ಎಂದು ನೋಡುವೆ ಎನ್ನ ಗುರುವಿನಾ |
ನಿಂದು ನಂದಿಗಮನನಾ ಎಂದೆಂದಿಗೆ ಪೊಂದಿದವರಿಗಾ |
ನಂದ ಕೊಡುವ ಇಂದು ಮೌಳಿಯ
ತ್ರಿಗುಣ ರೂಪನ ತ್ರಿಭುವನೇಶನ |
ಜಗತಿಧರ ವಿಭೂಷನ ||
ನಿಗಮವಂದ್ಯ ನೀಲಕಂಠನ
ನಗವತಿ ಸುತಿಪತಿಯ ರುದ್ರನ ||1||
ತಪೋಧನೇಶನ ತಪ ಪ್ರತಾಪನ |
ತಪನ ಶಶಿ ಅಗ್ನಿನೇತ್ರನ |
ಕುಪಿತ ರಹಿತ ಕುಜನ ಮಥನನ |
ಅಪರಮಿತ ಗುಣ ವನದಿ ಶಿವನ ||2||
ವಿಮಲಗಾತ್ರನ ವಿಶ್ವಪಾಲನ |
ರಮೆಯರಸ ಪದಿಧಾರನ ||
ಶಮಜಿತನನ ಸುಜನ ರನ್ನನ |
ನಮಿಸುವರ ಮನೋವಾಸ ಈಶನ ||3||
ಅಂಧಹರಣನ ಅರ್ಧವೇಷನ |
ಮಂದಮತಿ ವಿದುರನ |
ಬಂಧು ಬಳಗನ ಬಹು ಉದ್ದಂಡನ |
ಅಂಧ ಏಕೇಶವರ್ನ ವದನನ ||4||
ತತುವನಾಥನ ತುಂಗ ವರದನ |
ಸತತ ವೈರಾಗ್ಯ ಭಾಗ್ಯನ ||
ಪತಿತ ಪಾವನ ವಿಜಯ ವಿಠ್ಠಲನ್ನ |
ತುತಿಪ ಅವಿಮುಕ್ತಿ | ಪತಿ ವಿಶ್ವೇಶನ ||5||