ಕರುಣ ಶೀತಲ ಕಿರಣ ಶೋಭಿತ
ತರಣಿ ನಿನ್ನಯ ಚರಣಕೆರಗುವೆ||
ಕಾಮ ಮೋಹದ ತಮವ ಕಳೆಯಲು
ಪ್ರೇಮ ಚ್ಯೋತಿಯ ಕಾಂತಿ ಬೆಳಗಿಹೆ|
ವಿಷಮ ಶೈತ್ಯದಿ ಭೀತ ಜಗಕೆ
ಸೌಮ್ಯ ಸಮತೆಯ ಸ್ಥೈರ್ಯ ನೀಡಿಹೆ||
ಕರ್ಮಕಾಂಡದ ಕ್ರೌರ್ಯ ಜಡತೆಯಿಂ
ಧರ್ಮಶಾಸ್ತ್ರದ ಶುಷ್ಕವಾದದಿಂ|
ಧರ್ಮಬಾಳ್ವೆಯ ಸಲಹಲೆಂದು
ಧರ್ಮಮೂರುತಿ ಇಳಿದು ಬಂದೆ||
ಸರ್ವಧರ್ಮದ ಸರ್ವಕರ್ಮದ
ಸರ್ವಸಾರವ ತೆರೆದು ತೋರಿದೆ|
ಸರ್ವಸೃಷ್ಟಿ ವಿಮುಕ್ತಿಸಾಧಕ
ಸರ್ವತ್ಯಾಗಿ ಸಾರ್ವಭೌಮ||
—–ಸ್ವಾಮಿ ಶಾಸ್ತ್ರಾನಂದ