ಕಂಡೆ ಕಂಡೆನೊ ಕಂಗಳಲಿ

ಕಂಡೆ ಕಂಡೆನೊ ಕಂಗಳಲಿ ಭೂ | ಮಂಡಲದೊಳು ಮೆರೆವ ಯತಿಗಳ ಮಂಡಲಾಬ್ಧಿಗೆ ಸೋಮನೆನಿಪ ಅ | ಖಂಡ ಮಹಿಮಾ ವಾದೇಂದ್ರ ಗುರುಗಳ ನಸುನಗಿಯ ಮೊಗ | ಪಸರಿಸಿದಾ ದ್ವಾದಶನಾಮಗಳು ಶ್ರೀ ಮುದ್ರೆ ಮುದದಿಂದ | ನೊಸಿಲಿಲೊಪ್ಪುವ ಗಂಧ ಅಕ್ಷತಿ ಎಸೆವ ಸಣ್ಣಂಗಾರ ಕಿವಿಯಲಿ ಹಸನಾದ ಎಳೆ ತುಲಸಿ ಶೋಭಿಸಿ | ಬೆಸಸುವ ಒಂದೊಂದು ಮಾತಾ | ಲಿಸಿದರದು ವೇದಾರ್ಥತುಲ್ಯಾ | ಲಸವ ಗೈಯಿಸದೆ ಬರುವ ಗುರುಗಳ||1|| ಮೊಸಳಿವಾಯಪಲಕ್ಕಿ ಸುತ್ತಾ ಭಾ | ರಿಸುವ ನಾನ ವಾದ್ಯಾದಾ ಘೋಷಾ […]

ಕಂಡೆ ಕಂಡೆನೊ ಕಂಗಳಲಿ Read More »

ಕಂಗೆಡದಿರು ಮನವೆ ಕಂಗೆಡದಿರು ಒಡನೊಡನೆ

ಕಂಗೆಡದಿರು ಮನವೆ ಕಂಗೆಡದಿರು ಒಡನೊಡನೆ ನೆರೆದು ಬಂದು ಜನಕೆ ಗ್ರಾಸವೆಂತಹುದೆಂದು ಅನುಮಾನ ಹಚ್ಚಿಕೊಂಡು ಬಡವಾಗದಿರೆಲೆ ಆಲೋಚನೆ ಮಾಡು ನಿನ್ನೊಳಗೆ ತಿಳಿದು ಮರಳಿ ಮರಳಿ ಘನಮಹಿಮ ನಾರಾಯಣ ಅನಾದಿ ಸ್ವಾಭಾವಿಕ ಚಿನುಮಯ ಸತ್ಯಸಂಕಲ್ಪ ದೇವ| ||1|| ಇನಿತು ಜೀವಿಗಳಿಗೆ ಕಾಲಕಾಲಕೆ ತೃಣ ಮೊದಲಾದ ಗ್ರಾಸ ಮಾಡಿಯಿಪ್ಪಾ ಕ್ಷಣಮಿರಗೊಡದೆ ಆವಲ್ಲಿಯಿದ್ದರೂ ವುಣಿಸುವ ಉಚಿತವನ್ನೆ ತಿಳಿದು ನೋಡಿ ದಿನ ದಿನಕೆ ಅಧಿಕವಿಲ್ಲಾ ತತ್ಪೂರ್ವ ಚೇತನಕೆ ನಿರ್ಮಾಣ ಮಾಡಿದಂತೆ ಬೊಮ್ಮಾ||2|| ಫಣಿತಿಯಲ್ಲಿ ಬರೆದಿರುವ ಆಯು:ಕರ್ಮವಿದ್ಯಾ ಧನ ನಿಧಾನನೆನೆಸಿ ಶ್ರೀಹರಿಯ ಆದಿ ಜನಿಸುವಾಗಲೆ ಅವರವರವಾಡಿಪನಾ

ಕಂಗೆಡದಿರು ಮನವೆ ಕಂಗೆಡದಿರು ಒಡನೊಡನೆ Read More »

ಒಳ್ಳೇದೋ ಒಳ್ಳೇದೋ ಎಲ್ಲ

ಒಳ್ಳೇದೋ ಒಳ್ಳೇದೋ ಎಲ್ಲ ಸ್ಥಳವ ಬಿಟ್ಟು | ಇಲ್ಲಿ ಅಡಗಿದ ಬಲ್ಲಿದ ತನವೇ ಬಿಡೆ ಬಿಡೆನೊ ಎನ್ನ ಒಡಿಯ ತಿರುಮಲ ನಿನ್ನ | ಉಡಿಯ ಪೀತಾಂಬರ ಪಿಡಿದು ನಿಲಿಸಿಕೊಂಬೆ ||1|| ಎರವು ಎರವು ಮಾಡಿ ತಿರುಗಿಸಿದಿ ನೀ ಎನ್ನ ಕೊರಳಿಗೆ ನಿನ್ನ ಚರಣ ಕಟ್ಟಿಕೊಂಬೆ ||2|| ಅತ್ತ ಇತ್ತಲಿ ನೋಡಿನೆತ್ತ ಪೋಗಲಿ ಎನ್ನ | ಚಿತ್ತದಲಿ ನಿನ್ನ ಹತ್ತೆಗಟ್ಟಿಕೊಂಬೆ ||3|| ಅತ್ತಿಯ ಮಕ್ಕಳಿಗೆ ತೆತ್ತಿಗ ನೀನಾಗಿ | ವಿತ್ತವಿತ್ತದರಾದ ರಾಸಿ ಸಿರಿಯಲ್ಲಿ ||4|| ಇರಳು ಹಗಲು ಬಿಡದೆ

ಒಳ್ಳೇದೋ ಒಳ್ಳೇದೋ ಎಲ್ಲ Read More »

ಒಲಿದವಳ ಬಿಡುವುದು ಧರ್ಮವಲ್ಲ

ಒಲಿದವಳ ಬಿಡುವುದು ಧರ್ಮವಲ್ಲ | ಚಲುವ ನಿನಗಾಗಿ ನಾ ಯೇಸು ಕಾಲಕೆ ತಪವಿದ್ದೆ ತಂದೆತಾಯಿಗಳಲ್ಲಿ ಪುಟ್ಟಿದಾಕ್ಷಣದಲ್ಲಿ | ಅಂದೆ ನೇಮಿಸಿದರು ಪೆಸರನಿಟ್ಟು | ಸಂದೇಹಗೊಳದಿರು ಮೈಲಿಗೆಯವಳೆಂದು | ಬಂದ ಪ್ರಾಣವÀ ನೋಡು ಬರಿದೆ ಪೇಳುವಳಲ್ಲ ||1|| ಕನ್ಯಾವಸ್ಥಿಯಲಿಂದ ನಿನ ನಿನ್ನ ಧ್ಯಾನವಲ್ಲವೇ | ಅನ್ಯಪುರುಷರಾಪೇಕ್ಷೆ ಮಾಡಲಿಲ್ಲ | ಅನ್ಯಾಯವೇನು ಆಗಲಿ ಪೋಗುವರೇನೊ | ಅನ್ಯಥಾ ಈ ನುಡಿಗೆ ನಿಜಕೆ ನಿಲ್ಲುವೆ ನಾನು ||2|| ಮಲದಲ್ಲಿ ಮೂರುದಿನ ಪೋಗಾಗಿ ಹೋಗಿದ್ದೆ | ಬಲು ಶುಚಿಯಾದೆನೊ ಶುದ್ಧ ಜಲದಿ |

ಒಲಿದವಳ ಬಿಡುವುದು ಧರ್ಮವಲ್ಲ Read More »

ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ

ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ ಕೊಡು ಎನಗೆ ದೃಢ ಪದವಿ ಕಡಲಶಯನಾ ಪಿತನ ತೊಡಿಯ ಮೇಲೆ ಕುಳಿತಿರಲು ಮಲತಾಯಿ ಅತಿ ರೋಷದಿಂದವನ ಹೊಯಿದೆಬ್ಬಿಸೆ ಖತಿಯಿಂದ ವನಕೆ ಪೋಗಿ ನಿನ್ನ ಪೂಜಿಸಲು ಮತಿವಂತನ ಮಾಡಿ ಧ್ರುವಪದವಿ ಕೊಡಲಿಲ್ಲವೆ ||1|| ತಂದೆ ಬಾಧಿಸೆ ಧೃತಿಗೆಡದೆ ನರಹರಿ ಗೋ ವಿಂದ ನಾರಾಯಣ ಕೃಷ್ಣ ವಿಷ್ಣು ಇಂದಿರಾರಮಣ ಇನಕುಲತಿಲಕ ಎಂದೆನಲು ಕಂದನಿಗೆ ಕೈವಲ್ಯಪದವಿ ಕೊಡಲಿಲ್ಲವೇ||2|| ಜಾತಿಧರ್ಮವ ಬಿಟ್ಟು ಅಜಮಿಳನು ಚಂಡಾಲ ಜಾತಿ ವಧುವಿಗೆ ಸೋತು ಕೆಟ್ಟು ಯಮನ ದೂತರನ ನೋಡಿ

ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ Read More »

ಒಂದೇ ನಾಮದಲಡಗಿದವೊ ಅಡಗಿದವೋ

ಒಂದೇ ನಾಮದಲಡಗಿದವೊ ಅಡಗಿದವೋ ನಂದದಿಂದುಸುರುವ ಅಖಿಳ ವೇದಗಳು ಒಂದೇ ನಾಮವೆ ಪ್ರಹಲ್ಲಾದನ್ನ ರಕ್ಷಿಸಿತು ಒಂದೇ ನಾಮವೆ ಅಜಾಮಿಳಗೆ ವೊಲಿದಿತು ತಂದೆ ತಾಯ ಬಿಟ್ಟ ಕಂದ ಧ್ರುವರಾಯಗೆ ಆ ನಂದ ಪದವಿಯಿತ್ತ ಅದ್ಭುತ ಮಹಿಮೆಯು ||1|| ಮಚ್ಛಾದ್ಯನಂತಾವತಾರಾ ಸ್ವಚ್ಛ ಅಷ್ಟಾದಶ ಪುರಾಣ ಅಮೃತದ ಸಾರಾ ಕಚ್ಛಪ ತ್ರಿಜಗಕೆ ಆಧಾರ ತನ್ನ ಸ್ವೇಚ್ಛೆಯಿಂದಲಿ ತಾ ಮಾಡೋ ವ್ಯಾಪಾರಾ ||2|| ಒಬ್ಬರಿಂದಲಿ ತನಗಿಲ್ಲ ತಾ ನೊಬ್ಬನೆ ಜೀವರ ರಕ್ಷಿಪನೆಲ್ಲಾ ಕಬ್ಬುಬಿಲ್ಲಿನ ಪಿತ ವಿಜಯವಿಠ್ಠಲರೇಯ- ವೈ ದರ್ಭೆಯ ರಮಣನ ಸುಗುಣಗಳೆಲ್ಲಾ ||3||

ಒಂದೇ ನಾಮದಲಡಗಿದವೊ ಅಡಗಿದವೋ Read More »

ಒಂದಾನೊಂದು ದಿವಸದಲ್ಲಿ

ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು | ಚಂದದಿಂ ದ್ವಾದಶಿ ಸಾಧನೆ ಬರಲು ಅಂದದಿಂದ ಪುರಂದರದಾಸರಿ | ಗಿಂದು ಭೋಜನಕ್ಕೆ ಬನ್ನಿರೆಂದು ಕರೆದರೂ ಪೇಳಿತೆಂದು ದಾಸರು ಪೋಗಿ ತಾವು ನಿರ್ಮಲ ಸ್ನಾನ ಜಪಮಂತ್ರ ಹರಿಪೂಜೆಯನೆ ಮಾಡಿ || ಧಳಥಳಿಸುವ ವಿಠಲನ ದಿವ್ಯ ಪಾದ ಗಳ ಧ್ಯಾನಿಸಿ ಕುಳಿತರು ಜನಗಳೆಲ್ಲ ಕೇಳಿ ||1|| ವಿಠಲನ ದಿವ್ಯ ಮೂರ್ತಿಯ ಪಾಡಿ ದೃಷ್ಟಿಯಿಂದಲಿ ನೋಡಿ | ಮುಟ್ಟಿ ಮುಂದೊಲಿದು ಕುಣಿಕುಣಿದಾಡಿ || ಥಟ್ಟನೆ ವೇದಕ್ಕೆ ಸಮನಾದ ಪದಗಳು | ನಿಷ್ಠೆಯಿಂದ್ಹೇಳಿ ಅಭೀಷ್ಟವ ಪಡೆದರು||2|| ಎಡೆಯೊಳು

ಒಂದಾನೊಂದು ದಿವಸದಲ್ಲಿ Read More »

ಏಳು ಬೆಳಗಾಯಿತು ಯದುಕುಲೋತ್ತಮ

ಏಳು ಬೆಳಗಾಯಿತು ಯದುಕುಲೋತ್ತಮ | ವಾಲಗಕೆ ಪರಮೇಷ್ಠಿ ಹರ ಸುರಪಾಲಕರು ಹರ ಸುರಪಾಲಕರು ಬಂದರು ತಮ್ಮಯ ಆಳುಸಹಿತದಲಿ ರಂಗಾ ವೇದವನು ತಮ ಕದ್ದು ಒಯ್ದನು | ಆಧಾರಾಗದೆ ಅದ್ರಿ ಮುಣಗಿತು || ಮೇದಿನಿಯ ಬಳಕೊಂಡು ಹೋದನು | ಅದಿತಿಯ ಸುತನು ಭಾದಿಗಾಗದಲೆ ಬಂದು ಸಕಲರು || ಆದರಣೆಯಿಂದ ಕೈಯ ಮುಗಿದು ನೀ | ದಯಾನಿಧಿ ಎಂದು ಹೊರಗೆ ಕಾದು ಐದಾರೆ ರಂಗ ||1|| ಬಲಿಯ ಅಟ್ಟುಳಿ ಹೆಚ್ಚಿತು ವೆ ಗ್ಗಳಿಸಿದರು ಛತ್ರಿಯರು ಈರೈದು ತಲೆಯವನು || ಬಲವಂತನಾದನು

ಏಳು ಬೆಳಗಾಯಿತು ಯದುಕುಲೋತ್ತಮ Read More »

ಏಳು ಏಳು ಏಳು ಲೋಕದ ಒಡಿಯನೆ

ಏಳು ಏಳು ಏಳು ಲೋಕದ ಒಡಿಯನೆ | ಏಳು ಗೋವಳರಾಯ ಗೋಪೇರಿಗತಿ ಪ್ರಿಯಾ | ಏಳು ಅಪ್ರಾಕೃತ ಕಾಯಾ ಸುರಮುನಿ ಗೇಯಾ | ಏಳು ಗೋಪಾಲಕೃಷ್ಣ ಪುರಂದರನ ದಿಶೆಯಲ್ಲಿ ಗರುಡಾಗ್ರಜನು ಬರಲು | ಅರುಣವಾಯಿತು ಗಗನ | ಶರಧಿ ತೆರೆ ತಗ್ಗಿದವು ಉರಗ ಪೆಡೆ ಪಸರಿಸಿದಾ | ಹರಿದು ಪೋಯಿತು | ಕಾಳ | ಸುರ ವೈರಿಗಳು ಅಡಗಲು | ಅರಳಿದವು ಅರವಿಂದ | ಪರಮ ಶೋಭನದಿ ಮಧುಕರಗಳು ಝಂಕರಿಸಿ ಶುಕಪಿಕ ಮೃಗಾದಿ ಯೆ-| ಚ್ಚರವಾಗೆ ಕಣ್ಣೆರಿಯೆ

ಏಳು ಏಳು ಏಳು ಲೋಕದ ಒಡಿಯನೆ Read More »

ಏನೆಲವೊ ದೇವ ವೈಕುಂಠನಾಥಾ

ಏನೆಲವೊ ದೇವ ವೈಕುಂಠನಾಥಾ ನೀ ನಾರಿ ವೇಷವನು ಧರಿಸಿದ ಬಗೆ ಪೇಳೋ ದೈತ್ಯರುರುಬಿಗೆ ದೇವ ತತಿಗಳು ತಲ್ಲಣಿಸಿ ಮಿತ್ರ ಭಾವದ ಅವರ ಕೂಡಲಿಟ್ಟು ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು ಮಿತ್ರವೇಷ ಧರಿಸಿ ಸುರರ ಸಲಹಿದಾ ಬಗೆಯೊ ||1|| ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ ಕ ರವನಿಡುವೆನೆಂದು ಬರಲಾಗಲೂ ಅವನೀಶ ಭವಹರ ಕೇಶವ ನೀನೆ ಗತಿ ಎನಲೂ ಯುವತಿ ವೇಷವಧರಿಸಿ ಶಿವನ ಸಲುಹಿದ ಬಗೆಯೊ||2|| ಅಂದು ಮಾಡಿದ ಚರಿತೆ ಭಕ್ತಜನರು ಬಂದು ಒಂದು ದಿನ ನೋಡಿದವರಲ್ಲವೆಂದೂ ಇಂದು ಸತಿ

ಏನೆಲವೊ ದೇವ ವೈಕುಂಠನಾಥಾ Read More »

ಏನು ಸೇವಿಸಿದೆ ಗುರು ಯೆಲೊ ಮಾರುತಿ

ಏನು ಸೇವಿಸಿದೆ ಗುರು ಯೆಲೊ ಮಾರುತಿ | ಭಾನು ವಂಶೋತ್ತಮನೆ ನಿರುತ ಧಾರ್ಮಿಕನೆಂದು ಪೋತತನದಲಿ ಸೇರಿ ಅರ್ಕಜನ ಕರೆತಂದು ಮಾತಾಡಿಸಿ ಕೊಟ್ಟು ಮುದದಿ ಉದಧಿ | ಭೀತಿ ಇಲ್ಲದೆ ಹಾರಿ ಲಂಕಾಪುರವ ದಹಿಸಿ | ಸೀತೆ ವಾರ್ತೆಯ ತoದು ಪೇಳಿದಕೆ ಸುಫಲಾ ||1|| ಕೋತಿಗಳ ಕೂಡಿಕೊಂಡು ವನಧಿ ತೀರದಲಿಳಿದು ಭೂತಳವ ತಿರುಗಿ ಪ್ರತಾಪದಿಂದ | ಗೋತುರೋನ್ನತ ತಂದು ತಡಿಯದೆ ಪ್ರಖ್ಯಾತದಿ | ಸೇತುವಿಯ ಕಟ್ಟಿ ಕುಣಿದಾಡಿದದುಕೇನು ಫಲಾ ||2|| ಅಂದು ವಿಂಶತಿ ಹಸ್ತ ರಣದೊಳಗೆ ರಥವೇರಿ |

ಏನು ಸೇವಿಸಿದೆ ಗುರು ಯೆಲೊ ಮಾರುತಿ Read More »

ಏನು ಮರುಳಾದೆಮ್ಮ ಯೆಲ ಭಾರತೀ

ಏನು ಮರುಳಾದೆಮ್ಮ ಯೆಲ ಭಾರತೀ | ವಾನರ ಕುಲ ನಿಕರ ಶ್ರೇಷ್ಠನಾದವಗೆ ಕಣ್ಣಿಲ್ಲದಂಜನೆಯ ಉದರದೊಳು ಜನಿಸಿ | ನಿನ್ನ ತೊರೆದು ಬ್ರಹ್ಮಚಾರಿಯಾಗಿ || ಹಣ್ಣಿಗಾಗಿ ಹೋಗಿ ವನವ ಕಿತ್ತೀಡ್ಯಾಡಿ | ಉಣ್ಣ ಕರದರೆ ಎಂಜಲೆಡೆವೈದ ಕಪಿಗೆ ||1|| ಪುಟ್ಟಿದನು ಗುರುತಲ್ಪಕನ ವಂಶದಲಿ | ನಟ್ಟಿರುಳೆ ಒಬ್ಬ ಅಸುರಿಯ ಕೂಡಿದಾ || ಹೊಟ್ಟೆಗಾಗಿ ಪೋಗಿ ಭಿಕ್ಷದನ್ನವನುಂಡ | ಅಟ್ಟು ಹಾಕುವನಾದ ಕುಲವ ಕೊಂದವಗೆ ||2|| ಮಂಡೆ ಬೋಳನಾಗಿ ಭೂಮಂಡಲ ಚರಿಸುವ | ಕಂಡವರಾರು ಈತನ ಗುಣಗಳಾ || ಪುಂಡರೀಕಾಕ್ಷ

ಏನು ಮರುಳಾದೆಮ್ಮ ಯೆಲ ಭಾರತೀ Read More »

ಏನು ಪೇಳಲಿ ತೀರ್ಥಪತಿಯ ಮಹಿಮೆ

ಏನು ಪೇಳಲಿ ತೀರ್ಥಪತಿಯ ಮಹಿಮೆ ಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದು ದೇಶದೊಳು ಪುಸಿಯಲ್ಲ ಸಿದ್ಧವೆನ್ನಿ ಈಶನುಪದೇಶದಿಂದಲಿ ವಿಗತ ಜನನಾಗಿ ಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ ||1|| ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿ ಇರಲು ಕಾಲಾಖ್ಯ ಉರಗನು ಕಚ್ಚಲು ಪರಮಭೀತಿಯಿಂದ ಅವಳ ವಸನವ ತಂದು ವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು ||2|| ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲು ನಿಲ್ಲದೆ ಸನ್ಮುಕ್ತಿ ಧರನಾಗುವಾ ಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನ ಸಲ್ಲಲಿತ ಪಾದವನು ಕಾಂಬ

ಏನು ಪೇಳಲಿ ತೀರ್ಥಪತಿಯ ಮಹಿಮೆ Read More »

ಏನು ಪವಮಾನಿ ಏನು ಪವಮಾನಿ

ಏನು ಪವಮಾನಿ | ಏನು ಪವಮಾನಿ | ಈ ನಿಧಿಯಲಿ ಬಂದು ನಿಂದ ಕಾರಣ | ಮಾಣದೆ ಪೇಳು ನಿ | ದಾನದಿಂದಲಿ | ಮಾನಸದಲಿ | ದಾನವಾರಿಯ | ಧ್ಯಾನ ಮಾಡುವ ಜಾಣ ಜಗದ ಪ್ರಾಣ ಸುಂದರಾ | ನಾನಾ ಮಹಿಮಾ ಗುರುವೆ ಕೇಸರಿನಂದನ ಪಾಶವಿನಾಶ ನಿರ್ದೋಷ | ದಾಸರನ ಪಾಲಿಸುವ ವಾನರೇಶನೆ ಭಾರತೀಶ ಈಶಾ | ಶೇಷಾದ್ಯರಿಗುಪದೇಶದ ಕರ್ತಾ | ಲೇಸು ಸದ್ಗುಣಗಣ ಕೋಶ ಸರಸಿಜಾಸನ ಪದವಿಗೆ ಸೇರುವಾತಾ || ದೇಶದೊಳು ಬಲುಭೂಷಣ ಪಾಕಶಾಸನ

ಏನು ಪವಮಾನಿ ಏನು ಪವಮಾನಿ Read More »

ಏನು ಕಾರಣ ಮಲಗಿದಿಯೊ

ಏನು ಕಾರಣ ಮಲಗಿದಿಯೊ ಶ್ರೀನಾಥ ರಘುಕುಲೋದ್ಭವ ದರ್ಭಶಯನಾ ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ ಸೇತುಗಟ್ಟುವದು ಅಸಾಧ್ಯವೆಂದು ಮಲಗಿದೆಯಾ ಕೋತಿಗಳ ಕೈಯಲೆ ರಣವಾಗದೆಂದು ಮಲಗಿದೆಯಾ ಪಾತಕ ಹರದೈತ್ಯ ಭಂಜಾ ತಿಳುಪುವದು ಜ್ಯೋತಿರ್ಮಯರೂಪ ದರ್ಭಶಯನಾ||1|| ವನವಾಸ ತಿರಗಲಾರೆನೆಂದು ಮಲಗಿದೆಯೊ ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ ದನುಜ ಬಲ್ಲಿದನೆಂಬೊ ವ್ಯಾಕುಲದಿ ಮಲಗಿದೆಯೊ ಜನನ ಮರಣರಹಿತ ರಾಮ ತಿಳುಹುವದು ಹನುಮ ವಂದಿತ ಪಾದ ಶ್ರೀದರ್ಭಶಯನಾ ||2|| ಅನಿಲಾರಿ ಅಹರಗೆ ಕರುಣಿಸಿ ಮಲಗಿದೆಯೊ ವನಜ ಸಂಭವಗೆ ನೀ ಒಲಿಯ ಬಂದು ಮಲಗಿದಿಯೊ ಮುನಿಗಳು

ಏನು ಕಾರಣ ಮಲಗಿದಿಯೊ Read More »

ಏನು ಕಾರಣ ಮತಿಯಿಲ್ಲ ಮನವೆ

ಏನು ಕಾರಣ ಮತಿಯಿಲ್ಲ ಮನವೆ ಹೀನಾಯವಾಡದಿರು ಪರರ ಗುಣಗಳ ಎಣಿಸಿ ಅವನ ಗೊಡವೆಯೇಕೆ ಅವನಾರು ನೀನಾರು | ಅವನ ಪಾಪಕ್ಕೆ ನೀ ಭಾಗಾದಿಯೆ | ಅವನುತ್ತಮನಾದಡವನೆ ಬದುಕಿದ ಕಾಣೊ ಅವ ಪುಣ್ಯಮಾಡಿದರೆ ಅವನ ಕುಲ ಉದ್ಧಾರ ||1|| ನಿನಗೆ ಕೊಡುವುದರೊಳಗೆ ಬೇಡ ಬಂದವನಲ್ಲ | ನಿನಗೆ ಅವನಿಗೆ ಏನು ಸಂಬಂಧವೊ | ಮನೆ ಒಡವೆ ವಸ್ತುಗಳ ಹಂಚಿಕೊಂಬುವುದಲ್ಲ | ಕ್ಷಣ ಕ್ಷಣಕೆ ಕ್ಲೇಶವನು ಮಾಡಿಕೊಂಬುದು ಸಲ್ಲ ||2|| ನಿನ್ನ ಗತಿ ಮಾರ್ಗಕ್ಕೆ ಅವನಡ್ಡ ಬಾಹನೆ | ನಿನ್ನಿಂದ

ಏನು ಕಾರಣ ಮತಿಯಿಲ್ಲ ಮನವೆ Read More »

ಏನು ಕಾರಣ ಬಂದೆ ಗಂಗೆ

ಏನು ಕಾರಣ ಬಂದೆ ಗಂಗೆ | ನಾನೇನು ಪುಣ್ಯವನು ಮಾಡಿದವನಲ್ಲ ಕಾಸೀಪುರದಿಂದಲಿ ದೇಶ ನೋಡಲು ಬಂದ್ಯೋ | ಬೀಸಿ ಬಿಸುಟುವಂಥ ಅಸ್ಥಿಗಾರದೆ ಒಂದ್ಯೋ | ದಾಸರ ಮಹಿಮೆಯನು ನೋಡುವೆನೆಂದು ಬಂದ್ಯೋ | ದೋಷವರ್ಜಿತ ವಾರಣಾಸಿ ಕಡಿಯದಲೆ | ಲೇಸಾಗಿ ತಿಳಿಪುವದು ಭೀಷ್ಮನ ಜನನೀ ||1|| ತಿಲನೀರು ಕುಡಿದು ಧರಿಸಲಾರದೆ ಬಂದ್ಯೋ | ಮಲಜನರ ದೋಷವನು ಕಳೆವೆನೆಂದು ಬಂದ್ಯೋ | ಕಲಿಯುಗಕೆ ಈ ಕೃಷ್ಣಾ ಅಧೀನಳೆಂದು ಬಂದ್ಯೋ | ಸುಲಭ ತ್ರಿದದೇಶ್ವರಿ ಗಂಗೆ ತಡೆಯದಲೆ | ನಿಲಜಾಲೆ ತಿಳಿಪುವದು

ಏನು ಕಾರಣ ಬಂದೆ ಗಂಗೆ Read More »

ಏಕಾದಶಿ ವ್ರತ ಶೋಧಿಸಿ

ಏಕಾದಶಿ ವ್ರತ ಶೋಧಿಸಿ ಸಾಧಿಸಿ ಏಕಭಕುತಿಯಿಂದ ಮಾಡಿರೊ ಪಾಡಿರೊ | ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ ದಶಮಿ ಏಕಾದಶಿ ದ್ವಾದಶಿ ದಿನತ್ರಯ | ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ | ದಶರೆಲ್ಲ ಕೈ ಕೊಂಡು ಮಾಡಿದರಂದು ರಂ | ಜಿಸುವ ಸತ್ಕರ್ಮದಲ್ಲಿ | ಬಿಸಜನಾಭನು ಲಕುಮಿಗೆ ಪೇಳಿದ ವ್ರತ | ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ | ಋಷಿಗೆ ಅಜನು ಪೇಳಲಾ ಮುನಿ ಬೀರಿದಾ ದಶ ದಿಕ್ಕಿನೊಳಗೊಂದು ||1|| ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು

ಏಕಾದಶಿ ವ್ರತ ಶೋಧಿಸಿ Read More »

ಏಕಾಂತದಲಿ ಬಂದು ಮಾತು ನುಡಿದೆ

ಏಕಾಂತದಲಿ ಬಂದು ಮಾತು ನುಡಿದೆ ಶ್ರೀ | ಕಾಂತ ನಿನಗಿದು ಸುಲಭವಾಗಿದೆ ನೋಡು ಪರಧನವನಪಹರಿಸಿಕೊಂಡು ಬೆಳೆದು ಇದ್ದ | ವರ ಮನೆಯೊಳಗಡಲೇತÀಕೆ | ನಿರುತ ಎನ್ನ | ಹೃದಯವೆಂಬೊ ಗಾಡಾಂಧಕಾರ | ಭರಿತವಾಗಿದೆ ಇಲ್ಲಿ ಅಡಗಬಾರದೆ ಬಂದು ||1|| ಕೇವಲ ಹಕ್ಕಲದ ವನದೊಳು ಪೊಕ್ಕು ಬೇಟೆ | ದೇವ ಆಡುವರೆ ನೀ ಹುಡಿಕಿ ಹುಡಿಕಿ| ಕಾವಲಾರಣ್ಯ ಇಲ್ಲಿ ವಿಂಡೂ ತುಂಬಿದೆ | ಸಾವಧಾನದಿ ಬೇಟೆ ಆಡÀಬಾರದೆ ಬಂದು ||2|| ವೈಕುಂಠ ಮೂರು ಸ್ಥಾನದಲಿ ಮುಕ್ತರಿಗೆ | ಬೇಕಾದದೀಯಾಬೇಕು

ಏಕಾಂತದಲಿ ಬಂದು ಮಾತು ನುಡಿದೆ Read More »

ಎಲ್ಲೊ ಎಲ್ಲೊ ಎನ್ನ ಸಾಲವೆತ್ತದೊ

ಎಲ್ಲೊ ಎಲ್ಲೊ ಎನ್ನ ಸಾಲವೆತ್ತದೊ | ನಿಲ್ಲೊ ನಿಲ್ಲೊ ನಿನ್ನ ಕಂಡ ಮ್ಯಾಲಕೆ ಬಿಡೆ ಮೀನ ನಡೆದ ಹೆಜ್ಜೆಗಳು ಕಾಣದಂತೆ ಪೋಗಿ ನಡಗಿದೆ | ಬೆಟ್ಟದಡಿಯ ಅಂದು ಒಡನೆ ಮಣ್ಣುಕಚ್ಚಿ ಬಾಯಿದೆರದು ಆ | ರ್ಭಟಿಸಿದರೆ ನಿನ್ನ ಪೋಗಗೊಡುವೆವೇನೊ ||1|| ಬಲು ಉದ್ದ ಬೆಳೆದರೆ ನ್ಯಾಯದಿ ಸೋಲಿಸಿ | ಹೆಗ್ಗಲಿದಾ ಗಿಡದ ಬೇರು ಕಡಿಸುವೆನೊ | ಕಲಕಾಲಾ ಉಪವಾಸ ಮಾಡಲು ನಮಗೇನು | ಕಳವು ಹಾದರದಲ್ಲಿ ನಿಸ್ಸೀಮ ಪುರುಷನೇ ||2|| ಮಾಣಿಯ ತೋರಿಸಿದರೆ ನಿನಗಾರುರಂಜೋರೋ | ಪಾಣಿಯೊಳಗೆ

ಎಲ್ಲೊ ಎಲ್ಲೊ ಎನ್ನ ಸಾಲವೆತ್ತದೊ Read More »

ಎಲ್ಲಿದ್ದರೇನು ಶ್ರೀ ಹರಿಗಲ್ಲದವನು

ಎಲ್ಲಿದ್ದರೇನು ಶ್ರೀ ಹರಿಗಲ್ಲದವನು ನಿಲ್ಲದೆ ಜಪಿಸಿದರೆ ಸಲ್ಲುವನೆ ಸದ್ಗತಿಗೆ ಕಪ್ಪೆ ಕಮಲದ ಬಳಿಯೆ ತಪ್ಪದೆ ಅನುಗಾಲ | ಇಪ್ಪುದೈ ಒಂದು ಅರೆ ಘಳಿಗೆ ಬಿಡದೆ || ಬಪ್ಪದಿಂದಲಿ ಅದರ ಪರಿಮಳದ ಸೊಬಗ ನೀ- | ಕಪ್ಪೆ ವಾಸನೆಗೊಂಡು ಹರುಷಪಡಬಲ್ಲುದೆ ||1|| ಹಾಲುಕೆಚ್ಚಲು ಬಳಿಯೆ ತೊಣಸಿ ಹತ್ತಿಕೊಂಡು | ಕಾಲವನು ಕಳೆವ ಬಗೆ ಬಲ್ಲಿರೆಲ್ಲ || ವೇಳೆವೇಳೆಗೆ ಹಸುವ ಕರೆದುಂಬ ನರನಂತೆ | ಕೀಳು ತೊಣಸಿಯು ಉಂಡು ಹರುಷಪಡಬಲ್ಲ್ಲುದೆ||2|| ತುಳಸಿ ಸಾನ್ನಿಧ್ಯದಲಿ ನೀರುಳ್ಳಿಯನು ಹಾಕಿ | ಹೊಲಸು ಹೋಗ್ವುದೆ

ಎಲ್ಲಿದ್ದರೇನು ಶ್ರೀ ಹರಿಗಲ್ಲದವನು Read More »

ಎಲ್ಲಿ ಸುವರಗಳು ಇಲ್ಲದಿದ್ದರೆ

ಎಲ್ಲಿ ಸುವರಗಳು ಇಲ್ಲದಿದ್ದರೆ ಇವ | ನಲ್ಲದೆ ಮತ್ತಾರಾ | ವಲ್ಲಿ ಕಾಣದೆ ಪೋದೆ ಸಾರುವ ಶರೀರ ಧರಿಸಿ ಬಾಳಿದ ಮಹಾ | ಭಾರವಾಗಿದ್ದ ಪಾಷಾಣವ ಪೊತ್ತವ | ಗೊರುವ ನೆಲನಂದು ಕಾಷ್ಟದಿಂದಲಿ ಬಂದ | ಹಾರುವನಾಗಿ ತಿರದುಂಡು ಕುಲಧರ್ಮ | ಮೀರಿ ನಡೆದವ ಉಪವಾಸದವÀನಿಂದ | ಊರ ಎಂಜಲಿಗೆ ಹೇಸದೆ ಓಡಾಡಿದವ | ನಾರಿಯರ ವ್ರತ ಕೆಡಿಸಿ ರಾವುತನಾಗಿ | ಹಾರಾಡಿವನು ಇವ ಹಲವು ಕಾಯ | ಆರಿಂದ ಜನಿತನಿವ ನೋಡಲಾಗಿ | ಧಾರುಣಿಯೊಳಗಿದ್ದವ ಸರ್ವರನ್ನ

ಎಲ್ಲಿ ಸುವರಗಳು ಇಲ್ಲದಿದ್ದರೆ Read More »

ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ

ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ ಇಲ್ಲವೋ ಕಾಣೋ ಎಂದಿಗಾದರು ಮರುಳೆ ಹುಲಿ ಇಲಿಯಾಗುವುದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಲನ್ನೀಗ ಬಳಿವ ಖಳ ಮಹಾಚೋರ ಚೊಚ್ಚಿಲಗೌಡಿ ಮಗನಾಹ ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ ||1|| ಕರಡಿ ಕರುವಾಗುವುದು ಉರಿ ಮಂಜು ಆಗುವುದು | ಕರಿ ನಾಯಿಯಾಗುವುದು ಕಂಡವರಿಗೆ | ಭರದಿಂದ ಸುರಿವ ಮಳೆ ನಿಲ್ಲೆನಲು ನಿಲ್ಲುವುದು | ನರಹರಿಯ ನಾಮಗಳ ನಂಬಿ ಭಜಿಪರಿಗೆ ||2|| ಫಣಿ ಸರಿವೆಯಾಗುವುದು ದಣುವಾಗುತಿಹ ಮಾರ್ಗ | ಕ್ಷಣದೊಳಗೆ ಪೋದಂತೆ

ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ Read More »

ಎಲ್ಲಡಗಿದನೊ ಹರಿ ಎನ್ನಯ ಧೊರಿ

ಎಲ್ಲಡಗಿದನೊ ಹರಿ ಎನ್ನಯ ಧೊರಿ ಎಲ್ಲೆಲ್ಲಿ ಪರಿಪೂರ್ಣನೆಂಬೊ ಸೊಲ್ಲನು ಮುನ್ನಾ ಅಲ್ಲಲ್ಲಿ ಪುಸಿಮಾಡಿ ಮಲ್ಲಮರ್ದನ ಪುಲ್ಲಲೋಚನ ಹರಿ ಶರಣೆಂದವರ ಕಾಯ್ವ ಕರುಣಾ ಸಮುದ್ರನು ಕರುಣನ ಅರಿಯದೆ ಹರಿಣಾಂಕ ನಿಭವಕ್ತ್ರ ||1|| ಕರಿರಾಜನ ಮೊರೆ ಕೇಳಿ ತ್ವರಿತದಿಂದ ಗರುಡನೇರಿ ಬಂದ ಗರ್ವರಹಿತ ದೇವ ||2|| ವರ ಭುಜದಲಿ ಶಂಖ ಚಕ್ರವ ಧರಿಸಿದ ಪರಮ ಸುಂದರಮೂರ್ತಿ ಪರಮೇಷ್ಠಿ ಜನಕನು ||3|| ವನಜ ಮಲ್ಲಿಗೆ ಜಾಜಿ ವನದಲ್ಲಿ ಚಲಿಸುವ ವನಿತೆಯರಾಟಕ್ಕೆ ಮನಮೆಚ್ಚಿ ನಡೆದಾನೊ ||4|| ಗೋವುಗಳ ಹಿಂಡು ಗೋಪಾಲರನು ಕಂಡು ಕಾವ

ಎಲ್ಲಡಗಿದನೊ ಹರಿ ಎನ್ನಯ ಧೊರಿ Read More »

ಎಲೆ ಮನ ಮುರಾರಿಯನು ಕೊಂಡಾಡು

ಎಲೆ ಮನ ಮುರಾರಿಯನು ಕೊಂಡಾಡು ಸಾಧನಕಿದು ಉಪಾಯ ನೋಡು ಕಾಲನ ದೂತರ ಕಾಲಿಗೆ ಬಿದ್ದರೆ | ನಾಳೆಗೆ ನಿಲುವರೆ ನೋಡು ||1|| ಮಂದಿಯ ಮಾತಿಗೆ ಎಂದೆಂದು ಮರುಗದೆ | ಮುಂದಿನ ಗತಿ ನೀ ನೋಡು ||2|| ರಾಜೀವ ಮುಖಿಯರ ಸೋಜಿಗ ಮೆಚ್ಚದೆ | ವಿಜಯವಿಠಲನ ಪಾಡೋ||3||

ಎಲೆ ಮನ ಮುರಾರಿಯನು ಕೊಂಡಾಡು Read More »