ಗಜವದನ ಬೇಡುವೆ ಗೌರೀತನಯ|
ತ್ರಿಜಗವಂದಿತನೆ ಸುಜನರ ಪೊರೆವನೆ||
ಪಾಶಾಂಕುಶ ಮುಸಲಾದ್ಯಾಯುಧಧರ|
ಮೂಷಕವಾಹನ ಮುನಿಜನ ಪ್ರೇಮ|
ಮೋದದಿಂದಲಿ ನಿನ್ನ ಪಾದವ ನಂಬಿದೆ|
ಸಾಧುವಂದಿತನೆ ಅನಾದರ ಮಾಡದೆ||
ಸರಸಿಜನಾಭ ಶ್ರೀ ಪುರಂದರವಿಟ್ಠಲನ|
ನಿರುತ ನೆನೆಯುವಂತೆ ವರ ದಯಮಾಡೋ||
—ಪುರಂದರದಾಸ
ಗಜವದನ ಬೇಡುವೆ ಗೌರೀತನಯ|
ತ್ರಿಜಗವಂದಿತನೆ ಸುಜನರ ಪೊರೆವನೆ||
ಪಾಶಾಂಕುಶ ಮುಸಲಾದ್ಯಾಯುಧಧರ|
ಮೂಷಕವಾಹನ ಮುನಿಜನ ಪ್ರೇಮ|
ಮೋದದಿಂದಲಿ ನಿನ್ನ ಪಾದವ ನಂಬಿದೆ|
ಸಾಧುವಂದಿತನೆ ಅನಾದರ ಮಾಡದೆ||
ಸರಸಿಜನಾಭ ಶ್ರೀ ಪುರಂದರವಿಟ್ಠಲನ|
ನಿರುತ ನೆನೆಯುವಂತೆ ವರ ದಯಮಾಡೋ||
—ಪುರಂದರದಾಸ