ಎನ್ನಲ್ಲಿ ಅವಗುಣ ಶತಸಾವಿರವಿರೆ |
ಅನ್ಯರ ಕರೆದಾನು ನಡತೆ ಇದೇನೆಂಬೆ
ವೇದವನೋದಿದೆ ಪರರಿ | ಗಾದÀರಿಸಿ ಮುಕುತಿಗೆ |
ಸಾಧನೆ ಇದೆ ಎಂದು | ಹಾದಿಯವರಿಗೆ
ಭೋದಿಪೆನಲ್ಲ್ಲದೆ ನಾನು | ಕ್ರೋಧ ಬಿಟ್ಟೆವನಲ್ಲ್ಲ
ಹಾದರಹಳು ನಾರಿ | ಮಾದಿಗನ ಪೋದಂತೆ ||1||
ಧನದಾಸೆಯಿಂದ ಸಾಧನವಾಗದೆಂದು |
ಜನರಿಗೆ ಉಪದೇಶವನು ಮಾಡುವೆ |
ಮನೆ ಮನೆಯ ತಿರು ಮಾತಿನ ಬಣ್ಣವಲ್ಲ್ಲದೆ |
ತೃಣ ಹತ್ತದಿದ್ದ | ವಧನರಾಶಿ ಕದ್ದಂತೆ||2||
ರಸನೇಂದ್ರಿಯಗಳ ಬಂ | ಧಿಸಬೇಕೆಂದು ನಾನು |
ಉಸುರುವೆ ಅಲ್ಲಲ್ಲಿ ಕುಶಲನಾಗಿ |
ಹಸನಾಗಿ ಹೇಯ ಬ | ಯಸುವೆನು ಅಮೃತ |
ರಸವಲ್ಲೆನೆಂದಾವ ಮುಸುರಿಯ ಮೆದ್ದಂತೆ ||3||
ಒಡಿವೆ ವಸ್ತುಗಳು ಸಂಗಡ ಬಾರವು ಮಮತೆ |
ಬಿಡು ಸಂಸಾರವಿದು ಕಡಿಗೆ ಭವದ |
ಮಡವು ಸಿದ್ಧವೆಂದು ನುಡಿವೆನೊ ಪರರಿಗೆ |
ಯಡಹಿಯೊ ಎಂದಾವ ಗಿಡನೇರಿ ಬಿದ್ದಂತೆ ||4||
ಭಕುತಿ ಕೂಡಿದ ವಿರಕುತಿ ಲೇಶವಿಲ್ಲಾ |
ಯುಕುತಿ ಬಾಯಲಿ ನಾರಕಕೆ ಸಾಧನಾ |
ಲಕುಮಿವಲ್ಲಭ ನಮ್ಮ ವಿಜಯವಿಠ್ಠಲ ನಿನ್ನ ಅ |
ರ್ಚಕನಾಗಿ ಬದುಕತಕ್ಕದ್ದು ಮಾರ್ಗವ ತೋರೊ ||5||