾರಾ ||1||

ಗೋಪಳ್ಳಿಯಲಿ ಜನಿಸಿ ಗೋವುಗಳ ಕಾವುತ್ತ
ಗೋಪಾಲತತಿ ವಡನೆ ವಡನಾಡುತ
ತಾಪಸರು ಯಜ್ಞ ಕರ್ಮಾದಿಗಳು ಮಾಡುತಿರೆ
ಶ್ರೀಪತಿ ಅನ್ನ ತಿರಿದುಂಡು ಕ್ಷುದಿಯನ್ನ ಕಳೆದೆ ||2||

ಅಂದು ಈ ಪರಿಯ ಯಾಚಕ ವೃತ್ತಿಯನು ಮಾಡಿ
ಇಂದೆನ್ನ ಹೃತ್ಕಮಲದೊಳಗೆ ಬಂದೂ
ನಿಂದು ಮನೆಮನೆ ತಿರದುಂಬುವ ನೀನಲ್ಲವೆ
ಸಂದೇಹವೇಕೆ ಎನಗೆ ವಿಜಯವಿಠ್ಠಲರೇಯಾ ||3||

Leave a Comment

Your email address will not be published. Required fields are marked *