ಕರುಣಿಸಯ್ಯಾ ಗುರುವರ್ಯ ಪರಮ ಸುಹೃದಯಾ |
ನಿರುತ ನಿನ್ನವನೊ ನಾನು ಪುರಂದರರಾಯ ಯಿಂದು
ಲೋಕದ ಜನರು ತಮ್ಮ ಸುಕುಮಾರರಿಗೆ ಪೆಸರು |
ಯಾಕೆ ಯಿಡವರೊ ಜೀಯ್ಯಾ | ನೇಕ ಮಮತೆಯಲಿ ||
ಬೇಕೆ ಎನಗೆ ಯಿಂಥsÀ ಖ್ಯಾತಿ ನೀ ಕೊಟ್ಟ ಭಾಗ್ಯವೆಯಿರಲಿ |
ವಾಕು ವ್ಯರ್ಥವಾಗದಂತೆ ಸಾಕುವದು ಬಿಡದೆ ಒಲಿದು ||1||
ಅಡವಿ ಹತ್ತಿ ಪೋಪ ನರನ ಒಡನೆ ಕೂಡಿಕೊಂಡು ಬಂದು |
ಕಡು ಮಹೋತ್ಸವವ ಮಾಡಿ ವೇಗ ಪೊಡವಿಪತಿತನವು ||
ಧೃಢವಾಗಿ ವಾದಿಸಿ ಅವನ
ತೊಡರು ಕಳೆದು ಸರ್ವರೊಳಗೆ |
ನಡತಿವಂತ ಮಾಡಿದಂತೆ ಬಡವನ್ನಾ ಉದ್ಧರಿಸು ನಿ||2||
ಕೀರ್ತಿಯಪಕೀರ್ತಿ ಎರಡು ಪೆತ್ತ ತಂದೆ
ಯಿರಲಾಗಿ ಪುತ್ರನೀಗೆ ಬರುವಾವೆ
ಉತ್ತಮರು ಮೆಚ್ಚುವಂತೆ ನಿತ್ಯವೊಲಿದು
ಪಾಲಿಪದು ಎತ್ತಲಿದ್ದರೂ |
ಸತ್ಯ ವಿಜಯವಿಠ್ಠಲನ್ನ |
ತುತ್ತಿಸುವ ಮಹಾಮಹಿಮಾ ||3||