ಎನ್ನಲ್ಲಿ ಅವಗುಣ ಶತಸಾವಿರವಿರೆ

ಎನ್ನಲ್ಲಿ ಅವಗುಣ ಶತಸಾವಿರವಿರೆ | ಅನ್ಯರ ಕರೆದಾನು ನಡತೆ ಇದೇನೆಂಬೆ ವೇದವನೋದಿದೆ ಪರರಿ | ಗಾದÀರಿಸಿ ಮುಕುತಿಗೆ | ಸಾಧನೆ ಇದೆ ಎಂದು | ಹಾದಿಯವರಿಗೆ ಭೋದಿಪೆನಲ್ಲ್ಲದೆ ನಾನು | ಕ್ರೋಧ ಬಿಟ್ಟೆವನಲ್ಲ್ಲ ಹಾದರಹಳು ನಾರಿ | ಮಾದಿಗನ ಪೋದಂತೆ ||1|| ಧನದಾಸೆಯಿಂದ ಸಾಧನವಾಗದೆಂದು | ಜನರಿಗೆ ಉಪದೇಶವನು ಮಾಡುವೆ | ಮನೆ ಮನೆಯ ತಿರು ಮಾತಿನ ಬಣ್ಣವಲ್ಲ್ಲದೆ | ತೃಣ ಹತ್ತದಿದ್ದ | ವಧನರಾಶಿ ಕದ್ದಂತೆ||2|| ರಸನೇಂದ್ರಿಯಗಳ ಬಂ | ಧಿಸಬೇಕೆಂದು ನಾನು | ಉಸುರುವೆ […]

ಎನ್ನಲ್ಲಿ ಅವಗುಣ ಶತಸಾವಿರವಿರೆ Read More »

ಎನ್ನ ಪಾಲಿಸುವುದಾನಂತ ಶಯನ

ಎನ್ನ ಪಾಲಿಸುವುದಾನಂತ ಶಯನ | ಚನ್ನ ಗರುಡವಾಹನಾ | ಇನ್ನು ನಿನ್ನಯ ಪಾದವನ್ನೆ ಸೇರಿ ಕೌಂಡಣ್ಯ| ಮುನಿಗೊಲಿದನಂತ ಗುಣಾರ್ಣವಾ ದೇವಾ ನಂಬಿದವರ ನೋವ ಕಳೆದು ಬಿಡದೆ | ಕಾವ ಬೇಡಿದ ವರವ ನೀವ ಮೂರು | ಭುವನ ಜೀವ ವಿಮಲರಾ | ಜೀವ ನಯನ ವಸುದೇವ ದೇವಕಿತನು | ಭವನೆ ಭವದೂರ ದುರ್ಜನ ಸಂಹಾರ | ದೇವತಾ ವರ ಸಂಜೀವಾ ಪ್ರಭಾವಾ||1|| ಸೂರ್ಯಕೋಟಿ ಪ್ರಕಾಶಾ | ಚಾರ್ಯನಾ ನಾಯಕಾಧೀಶಾ | ಧೈರ್ಯವುಳ್ಳ ಸರ್ವೇಶಾ | ಕಾರ್ಯರೊಳು ವಿಶೇಷಾ

ಎನ್ನ ಪಾಲಿಸುವುದಾನಂತ ಶಯನ Read More »

ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ

ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ | ಎನಗೆ ನಿನಗೆ ನ್ಯಾಯ ಪೇಳುವರಿಲ್ಲ ಒಂದುಗೂಡಿಲಿ ಬಂದು ಒಂದು ಕ್ಷಣ ವಗಲದೆ | ಯೆಂದೆಂದು ನಿನ್ನ ಪಾದ ಪೊಂದಿರಲೂ || ಬಂದ ವಿಷಯಂಗಳಿಗೆ ಯೆನ್ನನೊಪ್ಪಿಸಿ ಕೊಟ್ಟು | ನೀನಂಧಕನಂತೆ ನೋಡುವದುಚಿತವೆ ರಂಗಾ ||1|| ಪರಸತಿಯರ ಕೂಡಿದರೆ ಪರಮ ಪಾತಕವೆಂದು | ಪರಿ ಪರಿಯ ನರಕಗಳ ನಿರ್ಮಿಸಿರುವಿ || ಪರಸತಿಯರೊಲುಮೆ ನಿನಗೊಪ್ಪಿತೆಲೋ ದೇವಾ | ನಿನ್ನ | ದೊರೆತನಕಂಜಿ ನಾ ಶರಣೆಂಬೆನಲ್ಲದೇ ||2|| ನಿನ್ನಾಜ್ಞ್ಞಧಾರನಾಗಿ ನಿನ್ನ ಪ್ರೇರಣೆಯಿಂದ | ಅನೇಕ ವಿಧಕರ್ಮಗಳ

ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ Read More »

ಎಚ್ಚರಿಕೆಚ್ಚರಿಕೆ ಮನವೆ ಇನ್ನು

ಎಚ್ಚರಿಕೆಚ್ಚರಿಕೆ ಮನವೆ ಇನ್ನು | ಎಚ್ಚರಿಕೆಚ್ಚರಿಕೆ ಯಮನ ಪುರದ ಬಾಧೆ ಕಿಚ್ಚನಾದರು ಕೇಳಿ ದುಶ್ಚಿಂತನ ಬಿಡು ಗಂಡ ಅತ್ತೆ ಮಾವ ಮೈದುನರ ಬೈವರ | ಖಂಡ ತುಂಡನೆ ಮಾಡಿ ಖಂಡವ ಕೊಯಿದು | ಕಂಡದೊಳಗೆ ಬೇಯ್ಸಿ ದಿಂಡುಗೆಡಹಿ ಕಟ್ಟಿ | ಮಂಡೆಯ ಒಡೆದು ಡಂಡದಿ ಶಿಕ್ಷಿಸಿ | ಹಿಂಡಿ ಹಿಪ್ಪೆಯ ಮಾಡಿ ಕೊಂಡೊಯ್ದು ಅಗ್ನಿಯ ಕುಂಡವ ಹೋಗಿಸುವರೊ-ಎದೆಯ ಮೇಲೆ | ಗುಂಡನೆ ಹೊರಿಸುವರೊ-ಬಾಯೊಳಗೆ | ಕೆಂಡವ ಸುರಿಸುವರೊ-ಕೋಟಿ ಜನ್ಮ ಚಂಡಾಲ ಯೋನಿಯಳಿಟ್ಟು ಬಾಧಿಸುವರೊ ||1|| ಉತ್ತಮ ಗುರು

ಎಚ್ಚರಿಕೆಚ್ಚರಿಕೆ ಮನವೆ ಇನ್ನು Read More »

ಎಚ್ಚರಿಕೆ ಎಚ್ಚರಿಕೆ ಎಲೋ ದೇವ

ಎಚ್ಚರಿಕೆ ಎಚ್ಚರಿಕೆ ಎಲೋ ದೇವ | ಎಚ್ಚರಿಕೆ ಎಚ್ಚರಿಕೆ | ಅಚ್ಚ ಕಲ್ಯಾಣ ಮೂರುತಿ ತಿರುವೆಂಗಳಾ ಅಜ ದ್ವಿಜಗಜ ಅಜಾಮಿಳ ಪರಿಪಾಲನೆಯಾ | ದ್ವಿಜ ರಾಜಾಂಗಾ ಗಂಗಜ ಭಕ್ತವರದನೆಯಾ | ಗಜ ಕುಜ ದನುಜ ಭೂ ಭುಜರ ಸಂಹಾರನೆಯಾ | ನಿಜ ಭಜಕರ ಪಂಕಜ ಹೃದಯಾರ್ಕನೆಯಾ||1|| ಪರತರ ಪರಮಾತ್ಮ ಪರಮೇಷ್ಠಿ ವಂದನೆಯಾ | ಕರುಣ ಶರಧಿ ತಾರಾ ಕರುಗಳ ಕಾಯಿದನೇಯಾ | ಎರಡೇಳು ಲೋಕ ಪೊರೆವಾ ಭಾರಣ ಹರಿಯಾ | ಶರಣು ಹೊಕ್ಕೆನು ಎನ್ನ ಮೊರೆ ವಿಚಾರಿಸೊಯಾ

ಎಚ್ಚರಿಕೆ ಎಚ್ಚರಿಕೆ ಎಲೋ ದೇವ Read More »

ಎಚ್ಚತ್ತು ಇರು ಕಂಡ್ಯ ಮನವೇ

ಎಚ್ಚತ್ತು ಇರು ಕಂಡ್ಯ ಮನವೇ | ನಮ್ಮ | ಅಚ್ಯುತನಂಘ್ರಿಗಳನು ನೆನೆ ಕಂಡ್ಯ ಮನವೆ ಆಡದಿರಪವಾದಗಳನು ಕೊಂ | ಡಾಡದಿರಿನ್ನು ಚಿಲ್ಲರೆ ದೈವತಗಳನು || ಬೇಡದಿರು ಭಯ ಸೌಖ್ಯವನು ನೀ | ಮಾಡದಿರಿನ್ನು ದುರ್ಜನ ಸೇವೆಯನು || ಸಜ್ಜನ ದ್ವೇಷವನು||1|| ನರಜನ್ಮ ಬರುವದೆ ಕಷ್ಟ ಇದ- | ನರಿದು ನೋಡು ವಿಪ್ರಾದಿ ಶ್ರೇಷ್ಠ || ಮರಳಿಬಾಹುದು ಉತೃಷ್ಟ | ಮರುತ ಮತವ ಪೊಂದುವದು ದುರ್ಘಟ || ಕೇಳೆಲವೊ ಮರ್ಕಟ ||2|| ಹಾಳು ಹರಟೆಗೆ ಹೋಗಬೇಡ ನೀ ಕಂಡ

ಎಚ್ಚತ್ತು ಇರು ಕಂಡ್ಯ ಮನವೇ Read More »

ಎಂದೊಡನಾಡುವೆ ಎಂದರ್ಥಿಬಡುವೆ

ಎಂದೊಡನಾಡುವೆ ಎಂದರ್ಥಿಬಡುವೆ ಎಂದಿಗೆ ತಕ್ರ್ಕೈಸಿ ಸಂತೋಷಬಡುವೆ ಉತ್ಸವ ಮಂಟಪದೊಳಗೆ ಕುಳಿತು ಭಕ್ತ ವತ್ಸಲನೆಂದು ನುತಿಸಿಕೊಂಬನ ಕೂಡ ||1|| ಸಕಲ ಭೂಷಿತನಾಗಿ ಅಜಹರ ಸುರಮುನಿ ನಿಕರ ಕೈಯಿಂದ ಸ್ತುತಿಸಿಕೊಂಬನ ಕೂಡ ||2|| ಆಪೋಹಿಷ್ಠಾ ಮಯೋಭುವನೆಂಬೋ ಮಂತ್ರ ಆ ಪುರೋಹಿತರಿಂದ ಕಲಿತುಕೊಂಬನ ಕೂಡ ||3|| ನಾಲ್ವತ್ತುಮೂರು ಪದಂಗಳು ಮಾಡೆಂದು ಹೇಳಿದ ಹೇಮಾದ್ರಿ ಶಿಖರಾಕಾರನಕೂಡೆ ||4|| ದಂಡಿಗೆ ಕರೆದಲ್ಲಿ ಕೊಟ್ಟು ಅಮೃತದ ಕರ ಮಂಡೆಯಲ್ಲಿಟ್ಟ ಮಹಮಹಿಮನ ಕೂಡ ||5|| ಪಲ್ಲಕ್ಕಿ ಏರಿ ಪವಳಿಯ ಸುತ್ತಿ ಸರ್ರಗೆ ನಿಲ್ಲದೆ ಗುಡಿಪೊಕ್ಕ ನಿರ್ಮಳನ ಕೂಡ||6||

ಎಂದೊಡನಾಡುವೆ ಎಂದರ್ಥಿಬಡುವೆ Read More »

ಎಂದೆಂದಿಗೂ ಎರಡು ಒಂದಾಗವು

ಎಂದೆಂದಿಗೂ ಎರಡು ಒಂದಾಗವು | ಒಂದೆ ಕುಲದಲಿ ಜನಿಸಿದ ಪಕ್ಷಿಗಳು ಒಂದೇ ರೂಪಪಕ್ಷಿ ಒಂದರಲಿ ತಿರಗೋವು | ಒಂದೀಗ ಪಂಚವರ್ಣದ ಕೋವಿದಾ || ಒಂದೆಲ್ಲ ಸಮನೆಂದು ಪೇಳುತ ಬದುಕುವುದು | ಒಂದಕ್ಕೆ ಗುರುತು ಮತ್ತೊಂದಕ್ಕೆ ಯಿಲ್ಲ ||1|| ಒಂದೇ ಕೊಂಬಿನಲಿ ಎರಡು ಸೇರಿಕೊಂಡು | ಒಂದು ಸಾರವನುಂಬದೊಂದರಿಯದು || ಒಂದು ಬುದ್ಧಿಯಲ್ಲಿಪ್ಪದೊಂದು ಇರಲೊಲ್ಲದು | ಒಂದು ನಾನೆಂಬೋದು ಮತ್ತೊಂದು ಪೇಳದು ||2|| ಒಂದೀಗ ತನ್ನ ಫಲ ಪರರಿಗೆ ಕೊಡುವದು | ಒಂದು ತನ್ನ ಫಲ ತಾ ತಿಂಬೋದು

ಎಂದೆಂದಿಗೂ ಎರಡು ಒಂದಾಗವು Read More »

ಎಂದು ನೋಡುವೆ ಎನ್ನ ಗುರುವಿನಾ

ಎಂದು ನೋಡುವೆ ಎನ್ನ ಗುರುವಿನಾ | ನಿಂದು ನಂದಿಗಮನನಾ ಎಂದೆಂದಿಗೆ ಪೊಂದಿದವರಿಗಾ | ನಂದ ಕೊಡುವ ಇಂದು ಮೌಳಿಯ ತ್ರಿಗುಣ ರೂಪನ ತ್ರಿಭುವನೇಶನ | ಜಗತಿಧರ ವಿಭೂಷನ || ನಿಗಮವಂದ್ಯ ನೀಲಕಂಠನ ನಗವತಿ ಸುತಿಪತಿಯ ರುದ್ರನ ||1|| ತಪೋಧನೇಶನ ತಪ ಪ್ರತಾಪನ | ತಪನ ಶಶಿ ಅಗ್ನಿನೇತ್ರನ | ಕುಪಿತ ರಹಿತ ಕುಜನ ಮಥನನ | ಅಪರಮಿತ ಗುಣ ವನದಿ ಶಿವನ ||2|| ವಿಮಲಗಾತ್ರನ ವಿಶ್ವಪಾಲನ | ರಮೆಯರಸ ಪದಿಧಾರನ || ಶಮಜಿತನನ ಸುಜನ ರನ್ನನ |

ಎಂದು ನೋಡುವೆ ಎನ್ನ ಗುರುವಿನಾ Read More »

ಎಂದಿಗಾಹುದೋ ನಿನ್ನ ದರುಶನ

ಎಂದಿಗಾಹುದೋ ನಿನ್ನ ದರುಶನ | ಇಂದಿರೇಶ ಮುಕುಂದ ಕೇಶವ ಗಾನಲೋಲನೆ ದೀನವತ್ಸಲ | ಮಾನದಿಂದಲಿ ನೀನೆ ಪಾಲಿಸೋ ||1|| ಯಾರಿಗೆ ಮೊರೆ ಇಡುವೆ ಶ್ರೀ ಹರಿ | ಸಾರಿ ಬಂದು ನೀ ಈಗಲೆ ಪೊರಿ ||2|| ಗಜವ ಪಾಲಿಸೊ ಗರುವದಿಂದಲಿ | ಭುಜಗಶಯನ ಶ್ರೀ ವಿಜಯವಿಠಲಾ ||3||

ಎಂದಿಗಾಹುದೋ ನಿನ್ನ ದರುಶನ Read More »

ಎಂತು ವರ್ಣಿಪೆ ನಮ್ಮಮ್ಮಾ

ಎಂತು ವರ್ಣಿಪೆ ನಮ್ಮಮ್ಮಾ | ಯಂತ್ರೋದ್ಧಾರಕÀನಾಗಿ ಮೆರೆವನಾ ಕೋತಿ ರೂಪದಲಿ ಬಂದು | ಭೂತಳಕೆ ಬೆಡಗು ತೋರಿ || ಈ ತುಂಗಭದ್ರೆಯಲ್ಲಿ | ಖ್ಯಾತಿಯಾಗಿಪ್ಪ ಯತಿಯಾ||1|| ಸುತ್ತಲು ವಾನರ ಬದ್ಧ | ಮತ್ತೆ ವಲಯಾಕಾರ ಮಧ್ಯ || ಚಿತ್ರಕೋಣ ಅದರೊಳು | ನಿತ್ಯದಲಿಯಿಪ್ಪ ಯತಿಯಾ ||2|| ವ್ಯಾಸ ಮುನಿರಾಯರಿಂದ | ಈ ಶಿಲೆಯೊಳಗೆ ನಿಂದು || ಶ್ರೀಶ ವಿಜಯವಿಠ್ಠಲನ್ನ | ಏಸು ಬಗೆ ತುತಿಪನ್ನ ||3||

ಎಂತು ವರ್ಣಿಪೆ ನಮ್ಮಮ್ಮಾ Read More »

ಎಂತು ಮರುಳಾದೆ ನೀ ಯದಿಯ

ಎಂತು ಮರುಳಾದೆ ನೀ ಯದಿಯ ಬಿಗುವಿನಲಿ ತಿರುಗಿ | ಪಂಥದಲ್ಲಿ ಕೆಡಲಿಬೇಡ ಎರಡು ದಿನ | ಸಂತೆ ನೆರೆದಂತೆ ಮೂಢ ಇಪ್ಪದಿದು | ಸಂತತ ತೊರೆದು ಬಾಡೊ ಪ್ರಾಣಿ ಪ್ರಾಣಿ ವಿಂಚುಗೂಳನು ತಿಂದು ಮನೆ ಮನೆಗಳು ತಿರುಗಿ | ಸಂಚಿತಾರ್ಥವ ತಿಳಿಯದೆ ಮರುಳಾದ | ಪಂಚೇಂದ್ರಿಯಂಗಳನು ಅಳಿಯದೆ | ಬಂದ ಪರ | ಪಂಚವನು ನೀ ಕಳಿಯದೆ ವ್ಯರ್ಥಾಯ | ವಂಚನಿಂದಲಿ ನಡೆದು ಬಾಯಿ ತೆರೆದು | ಹಲ್ಲನು | ಹಂಚಿಕೆ ತೋರಿದಂತೆ ಮೃತ್ಯುವಿನ | ಪಂಚದಲಿ

ಎಂತು ಮರುಳಾದೆ ನೀ ಯದಿಯ Read More »

ಎಂತು ಬಿನ್ನೈಸಲೊ ಮುರಾರಿ ಸಾರಿಗೆ

ಎಂತು ಬಿನ್ನೈಸಲೊ ಮುರಾರಿ ಸಾರಿಗೆ ಸಾರಿ | ಸಂತ ಜನರ ಆಧಾರಿ ಶ್ಲೋಕ – ಘನ ಅನವರತ ಕಾಯಾ | ಸ್ವಾಮಿ ಲಕ್ಷ್ಮೀ ಸಹಾಯ | ಅನಿಮಿಷ ಮುನಿಗೇಯಾ ಹೇಯ ಧರ್ಮ ವಿಹಾಯ | ಅನಘ ನಗರ ನಿಲಯಾ | ಅಮಿತÀ ಆನಂದ ಕಾಯಾ | ನೆನಹಿ ಪಾಲಿಸೋ ಜೀಯಾ | ನಾಗ ತಲ್ಪೋರು ಗಾಯಾ ||1|| ಪದ – ಶರಣು ಶರಣು ಶಾರಣ್ಯನೆ | ಗುಣ ಗುಣ್ಯನೆ | ನಮಗಾನನ್ಯನೆ | ನಿರುತರಂತರ ಕಾರುಣ್ಯನೆ ಪ್ರದದಾನ್ಯನೆ

ಎಂತು ಬಿನ್ನೈಸಲೊ ಮುರಾರಿ ಸಾರಿಗೆ Read More »

ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ

ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ | ಅಂತರಾತ್ಮಕ ಪೇಳು ಎನಗೊಂದು ಹದನಾ ವೇದಶಾಸ್ತ್ರವನು ಅರಿಯೆ | ಪುರಾಣ ಪುಣ್ಯಕಥೆ | ಓದಲಿನ್ನರಿಯೆನೊ ಎಂದೆಂದಿಗೂ | ಭೇದ ಭೇದವನರಿಯೆ | ಬಾಗಿ ನಮಿಸುವದನರಿಯೇ | ಆದರಣಿ ಅರಿಯೆ ಆರಾಧಿನಿಯನರಿಯೆ||1|| ಜ್ಞಾನ ಭಕುತಿಯನರಿಯೆ | ಗಮನ ತೀರ್ಥವನರಿಯೆ | ಧ್ಯಾನವನು ಅರಿಯೆ ದಾಕ್ಷಿಣ್ಯವನು ಅರಿಯೆ | ಮೌನವನು ಅರಿಯೆ ಮಹತಪಸ್ಸು ಮೊದಲೆ ಅರಿಯೆ | ಗಾನವನು ಅರಿಯೆ ಗತಿಮತಿಗಳನು ನಾನರಿಯೆ ||2|| ಭೂತದಯವನು ಅರಿಯೆ | ಬುದ್ಧಿ ಪೂರ್ವಕವರಿಯೆ |

ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ Read More »

ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ

ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ ಸಂತತ ಬಿಡದೆ ಎನ್ನ ಅಂತರಂಗದಲ್ಲಿ ಇರೊ ಕುಣಿದು ನಿನ್ನ ಮೆಚ್ಚಿಸುವೆನೆ | ಫಣಿಹಾರನೈಯನನ ಜನಕಾ | ಮಣಿದು ನಿನ್ನ ಮೆಚ್ಚಿಸುವೆನೆ | ಸನಕಾದಿಗಳ ಸುಪ್ರೇಮಾ ||1|| ಅನ್ನವಿತ್ತು ಮೆಚ್ಚಿಸುವೆನೆ | ಘನ್ನ ನಿತ್ಯ ತೃಪ್ತ ನೀನು | ಹೆಣ್ಣನಿತ್ತು ಮೆಚ್ಚಿಸುವೆನೆ | ಹೆಣ್ಣುರೂಪ ನೀನೆ ಸ್ವಾಮಿ ||2|| ಅಪ್ಪ ನಿನ್ನ ಮೆಚ್ಚಿಸುವೆನೆ | ದರ್ಪಾಕ ಬೊಮ್ಮನ ತಂದೆ | ಅಪ್ಪ ನಿನ್ನ ಮೆಚ್ಚಿಸುವೆನೆ | ಸುಪ್ಪಾಣಿ ರಮೆಯರಸಾ ||3|| ಪಾಲು

ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ Read More »

ಎಂತಹದೋ ನಿನ್ನ ಸಂದುರಶನಾ

ಎಂತಹದೋ ನಿನ್ನ ಸಂದುರಶನಾ | ಕಂತುವಿನ ಜನಕ ಉಡಪಿ ಕೃಷ್ಣರಾಯಾ ಪರರ ಓದನ ತಿಂದೆ | ಪರರ ದ್ರವ್ಯದ ತಂದೆ | ಪರ ಸತಿಯರಿಗೆ ನೊಂದೆ | ಗುರು ಹಿರಿಯರ ನಿಂದೆ | ಹಿರದಾಗಾಡಿದೆ ಮುಂದೆ | ಬರುತಿಪ್ಪ ಪಾಪದಿಂದೆ | ಒಂದೆ ಪೋಯಿತು ವಂದೆ ಪರಿಯಾಗಿ ಈ ಬಂದೆ | ಅರುಹು ತೊರದೆ ಬಂದೆ | ಕರುಣಿಸು ಜಗದ ತಂದೆ ||1|| ಸುಜನರ ಗುಣವ ಹಳಿದೆ | ಕುಜನರ ಸಂಗದಲಿ ಬೆಳಿದೆ | ಭಜನೆಗೆÀಟ್ಟು ಸುಳಿದೆ

ಎಂತಹದೋ ನಿನ್ನ ಸಂದುರಶನಾ Read More »

ಉದ್ದರುಸುವದೆನ್ನ ಉದಧಿಶಯನ

ಉದ್ದರುಸುವದೆನ್ನ ಉದಧಿಶಯನ | ಬಿದ್ದೆ ನಿನ್ನಯ ಪಾದ | ಪದ್ಮದ್ವಯಕೆಯಿಂದು ಅಂದು ನೀ ಪೇಳಿದಂದಲಿ ತೀರ್ಥಯಾತ್ರೆ | ನಿಂದರದೆ ಸಂಚರಿಸಿ ಪುಣ್ಯವೆಲ್ಲಾ | ತಂದು ನಿನಗರ್ಪಿಸಿದೆ ಕೈ ಕೊಂಡು | ಮುಂದೆ ಎನ್ನಗೊಂದು ದಾರಿಯ ತೋರು ತಡಮಾಡದಲೆ ದೇವಾ ||1|| ಯಾತರವ ನಾನು ನರಮನೆ ಗಾಯಕರ ದೂತರೆಂಜಲನುಂಡು ಬೆಳದ ನರನೋ || ನೋತ ಫಲವಾವದೊ ನೀನೆ ಬಲ್ಲೆಯಾ ಜೀಯಾ | ಮಾತು ಮಾತಿಗೆ ಹಿಗ್ಗಿ ನಗುವ ಚನ್ನಿಗರಾಯಾ||2|| ಇಷ್ಟೆನ್ನ ಮನದ ಭೀಷ್ಟೆ ಒಂದೆ ವುಂಟು | ಕೃಷ್ಣಾ

ಉದ್ದರುಸುವದೆನ್ನ ಉದಧಿಶಯನ Read More »

ಊಟವನು ಮಾಡು ಬಾ ಉದಧಿಶಯನಾ

ಊಟವನು ಮಾಡು ಬಾ ಉದಧಿಶಯನಾ | ಆಟವನು ಸಾಕುಮಾಡಿ ಅತಿ ವೇಗದಿಂದಲಿ ಕಾಯಿಪಲ್ಲೆ ಒಂದೊಂದು ನೂರು ಪರಿ | ತೋಯ ಸಂಡಿಗೆ ಪಳದೆ ಹುಳಿ ಸಾರು || ಪಾಯಸ ನೊರೆಹಾಲು ಸಕ್ಕರೆಗೂಡಿಸಿ | ತಾಯಿ ದೇವಕಿಯು ಎಡೆಯ ಮಾಡಿದಳು ತಂದು ||1|| ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ | ಸಲೆ ಶಾಲ್ಯೋದನ ಕರಿದ ಭಕ್ಷ್ಯಾ || ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ | ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು ||2|| ಕಸಕಸಿ ಎಳ್ಳು ಲಡ್ಡಿಗೆಯು

ಊಟವನು ಮಾಡು ಬಾ ಉದಧಿಶಯನಾ Read More »

ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ

ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ | ಹಿಮವಂತ ಗಿರಿಯ ಕುಮಾರಿ ರಮೆಯರಸನ ಪದಕಮಲ ಮಧುಪೆ ನಿತ್ಯ | ಅಮರವಂದಿತೆ ಗಜಗಮನೆ ಭವಾನಿ ಅ. ಪ ಪನ್ನಗಧರನ ರಾಣಿ ಪರಮಪಾವನಿ | ಪುಣ್ಯಫಲ ಪ್ರದಾಯಿನಿ || ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ | ಉನ್ನತ ಗುಣಗಣ ಶ್ರೇಣಿ | ಎನ್ನ ಮನದ ಅಭಿಮಾನ ದೇವತೆಯೆ | ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ || ನಿನ್ನ ಮಹಿಮೆಯನು ಬಿನ್ನಾಣದಲಿ ನಾ | ಬಣ್ಣಿಸಲಳವೆ ಪ್ರಸನ್ನ ವದನಳೆ ||1 || ಮುತ್ತಿನ ಪದಕ

ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ Read More »

ಉದರ ಪೂರ್ತಿಯ ಕೊಡದಿರು ಉದಧಿಶಯನ

ಉದರ ಪೂರ್ತಿಯ ಕೊಡದಿರು ಉದಧಿಶಯನ ಮುದದಿ ನಿನ್ನನು ನೆನೆದು ಮಲಗುವೆನೊ ಸುಖದಿ ಮುದದಿ ನಿನ್ನ ಚರಣವನು ಸ್ಮರಿಸುವುದು | ಪರಿಹಾರವು ಬಹು ಗರ್ವ ಹೆಚ್ಚುವುದು ಎನಗೆ | ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ | ಪರಿಹಾಸ್ಯ ನುಡಿಯಲ್ಲ ಪರಮ ಪಾವನಗೆ ||1|| ತನುಮನವು ನಿನ್ನ ವಿಷಯಕ್ಕೆರಗಲಿ | ಅನುಮಾನವಿದ್ದ ಪರಿಯೆಲ್ಲ ತೊಲಗಿ || ವನಜಸಂಭವನೈಯ್ಯ ವೈಕುಂಠಪತಿ ನಿನಗೆ | ಅನವರತ ದೊರೆ ಎಂಬೊ | ಘನತೆ ತಪ್ಪದೆ ಇರಲಿ||2|| ಗಜಮದದಿ ಕಂಗೆಟ್ಟ ಪರಿಯನ್ನ ಮಾಡದೇ ||

ಉದರ ಪೂರ್ತಿಯ ಕೊಡದಿರು ಉದಧಿಶಯನ Read More »

ಈಶಾ ಕೈಲಾಸವಾಸಾ

ಈಶಾ ಕೈಲಾಸವಾಸಾ | ಕಾಶೀನಗರಾಧೀಶಾ | ಶೇಷಭೂಷಣ | ಗಿರೀಶಾ | ವಿಶ್ವೇಶ ಚಿತ್ತವಾಸಾ ಶಿವಸಿದ್ಧ ಸಾಧ್ಯ ಸೇವ್ಯಾ | ಭವವನಾಶವ ದಿವ್ಯ | ಭವಮೂರ್ತಿ ಕೀರ್ತಿಭವ್ಯಾ | ಕವಿ ಪ್ರಿಯ ಜ್ಞಾನ ದ್ರವ್ಯಾ ಹಾ || ಶಿವ ಓಂ ನಮಃ ಶಿವ | ಸÀವಚರಣ ನೋಡುವ | ಪವಿತ್ರ ಚಿತ್ತವ ಕೊಡು | ಧವಳ ಗಂಗಾಧರನೇ ||1|| ಸತಿನಾಥ ಭೂತ ಪ್ರೀತ | ಸತತ ಸದ್ಗುಣ ವ್ರಾತ | ಪತಿತ ಪಾವನ ತಾತ | ಕೃತುವೈ

ಈಶಾ ಕೈಲಾಸವಾಸಾ Read More »

ಈತನೀಗ ವಿಜಯ ವಿಠ್ಠಲಾ

ಈತನೀಗ ವಿಜಯ ವಿಠ್ಠಲಾ ಈತಜ್ಞಾನೀಗ ವಿಜಯ ವಿಠ್ಠಲಾ ಮಾತು ಮಾತಿಗೆ ನೆನಸಿದವರ ಪಾತಕಗಳ ಪರಿದು ಯಮನ ಯಾತನೆಯನು ಕಳೆದು ಪೊರೆವಾ ಕರೆದರೊಂದೆ ನುಡಿಗೆ ಬಂದು ಕರುಣದಿಂದ ಮುಂದೆ ನಿಂದು ಕರವ ಪಿಡಿದು ಅಂದು ಅಭಯ ಕರವ ಪಾಲಿಸಿದ ದಯಾಸಿಂಧು ಪರಿಪರಿಯಿಂದಲಿ ಹಿಂದು ಮುಂದು ದುರಿತದಿಂದ ನೊಂದು ಬಂದು ಇರಲು ದಾಸರ ದಾಸರನೆಂದು ಮೊರೆ ವಿಚಾರಿಸಿ ಸಾಕಿದನಿಂದು ||1|| ಅಚ್ಯುತಾನಂತನೆಂಬ ನಾಮಾ ಅಚ್ಚು ಸುಧೆಯೆನಗೆ ನೇಮಾ ನಿಚ್ಚ ಉಣಲಿಕಿತ್ತ ಪ್ರೇಮಾ ಚಚ್ಚಲದಲಿ ಪೂರ್ಣಕಾಮಾ ಹೆಚ್ಚಿ ಬಪ್ಪ ಮದದಾ ಸ್ತೋಮಾ

ಈತನೀಗ ವಿಜಯ ವಿಠ್ಠಲಾ Read More »

ಈತನೀಗ ಭಾರತೀಶನು ತನ್ನ ಪ್ರೀತಿಸುವರ

ಈತನೀಗ ಭಾರತೀಶನು ತನ್ನ ಪ್ರೀತಿಸುವರ | ಮನದ ಮಾತು ಸಲಿಸಿ ಮುಕುತಿ ಈವ ಶರಧಿ ಜಿಗಿದು ಹಾರಿ ಲಂಕಾಪುರವ ಶೋಧಿಸಿ | ಹರಿಯ ರಾಣಿಗೆ ಕುರುಹನಿತ್ತು ಮರಗಳುರುಹಿ || ಮುರಿದು ಧರೆಗೆ ವರಿಸಿದಾತಾ ಅಪ ಧುರದೊಳಕ್ಷನ ಹರಣವಳಿದು | ಗುರುವರ್ಹತ್ತುಶಿರನ ಜರಿದು || ಸರ್ರನೆ ನಗರ ಉರುಪಿ ಮರಳಿ | ಹರಿಯ ಚರಣಕ್ಕೆರಗಿದಾತಾ ||1|| ಕುರುನಿಕರ ಕರುಬಿ ಬೊ-| ಬ್ಬಿರಿದು ನಿಂದುರವಣಿಸಿ ಎದುರಾ-|| ದರಿಗಳ ಶಿರ ತರಿದು ತಳೋ-| ದರಿಯ ಹರುಷಬಡಿಸಿದಾತಾ||2|| ಕರಿಯ ತೆರದಿ ದುಷ್ಟ ಸಂಕರನು

ಈತನೀಗ ಭಾರತೀಶನು ತನ್ನ ಪ್ರೀತಿಸುವರ Read More »

ಈತನೀಗ ಪ್ರಣವ ಪಾದ್ಯನೊ

ಈತನೀಗ ಪ್ರಣವ ಪಾದ್ಯನೊ | ಭೂತ ಪ್ರೇತ ಪ್ರಮಥ ತತಿಗೆ | ನಾಥನೆನಿಪ ನಮಗೆ ನಿರುತ | ವಾಕನೊಳಗೆ ಹರಿಯ ತೋರುವ ಗಜದನುಜ ವಿನಾಶನೀತ | ಗಜವದನನ ಪೆತ್ತನೀತ | ಗಜನ ಸದದನೀತ ಪೆತ್ತಂ | ಗಜನ ಗೆದ್ದ ಗಂಭೀರನೀತ | ಗಜರಿಪುರಥ ರಮಣನೀತಾ ನಂ | ಗಜಮಾರಗೊಲಿದನೀತ | ಗಜ ವರದನ ಭಕ್ತರಘವೆಂಬೊ | ಗಜಕೆ ಕೇಸರಿಯಾಗಿಪ್ಪನೀತಾ ||1|| ದ್ವಿಜರಾಜ ಜುಟನೀತಸೋತ್ತಮ | ದ್ವಿಜಗೆ ಪಾಲಿಪನೀತ ಸತತಾ | ದ್ವಿಜ ಪನ್ನಗನ್ನ ಸಮಗುಣನೀತಾ | ದ್ವಿಜ

ಈತನೀಗ ಪ್ರಣವ ಪಾದ್ಯನೊ Read More »

ಈ ಸೊಬಗು ಇನ್ನಾವ ಕ್ಷೇತ್ರದಲಿ ಕಾಣೆನಾ ಇಲ್ಲಿ

ಈ ಸೊಬಗು ಇನ್ನಾವ ಕ್ಷೇತ್ರದಲಿ ಕಾಣೆನಾ ಇಲ್ಲಿ | ವಾಸುದೇವ ಮುನಿಯಿದ್ದ ಕಾರಣ ರಾಜಧಾನಿಯ ನೋಡೆ ಇಂದ್ರಭವನಕೆ ಮೇಲು | ತೇಜದಲಿ ನೋಡೆ ಸೂರ್ಯನದೆ ಸೋಲು || ಪೂಜೆದಲಿ ನೋಡೆ ಸರ್ವ ಧರಣಿಗೆ ಮೇಲು | ಭೋಜನದಲಿ ನೋಡೆ ಅಮೃತಕೆ ಮೇಲು ||1|| ಉತ್ಸಾಹದಲಿ ನೋಡೆ ನಹಿ ಪ್ರತಿ ನಹಿ ಪ್ರತಿ | ಸತ್ಸಂಗತಿಯ ನೋಡೆ ಬುಧ ಸಂಗತಿ || ಸುಚರಿತೆಯ ನೋಡೆ ಶುದ್ಧ ಸತ್ವದ ನೀತಿ | ಮತ್ಸರ ಮೆರೆದು ನೋಡೆ ಇಲ್ಲೆ ಮುಕುತಿ ||2||

ಈ ಸೊಬಗು ಇನ್ನಾವ ಕ್ಷೇತ್ರದಲಿ ಕಾಣೆನಾ ಇಲ್ಲಿ Read More »