ಎಲ್ಲಿ ನೋಡಿದರಲ್ಲಿ ರಾಮ

ಎಲ್ಲಿ ನೋಡಿದರಲ್ಲಿ ರಾಮ – ಇದ
ಬಲ್ಲ ಜಾಣರ ದೇಹದೊಳಗೆ ನೋಡಣ್ಣ

ಕಣ್ಣೇ ಕಾಮನ ಬೀಜ – ಈಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯಕಣ್ಣಿನ ಮೂರುತಿ ಬಿಗಿದು – ಒಳಗಣ್ಣಿಂದಲೇ ದೇವರ ನೋಡಣ್ಣ ||1||

ಮೂಗೇ ಶ್ವಾಸ ನಿಶ್ವಾಸ – ಈಮೂಗಿಂದಲೇ ಕಾಣೊ ಯೋಗ ಸಂನ್ಯಾಸಮೂಗನಾದರೆ ವಿಶೇಷ – ಒಳಮೂಗಲಿ ನೋಡಣ್ಣ ಲೀಲಾವಿಲಾಸ ||2||

ಕಿವಿಯೇ ಕರ್ಮಕೆ ದ್ವಾರ – ಈಕಿವಿಯಿಂದಲೇ ಕೇಳೋ ಮೋಕ್ಷದ ಸಾರಕಿವಿಯೇ ಕರ್ಮ ಕುಠಾರ – ಒಳಗಿವಿಯಲ್ಲಿ ಕಾಣೊ ನಾದದ ಬೇರ ||3||

ಬೊಮ್ಮ ಮಾಡಿದ ತನುಬಿಟ್ಟು – ವಿಶ್ವಕರ್ಮನು ಮಾಡಿದ ಬೊಂಬೆಯನಿಟ್ಟುಸುಮ್ಮನೆ ಕೂಗುಗಳಿಟ್ಟು – ಅದನಂಬುವನೆಂಬೋನು ಹೋಹ ಕಂಗೆಟ್ಟು||4||

ರೂಢಿಯೊಳಗೆ ಶುದ್ಧ ಮೂಢ – ಈಕಾಡುಕಲ್ಲುಗಳನ್ನು ನಂಬಬೇಡನಾಡಾಡಿ ದೈವಗಳನೆಲ್ಲ – ನಮ್ಮಬಡದಾದಿ ಕೇಶವನೊಬ್ಬನೆ ಬಲ್ಲ ||5||

Leave a Comment

Your email address will not be published. Required fields are marked *