ಈ ವೈಷ್ಣವ ಜನುಮ ಸಫಲವಿಂದು

ಈ ವೈಷ್ಣವ ಜನುಮ ಸಫಲವಿಂದು | ಈ ಉಡುಪಿ ಯಾತ್ರಿಗಭಿಮುಖವಾದುದು ಮನೋವಾಕ್ಕಾಯ ಕರ್ಮಗಳು ಬಲುಪರಿ ಇರಲು | ಮನುಜ ಪೋಗುವೆನೆಂದು ಒಮ್ಮೆ | ನೆನೆಸಿದ ಕ್ಷಣದಲ್ಲಿ ನಾಕವಾಗೋವು ಸು ತ್ತನು ಸುತ್ತಿಸುವ ಭವ ವನಧಿಗೆ ಇದೇ ಮೂಲ ||1|| ದೇಶದೊಳಗುಳ್ಳ ನಾನಾ ಯಾತ್ರೆ ತೀರಥಾ | ಏಸುಬಾರಿ ಪೋಗಿ ಬರಲಿ ಉಂಟೆ | ಈ ಸುಲಭ ಯಾತ್ರೆ ಕಂಡವರಿಗೆ ದೊರಿಯದು | ಲೇಸಾಗಿ ಕೇಳುವದು ಕುತ್ಸಿತ ಭಾವನೆ ಬಿಟ್ಟು ||2|| ಕೃಷ್ಣರಾಯನ ದರುಶನಕೆ ಮನಮಾಡಿದ | ಶಿಷ್ಟಾಚಾರಗೆ […]

ಈ ವೈಷ್ಣವ ಜನುಮ ಸಫಲವಿಂದು Read More »

ಈ ಮಾತುರ ನೀಯದಿದ್ದರೆ ನಿನ್ನ

ಈ ಮಾತುರ ನೀಯದಿದ್ದರೆ ನಿನ್ನ | ಧಾಮದಲ್ಲಿಗೆ ಪೋಗಿ ಸೇರಿ ಸುಖಿಪದೆಂತೋ ಹುಟ್ಟಿದಾರಭ್ಯದಿ ಹೊಟ್ಟಿ ಬಟ್ಟಿಯಲಿಂದ | ಕಷ್ಟ ಬಟ್ಟೆನೆಂದು ಹೇಳಲಿಲ್ಲಾ | ಸೃಷ್ಟೇಶ ಕಾಡುವ ಅಷ್ಟ್ಟ ಮಹಾಮದಗಳ ನಷ್ಟಗೊಳಿಸಿ ನಿನ್ನ | ನಿಷ್ಟಿಲಿಡೆಂದೆಲ್ಲದೆ ||1|| ಸತಿ ಸುತರಿಗೆ ಯೇನೋ | ಗತಿ ಗೋತ್ರವಿಲ್ಲೆಂದು | ಸತತ ನಿನ್ನ ಕೇಳಿ ದಣಿಸಿಲಿಲ್ಲಾ | ಪತಿತ ಪಾವನ ಎನಗೆ ಗತಿಯಾಗುವುದಕೆ | ಸುಪಥವನೆ ತೋರುವ | ಮತಿಕೊಡೆಂದೆನಲ್ಲದೆ||2|| ಕರುಣಿ ಬೇಡಿಕೊಂಬೆ | ಉರು ಕಾಲದಲಿ ನಿನ್ನ | ಶರಣರ

ಈ ಮಾತುರ ನೀಯದಿದ್ದರೆ ನಿನ್ನ Read More »

ಈ ಪರಿಯಲಿ ಸಲೆ ಸೇವೆಯನು

ಈ ಪರಿಯಲಿ ಸಲೆ ಸೇವೆಯನು ಕೊಡು ಕಂಡ್ಯಾ ಹರಿಯೇ | ಶ್ರೀಪತಿ ಉತ್ತಮರ ಸಂಗತಿಯಲೆನ್ನಯಿಟ್ಟು ಬಂದು ಕುಳ್ಳಿರುವಲ್ಲಿ ಸಿಂಹಾಸನನಾಗುವೆನು | ನಿಂದಲ್ಲಿ ಮೆಟ್ಟುವ ಹಾವಿಗೆಯಾಗುವೆ | ಮಿಂದ ಬಚ್ಚಲಿಗೆ ಹಚ್ಚಿದ ಶಿಲೆಯಾಗುವೆ | ಗಂಧವಾಗುವೆ ನಿನ್ನ ಅಂಗಾಲಿಗೆ ||1|| ಉಂಬಲ್ಲಿ ಬಿದ್ದ ಎಂಜಲ ತಿಂದು ಬದುಕುವೆ | ಅಂಬು ಶೀತಳವಾಗಿ ಕರವ ತೊಳಿವೆ | ಅಂಬುಜ ಕುಸುಮವಾಗಿ ಹಾಸಿಕೆಯಾಗುವೆ ಬಾಯ | ದೊಂಬಲಿಗೆ ಕರವಡ್ಡಿ ಛಲ ಹೊರುವೆ||2|| ಪವಡಿಸುವ ಮನೆಯೊಳಗೆ ಸೂಜ್ಯೋತಿಯಾಗುವೆ | ಪವಳ ಮಂಚದ ನಾಲ್ಕು

ಈ ಪರಿಯಲಿ ಸಲೆ ಸೇವೆಯನು Read More »

ಈ ದೇಹ ಬಲು ಸಾಧನ

ಈ ದೇಹ ಬಲು ಸಾಧನ ಭೂದೇವ ಜನ್ಮದಲಿ ಬಂದ ಕಾರಣ ನಮಗೆ ಶ್ವಸನ ಮತವೆ ಪೊಂದಿ | ನಸು ಚಿತ್ತದಲಿ ಯಿದ್ದು | ವಿಷಯಂಗಳೆಲ್ಲ ನಿರಾಕರಿಸಿ | ಋಷಿಮಾರ್ಗದಲಿ ನಡೆದು ವಿಹಿತಾರ್ಥದ ಸತ್ಯ | ಬೆಸಸೆ ಪೇಳುತ ನಿತ್ಯ ಸಜ್ಜನರ ಒಡಗೂಡು||1|| ಬಾಹುದ್ವಯದಲಿ ಶಂಖ ಚಕ್ರ ಧರಿಸಿ ಉ | ತ್ಸಾಹದಲಿ ದ್ವಾದಶ ಪುಂಡ್ರಗಳನಿಟ್ಟು | ಸ್ನೇಹಭಾವದಲಿ ಸತತ ಭಕುತಿಯ ಮಾಡು | ಇಹಲೋಕದಲಿ ಇಷ್ಟಾರ್ಥ ಬೇಡುತಲಿರು ||2|| ಅನಿಷಿದ್ದ ಕರ್ಮಗಳು ಆಚರಿಸಿ ಭೂತದಯ | ಅನುಗಾಲ

ಈ ದೇಹ ಬಲು ಸಾಧನ Read More »

ಈ ಕಾಯ ಬಲು ಹೇಯವೊ

ಈ ಕಾಯ ಬಲು ಹೇಯವೊ | ಸಾಕು ಸಾಕು ಸಂಸಾರ ನೆಚ್ಚದಿರು ಎಚ್ಚರಿಕೆ ಊಧ್ರ್ವಾಧೋ ಭಾಗದಿಂದ ಕೂಡಿದಾ ರಕ್ತಶುಕ್ಲ | ಅರ್ಧರ್ಧ ಪ್ರವೇಸಿಯಾಗಿ | ವರ್ಧನಾಗಿ ಮಾಂಸ ಪಿಂಡಿಕೆಯಲಿ ಬೆಳೆದು | ಅರ್ಧವದೊಳಗೆ ಬಳುಲುವುದೇನೊ ಮಹಾ ಕಠೀಣಾ ||1|| ಸನ್ನಿರೋಧವಾದ ಪ್ರಾದೇಶದಲಿ ನೀನು | ಬನ್ನ ಬಡುವದು ಜನಕೆ ಅರಿಯನಲ್ಲಾ | ಮುನ್ನೆ ಇಂದ್ರನಿಗಾಗಿ ವರವಿತ್ತ ಸಂಪತ್ತು | ಇನ್ನು ನಿನ್ನ ಸುತ್ತ ಬಂದದೆ ತಿಳಿದುಕೋ ||2|| ಕಫ ಶ್ಲೇಷ್ಮ ಪಿತ್ತ ವಾತ ಶೈತ್ಯಜ್ವರ ಕೆಮ್ಮು |

ಈ ಕಾಯ ಬಲು ಹೇಯವೊ Read More »

ಇವನ ಪಾಲಿಸಿದರೆ ನಿನಗೆ ಪುಣ್ಯ

ಇವನ ಪಾಲಿಸಿದರೆ ನಿನಗೆ ಪುಣ್ಯ ಅವನಿಯೊಳೆಂದೆಂದಿಗೂ ನಾನೆ ಧನ್ಯ ಅ.ಪ ನೆಟ್ಟ ಮುಳ್ಳು ಕಿತ್ತು ಬಿಸುಟಂತೆ ಮಾಡು | ಘಟ್ಟಿಯಾಗಿ ಭಕುತನ್ನ ಕಾಪಾಡು||1|| ಸಾಧನ ಪ್ರಾಣಿಗಳಿರಲಿ ಬೇಕು | ಆದರದಿಂದಲಿ ಕೇಳೆನ್ನ ವಾಕು ||2|| ತ್ರಿಜಗದೊಳಗೆ ನಿ£ಗ್ಯಾರೆಣೆಯೆ | ವಿಜಯವಿಠ್ಠಲ ಕೇಳೆನ್ನ ದೊರೆಯೆ ||3||

ಇವನ ಪಾಲಿಸಿದರೆ ನಿನಗೆ ಪುಣ್ಯ Read More »

ಇರಬಾರದೊ ಬಡವ ಜಗತ್ತಿನೊಳಗೆ

ಇರಬಾರದೊ ಬಡವ ಜಗತ್ತಿನೊಳಗೆ | ಪರದೇಶಿ ಮಾನವಗೆ ದಿಕ್ಕು ಮತ್ತಾವನು ಪೊಡವಿಪತಿ ದೃಷ್ಟಿಗಳು ಒಳ್ಳೆವಲ್ಲಾವೆಂದು | ಬಿಡದೆ ಜನ ಪೇಳುವುದು ಸಿದ್ಧವಯ್ಯಾ | ಬಡವ ನಾನಯ್ಯ ನಾನಾ ಕಷ್ಟಬಟ್ಟೆರಡು | ಒಡವೆ ಸಂಪಾದಿಸಲು ಅಪಹರಿಸಿದ ನೋಡು ||1|| ದಿನ ಪ್ರತಿ ದಿನದಲ್ಲಿ ಕರಳು ಕಟ್ಟಿಕೊಂಡು | ಹಣದಾಸಿಯಿಂದ ನಾ ಘಳಿಸಿದ್ದೆನೊ | ಮನೆವುಗೆ ಬಂದು ಮಾಡಿಕೊಂಡೊಯ್ದಿಯಾ ಧರ್ಮವೇ | ವನಜನಾಭನೆ ನಿನ್ನ ದೊರೆತನಕೆ ಶರಣೆಂಬೆ||2|| ದೊರೆಗಳಾ ಲಕ್ಷಣವಿದೆ ಎಂದೆಂದಿಗೆ ತಮಗೆ | ಸರಿಬಂದ ಕಾರ್ಯಮಾಡುವರಲ್ಲದೇ | ನೆರೆಯವರದೇ

ಇರಬಾರದೊ ಬಡವ ಜಗತ್ತಿನೊಳಗೆ Read More »

ಇದೇ ಸಮಯ ಹರಿಯೇ

ಇದೇ ಸಮಯ ಹರಿಯೇ ಇದೇ ಸಮಯ ನಿನ್ನ ಪದ ಕಮಲ ತೋರಿ ಸದಾ | ಬಿಡದೆ ಎನ್ನ ಮುದದಿ ಪೊರೆವುದಕೆ ಅ.ಪ ನಾನಾ ಯೋನಿಯಲಿ ಬಂದು ಜ್ಞಾನ ದುರ್ಲಭನಾಗಿ | ಹೀನನಾದವಗೆ ಸುಜ್ಞಾನ ಪಾಲಿಸುವುದಕೆ ||1|| ಆಶಾಪಾಶಕೆ ಸಿಲುಕಿ ಶ್ರೀಶನ ಮರೆತೆನೋ | ಲೇಸು ದಾರಿಯ ತೋರಿ ದಾಸನ ಕಾಯುವುದಕೆ ||2|| ಸಂತರ ಸಂಗವ ಸಂತತ ಪಾಲಿಸಿ ಅಂತರಂಗದಿ ನಿನ್ನ ಚಿಂತನೆ ಕೊಡುವುದಕೆ ||3|| ಹಿಂದಿನ ಸುಕೃತದಿ ಬಂದೆ ಭೂಸುರನಾಗಿ | ಮುಂದಿನ ಪದಕ್ಕಾಗಿ ಕುಂದದೆ ಸಲಹುವುದಕೆ

ಇದೇ ಸಮಯ ಹರಿಯೇ Read More »

ಇದೇ ರಾಮನಿಧಿ ನೋಡು ಎದುರಿಗಿರುತಿರೆ

ಇದೇ ರಾಮನಿಧಿ ನೋಡು ಎದುರಿಗಿರುತಿರೆ ಹೃದಯವೆಂಬೊ ಸದನದಲ್ಲಿ ಕದವು ತೆಗೆದಿದೆ ದಾರಿಯಲ್ಲಿ ಆರು ಛತ್ರ ಭೂರಿ ಭೋಜನ ಊರೊಳಲ್ಲಿ ಪ್ರಣವ ಶಬ್ದ ಭೋರೆಗುಟ್ಟುತ ನೂರು ಕೋಟಿ ಸೂರ್ಯ ಕಿರಣ ತೋರುವಾ ಪ್ರಭೆ ಸೂರೆ ಮಾಡಿಕೊಳ್ಳಿರೋ ಪಾರವಿಲ್ಲದಾ ||1|| ಅಷ್ಟದಳದ ಮಂಟಪದ ಪೆಟ್ಟಿಗೆಯಲೀ ಸೃಷ್ಟಿಗೊಡೆಯ ಹರಿಯ ನಾಮ ಅಂಕಿತವಾದ ಕಟ್ಟಳೆಯಿಲ್ಲದ ನಾಣ್ಯಗಳನು ಕಟ್ಟರೀಸಿದೆ ಹುಟ್ಟ ತಿರುಕರೆಲ್ಲ ಬಂದು ಕಟ್ಟಕೊಳ್ಳಿರೋ ||2|| ಅಂಕೆ ಮಾಡುವರಿಲ್ಲವಿದಕೆ ಶಂಕೆ ಬ್ಯಾಡಿರೋ ಅ- ಹಂಕೃತಿಯ ತೊರೆದು ಕಾಲ್ಗೆ ಗೆಜ್ಜೆ ಕಟ್ಟಿರೋ ಶಂಖ ತಾಳ ಮದ್ದಳೆಯು

ಇದೇ ರಾಮನಿಧಿ ನೋಡು ಎದುರಿಗಿರುತಿರೆ Read More »

ಇದೇ ಭಕುತಿ ಮತಿಗೆ ಮುಕುತಿ

ಇದೇ ಭಕುತಿ ಮತಿಗೆ ಮುಕುತಿ | ಇದಕ್ಕಧಿಕವಾಗಿಪ್ಪ ವಿಧಿಗಳೆಲ್ಲಿಯಿಲ್ಲಾ ರತುನ ಗರ್ಭದೊಳಗೆ ತಿಳಿ | ರತುನ ಸಮಕ್ಷೇತ್ರಗಳಿಗೆ | ರತುನವೆನ್ನಿ ಯತಿವಂಶ | ರÀತುನ ಮಧ್ವಮುನಿಮಾಡಿದಾ ||1|| ಪದ ಜೀವಸ್ತರಿಗದೆ ಪಾ | ಪ ಜನರು ಕೃಷ್ಣರಾಯನ ಪಾದವ ನೋಡಿ ನಿತ್ಯಾ | ಸಾಧನಿ ಮನ ಮಾಡಿರಯ್ಯಾ ||2|| ಏಳು ಒಂದು ಮಠದ ಲೋಕರಂಸೆ ಸದನವೆನ್ನಿ | ಪೇಳಲೇನು ಅವರೇ ಯಿಲ್ಲಿ ಊಳಿಗವ ಮಾಡುತ್ತಿಪ್ಪರು ||3|| ಮೇರೊ ಪರ್ವತ ತುಲ್ಯವಿದೆ | ವಾರಿಜನೆ ಮಧ್ವರಾಯ | ಈ

ಇದೇ ಭಕುತಿ ಮತಿಗೆ ಮುಕುತಿ Read More »

ಇದು ನಿನಗೆ ಬಲು ಚಂದವಾಗಿದೇನೋ

ಇದು ನಿನಗೆ ಬಲು ಚಂದವಾಗಿದೇನೋ | ಬಾದರಾಯಣನ ಮೆಚ್ಚಿಸಿ ಸೇವೆ ಮಾಡಬೇ | ಕಾದರೂ ಮತ್ತಾವ ಪರಿಯಿಲ್ಲವೇ | ಈ ಧರೆ ಮನುಜರಿಗೆ ಆವಾವ ಕಾಲಕ್ಕೆ ಭೋದವಾಗದಂತೆ ಇದ್ದದ್ದೇನು ಬಗೆ ||1|| ಸಂಪುಟಾಕಾರವನು ಧರಿಸಿ ಅಲಂಕಾರ | ಸಂಪತ್ತಿನಿಂದ ಯತಿಗಳ ಕೈಯ್ಯಲಿ | ಸೊಂಪಾಗಿ ಮಿಗೆ ಪೂಜೆ ಕೊಳುತ ಪೊಗಳಿದ ಜನಕೆ | ತಂಪಾಗಿ ಗುರು ಶ್ರೀ ಮದಾಚಾಯರ್ಸ ||2|| ಪೆಟ್ಟಿಗೆಯಂದದಲಿ ಒಪ್ಪುವನೆಂದದಕೆ | ದಿಟ್ಟವಾಯಿತು ದಾಸರು ನುಡಿದುದು | ವಿಷ್ಣುತೀರ್ಥರಿಂದ ಆರಿಸಿ ಬಂದ | ವಿಜಯವಿಠ್ಠಲ

ಇದು ನಿನಗೆ ಬಲು ಚಂದವಾಗಿದೇನೋ Read More »

ಇಕೋ ಈತ ವೆಂಕಟೇಶನೊ ಭವದ

ಇಕೋ ಈತ ವೆಂಕಟೇಶನೊ | ಭವದ | ಸಿಕ್ಕು ಬಿಡಿಸಿ ನೆನದವರಿಗೆ ಸಿಕ್ಕಿ ಮನದಿಂದಗಲದಿಪ್ಪಾ ಕರುಣ ಅರುಣ ಕಿರಣ ಪೋಲುವ | ಚರಣ ಧರಣಿ ತರುಣಿ ಸ್ಮರಿಸಿ | ಕರುಣಗಡಲಾ | ಧರಣಿಯಿಂದ ಉದ್ಧರಣೆ ಮಾಡಿದೆ ಪರಣನೀತ ||1|| ಮಂಡಿಯ ಮಂಡನ | ಕುಂಡಲ ಕಾಂತಿ | ಗಂಡ ಸ್ಥಳದಲಿ ಮಿರುಗೆ ತುಲಸಿ | ದಂಡೆ ಕೌಸ್ತುಭ ಭೂಷಣ ಕಾಲ | ಪೆಂಡೆಯಿಟ್ಟು ನಂದನೀತ ||2|| ತಂ (ತು) ವಾಹನ ಆ ಖಂಡಲ ಇಕ್ಷುಕೋ | ದಂಡ

ಇಕೋ ಈತ ವೆಂಕಟೇಶನೊ ಭವದ Read More »

ಇಂದು ಸಾರ್ಥಕವಾಯಿತು ಎನ್ನ ಜನನಾ

ಇಂದು ಸಾರ್ಥಕವಾಯಿತು ಎನ್ನ ಜನನಾ ಚಂದ್ರ ಪುಷ್ಕರಣಿಯ ವಾಸ ರಂಗನ್ನ ಕಂಡು ಸುತ್ತೇಳು ಪ್ರಾಕಾರಗೋಪುರ ಮಹಾದ್ವಾರ ರತ್ನದ ಕವಾಟ ತೋರಣಗಳು ಕತ್ತಲೆ ಹರನಂತೆ ಕಣ್ಣಿಗೆ ತೋರುತಿದೆ ತುತ್ತಿಸಲಳವೆ ಅನಂತ ಜನುಮಕೆ ||1|| ಸಾಲು ಬೀದಿಗಳು ಒಂದೊಂದರ ಮಧ್ಯದಲಿ ಸಾಲು ಮಂಟಪ ಮುತ್ತಿನ ಚಪ್ಪರಾ ಕೀಲುಮಣಿಗಳಿಂದ ಬಿಗಿದ ಸೊಬಗು ಹೊಂ ಬಾಳೆಸ್ತಂಭಗಳೆಡಬಲದಲ್ಲಿ ಒಪ್ಪಲು ||2|| ಮುಂದೆ ಗರುಡಗಂಭ ಪವಳದ ಗವಾಕ್ಷಿ ಹಿಂದೆ ನೆರೆದ ಬಲು ಪರಿಯಂಗಡಿ ಸಂದಣಿಯಿಂದ ಭೂಸುರರು ಸ್ತೋತ್ರವ ಪೇಳೆ ಒಂದೊಂದು ಬಗೆಯಲ್ಲಿ ವಂದಿಸುವುದು ಕಂಡು ||3||

ಇಂದು ಸಾರ್ಥಕವಾಯಿತು ಎನ್ನ ಜನನಾ Read More »

ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ಬಲು

ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ಬಲು | ಅಂದದಿಂದ ಮೆರೆವನಂದವ ನೋಡಾ ಮುತ್ತಿನ ಕಿರೀಟ ಮೇಲೆ ಸುತ್ತಿದ ಲತೆ ತಳಲು | ರತ್ನಗಂಬಳಿ ಕಲ್ಲಿಯ ಬುತ್ತಿ ಪೆಗಲೂ || ತೂತ್ತುತೂರಿ ಎಂದು ಸ್ವರ | ವೆತ್ತಿ ಊದುವ ಕೊಳಲು | ಉತ್ತಮ ಶೋಕ್ಲವನು ಮೆರೆಯುತ್ತಲಿಪ್ಪುದು ||1|| ಉಂಗುರಗೂದಲು ಪುಬ್ಬು ಸಿಂಗಾಡಿ ಅಂದದಿ ಒಪ್ಪೆ | ಅಂಗಾರ ಕಂಕಣ ಮಂಗಳಾಂಗ ನಿಸ್ಸಂಗ | ರಂಗ ತುಂಗ ಮಹಿಮ ತಾರಂಗ ಅಂಗುಲಿಲಿ ರತ್ನ | ದುಂಗುರವ ಯಿಟ್ಟ ಸುಖಂಗಳ ನೋಡಾ

ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ಬಲು Read More »

ಇಂದು ಪಾವನವಾಗಿರೊ

ಇಂದು ಪಾವನವಾಗಿರೊ | ಇಂದಿರಾ ರಮಣನ್ನ ದಿನ ವ್ರತವ ಮಾಡಿ ಜನನಿ ಜನಕ ಭ್ರಾತಾ ಅನುಜ ನಿಜಾಂಗನೆ | ತನಯರು ನೆರೆಹೊರೆ ಮನ ಜನಕೆ | ಬಿನಗು ವ್ರತವ ಬಿಟ್ಟು ವನಜನಾಭಾನ ಸಿರಿ | ದಿನ ತ್ರಯವನು ಅನುಸರಿಸಿರೆಂದು ||1|| ಏಕಾದಶಿದನ ವಿಕೇತನದಲಿ ಪಾಕ ಮಾಡಿದರದು | ಕಾಕಮಾಂಸ ಲೋಕದೊಳಗೆ ಸರಿ | ಲೋಕದೊಳಗೆ ಎಂದು | ತಾ ಕೂಗಿ ಸುಖದಲ್ಲೀ | ವಾದ ಪೇಳುತಲಿದ್ದು ಏಕ ಭಕುತಿಯಲ್ಲೀ||2|| ಹರಿದಿನದಲ್ಲಿ ನೀರು ಬೆರಳಲಿ ಸುರಿದಾ | ಭೂಸುರನು

ಇಂದು ಪಾವನವಾಗಿರೊ Read More »

ಇಂದು ನೋಡಿದೆ ಗೋವಿಂದನಾ ಸರ್ವ

ಇಂದು ನೋಡಿದೆ ಗೋವಿಂದನಾ ಸರ್ವ ಸುಂದರಸಾರ ವೆಂಕಟ ರಮಣನಾ ಭಾಗೀರಥಿಯ ಪೆತ್ತವನಾ ಭವ ರೋಗವ ಕಳೆವ ರಾಜೀವನೇತ್ರನಾ ಸಾಗರದೊಳಗೆ ಒಪ್ಪುವನಾ ಭಕ್ತ ಕೂಗಲು ನಿಲ್ಲದೆ ಒದಗಿ ಬರುವನಾ||1|| ನಿಲ್ಲದೆಳಿಪಿಗೆ ಪೊಳೆದನಾ ಗೋ ಪಾಲಕರಿಗೆ ವೈಕುಂಠ ತೋರಿದನಾ ನೀಲಾದೇವಿಗೆ ಬಲಿದವನಾ ಭೂ ಪಾಲಗೆ ಮೆಚ್ಚಿ ಸತ್ವರವನಿತ್ತವನಾ||2|| ವಿಶ್ವ ಮಂಗಳದಾಯಕನಾ ಅಹಿ ವಿಷ್ಟಕಸೇನರಿಂದ ಪೂಜೆಗೊಂಬುವನಾ ವಿಶ್ವರೂಪ ವಿಲಕ್ಷಣನಾ ಸರ್ವ ವಿಶ್ವ ಪರಿಪಾಲ ಪ್ರಣತಾರ್ತಿ ಹರನ||3|| ಸುರ ಶಿರೋಮಣಿ ಸದ್ಗುಣನಾ ಸು ದರಶನ ಶಂಖ ಭಜಕರಿಗೆ ಕೊಟ್ಟವನಾ ನಿರುತ ಆನಂದ ಭರಿತನಾ

ಇಂದು ನೋಡಿದೆ ಗೋವಿಂದನಾ ಸರ್ವ Read More »

ಇಂದು ನೋಡಿದೆ ಇಂದಿರೇಶ

ಇಂದು ನೋಡಿದೆ ಇಂದಿರೇಶ ಮುಕುಂದನ ಮುದ್ದು ರೂಪವ ಕಳೆದೆ ಸಂತಾಪವ ಪಂಚ ವರ್ಣದ ಪಕ್ಕಿ ಪೆಗಲಲ್ಲಿ ಮಿಂಚಿನಂದದಿ ತೋರುತಾ ವರಗಳ ಬೀರುತಾ ವೊಡನಿಪ್ಪ ಮಾರುತಾ ||1|| ಝಗಝಗಿಪ ಪದಯುಗಳ ಬಿಗಿದಪ್ಪಿ ತೆಗೆಯದಲೆ ಮನಪಾಡಿದೆ ಕುಣಿ ಕುಣಿ ದಾಡಿದೆ ಸಂತರ ಸಂಗ ಬೇಡಿದೆ ||2|| ಧನ್ಯನಾದೆನೊ ದಾನವಾರಿಯ ಘನ್ನ ವೈಭೋಗ ಕಂಡೆ ನಾ ಪುಣ್ಯವನು ಕೈಕೊಂಡೆ ನಾ ನಾಮಾಮೃತ ಉಂಡೆ ನಾ ||3|| ಏನು ಪೇಳಲಿ ಗುರುಗಳ ಕೃಪೆ ಸ್ವಾನೆ ನಿರುತ ಕರಗರವದು ಅಹಂಮತಿ ಮರೆವದು ಸುರಗಣ ಪೊರೆವುದು

ಇಂದು ನೋಡಿದೆ ಇಂದಿರೇಶ Read More »

ಇಂದಿರೆ ಇಂದೀವರಾಕ್ಷಿ

ಇಂದಿರೆ ಇಂದೀವರಾಕ್ಷಿ- ಸುಂದರಿ ಅರ- ವಿಂದ ಮಂದಿರೆ ಪೂರ್ಣೆ | ಇಂದುವದನೆ ಅಮರೇಂದ್ರ ವಂದಿತೆ | ಸಿಂಧುಸುತೆ ಆನಂದ ಫಲದೆ ಅಪ ರಾರರಮಣನ ಸೋಲಿಪ ನಖದಕಾಂತಿ | ಚಾರು ಚರಣತಳ ವಾರಿಜಾಂಕುಶ ಧ್ವಜ | ವಾರಣ ಕನಕ ಮಂಗಳರೇಖೆವೊಪ್ಪೆ | ನೂ- ಪುರ ಕಡಗ ಪೆಂಡ್ಯೆ ಪರಡೆ ಜಾನು ಜಂಘೆ | ಊರು ಕಟಿ ನಾಭಿ ಉದರ ತ್ರಿವಳಿ | ಧಾರ ಶೋಭನವಾದ ಹೊನ್ನುಡಿ | ಧಾರ ಕಿಂಕಿಣಿ ತೋರಮುತ್ತಿನ- ಹಾರ ಉರವಿಸ್ತಾರ ಗುಣವಂತೆ ||1|| ನ್ಯಾವಳಸರ

ಇಂದಿರೆ ಇಂದೀವರಾಕ್ಷಿ Read More »

ಇಂದಿರಾದೇವಿಯ ರಮಣ ಬಾ

ಇಂದಿರಾದೇವಿಯ ರಮಣ ಬಾ ವೃಂದಾರಕ ಮುನಿವಂದ್ಯ ಬಾ ಸಿಂಧುಶಯನ ಗೋವಿಂದ ಸದಮಲಾ ನಂದ ಬಾ ಮಾವನ ಕೊಂದ ಬಾ ಗೋಪಿಯ ಕಂದ ಬಾ ಹಸೆಯ ಜಗುಲಿಗೆ ಶೋಭಾನೆ ||1|| ಕೃಷ್ಣವೇಣಿಯ ಪಡೆದವನೆ ಬಾ ಕೃಷ್ಣನ ರಥ ಹೊಡೆದವನೆ ಬಾ ಕೃಷ್ಣೆಯ ಕಷ್ಟವÀ ನಷ್ಟವ ಮಾಡಿದ ಕೃಷ್ಣ ಬಾ ಯದುಕುಲ ಶ್ರೇಷ್ಠ ಬಾ ಸತತ ಸಂ ತುಷ್ಟ ಬಾ ಉಡುಪಿಯ ಕೃಷ್ಣ ಬಾ ಹಸೆಯ ಜಗುಲಿಗೆ ಶೋಭಾನೆ ||2|| ಎಲ್ಲರೊಳು ವ್ಯಾಪಕನಾಗಿಪ್ಪನೆ ಬಲ್ಲಿದ ಧೊರೆಯೇಜ್ಞಾನಿಗಳರಸನೆ ಎಲ್ಲಿ ನೋಡಲು ಸರಿಗಾಣೆ

ಇಂದಿರಾದೇವಿಯ ರಮಣ ಬಾ Read More »

ಇಂಥಾ ಪ್ರಭುವ ಕಾಣೆನೋ ಈಜಗದೊಳ

ಇಂಥಾ ಪ್ರಭುವ ಕಾಣೆನೋ ಈಜಗದೊಳ- ಗಿಂಥಾ ಪ್ರಭುವ ಕಾಣೆನೋ ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ- ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ಅ.ಪ. ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪು ನೋಡದೆ ಬಂದು ಪೊರೆವ ಗಾಡಿಕಾರನು ಗರುಡಾ – ರೂಢ್ಯ ಗುಣವಂತ ಮಹಾ ಪ್ರೌಢ ಪ್ರತಾಪಿ ಜಗದಿ ಗೂಢದಿಂ ಸಂಚರಿಪ ಪಾಡಿ ಪೊಗಳಿ ಕೊಂಡಾಡುವವರ ಮುಂ- ದಾಡುತಲಿಪ್ಪನು ನಾಡೊಳಗಿದ್ದರು ಕೇಡಿಗನೇ ನಾಡಾಡಿಗಳಂದದಿ ಈಡುಂಟೇನೋ ಈ ವೆಂಕಟಗೆ-ಇಂಥಾ ||1|| ನಿಗಮ ತತಿಗಳರಿಯದ- ನೀರಜಭವಾ- ದ್ಯಗಣಿತ ಸುರರು ಕಾಣದ ಜಗದೊಡೆಯನು ಭಕ್ತ- ರುಗಳಿಗೊಲಿದು

ಇಂಥಾ ಪ್ರಭುವ ಕಾಣೆನೋ ಈಜಗದೊಳ Read More »

ಆವಾವ ಬಗೆಯಿಂದ ಹರಿಗರ್ಪಿಸೊ

ಆವಾವ ಬಗೆಯಿಂದ ಹರಿಗರ್ಪಿಸೊ ಭಾವ ಶುದ್ಧನಾಗಿ ಮುಖ್ಯತ್ವ ವಹಿಸದೆ ನೋಡುವ ನೋಟಗಳು ಹರಿಯೆ ನೋಡಿದನೆನ್ನಿ ವೋಡುವ ಆಟಗಳು ಹರಿಯೆ ವೋಡಿದನೆನ್ನಿ ಆಡುವ ಮಾತುಗಳು ಹರಿಯೆ ಆಡಿದನೆನ್ನಿ ||1|| ನಡಿವ ನಡಿಗೆ ಎಲ್ಲ ಹರಿಯೆ ನಡೆದನೆನ್ನಿ| ಕೊಡುವ ದಾನಗಳು ಹರಿಯೆ ಕೊಟ್ಟನೆನ್ನಿ ಒಡನಾಡುವ ಲೀಲೆ ಹರಿಯೆ ಆಡಿದನೆನ್ನಿ ಪಿಡಿವ ಚೇಷ್ಟೆಗಳೆಲ್ಲ ಹರಿಯೆ ಪಿಡಿದನೆನ್ನಿ ||2|| ಕೇಳುವ ಶಬ್ದಗಳು ಹರಿಯೆ ಕೇಳಿದನೆನ್ನಿ ಹೇಳುವ ವಿಧವನಿತು ಹರಿಯೆ ಎನ್ನಿ ಮಾಲೆ ಧರಿಸುವುದು ಹರಿಯೆ ಧರಿಸಿದನೆನ್ನಿ ಮೇಲು ಸುಖ ಬಡುವುದು ಹರಿಯೆ ಎನ್ನಿ||3||

ಆವಾವ ಬಗೆಯಿಂದ ಹರಿಗರ್ಪಿಸೊ Read More »

ಆವರೋಗವೆ ಯೆನಗೆ ದೇವ ಧನ್ವಂತ್ರೀ

ಆವರೋಗವೆ ಯೆನಗೆ ದೇವ ಧನ್ವಂತ್ರೀ ಸಾವಧಾನದಿಯೆನ್ನ ಕೈಪಿಡಿದು ನೋಡೋ ಹರಿಮೂರ್ತಿ ಕಾಣಿಸದು ಎನ್ನ ಕಂಗಳಿಗೆ ಹರಿಕೀರ್ತನೆ ಕೇಳದೆನ್ನ ಕಿವಿಗಳಿಗೆ ಹರಿಯ ಶ್ರೀಗಂಧವಾಘ್ರಾಣಿಸದೆನ್ನ ನಾಸಿಕವು ಹರಿಯಪ್ರಸಾದ ಜಿಹ್ವೆಗೆ ಸವಿಯಾಗದು ||1|| ಹರಿಪಾದ ಪೂಜಿಸೆ ಹಸ್ತಗಳು ಚರಿಸದು ಹರಿಗುರುಗಳಂಘ್ರಿಗೆ ಶಿರ ಬಾಗದು ಹರಿಯ ಸೇವೆಗೆ ಯೆನ್ನ ಅಂಗಗಳು ಚಲಿಸದು ಹರಿಯಾತ್ರೆಗೆನ್ನ ಕಾಲುಗಳೇಳದೋ ||2|| ಅನಾಥಬಂಧು ಶ್ರೀವಿಜಯವಿಠ್ಠಲರೇಯ ಯೆನ್ನ ಭಾಗ್ಯದ ಸ್ವಾಮಿಯಾಗಿ ನೀನೊ ಅನಾದಿಕಾಲದ ಘನರೋಗವನೆ ಬಿಡಿಸು ನಿನ್ನ ಉಪಕಾರವ ನಾನೆಂದಿಗೂ ಮರೆಯೇ ||3||

ಆವರೋಗವೆ ಯೆನಗೆ ದೇವ ಧನ್ವಂತ್ರೀ Read More »

ಆವಪರಿಯಲಿ ನಿನ್ನನು ವೊಲಿಸುವೆ

ಆವಪರಿಯಲಿ ನಿನ್ನನು ವೊಲಿಸುವೆ ದೇವ ಎನ್ನೊಳಗೆ ಒಂದಾದರೂ ಗುಣವಿಲ್ಲಾ ಅರಿಯೆ ಧರ್ಮವ ಪಾಪ | ಮರಿಯೆ ಉತ್ತಮರನ್ನ ಕರಿಯೆ ನಾಮಕೆ ಬಾಯಿ | ತೆರಿಯೆ ಸುರಿಯೆ ಜರಿಯೆ ಮೋºಕೆ ಮನ | ಮುರಿಯೆ ವ್ಯಾಕುಲಜ್ಞಾನಾಂ | ಕುರಿಯ ನಿನ್ನವರೊಳು | ಬೆರಿಯೆನರಿಯೆ ಸರಿಯೆ ದುಸ್ಸಂಗ ಕಥಾ | ಬರಿಯೆ ಕರದಿ ಯಾತ್ರಿಗೆ ಹರಿಯೆ ಪುಣ್ಯ ತೀರ್ಥ | ವರಿಯೆ ಮೊರಿಯೆ ಹರಿಯೆ ಜಗದೊರೆಯೆ | ಸಿರಿದೊರೆಯೆ ಅಘ ಕರಿಗೆ ಕೇಸರಿಯೆ ಮತ್ತಾ | ರರಿಯೆ ನಿನ್ನವರ ಮರಿಯೆ||1||

ಆವಪರಿಯಲಿ ನಿನ್ನನು ವೊಲಿಸುವೆ Read More »

ಆವದೆನೆಗೆ ಪ್ರೀತಿ ಎಂದೆಂಬಿಯಾ

ಆವದೆನೆಗೆ ಪ್ರೀತಿ ಎಂದೆಂಬಿಯಾ | ದೇವ ದೇವಕಿ ತನುಜ ಬಿನ್ನಪವ ಮಾಡುವೆನೊ ದೊರೆತನವಲ್ಲೆ ಧನವಲ್ಲೆ ಒಬ್ಬರ ಬಳಿಯ | ಹಿರಿಯತನವಲ್ಲೆ ಹಿಗ್ಗುವುದು ವಲ್ಲೆ | ಹರಿ ನಿನ್ನ ಚರಣಗಳ ಸ್ಮರಿಸುವ ಭಾಗವತರ | ಅರಮನೆಯ ಬೀದಿಯಲಿ ಹೊರಳುವ ಭಾಗ್ಯವ ಕೊಡು ||1|| ಪಂಡಿತನಾಗಲಿವಲ್ಲೆ ಫಲವಲ್ಲೆ ನಾವು ಪ್ರ | ಚಂಡ ಯೋಗಗಳೊಲ್ಲೆ ಯಾಗವಲ್ಲೆ | ಥಂಡ ಥÀಂಡದಿ ನಿನ್ನ ಕೊಂಡಾಡುವರ ಬಳಿಯ | ಕೊಂಡರಾಗಿಪ್ಪವರ ಸೇರುವ ಭಾಗ್ಯವ ಕೊಡು ||2|| ಅಂದಣವೇರಲಿವಲ್ಲೆ ಆತ್ಮಸುಖವಲ್ಲೆ ನಾ | ನೆಂದು

ಆವದೆನೆಗೆ ಪ್ರೀತಿ ಎಂದೆಂಬಿಯಾ Read More »

ಆವಗತಿ ಎನಗೆ ವೈಕುಂಠಪತಿಯೆ

ಆವಗತಿ ಎನಗೆ ವೈಕುಂಠಪತಿಯೆ | ಕಾವ ಕರುಣಿಯೆ ಸರ್ವದೇವರ ದೇವ ಉದಯದಲಿ ಎದ್ದು ನಿನ್ನ ನಾಮವೆನ್ನದೆ | ಉದರಕಿನ್ನೇನು ಮಾಡಲಿ ಎನ್ನುತಾ | ಕÀದಗಳಾ ಸರಸುತ್ತ ಕಂಡಲ್ಲಿ ತಿರುಗಿದೆ | ಮದ ಗರ್ವದಲಿ ಬಾಳ್ವ ಮನುಜ ಶಿರೋಮಣಿಗೆ ||1|| ಧನವ ಘಳಿಸವ ವಾತ್ಸಲ್ಯವಲ್ಲದೆ ಸಾ | ಧನಕೆ ಒಮ್ಮೆ ಮನಸ್ಸು ಎರಗಲಿಲ್ಲಾ | ಮನುಜರೊಳಗೆ ಖ್ಯಾತಿಯಾಗುವೆನೆಂಬೊ | ವೇ | ದನೆ ಮಿಗಿಲಲ್ಲದೆ ಭಕುತಿ ಮತ್ತಿಲ್ಲ ||2|| ಒಬ್ಬರಕಿಂತಲಧಿಕನಾಗುವೆನೆಂದು | ಉಬ್ಬಿ ಪರರಾ ಸೇವೆಯನು ಮಾಡುವೆ |

ಆವಗತಿ ಎನಗೆ ವೈಕುಂಠಪತಿಯೆ Read More »