ಅಯ್ಯಾ, ನೀ ಒಲಿದಡೆ ತಿರಿವಂತೆ ಮಾಡುವಿರಿ,
ತಿರಿದಡೆ ನೀಡದಂತೆ ಮಾಡುವಿರಿ, ನೀಡಿದಡೆ ಅಕ್ಕಿ
ಬೀಳುವಂತೆ ಮಾಡುವಿರಿ, ಬಿದ್ದಡೆ ನಾಯಿ ತಿಂಬಂತೆ
ಮಾಡುವಿರಿ, ನಿಮ್ಮ ಧ್ಯಾನದಲಿ ನಾನಿಪ್ಪಂತೆ ಮಾಡುವಿರಿ ಕೂಡಲಸಂಗಮದೇವಾ.
ಅಯ್ಯಾ, ನೀ ಒಲಿದಡೆ ತಿರಿವಂತೆ ಮಾಡುವಿರಿ,
ತಿರಿದಡೆ ನೀಡದಂತೆ ಮಾಡುವಿರಿ, ನೀಡಿದಡೆ ಅಕ್ಕಿ
ಬೀಳುವಂತೆ ಮಾಡುವಿರಿ, ಬಿದ್ದಡೆ ನಾಯಿ ತಿಂಬಂತೆ
ಮಾಡುವಿರಿ, ನಿಮ್ಮ ಧ್ಯಾನದಲಿ ನಾನಿಪ್ಪಂತೆ ಮಾಡುವಿರಿ ಕೂಡಲಸಂಗಮದೇವಾ.