ಎಂಥ ಟವಳಿಗಾರನಮ್ಮ
ನಂದ ಗೋಪ್ಯಮ್ಮ ಕೇಳೆ – ನಿನ್ನ ಮಗ ಎಂಥ ಟವಳಿಗಾರನಮ್ಮ
ಹಣವ ಕೊಟ್ಟೇನೆಂದುಗುಣದಿಂದ ಎನ್ನ ತಂದಹಣವ ಕೇಳಿದರಲ್ಲಿ – ಹಣವೆ ?ತಡೆಯಲಾರದ ತಲ್ಲಣವೆ ?ಕುದುರೆ ಮೇಲಿನ ಪಲ್ಲಣವೆ ?ಇಲ್ಲ, ಬಾಯಿಗಿಟ್ಟ ಬೊಕ್ಕಣವೆ ? – ಹೋಗೆನುತಾನೆ ||1||
ಕೊಪ್ಪಾನೆ ಕೊಟ್ಟೇನೆಂದುಒಪ್ಪಿಸಿ ಎನ್ನ ತಂದಕೊಪ್ಪಾನ ಕೇಳಿದರಲ್ಲಿ – ಕೊಪ್ಪ ?ಊರಮುಂದಿನ ತಿಪ್ಪ ?ಕೇರಿಯೊಳಗಿನ ಕೆಪ್ಪ ?ಕೆರೆಯೊಳಗಿನ ಹುಳಿಸೊಪ್ಪ ? – ಹೋಗೆನುತಾನೆ||2||
ಬಳೆಯ ಕೊಟ್ಟೇನೆಂದುಬಲು ಮಾತಿನಲಿ ತಂದಬಳೆಯ ಕೇಳಿದರಲ್ಲಿ – ಬಳೆಯೆ ?ಊರ ಮುಂದಿನ ಗಳೆಯೆ ?ಗದ್ದೆಯೊಳಗಿನ ಕಳೆಯೆ ?ಕೈಕಾಲ ಹಿಡಿದು ಸೆಳೆಯೆ ? – ಹೋಗೆನುತಾನೆ ||3||
ವಾಲೆಯ ಕೊಟ್ಟೇನೆಂದುಒಲವಿನಿಂದ ತಂದವಾಲೆಯ ಕೇಳಿದರಲ್ಲಿ – ವಾಲೆ ?ಕನ್ನಡಿಯ ಕಪೋಲೆ ?ಹೇಳು ಸುವ್ವಿ ಸುವ್ವಾಲೆ ?ನಿನ್ನ ಕಾಲಿಗೆ ಸಂಕೋಲೆ ? – ಹೋಗೆನುತಾನೆ ||4||
ಕಡಗವ ಕೊಟ್ಟೇನೆಂದುಸಡಗರದಿಂದ ತಂದಕಡಗ ಕೇಳಿದರಲ್ಲಿ – ಕಡಗ ?ಅಂಬರದ ಗುಡುಗ ?ಮುಂಗೈ ಮೇಲಿನ ಗಿಡುಗ ?ಎತ್ತಿನ ಮ್ಯಾಲಿನ ಧಡಗ ? – ಹೋಗೆನುತಾನೆ ||5||
ಬುಗುಡಿಯ ಕೊಟ್ಟೇನೆಂದುರಗಡು ಕಿವಿಹಿಂಡಿ ತಂದಬುಗುಡಿ ಕೇಳಿದರಲ್ಲಿ – ಬುಗುಡಿ ?ಪಾಂಡವರಾಡಿದ ಪಗಡಿ ?ಮೂಗಿಂದ ಸುರಿವ ನೆಗಡಿ ?ಛಿ ! ನೀನೆಂಥ ಧಗಡಿ ? – ಹೋಗೆನುತಾನೆ ||6||
ಆದಿಕೇಶವನ ಮೇಲೆಆಣೆಯಿಟ್ಟು ಕರೆತಂದಆಣಿ ಎಲ್ಲಹುದೆಂದು ತೋರ್ದಆನಂದದಿಂದಲಿ ಬೆರೆದಬೀದಿಗೆ ಬಂದು ಕರೆದಹೀಂಗೆ ಧರೆಯೊಳು ಮೆರೆದ – ಶ್ರೀ ಕೃಷ್ಣರಾಯ ||7||