ಆವ ಬಗೆಯಿಂದ ಸಲಿಗೆಯನಿತ್ತಿಯೊ

ಆವ ಬಗೆಯಿಂದ ಸಲಿಗೆಯನಿತ್ತಿಯೊ ಮಾವಮರ್ದನ ರಂಗ ನಿನ್ನ ದಯಾ ತಿಳಿಯದು ಅಂದರೆ ಆನಂದ ಅನಂದದೇ ಅನಾನಂದ ನಿಂದದೆ ಗೋಕುಲ ನಿಲದದೆ ವ್ಯಾಕುಲ ಬಂದದೆ ಪುರುಷಾರ್ಥ ಬಾರದಿದ್ದರೆ ವ್ಯರ್ಥ ಮಂಧರಧರ ನಿನ್ನ ಮನಸು ಬಂದದ್ದೆ ಸರಿ ||1|| ಕೊಟ್ಟದ್ದೆ ಪುರುಷಾರ್ಥ ಕೊಡದಿಪ್ಪದೆ ಅನರ್ಥ ಅಟ್ಟಿ ಬರುವ ಪಾಪ ಸುಟ್ಟು ಬಿಡು ನಿರ್ಲೇಪ ತಟ್ಟಿದುದೆ ವೇದಾರ್ಥ (ತಟ್ಟದದೆ) ಮಿಥ್ಯ ವಿಠ್ಠಲ ನಿನ್ನ ಭಕ್ತರಿಗೆ ನೀ ಬಲು ಸುಲಭಾ ||2|| ಹರಿ ನಿನ್ನ ಶರಣರ ಮನಸ್ಸು ಆವರಕಾದ ದೆರಗಲು ಆಕ್ಷಣವೆ ಸಿದ್ಧ […]

ಆವ ಬಗೆಯಿಂದ ಸಲಿಗೆಯನಿತ್ತಿಯೊ Read More »

ಆವ ಪರಿಯಲಿ ಹರಿಯ ವೊಲಿಸು

ಆವ ಪರಿಯಲಿ ಹರಿಯ ವೊಲಿಸು ಈ ಉಪಾಯವು ತೋರಿ ಕೊಡುವೆನು ಉದಯದಲಿ ಎದ್ದೀಗ ಊರ ವಾರ್ತಿಯ ಬಿಟ್ಟು ಮುದದಿಂದ ವೃಂದಾವನ ಸೇವಿಸಿ ವದನದಲಿ ಶ್ರೀ ಹರಿಯನಾಮ ಗುಣಕಥೆಗಳನು ಪದೋಪದಿಗೆ ಪಾಡಿ ಕೊಂಡಾಡು ನಲಿದಾಡು ||1|| ಆಮೇಲೆ ದೇವರೆಡೆ ರಂಗವಾಲಿಯನಿಕ್ಕಿ ಕಾಮುಕನಾಗದಲೆ ಸ್ನಾನ ಸಂಧ್ಯಾ ನೇಮ ನಿತ್ಯವ ಮುಗಿಸಿ ದೇವತಾ ಪೂಜೆಗೈದು ಪ್ರೇಮದಿಂದಲಿ ದಾನ ಕರದಲ್ಲಿ ಮಾಡೊ ||2|| ಮಂಗಳ ಮೂರುತಿಯ ಅಂತರಂಗದಿ ನಿಲಿಸಿ ಶೃಂಗಾರದುಡಿಗೆ ಇಡಿಗಿಯನು ತೊಡಿಸಿ ಮಂಗಳಾರುತಿ ಬೆಳಗಿ ಮನದಲ್ಲಿ ನಲಿನಲಿದು ಕಂಗಳಿಂದಲಿ ನೋಡು ಹರಿಯ

ಆವ ಪರಿಯಲಿ ಹರಿಯ ವೊಲಿಸು Read More »

ಆವ ತಾ ಸುಖವೊ ಮತ್ತಾವನಂದವೊ

ಆವ ತಾ ಸುಖವೊ ಮತ್ತಾವನಂದವೊ | ಈ ಉಡುಪಿ ಯಾತ್ರಿ ಮಾಡಿದ ಮನುಜಗೆ ಮನದೊಳಪೇಕ್ಷಿಸೆ ಅವನೀಗ ಹದಿನಾಲ್ಕು | ಮನುಗಳು ಭೂಮಿ ಆಳುವ ತನಕಾ | ಕನಕ ರಜತಪೀಠ ಗೋಕುಲದಿಂದ | ಸ | ಜ್ಬನ ಮಾರ್ಗದಲ್ಲಿ ಗುಣವಂತ ನೆನೆಸುವ ||1|| ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ | ಅಂದೆ ಸುರರೊಳು ಗಣನೆ ಎನ್ನಿ | ಒಂದಕ್ಕೆ ನೂರಾರು ಯಾಗ ಮಾಡಿದ ಫಲ | ತಂದು ಕೊಡುವ ಅಜನಾದಿ ಕಲ್ಪ ಪರಿಯಂತ||2|| ಅರ್ಧ ಮಾರ್ಗವು ಬರಲು ಬಂದೆ

ಆವ ತಾ ಸುಖವೊ ಮತ್ತಾವನಂದವೊ Read More »

ಆವ ಜನ್ಮದ ಪುಣ್ಯ ಫಲಿಸಿತೆನಗೆ

ಆವ ಜನ್ಮದ ಪುಣ್ಯ ಫಲಿಸಿತೆನಗೆ | ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ ಲವಣವನು ಸವಿದುಣಲು | ಬಲುಜನ್ಮದಲಿ ಯಿದ್ದ ಭವರಾಸಿಗಳು ಹಾರಿ ಬಯಲಾದವು| ನವವಿಧ ಭಕುತಿಯಾ ಮಾರ್ಗವನೆ ತಿಳಿದು ಮಾ | ನವರೊಳಗೆ ಪರಿ ಶುದ್ಧನಾದೆ ಗುರು ಕರುಣದಲೀ||1|| ಶಾಖಫಲ ಕೈಕೊಳಲು ಅರಿಷಡ್ವರ್ಗಗಳಿಂದ | ಶೋಕವನೆ ಬಂದಿರಲು ಬೆನ್ನು ಬಟ್ಟು | ಕಾಕೆಟ್ಟು ಪೋಗುವವು ಏನೆಂಬೆ ಸೋಜಿಗವು | ಲೋಕದೊಳಗೆ ನಮ್ಮ ಕುಲಗೋತ್ರಜರೆ ಧನ್ಯ ||2|| ಸೂಪವನು ಉಂಡರೆ ಮುಂದಟ್ಟಿ ಬರುತ್ತಿಪ್ಪ | ಆಪತ್ತು ಕಳವಳಿಸಿ

ಆವ ಜನ್ಮದ ಪುಣ್ಯ ಫಲಿಸಿತೆನಗೆ Read More »

ಆವ ಜನುಮದ ಪಾಪ ವೊದಗಿತೋ

ಆವ ಜನುಮದ ಪಾಪ ವೊದಗಿತೋ ಎನಗಿಂದು | ದೇವ ಗಂಗೆಯ ನೋಡಿದೆ ದೇವಕೀಸುತ ಒಲಿದು ಕರೆತಂದು ಎನ್ನನು | ಪಾವನ್ನ ಮಾಡಿದನು ಇನ್ನೂ-ಮುನ್ನೂ ಅ.ಪ ಗುರುಗಳನು ವಹಿಸಿ ಭೂಸುರರಿಗೆ ಕಠಿಣ | ಉ- ತ್ತರ ಪೇಳಿಸಾಗಿದ್ದನೊ | ವರ ಬ್ರಾಹ್ಮಣರ ತಪ್ಪು ಬಲು ಇರಲು ಇಲ್ಲದೇ | ಸರಿಯೆಂದು ಸ್ಥಾಪಿಸಿದೆನೊ | ಮುರಿವ ಲಗ್ನಕೆ ಪೋಗಿ ಪುಸಿ ದ್ರವ್ಯವನೆ ಪೇಳಿ | ಮರಳಿ ಪೂರ್ತಿಸಿ ಇದ್ದೆನೊ | ವರ ವಿಪ್ರರಿಗೆ ವಧೆಯು ಬರಲು ಸಾಕ್ಷಿಯಾಗಿ | ಪರಿಹರಿಸಿ

ಆವ ಜನುಮದ ಪಾಪ ವೊದಗಿತೋ Read More »

ಆರೇನು ಮಾಡುವರು ಅವನಿಯೊಳಗೆ

ಆರೇನು ಮಾಡುವರು ಅವನಿಯೊಳಗೆ | ಪೂರ್ವಜನ್ಮದ ಕರ್ಮ ಫಣಿಯಲ್ಲಿ ಬರೆದುದಕೆ ಮಾಡಿದಡಿಗಿಯು ಕೆಡಲು ಮನಿಯ ಗಂಡನು ಬಿಡಲು | ಕೂಡಿದ ಸತಿ ತನ್ನ ಕುಣಿಸ್ಯಾಡಲು ನಿಜದಿ || ಗೋಡೆಗೆ ಬರೆದ ಹುಲಿ ಘಡಘಡನೆ ತಿನಬರಲು | ಆಡಿದ ಮತುಗಳು ಅಖಿಳಿರು ನಿಜವೆನಲು ||1|| ಹೊಲ ಬೇಲಿ ಮೆಯ್ದರೆ ಮೊಲ ಇರಿಯ ಬಂದರೆ | ತಲೆಗೆ ತನ್ನ ಕೈ ಪೆಟ್ಟು ತಾಕಿದರೆ || ಹೆರಳು ಹಾವಾದರೆ ಗೆಳೆಯ ರಿಪುವಾದರೆ | ಕಲಿಸಿದ ಅವಲಕ್ಕಿ ಕಲಪರಟಿ ನುಂಗಿದರೆ ||2|| ಹೆತ್ತ

ಆರೇನು ಮಾಡುವರು ಅವನಿಯೊಳಗೆ Read More »

ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ

ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ ಕು- | ಮಾರ ಮೌನದಲಿದ್ದಿ ಮಾತನಾಡಯ್ಯಾ ಇಂದಿರಾ ಭೂದೇವಿ ಆಳಿದವನೊ | ನಂದ ಗೋಕುಲದಲ್ಲಿ ಪುಟ್ಟಿದವನೊ || ಮಂದಿರ ವೈಕುಂಠ ಶ್ರೀನಿವಾಸನೊ | ಕರಿ – | ಬಂಧನ ವಿನಾಶದ ವಿಠ್ಠಲನೊ ||1|| ಅಂಬರೀಷನ ಶಾಪ ಪರಿಹರನೊ | ಶಂಭು ಮೊರೆಯಿಡಲು ಕಾಯಿದವನೊ || ಕಂಭದಿಂದೊಡೆದು ಬಂದವನೊ | ತ್ರಿ – ಯಂಬಕನ ಭಕ್ತನ ಸಂಹರನೊ ||2|| ಬೆರಳಲ್ಲಿ ಬೆಟ್ಟವನೆತ್ತಿದವನೊ | ದುರುಳ ಕಾಳಿಂಗನ ತುಳಿದವನೊ || ಒರಳನು ಕಾಲಲ್ಲಿ

ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ Read More »

ಆರಸಿಕೊಡು ಒಬ್ಬಳ ಅರಸಿಕೊಂಬೆ

ಆರಸಿಕೊಡು ಒಬ್ಬಳ ಅರಸಿಕೊಂಬೆ | ಅರಸಿಕೊಂಬೆ ಮನಸ್ಸಿಗೆ ಬಂದವಳ ಶ್ರೀ ರುಕ್ಮಿಣಿ ಸಂಗಡ ಕೇಳಿಯಲಿ ಶ್ರೀ ರಮಣ ಇರಲು | ನಾರದಮುನಿ ಬಂದು ಕುಳಿತು ಷೋಡಶೋಪಚಾರವ ಕೊಂಡು ಮಾತಾಡಿ ಬೇಡಿದ ||1|| ನಾರಿಯರು ನಿನಗೆ ಉಂಟಾಗ ಈರೈದು ಸಾವಿರ ನೂರಾಎಂಟು ಮಂದಿಯೊಳಗತಿ ಚಲುವಿಯ ಕಾರುಣ್ಯವನು ಮಾಡುಬೇಕು ಪರಾಕು ||2|| ಕೇಳೈ ಮಹ ತಪಸಿಯನ್ನೀಗ ವೇಳ್ಯ ಮೀರಗೊಡದೆ | ಲಾಲಿಸು ಮಾತನು ನಾ ನಿಲ್ಲದೆ | ಸತಿ ಆಲಯಕೆ ವೇಗ ಪೋಗು ನೀ ಸಾಗು ||3|| ನಿಂದಿರದೆ ನಾರದಾ

ಆರಸಿಕೊಡು ಒಬ್ಬಳ ಅರಸಿಕೊಂಬೆ Read More »

ಆನಂದಾ ಆನಂದಾ ಮತ್ತೆ

ಆನಂದಾ ಆನಂದಾ ಮತ್ತೆ ಪರಮಾನಂದಾ ಆನಂದನನಂದನೊಲಿಯೆ ಏನಂದದ್ದೆ ವೇದ ವೃಂದಾ ‘ಅ’ಮೊದಲು ‘ಕ’್ಷ ಕಾರಾಂತ ಈ ಮಹಾವರ್ಣಗಳೆಲ್ಲ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||1|| ಪೋಪದು ಬರುತಿಪ್ಪುದು ಕೋಪಶಾಣಿ ಮಾಡುವುದು ರೂಪ ಲಾವಣ್ಯವು ಹರಿವ್ಯಾಪಾರವೆಂದವರಿಗೆ ||2|| ಜಲ ಕಾಷ್ಠ ಶೈಲ ಗಗನ ನೆಲ ಪಾವಕ ವಾಯು ತರು ಫಲಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವಗೆ ||3|| ತಾರೊ ಬಾರೊ ಬೀರೊ ಸಾರೊ ಮಾರೊ ಕೋರೊ ಹಾರೊ ಹೋರೊ ಸೇರೊ ಕೋರೊದೆಂಬ ದಿಶಾಪ್ರೇರಣೆ ಎಂದವರಿಗೆ ||4|| ಮಧ್ವಶಾಸ್ತ್ರ ಪ್ರವಚನ

ಆನಂದಾ ಆನಂದಾ ಮತ್ತೆ Read More »

ಆಂಜನೇಯಾ ಕುಂತಿತನಯಾ

ಆಂಜನೇಯಾ ಕುಂತಿತನಯಾ | ಕಂಜಲೋಚನ ಪ್ರಿಯಾ | ಮಧ್ವಾಖ್ಯರಾಯಾ | ಸಂಜೀವಧರಣ ಧನಂಜಯ ಪೂರ್ವಜ | ಅಂಜದ ದುರ್ವಾದಿ ಭಂಜ ಪೂಭಂಜನ ಯಾಗಾಭಿಮಾನಿಗಳನು | ಯೋಗದಿಂದಲಿ ಪಡೆದಾ | ಆಗಮತತಿ ವಂದ್ಯ ಅನಿಂದ್ಯಾ | ಭಾಗತ್ರಯದಲ್ಲಿ ವಿ | ಭಾU Àಮಾಡಲು ಅಂದು | ನಾಗಭೂಷಣನ ಪೆತ್ತಾಸೆ ಚಿತ್ತ | ಭಾಗವೆ ನಿನ್ನ ವೈ | ಭೋಗದ ಚರಣಕೆ | ಸಾಗರ ಹಾರಿದ ಹೇ ಗುಣಪೂರ್ಣನೆ | ರಾಗ ಭಕುತಿಯಿಂದ ಭೋಗದೊಳಗೆ ಮೇಲು | ಬಾಗಿಲ ಸಾರುವ

ಆಂಜನೇಯಾ ಕುಂತಿತನಯಾ Read More »

ಅರ್ಚನೆ ಬಗೆ ಕೇಳಿ ಲೋಕ

ಅರ್ಚನೆ ಬಗೆ ಕೇಳಿ ಲೋಕ ಕಣ್ಣು ಮುಚ್ಚಿ ಕುಳಿತರೆ ಕೊಡ ಹರಿ ಮುಕ್ತಿಲೋಕಾ ಜಡವ ಪೂಜಿಸಿದರಲ್ಲೇನೊ ತಾನು | ಜಡ ತುಲ್ಯ | ನಾಗಿದ್ದಕೆ ಸಮವೇನು || ಕೆಡದಿರು ಇದರೊಳಗೆ ನೀನು ತಿಳಿ | ಒಡನೆ ಕರ್ಮಗಳೆಲ್ಲೇನುಂಟು ಕಾಣೋ ||1|| ಏಕಾಂತದಲಿ ನಿನ್ನ ಮನಸು ಅ | ನೇಕವಾಗುವುದು ನಿರಂತರ ಗುಣಿಸು || ನೀ ಕೇಳು ಯೋಚಿಸಿ ಗಣಿಸು | ಸರ್ವ ಆಕಾರದಲ್ಲಿ ಶ್ರೀ ಹರಿಯನ್ನೆ ನೆನಸು ||2|| ತ್ರಿವಿಧ ಜೀವರು ಮಾಡುವಂಥ ನಡತಿ | ಹವಣವ

ಅರ್ಚನೆ ಬಗೆ ಕೇಳಿ ಲೋಕ Read More »

ಅರಿವರಿಗಿಲ್ಲೆ ಹರಿಪುರವೊ | ಹರದಾರಿ

ಅರಿವರಿಗಿಲ್ಲೆ ಹರಿಪುರವೊ | ಹರದಾರಿ ಕೂಗಳತಿ ಎಂಬೊ ಸಂಶಯಸಲ್ಲಾಪ ಸಮಚಿತ್ತದಲ್ಲಿ ಇದ್ದು | ಸಮ ವಿಷಮ ತಿಳಿದೆದ್ದು | ಕುಮತ ಮತವನು ವದ್ದು | ಬಲು ಉಬ್ಬೆದ್ದು | ಕಮಲ ಪೀಠನ ಹೊದ್ದು | ಕ್ರಮಣಿ ಯೋಪಾದಿಯಲಿದ್ದು | ತಮಕ್ಕೆ ಹರಿನಾಮ ಮದ್ದು | ಶ್ರಮ ಕಳುಕದವಗೆ||1|| ಭಾಗವತರ ನೋಡಿ | ವೇಗ ಮನಸನು ಮಾಡಿ | ಬಾಗಿ ಸಿರವನೆ ನೀಡಿ | ನಲಿದು ಪಾಡಿ | ಯೋಗವಾಗದೆ ಕೂಡಿ | ಭೋಗವನು ಈಡಾಡಿ | ತೂಗಿ

ಅರಿವರಿಗಿಲ್ಲೆ ಹರಿಪುರವೊ | ಹರದಾರಿ Read More »

ಅಭಯ ಗಿರಿಯವಾಸ ಶ್ರೀನಿವಾಸನು

ಅಭಯ ಗಿರಿಯವಾಸ ಶ್ರೀನಿವಾಸನು ನಮಗೆ | ಶುಭವೀವ ನಿರುತ ಮಂದಹಾಸನೊ ಧೇನಿಪರ ಮನಕೆ ಚಿಂತಾಮಣಿಯೋ ಸ್ವಾಮಿ | ನೀನೆ ಗತಿಯೆಂಬರಿಗೆ ಹೊಣೆಯೋ e್ಞÁನಮಯ ಸಂದಣಿಯೊ ಪುಣ್ಯ ಕಾನನ ನಿವಾಸ ಸುರಖಣಿಯೊ ||1|| ಶರಣರಿಗೆ ವಜ್ರ ಪಂಜರನೋ ದುಷ್ಟ ದುರುಳ ದೈತ್ಯರಿಗೆ ಝರ್ಝರನೊ ದುರಿತ ಕದಳಿಗೆ ಕುಂಜರನೊ ಸ್ವಾಮಿ ಉರಗತಲ್ಪನಾದ ಸಿರಿವರನೊ ||2|| ಪರಮೇಷ್ಟಿ ಶಿವರೊಳಗಿಪ್ಪನೋ ಇಂದು ಮರುತನ ಪೆಗಲೇರಿ ಬಪ್ಪನೊ ಶರಣರಿಗೊರವೀಯೆ ತಪ್ಪನೋ ನಮ್ಮ ಸಿರಿ ವಿಜಯವಿಠ್ಠಲ ತಿಮ್ಮಪ್ಪನೊ ||3||

ಅಭಯ ಗಿರಿಯವಾಸ ಶ್ರೀನಿವಾಸನು Read More »

ಅಪ್ಪನ ನೋಡಿರೊ ವರಗಳ

ಅಪ್ಪನ ನೋಡಿರೊ ವರಗಳ ತಪ್ಪದೆ ಬೇಡಿರೋ ಸರ್ಪನಮೇಲೆ ಉಪ್ಪವಡಿಸಿ ಮುಪ್ಪು ಇಲ್ಲದೆ ಭಕ್ತರನ ಪೊರೆವಾ ಇಂದ್ರ ನೀಲಿದ ರತನೋ ಕಾಂತಿ ಚಂದ್ರಬಿಂಬ ವದನೋ ಚಂದ್ರಿಕೆಯ ಪೋಲಿಪ ಮುಖವೊ ಬಲುವಾ ನಂದಗಡಲ ಸುಖವೊ ಮುಂದಿನ ಬೆಳಸುವ ಮಿಂಚೋ ತೂಗುವ ಸುಳಿಗುರುಳ ಚುಂಚೊ ಒಂದೊಂದೊ ದಕ್ಕನಂತಾದ ಸುಂದರದವತಾರ ಮಂದರಧರನೋ ||1|| ಅರಳಿದ ಸಂಪಿಗೆ ತೆನೆಯು ನಾಸಾ ಕೊನೆಯಲ್ಲಿ ಮಣಿಯು ತರುಳ ಹಾರವೋ ಮುಂದಲೆಯಲ್ಲಿ ಅರಳೆಲೆ ವೈಯಾರವೋ ಎರಳಿಯ ಗಂಗಳೋ ನೊಸುಲಲಿ ತಿಲಕಾಂಬರದ ಬಿದಿಗೆ ತಿಂಗಳೊ ಪರಿಪರಿ ನಗೆ ಸಾವಿರ ಮಿಹಿರನಂತೆ

ಅಪ್ಪನ ನೋಡಿರೊ ವರಗಳ Read More »

ಅನ್ಯಾಯದಲಿ ಬಾಳಿ ಬದಕೋರೆ

ಅನ್ಯಾಯದಲಿ ಬಾಳಿ ಬದಕೋರೆ | ನಾಳೆ | ಕಿನ್ನೇಶದೂತರು ಎಳಿಯಾರೆ ಹಿಂದಿನ ದುಃಖವ ನೆನಸಿಕೊ | ನೀನು | ಬಂದದೆ ಒಂದೊಂದು ಗುಣಿಸಿಕೊ | ಮುಂದೀಗ ಎಚ್ಚತ್ತು ನೋಡಿಕೊ | ಇದು ಸಂದೇಹವೆನದೆ ನಿಜವಾಗಿ ತಿಳಿದಕೊ ||1|| ಗರ್ಭಯಾತನೆ ಬಲು ಹೇಸಿಕೆ | ವಳಗೆ | ನಿರ್ಬಂಧವಾಗಿ ಬೆಳೆದು ಮೇಲಕೆ | ದೊಬ್ಬುವರು ನಿನ್ನ ಕೆಳಿಯಿಕೆ | ಬಿದ್ದು ಅಬ್ಬಬ್ಬ ಐಯ್ಯಯ್ಯವೆಂದು ಅಳಲೇಕೆ||2|| ಬಾಯಿಗೆ ಬಜೆ ಬೆಣ್ಣೆ ಕೊಡುವರು | ತಾಯಿ | ಬಳಗವೆಲ್ಲ ಸಂತೋಷಬಡುವರು |

ಅನ್ಯಾಯದಲಿ ಬಾಳಿ ಬದಕೋರೆ Read More »

ಅನಂತಗಿರಿ ಯಾತ್ರೆ ಮಾಡಿ

ಅನಂತಗಿರಿ ಯಾತ್ರೆ ಮಾಡಿ ಜನರು ಅನಂತ ಜನುಮದ ಪಾಪ ಸಂಹರವು ಇಲ್ಲಿ ಕುರುರಾಯ ಜನ್ಮಾಂತರದು ಪಾಪ ನಿಲ್ಲದೆ ಮಾಡಿದಾ ನಡತಿಯಿಂದಾ ಎಲ್ಲ ಕಾಲದಲಿ ದರಿದ್ರನಾಗಿದ್ದು ಶ್ರೀ ವಲ್ಲಭನ ಒಲಿಸಿ ಮುದಂಬರೀಷ ನೃಪನಾದಾ ||1|| ಚಂಡಶಾಸನನೆಂಬ ನೃಪತಿ ದುರ್ಮತಿಯಲಿ ಮಂಡಲದೊಳಗಿರಲು ಸರ್ಪ ಕಚ್ಚಿ ಕಂಡು ಗೃಧ್ರವು ಅವನ ಉಂಗುಷ್ಟ ಭವನಾಶಿ ಕುಂಡದಲಿ ಬಿಸುಡೆ ದಶರಥ ಭೂಪತಿಯಾದಾ||2|| ಹೇಳಲಳವೆ ಇನ್ನು ಈ ಕ್ಷೇತ್ರದÀ ಮಹಿಮೆ ಕೇಳಿದಾಕ್ಷಣ ಮುಕ್ತಿ ಸಿದ್ಧವಕ್ಕೂ ಶ್ರೀಲೋಲ ನರಸಿಂಹ ವಿಜಯವಿಠ್ಠಲರೇಯೇನ ವಾಲಗವ ಕೈಕೊಂಡ ಮನುಜಂಗೆ ಬಲು ಸಾಧ್ಯ

ಅನಂತಗಿರಿ ಯಾತ್ರೆ ಮಾಡಿ Read More »

ಅಧಮನಲ್ಲವೆ ಅವನು ಅಧಮನಲ್ಲವೆ

ಅಧಮನಲ್ಲವೆ ಅವನು ಅಧಮನಲ್ಲವೆ | ಯದುಪತಿಯ ಭಜಿಸಿ ಸದಾ | ಬದುಕದಿದ್ದ ನರಜನ್ಮ ಪ ಹೊರಳಿ ಎದ್ದು ಕುಳಿತು ಎರಡು ಕರವ ಮುಗಿದು ಜಿಹ್ವೆಯಲ್ಲಿ | ಹರಿ ಹರಿ ಎಂದು ಸ್ಮರಣೆ ಮಾಡಿ | ಹರುಷವಾಗದಿದ್ದ ನರನು ||1|| ಮಡುವಿನೊಳಗೆ ಮಿಂದು ಬಂದು | ಕುಡತಿ ಜಲವ ಕೊಂಡು ರವಿಗೆ | ಕಡಿಯದಘ್ರ್ಯವೆರೆದು ಪುಣ್ಯ | ಪಡೆಯದಿದ್ದ ಹೀನ ನರನು ||2|| ಹಾದಿ ಹಿಡಿತು ಬರುತ ಸುಮ್ಮನಾದರನ್ನ | ಇರದೆ ವೇಣು | ನಾದ ಕೃಷ್ಣ ಕೃಷ್ಣಯೆಂದೂ

ಅಧಮನಲ್ಲವೆ ಅವನು ಅಧಮನಲ್ಲವೆ Read More »

ಅಣ್ಣನ ತೋರಿಸೆ ಎನಗೆ

ಅಣ್ಣನ ತೋರಿಸೆ ಎನಗೆ | ತನ್ನ ಮನೆಯಲ್ಲಿ ಬಣ್ಣದ ಭೊಗರಿ ಚಂಡು ಯಿಲ್ಲಾ | ಸುಣ್ಣದ ಗಡಿಗೆ ಯಾಕೆ ವಡಿಯಿತು ಪ ಹಾಸಿಕೆ ಹಾಸಿಕೆ ಎತ್ತ | ಕಾಸೆ ಬಿಸಿ ನೀರು | ದಾಸನ ಕರಿಯೆ | ಮೋರಿ ತೊಳಿಯೆ | ಈಸು ಸೊಲ್ಲು ಕೇಳೆ ಗೋಪಿ ||1|| ಕುಪ್ಪಸÀ ಕೊಡಬೇಡ ನೀ | ಅಪ್ಪನ ನೋಡ ಬೇಡ | ಚಪ್ಪರದೊಳಗೆ ಕುಳಿತು ಕಾಳು | ಕುಪ್ಪೆ ನಾಡುವ ಈಗ ಪೋಗಿ ||2|| ಹೊತ್ತು ಹೋಯಿತು ಮಸರುಕಟಿಯಲಿಲ್ಲ್ಯಾಕೆ

ಅಣ್ಣನ ತೋರಿಸೆ ಎನಗೆ Read More »

ಅಡಿಗಳಿಗೊಂದಿಪೆ ಪುರಂದರ

ಅಡಿಗಳಿಗೊಂದಿಪೆ ಪುರಂದರ ಗುರುವೆ ಕಡು e್ಞÁನ-ಭಕ್ತಿ-ವೈರಾಗ್ಯದ ನಿಧಿಯೆ ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ | ಗುರು ವ್ಯಾಸರಾಯರಿಂದುಪದೇಶಗೊಂಡೆ || ಎರಡೆರಡು ಲಕ್ಷದಿಪ್ಪತೈದು ಸಾವಿರ | ವರ ನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ||1|| ಗಂಗಾದಿ ಸಕಲ ತೀರ್ಥಂಗಳ ಚರಿಸಿತು | ರಂಗವದನ ವೇದವಾಸ್ಯನ || ಹಿಂಗದೆ ಮನದಲ್ಲಿ ನೆನೆದು ನೆನೆದು ಮರೆವ | ಮಂಗಳ ಮಹಿಮೆಯ ನುತಿಸಿ ನುತಿಸಿ ನಾ ||2|| ನಿನ್ನತಿಶಯಗುಣ ವರ್ಣಿಸಲಳವಲ್ಲ | ನಿನ್ನ ಸೇವಕನ ಸೇವಕನೆಂತೆಂದು || ಪನ್ನಗಶಯನ ಮುಕುಂದ ಕರುಣ ಪ್ರ

ಅಡಿಗಳಿಗೊಂದಿಪೆ ಪುರಂದರ Read More »

ಅಂತರಂಗದ ಕದವು ತೆರೆಯಿತಿಂದು

ಅಂತರಂಗದ ಕದವು ತೆರೆಯಿತಿಂದು ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ಏಸುದಿನವಾಯಿತೊ ಬೀಗಮುದ್ರೆಯ ಮಾಡಿ | ವಾಸವಾಗಿದ್ದರೋ ದುರುಳರಿಲ್ಲಿ || ಮೋಸವಾಯಿತು ಇಂದಿನ ತನಕ ತಮಸಿನ | ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||1|| ಹರಿಕರುಣವೆಂಬಂಥ ಕೀಲಿ ಕೈ ದೊರಕಿತು | ಗುರುಕರುಣವೆಂಬಂಥ ಶಕ್ತಿಯಿಂದ || ಪರಮ ಭಾಗವತರ ಸಹವಾಸದಲಿ ಪೋಗಿ | ಹರಿ ಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ ||2|| ಸುತ್ತಲಿದ್ದವರೆಲ್ಲ ಪಲಾಯನವಾದರು | ಭಕ್ತಿಕಕ್ಕಡವೆಂಬ e್ಞÁನದೀಪ || ಜತ್ತಾಗಿ ಹಿಡಿಕೊಂಡು ದ್ವಾರದೊಳಗೆ ಪೊಕ್ಕೆ | ಎತ್ತನೋಡಿದರತ್ತ

ಅಂತರಂಗದ ಕದವು ತೆರೆಯಿತಿಂದು Read More »

ಅಂಗಿ ಕೊತ್ತೇನೆ ಗೋಪಿ

ಅಂಗಿ ಕೊತ್ತೇನೆ | ಗೋಪಿ | ತಿಂಗಲವಾದೇನೆ | ತಿಂಗಾದಿ ಪಿದಿದೆನು ಸಲಸಲ ಪೋಗಿ | ಗಂಗಿಯ ತಿದೆಯಲ್ಲಿ ಆದಿ ಬಂದೇನು ಕುಕುಕೊಲ್ಲೆ | ತಾಯಿಹಾಲು ಕುದಿದೇನು | ಗೋಕುಲ ಮಕ್ಕಳ ಕೂದಾ ಕಲಿತು | ಕಾಕಾಕೋಲು ಹೊದಾದೆನೆ ||1|| ತಂದು ಕೊದು ಬ್ಯಾಗಾ ಕೈಗೆ ಚಿನ್ನಿಕೋಲು ಬೇಕಲ್ಲೆ | ಉಂದೇನು ಕಲ್ಲಿಯ ಬುತ್ತಿಯ ಮತ್ತೆ | ಹಿಂದಾಕಲುಗಳ ಕಾದು ತಂದೆನೊ ||2|| ಅಪ್ಪತ್ತಿಕೊದು ಒಂದು ಮ್ಯಾಲೆ ತುಪ್ಪವು ತೊದಿಯದಕೆ | ತಪ್ಪಿಗೆಯಿದಸೆ ಅಪ್ಪಗೆ ಪೇಳಿ ವಪ್ಪುಗದಲಿ

ಅಂಗಿ ಕೊತ್ತೇನೆ ಗೋಪಿ Read More »

ಹ್ಯಾಂಗೆ ನೀ ದಾಸನಾದೆ ಪ್ರಾಣಿ

ಹ್ಯಾಂಗೆ ನೀ ದಾಸನಾದೆ ಪ್ರಾಣಿ ಹ್ಯಾಂಗೆ ನೀ ದಾಸನಾದೆ ಹೀಂಗೆ ಸಂಸಾರದೊಳುಮಂಗನಂದದಲಿ ಭವ ಭಂಗವ ಪಡುವವನು ಆಸೆಯ ಬಿಡಲಿಲ್ಲ ಕಾಸು ಗಳಿಸುವೆಯಲ್ಲದೋಷಕ್ಕೆ ಗುರಿಯಾಗಿ ಹೇಸಿಕೆಯೊಳು ಬಿದ್ದು ||1|| ತನುವು ತನ್ನದು ಎಂದು ತನಯ ಮಾನಿನಿಯರೆತನಗೆ ಗತಿಯೆಂದು ನಂಬಿರುವ ಮೂಢನೆ ||2|| ಕಾಲನ ದೂತರು ಕರುಣಸಂಪನ್ನರೆಕಾಲ ವ್ಯರ್ಥದಿ ಕಳೆವ ಕೀಳು ಬುದ್ಧಿಯ ಪ್ರಾಣಿ||3|| ತಲೆ ಹುಳಿತ ನಾಯಂತೆ ಹಲವು ಬೀದಿಯ ತಿರುಗಿಗೆಲುವಿನಿಂದಲಿ ಮೂಲ ಮಲವನಳಿಯದೆ||4|| ಉದರಪೋಷಣೆಗಾಗಿ ಅಧಮರ ಯಾಚಿಸುತಮದಗರ್ವವೆಂಬುವುದ ಬದಿಯಲ್ಲಿ ಇಟುಗೊಂಡು ||5|| ಹಿರಿಯರ ನಿಂದಿಸಿ ಹರಿದಾಸನೆನಿಸಿದೆಗುರುಮಂತ್ರವರಿಯದ ಮರುಳು

ಹ್ಯಾಂಗೆ ನೀ ದಾಸನಾದೆ ಪ್ರಾಣಿ Read More »

ಹೇಗಿದ್ದು ಹೇಗಾದೆಯೊ ಆತ್ಮ

ಹೇಗಿದ್ದು ಹೇಗಾದೆಯೊ ಆತ್ಮಯೋಗೀಶನಾನಂದಪುರದಲಿರುವುದ ಬಿಟ್ಟು ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದುಕುಸುಕಾಡಿ ನುಡಿದು ನೆಲಬಟ್ಟೆವಿಡಿದುಕಿಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದುವಸುಧೆಯಲಿ ದಿನಗಳೆದೆಯಲ್ಲ ಆತ್ಮ ||1|| ಎಳಗೆರೆಯಲಿ ಆಡಿ ಯೌವನದೂರಿಗೆ ಬಂದುಥಳಥಳಿಪ ಹಸ್ತಾದ್ರಿ ನೆಳಲ ಸೇರಿಅಳಲು ಸುತ ಬೆಳೆದು ದಾರಿದ್ರ್ಯ ಪೇಟೆಗೆ ಬಂದುಹಳೆಯ ಬೀಡಿಗೆ ಪಯಣವೇ ಆತ್ಮ ||2 || ಗನ್ನಗತಕದ ಮಾತು ಇನ್ನು ನಿನಗೇತಕೋಮುನ್ನ ಮಾಡಿದ ಕರ್ಮಭರದೊಡಲಿದೆಉನ್ನತದ ಕಾಗಿನೆಲೆಯಾದಿಕೇಶವ ಸುಪ್ರ-ಸನ್ನ ಮೂರುತಿಯ ಭಜಿಸೆಲೊ ಆತ್ಮ ||3||

ಹೇಗಿದ್ದು ಹೇಗಾದೆಯೊ ಆತ್ಮ Read More »

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆಉತ್ತಮ ಅಶ್ವವ ಕತ್ತೆ ಹೋಲುವುದುಂಟೆ ವಿತ್ತವುಳ್ಳವನ ಕುಲ ಎಣಿಸುವುದುಂಟೆಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ ||1|| ಅತ್ತೆಮನೆ ಸೇರುವಗೆ ಅಭಿಮಾನವುಂಟೆಬತ್ತಲೆ ತಿರುಗುವಗೆ ಭಯವು ಇನ್ನುಂಟೆ||2|| ಪೃಥ್ವಿಯೊಳಗೆ ಕಾಗಿನೆಲೆಯಾದಿಕೇಶವಗೆಮತ್ರ್ಯದೊಳನ್ಯ ದೇವರು ಸರಿಯುಂಟೆ ||3||

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ Read More »

ಹೂವ ತರುವರ ಮನೆಗೆ ಹುಲ್ಲ ತರುವೆ

ಹೂವ ತರುವರ ಮನೆಗೆ ಹುಲ್ಲ ತರುವೆ ಆವ ಪರಿಯಲಿ ಸಲಹೊ ದೇವ ಚಿನ್ಮಯನೆ ಈರೇಳು ಜನ್ಮದಿಂ ದಾಸನಾಗಿಹೆ ನಾನುಸೇರಿದೆನೊ ತವ ಶರಣರ ಸೇವೆಗೆಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿನಾರಸಿಂಹನೆ ಕಾಯೊ ನಮ್ಮ ಕುಲಸ್ವಾಮಿ ||1|| ರಂಗನಾಥನೆ ನಿನ್ನ ಡಿಂಗರಿಗನೋ ನಾನುಡಂಗುರವ ಹೊಯಿಸಯ್ಯ ದಾಸನೆಂದುಭಂಗಪಡಿಸದೆ ನಿನ್ನ ಶರಣರೊಳಗಿಂಬಿಟ್ಟುಗಂಗೆ ಜನಕನೆ ಕಾಯೊ ಚರಣಕ್ಕೆ ಶರಣು ||2|| ಎಷ್ಟು ಮಾಡಲು ನಿನ್ನ ಬಂಟನೋ – ವೈಷ್ಣವರಹುಟ್ಟು ದಾಸಿಯ ಮಗನು ಪರದೇಶಿಯೋಸೃಷ್ಟಿಗೊಡೆಯ ಕಾಗಿನೆಲೆಯಾದಿಕೇಶವನೆ – ಕೈಬಿಟ್ಟೆಯಾದರೆ ನಿನಗೆ ಹರಿದಾಸರಾಣೆ ||3||

ಹೂವ ತರುವರ ಮನೆಗೆ ಹುಲ್ಲ ತರುವೆ Read More »