ತಿಳಿಯ ಬರದೆಲೆ ಮನವೆ,

ತಿಳಿಯ ಬರದೆಲೆ ಮನವೆ, ತೀರ್ಥ ಯಾತ್ರೆಯ ಫಲವು ಸುಲಭದಲಿ ಸದ್ಗತಿಯ ಸೂರೆಗೊಂಬುವರಿಗಲ್ಲದೆ ನೂರೆಂಟು ತಿರುಪತಿಯ ಯಾತ್ರೆಯನು ನಾನೊಲ್ಲೆವಾರದೊಂದ್ಹೊತ್ತು ಉಪವಾಸವನು ನಾನೊಲ್ಲೆಸಾರ ರೇಣುವೆಯುಂಡು ಕಡೆಯ ಬಾಗಿಲ ಕಾಯ್ವನೀರ ಗೌಡಿಯ ಮಗನ ಮಗನ ಮಗನೆನಿಸೆನ್ನ||1|| ಪಂಚಾನ್ನ ಪರಮಾನ್ನವಾವುದನು ನಾನೊಲ್ಲೆಚಂಚಲಗೊಳಿಸುವ ಭೋಗ ಭಾಗ್ಯವ ನಾನೊಲ್ಲೆಹಿಂಚದೆ ದಾಸೋಹ ಮಾಳ್ಪವರ ಮನೆಯ ಕಾಯ್ವಉಂಚ ಗೌಡಿಯ ಮಗನ ಮಗನ ಮಗನೆನಿಸೆನ್ನ||2|| ಪಟ್ಟೆ ಪಟ್ಟಾವಳಿ ದುಕೂಲವನು ನಾನೊಲ್ಲೆಪಟ್ಟೆ ನಾಮದ ಬರಿಯ ಪ್ರದರ್ಶನ ನಾನೊಲ್ಲೆಸೃಷ್ಟಿಯೊಳು ನಿನ್ನ ಭಜಿಪ ಭಕ್ತರ ಮನೆ ಕಾಯ್ವಮುಟ್ಟುಗೌಡಿಯ ಮಗನ ಮಗನ ಮಗನೆನಿಸೆನ್ನ ||3|| ಮುತ್ತಿನಾಭರಣ […]

ತಿಳಿಯ ಬರದೆಲೆ ಮನವೆ, Read More »

ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ

ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ ಹೆಚ್ಚಿದ ತಮನೆಂಬ ದನುಜ ವೇದವ ಕದ್ದುಬಚ್ಚಿಟ್ಟು ನೀರೊಳು ಮುಳುಗಿರಲುಮಚ್ಚ ರೂಪದಿಂದ ಪೋಗಿ ಅವನ ಕೊಂದಅಚ್ಯುತರಾಯನೆಂಬ ಮಾಸಾಳಮ್ಮ||1|| ಸಿಂಧು ಮಥನವ ಮಾಡೆ ಅಮರರೆಲ್ಲರುಮಂದರಗಿರಿ ನೀರೊಳು ಮುಳುಗಲುಚಂದದಿ ಕೂರ್ಮ ರೂಪಿನಿಂದೆತ್ತಿದ ಗೋ-ವಿಂದನೆಂಬುವ ಮಾಸಾಳಮ್ಮ||2|| ರೂಢಿಯ ಕದ್ದುಕೊಂಡೋಡುವ ದೈತ್ಯನನೀಡಿ ತಿವಿದು ಕೋರೆದಾಡೆಯಿಂದದೂಡಿ ದ್ವಂಸವ ಮಾಡಿ ರೂಢಿಯ ತಂದಕಾಡು ವರಾಹ ರೂಪಿ ಮಾಸಾಳಮ್ಮ ||3|| ಲೇಸು ತಪ್ಪಿದನೆಂದು ಹಿರಣ್ಯಕ ತನಯನಘಾಸಿ ಮಾಡಲು, ಕಂಬ ಒಡೆದುದಿಸಿರೋಷದಿ ದೈತ್ಯನ ಕರುಳ ಕಿತ್ತ ನರಕೇಸರಿ ರೂಪಿನ ಮಾಸಾಳಮ್ಮ ||4|| ಆ ಮಹಾಸಿರಿಯ ಗರ್ವದಿ ಮುಂದರಿಯದೆಭೂಮಿಯನು

ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ Read More »

ತಾನ್ಯಾರು ತನ್ನ ದೇಹವ್ಯಾರು

ತಾನ್ಯಾರು ತನ್ನ ದೇಹವ್ಯಾರು – ದಿವ್ಯe್ಞÁನದಲಿ ತಿಳಿದಾತ ಪರಮ ಯೋಗಿ ಸೂತಿಕಾವಸ್ಥೆಯಲಿ ನವಮಾಸ ನೆರೆದಾಗಮಾತೆಯುದರದಿ ಬಂದು ಬೆಳೆದು ನಿಂದುಪಾತಕವದೊಂದು ಮೂರುತಿಯಾದ ತನುವೆಂದುನೀತಿಯಲಿ ತಿಳಿದಾತ ಪರಮ ಯೋಗಿ ||1|| ಅಸ್ಥಿಪಂಜರದ ನರಗಳ ತೊಗಲಿನ ಹೊದಿಕೆಯವಿಸ್ತರಿಸಿ ಬಿಗಿದ ಮಾಂಸದ ಬೊಂಬೆಯುರಕ್ತ ಮಲಮೂತ್ರ ಕೀವಿನ ಪ್ರಳಯದೊಡಲೆಂದುಸ್ವಸ್ಥದಿಂ ತಿಳಿದಾತ ಪರಮ ಯೋಗಿ ||2|| ಘೋರ ನರಕದ ತನುವು ಎಂದು ಮನದಲಿ ತಿಳಿದುಗೇರು ಹಣ್ಣಿನ ಬೀಜದಂತೆ ಹೊರಗಿದ್ದುಮಾರಪಿತ ಕಾಗಿನೆಲೆಯಾದಿಕೇಶವನ ಪಾದವಾರಿಜವ ನೆನೆದವನೆ ಪರಮ ಯೋಗಿ ||3||

ತಾನ್ಯಾರು ತನ್ನ ದೇಹವ್ಯಾರು Read More »

ತಲ್ಲಣಿಸದಿರು ಕಂಡ್ಯ ತಾಳು ಮನವೆ

ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆಕಟ್ಟೆಯನು ಕಟ್ಟಿ ನೀರೆರೆದವರು ಯಾರೊಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲುಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ ||1|| ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲಅಡಿಗಡಿಗೆ ಆಹಾರವಿತ್ತವರು ಯಾರೊ ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ||2|| ನವಿಲಿಗೆ ಚಿತ್ರ ಬರೆದವರು ಯಾರುಪವಳದ ಲತೆಗೆ ಕೆಂಪಿಟ್ಟವರು ಯಾರುಸವಿಮಾತಿನರಗಿಳಿಗೆ ಹಸುರು ಬರೆದವರು ಯಾರುಅವನೆ ಸಲಹುವನು ಇದಕೆ ಸಂಶಯವಿಲ್ಲ||3|| ಕಲ್ಲಿನಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲಅಲ್ಲಲ್ಲಿಗಾಹಾರ ತಂದೀವರಾರುಬಲ್ಲಿದನು ಕಾಗಿನೆಲೆಯಾದಿಕೇಶವರಾಯಎಲ್ಲರನು ಸಲಹುವನು ಇದಕೆ

ತಲ್ಲಣಿಸದಿರು ಕಂಡ್ಯ ತಾಳು ಮನವೆ Read More »

ತನ್ನ ಪ್ರಾಪ್ತಿಯ ಫಲವ ತಾನರಿಯದೆ

ತನ್ನ ಪ್ರಾಪ್ತಿಯ ಫಲವ ತಾನರಿಯದೆ ಇನ್ನು ನುಡಿವುದು ಮೂರ್ಖತನವಲ್ಲದೆ ಸರಸಿಜೋದ್ಭವನು ಫಣೆಯೊಳು ಬರೆದು ನಿರ್ಮಿಸಿದತೆರನೊಂದು ಬೇರುಂಟೆ ತಾನರಿಯದೆಕೆರಕೊಂಡು ಕಂಡವರ ಕೂಡೆ ತಾನಾಡಿದರೆನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ ||1|| ಬಡತನವು ಬಂದಲ್ಲಿ ಬಾಯಿ ಬಿಟ್ಟರೆ ಮುನ್ನಪಡೆದಂಥ ವಿಧಿ ಬೆನ್ನ ಬಿಡಲರಿವುದೆಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆಬಡತನವು ತಾ ಬಿಟ್ಟು ಕಡೆಗೆ ಕದಲುವುದೆ||2|| ದೆಸೆಗೆಟ್ಟು ನಾಡದೈವಂಗಳಿಗೆ ಎರಗಿದರೆನೊಸಲ ಬರೆಹವ ತೊಡೆದು ತಿದ್ದಲಳವೆವಸುಧೇಶ ಕಾಗಿನೆಲೆಯಾದಿಕೇಶವಸನಂಘ್ರಿಬಿಸಜವನು ಕಂಡು ನೀ ಸುಖಿಯಾಗು ಮನುಜ||3||

ತನ್ನ ಪ್ರಾಪ್ತಿಯ ಫಲವ ತಾನರಿಯದೆ Read More »

ತನು ನಿನ್ನದು ಜೀವನ ನಿನ್ನದು ರಂಗ

ತನು ನಿನ್ನದು ಜೀವನ ನಿನ್ನದು ರಂಗ ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ ಸವಿನುಡಿ ವೇದ ಪುರಾಣ ಶಾಸ್ತ್ರಂಗಳಕಿವಿಗೊಟ್ಟು ಕೇಳುವ ಕಥೆ ನಿನ್ನದುನವಮೋಹನಾಂಗಿಯರ ರೂಪವನು ಕಣ್ಣಿಂದಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ ||1|| ಒಡಗೂಡಿ ಗಂಧಕಸ್ತೂರಿ ಪರಿಮಳಂಗಳಬಿಡದೆ ಲೇಪಿಸಿಕೊಂಬುವುದು ನಿನ್ನದುಷಡುರಸದನ್ನಕ್ಕೆ ನಲಿದಾಡುವ ಜಿಹ್ವೆಕಡು ರುಚಿಗೊಂಡರಾ ರುಚಿ ನಿನ್ನದಯ್ಯ ||2|| ಮಾಯಾ ಪಾಶದ ಬಲೆಯೊಳಗೆ ಸಿಲುಕಿರುವಕಾಯ ಪಂಚೇಂದ್ರಿಯಂಗಳು ನಿನ್ನವುಕಾಯಜಪಿತ ಕಾಗಿನೆಲೆಯಾದಿಕೇಶವರಾಯ ನೀನಲ್ಲದೆ ನರರು ಸ್ವತಂತ್ರರೆ ||3||

ತನು ನಿನ್ನದು ಜೀವನ ನಿನ್ನದು ರಂಗ Read More »

ತಡೆಯುತಲಿದೆ ಪುಷ್ಪಮಾಲೆ

ತಡೆಯುತಲಿದೆ ಪುಷ್ಪಮಾಲೆ ಒಡಲೊಳಗಾತ್ಮನ ವರ ಮಕುಟಾಗ್ರದಿ ನವರತ್ನಖಚಿತ ಕಿರೀಟ ದೊಡ್ಡಿತು ದಿವ್ಯನವತರ ಕುಸುಮ ದಾಮವು ಕಿರಿದುವಿವರ ಬಲ್ಲ ಸದ್ಗುರು ತಮ್ಮ ಉದ್ದೇಶದನವ ವೈಜಯಂತಿಯ ಹಿರಿದಾಗಿ ಭಾವಿಸಿ ||1|| ಸ್ಥಿರ ಮತಿಯೆಂಬ ಆಸನವನು ಅಳವಡಿಸಿ – ತ್ರಿಕರಣವೆಂಬ ತಾಂಬೂಲವನೊಪ್ಪಿಸುತ – ಮಾಯ ಮರವೆಯೆಂಬ ದಕ್ಷಿಣೆ ಕೊಟ್ಟು – ಮಮ ಭಾವದಿರುವಿನ ತಮವನೋಡಿಸಿ ನಿಂದ ಗುರುದೇವ||2|| ಅಜ್ಞಾನವೆಂಬ ನಿರ್ಮಾಲ್ಯವನು ಮಾಡಿಸುಜ್ಞಾನವೆಂಬಕ್ಷತೆಯ ಪಣೆಗೆ ಸೂಡಿಪ್ರe್ಞÁನವೆಂಬ ದೀವಿಗೆ ಸ್ತಂಭ ಹೂಡಿಪೂಜಿಸಿ ಪ್ರವಿಮಲ ಜ್ಯೋತಿಯ ದೇಶಿಕೋತ್ತಮ ||3||

ತಡೆಯುತಲಿದೆ ಪುಷ್ಪಮಾಲೆ Read More »

ಡೊಂಕು ಬಾಲದ ನಾಯಕರೆ

ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಿಕಿ ಇಣಿಕಿ ನೋಡುವಿರಿಕಣಕ ಕುಟ್ಟೋ ಒನಕಿಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ ||1|| ಹುಗ್ಗಿ ಮಾಡೋ ಅಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿಹುಗ್ಗಿ ಮಾಡೋ ಸೌಟಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ ||2|| ಹಿರಿಯ ಹಾದಿಲಿ ಓಡುವಿರಿ ಕರಿಯ ಬೂದಿಲಿ ಹೊರಳುವಿರಿಸಿರಿ ಕಾಗಿನೆಲೆಯಾದಿಕೇಶವನ ಸ್ಮರಿಸದವರ ಗತಿ ತೋರುವಿರಿ ||3|| * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.

ಡೊಂಕು ಬಾಲದ ನಾಯಕರೆ Read More »

ಡಿಂಬದಲ್ಲಿ ಇರುವ ಜೀವ ಕಂಬಸೂತ್ರ

ಡಿಂಬದಲ್ಲಿ ಇರುವ ಜೀವ ಕಂಬಸೂತ್ರ ಗೊಂಬೆಯಂತೆಎಂದಿಗಿದ್ದರೊಂದು ದಿನ ಸಾವು ತಪ್ಪದು ಹುಟ್ಟುತೇನು ತಾರಲಿಲ್ಲ ಸಾಯುತೇನು ಒಯ್ಯಲಿಲ್ಲಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹಹೊಟ್ಟೆ ಭಾಳ ಕೆಟ್ಟದೆಂದು ಎಷ್ಟು ಕಷ್ಟ ಪಟ್ಟರೂನುಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದು ||1|| ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರಅರ್ಥಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರುಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ ||2|| ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲಅಣ್ಣತಮ್ಮ ತಾಯಿ ತಂದೆ ಬಯಸಲಾಗದುಅನ್ನ

ಡಿಂಬದಲ್ಲಿ ಇರುವ ಜೀವ ಕಂಬಸೂತ್ರ Read More »

ಜಯಮಂಗಲಂ ನಿತ್ಯ ಶುಭಮಂಗಲಂ

ಜಯಮಂಗಲಂ ನಿತ್ಯ ಶುಭಮಂಗಲಂ ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆಸೇತುವೆಯ ಭರದಿಂದ ಲಂಘಿಸಿದಗೆಸೀತೆಯನು ವಂದಿಸುತೆ ಉಂಗುರವನಿತ್ತವಗೆದೈತ್ಯಪುರವನು ಭರದಲುರಿಸಿದವಗೆ ||1|| ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆಕುಸುಮವನು ತಂದು ದ್ರೌಪದಿಗಿತ್ತಗೆಕುಶಲತನದಲಿ ಕೌರವಾದಿಗಳ ಸಂಹರಿಸಿ-ದಸಹಾಯ ವೀರ ಶ್ರೀ ಭೀಮಸೇನಗೆ ||2|| ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದಗೆಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆಮುದ್ದು ಶ್ರೀಆದಿಕೇಶವನ ಭಜಕಗೆ ||3||

ಜಯಮಂಗಲಂ ನಿತ್ಯ ಶುಭಮಂಗಲಂ Read More »

ಜಪವ ಮಾಡಿದರೇನು ತಪವ ಮಾಡಿದರೇನು

ಜಪವ ಮಾಡಿದರೇನು ತಪವ ಮಾಡಿದರೇನುವಿಪರೀತ ಕಪಟಗುಣ ಕಲುಷವಿದ್ದವರು ಆದಿಗುರುವರಿಯದೆ ಅತ್ತಲಿತ್ತಲು ತೊಳಲಿವೇದಶಾಸ್ತ್ರವನೋದಿ ಬಾಯಾರಲುಹಾದಿಯನು ಕಾಣದಂತಿರುತಿರ್ದು ಹಲವೆಂಟುವಾದ ತರ್ಕದೊಳಿದ್ದ ಭೇದವಾದಿಗಳು ||1|| ನುಡಿ ನಡೆವ ಕಾಲದಲಿ ದಾನ ಮಾಡದೆ ಇರಲುಅಡವಿಯೊಳು ಕೆರೆ ತುಂಬಿ ಬತ್ತಿದಂತೆಮಡದಿ ಮಕ್ಕಳಿಗೆಂದು ಒಡವೆ ವಸ್ತ್ರವ ಗಳಿಸೆಹಿಡಿಯಲಾ ಯಮನವರ ಕಟ್ಟಿಗೊಳಗಾಗಿ ||2|| ಚಳಿಮಳೆಯ ಅತಿ ಕಾರುಗತ್ತಲೆಯೊಳಗೆ ಎದ್ದುಹೊಳೆಯೊಳಗೆ ಮುಳುಗಿ ಜಪ ತಪವ ಮಾಡಿಕಳವಳಿಸಿ ನೂರೆಂಟು ಹಲುಬಿ ಬಳಲಲು ಬೇಡನಳಿನಾಕ್ಷ ಆದಿಕೇಶವನ ನೆನೆ ಮನವೆ ||3||

ಜಪವ ಮಾಡಿದರೇನು ತಪವ ಮಾಡಿದರೇನು Read More »

ಜಗದಂತರ್ಯಾಮಿಯೆಂದೆನುತ ನಿನ್ನ

ಜಗದಂತರ್ಯಾಮಿಯೆಂದೆನುತ ನಿನ್ನನಿಗಮ ಸಾರುವ ಮಾತು ಪುಸಿಯೆ ರಂಗ ಭೇದವಿಲ್ಲದೆ ಸಕಲ ಜೀವರನು ಪೊತ್ತಿಹಳುಭೂದೇವಿಯೆಂಬಾಕೆ ನಿನ್ನ ಅರ್ಧಾಂಗಿಯುಸಾಧನವು ಸಕಲ ಸಿರಿ ಸಂಪತ್ತುಗಳನೀವಶ್ರೀದೇವಿ ನಿನ್ನ ಹಿರಿಯರಸಿಯೋ ದೇವ ||1|| ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನ್ನುಬೊಂಬೆಗಳ ಮಾಡಿ ಭವರಂಗದಲಿತುಂಬಿ ಕಲೆಗಳನೊತ್ತಿ ನೊಸಲ ಬರೆಹವ ಬರೆವಅಂಬುಜೋದ್ಭವ ನಿನ್ನ ಹೆಮ್ಮಗನು ದೇವ ||2|| ಸಕಲ ಜೀವರಾಶಿಗಳನು ಕಲ್ಪಿಸುವ ಬೀಜಸುಖದಿಂದ ಮಾಯಾಂಗನೆಯರೊಡಲೊಳುಅಕ್ಕರದಿ ಪಿಂಡಾಂಡಗಳ ಕಟ್ಟಿ ಬಲಿಸುವಮಕರಾಂಕ ನಿನ್ನ ಕಿರಿಮಗ ದೇವ ||3|| ರಾಮನಾಮವ ಜಪಿಸಿ ಪರಮ ವೈಷ್ಣವನಾಗಿಹೇಮಗಿರಿ ಸನಿಹ ಸಾಹಸ್ರನಾಮಪ್ರೇಮದಲಿ ಜಪಿಸುತ್ತ ವೈರಾಗ್ಯನಿಧಿಯಾದಸೋಮಶೇಖರನು ನಿನ್ನ ಮೊಮ್ಮಗನು ||4||

ಜಗದಂತರ್ಯಾಮಿಯೆಂದೆನುತ ನಿನ್ನ Read More »

ಛೀ ನಿನ್ನ ಮೋರೆ ಮೇಲೆ

ಛೀ ನಿನ್ನ ಮೋರೆ ಮೇಲೆ – ಠೊಣ್ಯಛೀ ನಿನ್ನ ಮೋರೆ ಮೇಲೆ ಹೊತ್ತರೆದ್ದು ಮುಖ ತೊಳೆದು ಮನೆಮನೆ ಪೋಕರಿ ಅಲೆಯುತಿದ್ದೆವಿತ್ತ ಮದದಿ ಪರಸ್ತ್ರೀಯರ ಕಂಡು ಅರ್ತಿಬಡುತಲಿದ್ದೆಲೆತ್ತ ಪಗಡೆ ಚದುರಂಗ ಆಟದಲ್ಲೆ ಹೊತ್ತು ಕಳೆಯುತಿದ್ದೆನಿತ್ಯ ನಿತ್ಯ ಈ ಪರಿ ಆಯುಷ್ಯವ ವ್ಯರ್ಥ ಕಳೆಯುತಿದ್ದೆ ಠೊಣ್ಯ ||1|| ಕಂಡ ಕಂಡಲ್ಲಿಗೆ ಪೋಗಿ ಧನಂಗಳ ಕೊಂಡು ಬರುತ್ತಲಿದ್ದೆಹೆಂಡಿರು ಮಕ್ಕಳು ಹಿತದವರೆಂದು ಕೊಂಡಾಡುತಲಿದ್ದೆಖೋಡಿ ಮಾತುಗಳನು ಹೇಳಿ ಮಂದಿಯ ಕುಂಡೆ ಚಿವುಟುತಿದ್ದೆಭಂಡ ಬಾಳು ಇದು ರಂಡೆ ಗಂಡ ಕಂಡ್ಯ ಯಮನ ಬಾಧೆ ಠೊಣ್ಯ||2|| ಮಾನವ

ಛೀ ನಿನ್ನ ಮೋರೆ ಮೇಲೆ Read More »

ಚೆಲ್ವ ಕಂಗಳ ಚೆಲ್ವಕಾರ ನೋಡ

ಚೆಲ್ವ ಕಂಗಳ ಚೆಲ್ವಕಾರ ನೋಡ ಬಂದೆ ನಿನ್ನ ಬಳಿ ಸಾರ ಬಂದೆ ಚಕ್ರಧರ ಧುರಧೀರ ನಾರಸಿಂಹ ನಾನು ಬಂದೆ ನಾನು ಬಂದೆ ಕಲ್ಲೊಳು ವಿಷಯ ಪುಟ್ಟಿಸಿದನಾ ಶುಭವಲ್ಲದ ದಿವಸದೊಳಿರಾ ನೋಡಿಇಲ್ಲದ ಬಯಲ ನಿಂದೆಯ ಪೊತ್ತು ಶುಕಾಮಲ್ಲರೊಡನೆ ಕಾದಿ ಮಲೆತ ಸಾಲ್ವರ ಕೊಂದುಮಡದಿಗೆ ರತ್ನ ತಂದುದರಿಂದ ||1|| ಮಡದಿಯ ಮನೆಯ ಅರ್ಭಕನಾಗಿ ಬಲುಗಡಿಯ ದಾನವನ ಕೊಂದನ ಸೂನುಬಡನಡುವಿನ ಠಾವಿಗೆ ಸಿಲ್ಕಿ ಸುಖಪಡದಿರೆ ರಾಯನಾ ಹಿಡಿದು ತೋಳು ಕಟ್ಟಿದುದರಿಂದ ||2|| ಮೂಲ ವೃಕ್ಷದಾಲಾರ ಮುಂದೆಯ ದಾನವರಿರ್ದಾಲಯ ದಹಿಪನೆಂಬುದಯ್ಯನಬಲಮಾಡಿ ಬಲಗೆ ಇಂದುರುಹಿದೆ

ಚೆಲ್ವ ಕಂಗಳ ಚೆಲ್ವಕಾರ ನೋಡ Read More »

ಗೋವಿಂದ ಹರಿ ಗೋವಿಂದ

ಗೋವಿಂದ ಹರಿ ಗೋವಿಂದ ಗೋವಿಂದ ಪರಮಾನಂದ ಮುಕುಂದ ಮಚ್ಛ್ಯಾವತಾರದೊಳಾಳಿದನೆ – ಮಂದರಾಚಲ ಬೆನ್ನೊಳು ತಾಳಿದನೆಅಚ್ಛ ಸೂಕರನಾಗಿ ಬಾಳಿದನೆ – ಮದಹೆಚ್ಚೆ ಹಿರಣ್ಯಕನ ಸೀಳಿದನೆ||1|| ಕುಂಭಿನಿ ದಾನವ ಬೇಡಿದನೆ – ಕ್ಷಾತ್ರ-ರೆಂಬುವರನು ಹತ ಮಾಡಿದನೆಅಂಬುಧಿಗೆ ಶರ ಹೂಡಿದನೆ – ಕಮ-ಲಾಂಬಕ ಗೊಲ್ಲರೊಳಾಡಿದನೆ ||2|| ವಸುದೇವನುದರದಿ ಪುಟ್ಟಿದನೆ – ಪಲ್‍ಮಸೆವ ದನುಜರೊಡೆಗುಟ್ಟಿದನೆಎಸೆವ ಕಾಳಿಂಗನ ಮೆಟ್ಟಿದನೆ – ಬಾ-ಧಿಸುವರ ಯಮಪುರಕಟ್ಟಿದನೆ ||3|| ಪೂತನಿಯ ಮೈ ಸೋಕಿದನೆ – ಬಲುಘಾತದ ಮೊಲೆಯುಂಡು ತೇಕಿದನೆಘಾತಕಿಯನತ್ತ ನೂಕಿದನೆ – ಗೋಪವ್ರಾತ ಗೋಗಳನೆಲ್ಲ ಸಾಕಿದನೆ||4|| ಸಾಧಿಸಿ ತ್ರಿಪುರರ

ಗೋವಿಂದ ಹರಿ ಗೋವಿಂದ Read More »

ಗೋವಿಂದ ಸಲಹೆನ್ನನು – ಸದಾನಂದ

ಗೋವಿಂದ ಸಲಹೆನ್ನನು – ಸದಾನಂದಗೋವಿಂದ ಸಲಹೆನ್ನನು ಗೋವಿಂದ ಸಲಹೆನ್ನ ಕುಮುದಲೋಚನ ನಿನ್ನಸೇವಕರಡಿಯ ಸೇವಕನಯ್ಯ ಗೋವಿಂದ ತಮನ ಸಂಹರಿಸಿ ವೇದವ ತಂದೆ ಗೋವಿಂದಅಮರರಿಗಮೃತ ಪಾನವನಿತ್ತೆ ಗೋವಿಂದರಮಣಿಯ ತಂದ ವರಾಹರೂಪಿ ಗೋವಿಂದಭ್ರಮಿಸಿ ಕಂಬದೊಳುದ್ಭವಿಸಿದೆ ಗೋವಿಂದಕ್ಷಮೆಯನಳೆದ ಬ್ರಹ್ಮಚಾರಿಯೆ ಗೋವಿಂದಸಮರದೊಳಖಿಲ ರಾಯರ ಕೊಂದೆ ಗೋವಿಂದಕಮಲಾಕ್ಷ ಕಡಲ ಕಟ್ಟಿದ ದಿಟ್ಟ ಗೋವಿಂದಮಮತೆಯೊಳಿಳೆಯ ಗೋವ್ಗಳ ಕಾಯ್ದೆ ಗೋವಿಂದರಮಣಿಯರ್ಗೊಲಿದು ಬತ್ತಲೆ ನಿಂತೆ ಗೋವಿಂದವಿಮಲ ತುರಗವೇರಿ ನಡೆಸಿದೆ ಗೋವಿಂದನಮಿಪರಿಗೊಲಿದೆ ಗೋವಿಂದ – ನಿಂದಿಪರಿಗೆಶಮನನಂತಿಪ್ಪೆ ಗೋವಿಂದ – ಎಲ್ಲರೊಳಿಪ್ಪಅಮಿತ ಮಹಿಮ ಗೋವಿಂದ – ಇಂಗಡಲೊಳುಗಮನ ನಿರ್ಜಿತ ಗೋವಿಂದ – ಅಚ್ಯುತ

ಗೋವಿಂದ ಸಲಹೆನ್ನನು – ಸದಾನಂದ Read More »

ಗೋವಿಂದ ಗೋವಿಂದ ಎನ್ನಲರಿಯದೆ

ಗೋವಿಂದ ಗೋವಿಂದ ಎನ್ನಲರಿಯದೆ – ವೃಥಾನೋವಿಂದ ಭಂಗವ ಪಡುವುದುಚಿತವೆ ? ಕ್ಷೀಣ ಶಾಸ್ತ್ರಾರ್ಥವನು ಪರಿಗ್ರಹಿಸಿ ನಿಖಿಲ ಕುರಿಕೋಣಗಳ ತಲೆಚೆಂಡ ಕುಟ್ಟಿಸುತಪ್ರಾಣ ಹತ್ಯವ ಮಾಳ್ಪುದಾವ ಸತ್ಕರ್ಮ – ನಾರಾ-ಯಣನ ನಾಮಸ್ಮರಣೆ ಮಾಡು ಮನವೆ ||1|| ಖಂಡವನು ಕೊಯ್ದು ಕೊಡಬೇಡ ದಳ್ಳುರಿಯಗ್ನಿಕುಂಡವನು ಹೊಕ್ಕು ಹೊರಡುವುದುಚಿತವೆಭಂಡರಂದದಿ ಬತ್ತಲೆಯೆ ಬರುವುದಾವಾಟಪುಂಡರೀಕಾಕ್ಷನ ನೆನೆ ಕಂಡ್ಯ ಮನವೆ ||2|| ಕುಟ್ಟಿಕೊಳ್ಳದಿರಿ ಜಟ್ಟಿ ಗುಂಡಿನಲಿ, ಶಸ್ತ್ರವನುಚಿಟ್ಟಿ ಕೊಳ್ಳದಿರಿ, ಬೆನ್ನಲಿ ಸಿಡಿಯನುಕಟ್ಟಿ ತೂಗಿಸಿಕೊಳ್ಳದಿರಿ ಕರಟಕದಂತೆಗುಟ್ಟಿನಲಿ ಗೋಪಾಲಕನ ಸ್ಮರಿಸು ಮರುಳೆ ||3|| ತೊಗಲ ಬಿಲ್ಲೆಗಳ ಕೊರಳಲ್ಲಿ ಕಟ್ಟಿಕೊಂಡುಹಗಲಿರುಳು ಅನ್ನಪಾನಕೆ ಹೋಗದೆಮೃಗವೈರಿಯಂತೇಕೆ

ಗೋವಿಂದ ಗೋವಿಂದ ಎನ್ನಲರಿಯದೆ Read More »

ಗೊಲ್ಲರಾ ಮನೆಯ ಪೊಕ್ಕು

ಗೊಲ್ಲರಾ ಮನೆಯ ಪೊಕ್ಕುಗುಲ್ಲು ಮಾಡುವುದೇನಲ – ಬಲುಲಲ್ಲೆ ಮಾಡುವುದೇನಲ ಹಾಲು ಮೊಸರು ಘೃತವು ನೆಲುವಿನಮೇಲೆ ಇಟ್ಟ ಬೆಣ್ಣೆಯಬಾಲಕರಿಗಿಲ್ಲದಲೆ ಸುರಿದುಹಾಲುಗಡಿಗೆಯನೊಡೆದಲ ||1|| ಸಣ್ಣ ಮಕ್ಕಳ ಕಣ್ಣ ಮುಚ್ಚಿಹುಣ್ಣಿಮೆ ಬೆಳುದಿಂಗಳಲಿಬಣ್ಣ ಬಣ್ಣದ ಮಾತನಾಡಿಸಣ್ಣ ಕೆಲಸಕ್ಕೆಳೆದಲ ||2|| ಸುದತಿಯೊಬ್ಬಳು ದಧಿಯ ಮಥಿಸುತಒದಗಿದ ಬೆಣ್ಣೆಯ ತೆಗೆಯಲುಮದನ ಕದನಕೆ ಕೆಡಹಿ ಮಾನಿನಿಒದರಿದರು ನೀ ಬಿಡೆಯಲ ||3|| ಕಿಟ್ಟ ನಾ ನಿನಗೆಷ್ಟು ಹೇಳಲಿದುಷ್ಟ ಬುದ್ಧಿಯ ಬಿಡೆಯಲಇಷ್ಟು ಹರಳಿಸಿ ರಟ್ಟು ಯಾತಕೆಬಿಟ್ಟು ಮಧುರೆಗೆ ಪೋಗೆಲ||4|| ಕೇಶವ ವಿಠ್ಠಲ ನಿನ್ನನುಕೂಸು ಅಂದವರ್ಯಾರಲೊ – ಹಸುಗೂಸು ಅಂದವರ್ಯಾರಲೊದೇಶದೊಳಗೆ ವಾಸವಾಗಿಹ ಬೇಲೂರು

ಗೊಲ್ಲರಾ ಮನೆಯ ಪೊಕ್ಕು Read More »

ಗುರು ಹಿರಿಯರ ಸೇವಿಸಿ

ಗುರು ಹಿರಿಯರ ಸೇವಿಸಿಹರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿಕೊಳ್ಳಿರೊ ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದೆರಕ್ಕಸಾರಿಯ ಭಕ್ತರೊಳು ಸೇರಿ ನೀವು ಸೆರೆಯಿಕ್ಕದಂಥವನ ಮೊರೆ ಹೋಗಿರೊ ||1|| ಕಂಬಳಿಯ ಬುತ್ತಿಯಂತೀ ದೇಹದೊಳಗೆಲ್ಲತುಂಬಿರುವ ಸುಖವೆಲ್ಲ ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವನುಂಬ ಭ್ರಮರಕೆ ಸರಿಗಾಣೆನೊ ||2|| ಮಕ್ಕಳುಗಳಳುವಾಗ ಮಡದಿಯರು ಜರಿವಾಗಬಿಕ್ಕುಗಳು ಬಂದು ಬೈವಾಗಇಕ್ಕಿ ಪೊರೆವುದಕೆ ಗತಿಯಿಲ್ಲದಾ ದರಿದ್ರರಿಗೆಸೌಖ್ಯವೆತ್ತಣದೊ ಮನುಜರಿಗೆ ||3|| ತಾಯ ಮಾರಿ ತೊತ್ತನು ಕೊಂಬ ಪಾಮರರಂತೆಹೇಯ ಕುಜನರಾ ಚರಣಕೆರಗಿಮಾಯಾಪತಿಯಂಘ್ರಿಗಳ ನೆನೆಯಲೊಲ್ಲದ ನರನಆಯುಷ್ಯ ಬರಿದೆ ಹೋಯಿತಲ್ಲ ||4 ಅಯಿವರಿತ್ತೊಡವೆಯ ಅವರವರೊಯ್ಯುವರು ಮ-ತ್ತಯಿವರೆಂಬುವರು ತೊಲಗುವರುಮೈಯ

ಗುರು ಹಿರಿಯರ ಸೇವಿಸಿ Read More »

ಕ್ಷಮಿಸುವುದೆಮ್ಮ ತಪ್ಪುಗಳ ಸ್ವಾಮಿ

ಕ್ಷಮಿಸುವುದೆಮ್ಮ ತಪ್ಪುಗಳ ಸ್ವಾಮಿಕ್ಷಮಶೀಲವೆಂಬ ದಾಸೋಹ ಬಿರುದಿನೊಳು ಕಮಲಜ ಹರಿ ರುದ್ರ ವಿಮಲ ಸುರರು ಸಾಧುಸಮರಲ್ಲವೆಂಬ ಶ್ರುತಿ ಸರಿಬಂತು ಸ್ವಾಮಿ ಶರಧಿಯೊಳಿರುತಿರ್ಪ ಚರಜೀವಿಗಳ ಗುಣಾ-ಕರಿಸಿ ಇಷ್ಟೆಂದು ಪೇಳಲುಬಹುದುಸಿರಿವರದನ ಅಂತಃಕರಣಕೊಪ್ಪಿದ ನಿಮ್ಮಇರವ ತಿಳಿಯಲು ನರರ ವಶವೆ ಸ್ವಾಮಿ||1|| ಆಢಕದೊಳಗಂಬರವನೆ ಅಳೆದು ಲೆಕ್ಕಕೂಡಿದ ಮಿತಿಯ ಪೇಳಲು ಬಹುದುರೂಢಿಗೀಶನ ಸೇವೆ ಮಾಡಿದ ಮುಕ್ತರಈಡಿಲ್ಲವೆಂಬುದನಿತರರರಿವರೆ ಸ್ವಾಮಿ ||2|| ಈ ಶರೀರದೊಳಗಿಪ್ಪ ಕೇಶಗಳೆಲ್ಲವನುಬೇಸರಿಸದೆಣಿಸಿ ಹೇಳಲು ಬಹುದುಶೇಷಶಯನ ಕಾಗಿನೆಲೆಯಾದಿಕೇಶವದಾಸರ ಮಹಿಮೆ ಕಾಣಲಿಕಾಗದು ಸ್ವಾಮಿ ||3||

ಕ್ಷಮಿಸುವುದೆಮ್ಮ ತಪ್ಪುಗಳ ಸ್ವಾಮಿ Read More »

ಕೊಡಲು ನೀನಾರು ಬಿಡಲು ನೀನಾರು

ಕೊಡಲು ನೀನಾರು ಬಿಡಲು ನೀನಾರುಪೊಡವಿಗೊಡೆಯ ಶ್ರೀಹರಿ ಲೀಲೆಯದು ಮಾಡಲು ನೀನಾರು ಮಾಡೆನಲು ನೀನಾರುಮಾಡದವರಿಂದ ಮಾಡಿಪ ಮೋಡಿರೂಪಮಾಡಬೇಕೆಂಬರ ತಡೆದು ಕಾಡಿಪನವನುಹಿಡಿಗೆ ಅಡಗದಾ ಹಿರಣ್ಯಗರ್ಭನವನಿರೆ||1|| ಪಾಡುವ ಪದ್ಯಗಳಲಿ ಭಾವವಾಗಿರುವನೋಡುವ ನೋಟಗಳ ನೋವು ಗ್ರಹಿಸುವನುಡಿವ ನುಡಿಯ ತಾತ್ಪರ್ಯವನರಿವನಾಡಿ ನರಗಳಂತೊಲಿವ ಆದಿಕೇಶವರಾಯ ||2||

ಕೊಡಲು ನೀನಾರು ಬಿಡಲು ನೀನಾರು Read More »

ಕೊಕೊಕೋ ಎನ್ನಿರೊ ಕುಂಭಿನಿಯವರೆಲ್ಲ

ಕೊಕೊಕೋ ಎನ್ನಿರೊ ಕುಂಭಿನಿಯವರೆಲ್ಲಕೊಕೊಕೋ ಎನ್ನಿರೊ – ನಮ್ಮ ಗೋಕುಲದೊಳಗೊಬ್ಬ ಕಳ್ಳ ಬರುತಾನೆಂದುಕೊಕೊಕೋ ಎನ್ನಿರೊ ಹೊದ್ದಿ ಮೊಲೆಯನುಂಡವಳಸುವನೆ ಕೊಂದಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊಕದ್ದುಕೊಂಡೊಯ್ವ ರಕ್ಕಸರನೆಲ್ಲರ ಕಾಲಲೊದ್ದೊರಸಿದ ಕಳ್ಳ ಕೊಕೊಕೋ ಎನ್ನಿರೊಹದ್ದು ಹಗೆಯ ಹಾಸಿಗೆಯ ಮೇಲೊರಗಿದಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊಅರ್ಧದೇಹನ ಕೈಯ ತಲೆಯ ಕಪಟದಿಂದಕದ್ದು ಬಿಸುಟ ಕಳ್ಳ ಕೊಕೊಕೋ ಎನ್ನಿರೊ ||1|| ಕೆಂಜಾಜಿಯ ಮಣಿ ಮಲ್ಲಿಗೆ ದಂಡೆಯರಂಜೆ ಕದ್ದ ಕಳ್ಳ ಕೊಕೊಕೋ ಎನ್ನಿರೊಗುಂಜಿಯ ದಂಡೆಯ ಕಲ್ಲಿಯ ಚೀಲದಮಂಜು ಮೈಯ್ಯ ಕಳ್ಳ ಕೊಕೊಕೋ ಎನ್ನಿರೊಅಂಜದೆ ಗೊಲ್ಲರ ಹಳ್ಳಿಯೊಳಗೆ ಹಾಲನೆಂಜಲಿಸಿದ ಕಳ್ಳ ಕೊಕೊಕೋ

ಕೊಕೊಕೋ ಎನ್ನಿರೊ ಕುಂಭಿನಿಯವರೆಲ್ಲ Read More »

ಕೈಯ ತೋರಿದ ಬಗೆಯ

ಕೈಯ ತೋರಿದ ಬಗೆಯ, ಅಮ್ಮಮ್ಮ ಯಾದವಗಿರಿ ಕಲ್ಯಾಣಿ ನೀನು ಸಕಲ ಜನರು ಕಾಣುತಿರಲುವಿಕೃತಿ ವತ್ಸರ ಚೈತ್ರ ದ್ವಿತೀಯೇಕಾದಶಿಯೊಳುಪ್ರಕಟಿತಾ ಶುಕ್ರವಾರದೊಳು ತನ್ನಭಕುತರಿಗುತ್ಸಾಹ ಸಂಧ್ಯಕಾಲದೊಳು ||1|| ಕಡಗ ಕಂಕಣ ಗೀರುಗಂಧ ಮಿಗೆಕಡು ಚೆಲುವಿನ ಬಣ್ಣ ಕುಪ್ಪುಸದಿಂದನಡು ಬೆರಳುಂಗುರದಿಂದ ಕೈಯಬೆಡಗ ನೋಡಿದ ಜನರಿಗೆ ಪುಟ್ಟಿತಾನಂದ ||2|| ಜನರೆಲ್ಲ ಯದುಶೈಲೋತ್ಸವವ ಕೇಳಿಘನ ಕಾಲದೇಶದಜಿತ ಭಯವನಿಮಗೆ ಬಿನ್ನೈಪೆನು ನಯವ ಕೊಟ್ಟಮನೋಹರುಷದಿ ನಮಗಿತ್ತ ವೈಭವವ ||3|| ಚೆಲುವರಾಯನ ರಥೋತ್ಸವದೀ ತೀರ್ಥಕೊಲಿದು ಗಂಗಾದೇವಿ ಬರುವ ಸಂಭ್ರಮವನೆಲೆಯ ಸರ್ವರಿಗನುಭವವ ಕೋಟಿಮನೋಹರುಷವನ್ನು ನಮಗಿತ್ತ ವೈಭವವ ||4|| ನಿನ್ನ ಮೋಹದ ಕಂದ

ಕೈಯ ತೋರಿದ ಬಗೆಯ Read More »

ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು

ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು ಭಾಳನೇತ್ರನ ಭಕ್ತರಿಂತು ನೋಡಿಕೊಳ್ಳಿರೈ ಮೂರುಲಿಂಗ ತನ್ನೊಳು ಮುಖ್ಯವಾಗಿರುವಾಗಬೇರೊಂದು ಲಿಂಗ ಬೆಲೆ ಮಾಡಿ ತಂದುತೋರುವಂಗೈಲಿಟ್ಟು ತೋಯ ಪುಷ್ಪವ ನೀಡಿಯಾರ ಮನಕೊಪ್ಪಿಸುವರೀ ಶೀಲವಂತರು ||1|| ಲಿಂಗವೊಂದು ತನ್ನೊಳು ಲೀನವಾಗಿರುವಾಗಅಂಗಭವಿಗಳು ಕೂಡಿ ಆಡಿಕೊಂಬರುಅಂಗದನುಭವದರ್ಥವನರಿಯದ ಇಂತಹಭಂಗಿ ಹುಚ್ಚರೆಲ್ಲ ಶಿವನ ಭಕ್ತರಹರೆ ||2|| ನಾಗಲಿಂಗ ತನ್ನೊಳು ನಾಟ್ಯವಾಡುತಲಿರಲುಆಗಮಿಸಿದ ಲಿಂಗವ ಬೆದಕಲೇತಕ್ಕೆಕಾಗಿನೆಲೆಯಾದಿಕೇಶವನೆ ನಾಗಶಯನನಾಗಿರಲು ಬೇರೊಂದನರಸಲೇತಕ್ಕೆ ||3||

ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು Read More »

ಕೇಶವನೊಲುಮೆಯು ಆಗುವ ತನಕ ಹರಿ

ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರುತಿರು ಹೇ ಮನುಜ ಕ್ಲೇಶಪಾಶಂಗಳ ಹರಿದು ವಿಲಾಸದಿಶ್ರೀಶನ ನುತಿಗಳ ಪೊಗಳುತ ಮನದೊಳು ಮೋಸದಿ ಜೀವರ ಘಾಸಿ ಮಾಡಿದ ಪಾಪಕಾಶಿಗೆ ಹೋದರೆ ಹೋದೀತೆಶ್ರೀಶನ ಭಕುತರ ದೂಷಿಸಿದಾ ಫಲಕಾಸು ಕೊಟ್ಟರೆ ಬಿಟ್ಟೀತೆಭಾಷೆಯ ಕೊಟ್ಟು ನಿರಾಶೆಯ ಗೈದ ಫಲಕ್ಲೇಶಗೊಳಿಸದೆ ಇದ್ದೀತೆಭೂಸುರಸ್ವವ ಹ್ರಾಸ ಮಾಡಿದ ಫಲಏಸೇಸು ಜನುಮಕು ಬಿಟ್ಟೀತೆ ||1|| ಜೀನನ ವಶದೊಳು ನಾನಾ ದ್ರವ್ಯವಿರೆದಾನಧರ್ಮಕೆ ಮನಸಾದೀತೆಹೀನ ಮನುಜನಿಗೆ e್ಞÁನವ ಬೋಧಿಸೆಹೀನ ವಿಷಯ ಅಳಿದ್ಹೋದೀತೆಮಾನಿನಿ ಮನಸದು ನಿಧಾನವಿರದಿರೆಮಾನಾಭಿಮಾನಗಳುಳಿದೀತೆಭಾನುಪ್ರಕಾಶನ ಭಜನೆಯ ಮಾಡದಹೀನಗೆ ಮುಕುತಿಯು ದೊರಕೀತೆ||2|| ಸತ್ಯಧರ್ಮಗಳ ನಿತ್ಯವು ಬೋಧಿಸೆತೊತ್ತಿನ ಮನಸಿಗೆ

ಕೇಶವನೊಲುಮೆಯು ಆಗುವ ತನಕ ಹರಿ Read More »