ಕಾಮವುಳ್ಳವರಿಗೆ ಕಾಯಸಂಗ ಮಚ್ಚು ನೋಡಾ.
ಕಾಮವಿಲ್ಲದವರಿಗೆ ಲಿಂಗಸಂಗ ಮಚ್ಚು ನೋಡಾ.
ಕಾಮವಿಕಾರಿ ಕಾಯದತ್ತ ಮುಂತಾದಡೆ,
ನಾ ನಿಮ್ಮತ್ತ ಮುಂತಾದೆ.
ಚೆನ್ನಮಲ್ಲಿಕಾರ್ಜುನಯ್ಯಾ, ಕಾಮವಿಕಾರಿಯ ಸಂಗವ ಹೊದ್ದಿದಡೆ ನಿಮ್ಮಾಣೆ.
ಕಾಮವುಳ್ಳವರಿಗೆ ಕಾಯಸಂಗ ಮಚ್ಚು ನೋಡಾ.
ಕಾಮವಿಲ್ಲದವರಿಗೆ ಲಿಂಗಸಂಗ ಮಚ್ಚು ನೋಡಾ.
ಕಾಮವಿಕಾರಿ ಕಾಯದತ್ತ ಮುಂತಾದಡೆ,
ನಾ ನಿಮ್ಮತ್ತ ಮುಂತಾದೆ.
ಚೆನ್ನಮಲ್ಲಿಕಾರ್ಜುನಯ್ಯಾ, ಕಾಮವಿಕಾರಿಯ ಸಂಗವ ಹೊದ್ದಿದಡೆ ನಿಮ್ಮಾಣೆ.