ಕೈಲಾಸವಾಸ ಗೌರೀಶ ಈಶ

ಕೈಲಾಸವಾಸ ಗೌರೀಶ ಈಶ ತೈಲ ಧಾರೆಯಂತೆ ಮನಸುಕೊಡು ಹರಿಯಲ್ಲಿ ಶಂಭೋ ಅಹೋ ರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇವನೆ ಅಹಿಭೂಷಣನೆ ಎನ್ನವಗುಣಗಳೆಣಿಸದಲೆ ವಿಹಿತ ಧರ್ಮದಿ ಕೊಡು ವಿಷ್ಣುಭಕುತಿಯ ಶಂಭೋ ||1|| ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ ಅನಲಾಕ್ಷ ನಿನ್ನ ಪ್ರೇರಣೆಯಲ್ಲದೆ ದನುಜ ಗಜಮದ ಹರಿಯೆ ದಂಡ ಪ್ರಣಾಮವ ಮಾಳ್ಪೆ ಮಣಿಸು ಈ ಮನವ ಸಜ್ಜನರ ಚರಣದಿ ಶಂಭೋ||2|| ಭಾಗೀರಥೀಧರನೆ ಭಯವ ಪರಿಹರಿಸೈಯ ಲೇ ಸಾಗಿ ಒಲಿದು ಸಂತತ ಶರ್ವದೇವ ಭಾಗವತ ಜನಪ್ರೀಯ ವಿಜಯವಿಠ್ಠಲನಂಘ್ರಿ ಜಾಗುಮಾಡದೆ ಭಜಿಪ […]

ಕೈಲಾಸವಾಸ ಗೌರೀಶ ಈಶ Read More »

ಕೇಳು ಮನವೆ ಸುಜನನಾಗಿ

ಕೇಳು ಮನವೆ ಸುಜನನಾಗಿ ಬಾಳು ಬಾಲ ಭಕುತಿಯಲ್ಲಿ ಕೇಳು ಶ್ರವಣದಲ್ಲಿ ಪೇಳು ಹರಿಯೇ ದೈವವೆಂದು ನಿಲ್ಲಿಸು ಹರಿಯ ವೊಲಿಸುವಳಿಗೆ ಗಳಿಸು ಜ್ಞಾನ ವಳಿಸು ಪಾಪಕಲಿಯಾ ಬೆಳಿಸು ಘಳಿಸು ತಾಮಸ ಸುಳಿಸು ಮಾರ್ಗ ಬಲಿಸು ಧ್ಯಾನವ ಉಳಿಸು ಮನವ ಬೆಳಿಸು ಚೆನ್ನಾಗಿ ಗೆಲಿಸು ವ್ರತವ ಚಲಿಸು ಯಾತ್ರೆಯ ಇಳಿಸು ಮಮತೆ ಕಲಿಸು ಮಿಥ್ಯವ ಥಳಿಸುವಂತೆ ಕೇಳು ಮನವೆ ||1|| ನೋಡು ಕಣ್ಣಲಿ ಮಾಡು ಸೇವೆಯ ಪಾಡಿ ಕೀರ್ತನೆ ಕಾಡು ರಂಗನ ಬೇಡು ದೈನದಿ ನೀಡು ಹಸ್ತವ ಬಾಡು ನಿನ್ನೊಳಗಾಡು

ಕೇಳು ಮನವೆ ಸುಜನನಾಗಿ Read More »

ಕೃಷ್ಣಾರ್ಪಿತವೆಂದು ಕೊಡುಲು

ಕೃಷ್ಣಾರ್ಪಿತವೆಂದು ಕೊಡುಲು ಎ-| ಳ್ಳಷ್ಟಾದರೂ ಮೇರು ಪರ್ವತ ಮೀರುವದು ಗಣ್ಯವಿಲ್ಲದೆ ಶಿಷ್ಯ ಸಹಿತ ಹರರೂಪ ಮುನಿ ರಣ್ಯದಲಿ ಪಾಂಡವರು ಇರಲು ಬಂದು || ಪುಣ್ಯಬೇಕೆಂದೆನಲು ಬಂದು ದಳ ಶಾಖಾ ಕಾ- ರುಣ್ಯದಲಿ ಹರಿ ಎನಲು ಅಪರಿಮಿತವಾದುದು ||1|| ಹಸ್ತಿನಾಪುರದಲ್ಲಿ ಸಕಲ ದೇವಾದಿಗಳ | ಮಸ್ತಕದ ಮಣಿ ವಿದುರನ ಮನೆಯಲ್ಲಿ || ಹಸ್ತು ಬಂದುದಕೆ ಉಪಾಯವೇನೆಂದೆನಲು | ಹಸ್ತದೊಳು ಪಾಲ್ಗುಡತಿಯೆರಿಯೆ ಮಿಗಿಲಾದುದೊ||2|| ಅಣು ಮಹತ್ತಾಗಲಿ ಆವಾವ ಕರ್ಮಗಳು | ತೃಣನಾದರರಿತು ಅರಿಯದೆ ಮಾಡಲು || ಕ್ಷಣ ತನ್ನದೆನ್ನದೆ ಅರ್ಪಿತನೆ

ಕೃಷ್ಣಾರ್ಪಿತವೆಂದು ಕೊಡುಲು Read More »

ಕೃಷ್ಣಾ ನಿನ್ನ ಕನಿಷ್ಟ ಪೊಳವ

ಕೃಷ್ಣಾ ನಿನ್ನ ಕನಿಷ್ಟ ಪೊಳವ ವುಂ ಗುಷ್ಟ ಭಜಿಸುವ ನಿಷ್ಠ ಜನರ ಉಚ್ಚಿಷ್ಟ ಎನಗದು ಮೃಷ್ಠಾನ್ನವಾಗಲಿಷ್ಟೇ ಬೇಡಿದೆನೊ ನರಲೋಕದ ಸುಖ ಪರಿಪರಿಯಲ್ಲಿ ಅರಿದೆನದರೊಳು ಪರಮ ಸೌಖ್ಯ ಎಳ್ಳರೆ ಅನಿತಿಲ್ಲ ಬರಿದೆ ಜನನ ಮರಣ ಪರಿಯಂತಾ ಅರಸಿ ನೋಡಲು ದುರಿತ ವಾರುಧಿ ಧರೆಯೊಳಗೆ ನಿಂದಿಸಲಾರೆ ಸಾಕು ಶರಣು ಹೊಕ್ಕೆನು ಕರುಣಪಾಂಗನೆ ಕರವಿಡಿದು ಸಲಹೋ ||1|| ಆವುದುಂಟದು ದೇವ ಮಾಣಿಸು ಈ ವರವ ಕೊಂಡು ನಾ ಒಂದನು ವಲ್ಲೆ ಭಾವಶುದ್ಧ ವಾಕ್ಯವೆ ನಿಶ್ಚಯವೊ ಬೇವು ಬೆಲ್ಲವೆ ನೋವು ಬಯಿಪ ಮಾನವ

ಕೃಷ್ಣಾ ನಿನ್ನ ಕನಿಷ್ಟ ಪೊಳವ Read More »

ಕೃಷ್ಣವೇಣಿ ಕಲ್ಯಾಣಿ

ಕೃಷ್ಣವೇಣಿ ಕಲ್ಯಾಣಿ ಕಷ್ಟ ಪರಿಹರಿಪೆ ನಿತ್ಯ ಸಾಗರನ ರಾಣಿ ಅಜನ ನಿರೂಪದಲಿ ಜಾಬಾಲಿಮುನಿ ಬಂದು ಭಜಿಸಿದನು ನಿನ್ನ ಬಲುದಿವಸಂಗಳು ನಿಜವಾಗಿ ಹರನ ಜಡೆಯಲ್ಲಿ ಉದ್ಭವಿಸಿದೆ ತ್ರಿಜಗದೊಳಗೆ ಮೆರೆದೆ ತ್ರಿದಶಾಮರವಂದಿತೆ ||1|| \ ಕನ್ಯಾರಾಶಿಗೆ ಜೀವ ಬಂದು ಪ್ರಾಪುತನಾಗೆ ಹನ್ನೆರಡು ವರುಷಕೆ ಒಮ್ಮೆ ಬಿಡದೇ ಮನ್ನಿಸಿ ಭಕುತಿಯಿಂದ ಒಂದು ಮಜ್ಜನಮಾಡೆ ಧನ್ಯನ ಮಾಳ್ಪೆ ಬಲು ಘನ್ನ ತರಂಗಿಣಿ ||2|| ಎತ್ತ ನೋಡಿದರತ್ತ ನಾಲ್ಕುವರೆ ಯೋಜನವು ಕ್ಷೇತ್ರ ಪುಣ್ಯದೇವಿಯೆನಿಸಿಕೊಂಬೆ ಸ್ತುತಿಸಲಳವೇ ನಿನ್ನ ಮಹಿಮೆಯ ಅನುಗಾಲ ಮತ್ತಗಜಗಮನೆ ಮಲದೂರೆ ಮುಕ್ತಿಧಾರೆ ||3||

ಕೃಷ್ಣವೇಣಿ ಕಲ್ಯಾಣಿ Read More »

ಕೃಷ್ಣನ್ನ ಬಲೂತ್ಕoಷ್ಟನ್ನ

ಕೃಷ್ಣನ್ನ ಬಲೂತ್ಕøಷ್ಟನ್ನ ವಿಶಿಷ್ಟನ್ನ ಸ್ತುತಿಸಿ ತುಷ್ಟನ್ನ ಗೋಪಳ್ಳಿಯೊಳಗಂದು ನಿಂದನ್ನಬಲುಗೋಪಿಯರ ಕೂಡ ನಂದನಾಗೋಪಿ ಚಂದನದಿಂದ ಬಂದನ್ನಾನಮ್ಮಗೋಪಾಲ ವಿಷ್ಣು ಗೋವಿಂದನ್ನ ||1|| ಅಪಾರ ಮಹಿಮ ನೆನೆಸುವನ್ನಾಭüಕುತ ಗಾಪತ್ತಬರಲು ಮಾಣಿಸುವನ್ನಾತಾಪಸಿಗಳಿಗೆ ಕಾಣಿಸುವನ್ನಾದಶರೂಪವ ಧರಿಸಿ ಜನಿಸುವನಾ ||2|| ರಜತಪೀಠ ಪುರವಾಸನ್ನಮಹರಜನೀಚರರ ವಿನಾಶನ್ನತ್ರಿಜಗದೊಳಗೆ ಪ್ರಕಾಶನ್ನನಮ್ಮವಿಜಯವಿಠ್ಠಲ ಮಾನಿಸನ್ನ ||3||

ಕೃಷ್ಣನ್ನ ಬಲೂತ್ಕoಷ್ಟನ್ನ Read More »

ಕೃಷ್ಣ ಕೃಷ್ಣ ಬಾಂಧವ

ಕೃಷ್ಣ ಕೃಷ್ಣ ಬಾಂಧವ ಸೃಷ್ಟ್ಯಾದಷ್ಟ ಕರ್ತ ದೃಷ್ಟನಾಮಕ ಭವ ನಷ್ಟವಗೈಸೋದು ಅಷ್ಟರೊಳಗೆ ಹರಿ ವಿಷ್ಣು ಸರ್ವೋತ್ತಮ ಇಷ್ಟೆ ಪೇಳುವದಕೆ ನಿಷ್ಟಿಯನೀಯೊ ಈ ಸುದಿನವಾರಭ್ಯ ಕ್ಲೇಶದೊಳಗೆ ಬಿದ್ದಾ ಯಾಸ ಬಡುತಲಿದ್ದೆ ಲೇಶವಾದರು ಸುಖ ಲೇಶಗಾಣದಿರಲು ಏಸು ಜನ್ಮದ ಪುಣ್ಯ ಸೂಸಿತೋ ನಿನ್ನಯ ದರುಶನ ಲಾಭವಾಗೆ ದೇಶದೊಳಗೆ ನಿನ್ನ ದಾಸರ ದಾಸನೆನಿಸಿಕೊಂಬ ಈ ಸುಲಭ ವೊಂದಿಸನುದಿನ ದು ರಾಶೆಯ ಬಿಡಿಸೆಂದು ನಾಶರಹಿತ ಗುಣರಾಶಿ ರಮೇಶ ||1|| ವೇದಪರಾಯಣ ಸಾಧುಗಳರಸಾ ವಿ ನೋದಿಗಾ ಪಳ್ಳಿಗನೆ ಆದಿದೈವವೆ ತೀರ್ಥ ಪಾದ ಜಗತ್ಯೆಂತ ಭೇದಾ

ಕೃಷ್ಣ ಕೃಷ್ಣ ಬಾಂಧವ Read More »

ಕೃಷ್ಣ ಎನಗೆ ಬಂದರಿಷ್ಟವ

ಕೃಷ್ಣ ಎನಗೆ ಬಂದರಿಷ್ಟವ ಕಳೆದು ನಿನ್ನ ನಿಷ್ಠೆಯಲಿ ಇರುವಂತೆ ಇಷ್ಟೆ ಮಾತುರವೀಯೋ ನಿರ್ದೋಷ ಗುಣವಾರುಧಿ ನಿರ್ಧಾರವಾಗಿ ನುಡಿವೆ ಸಿದ್ಧಾಂತ ಮತದಲಿ ಪೊದ್ದಿಪದೆ ಸಾಕು ||1|| ಅಜ ಭವಾದ್ಯರು ನಿನ್ನ ಭಜಿಪರಾರು ದೋಷ ವ್ರಜದ ಮಾನವ ತಿಳಿದು ಭಜಿಸಬಲ್ಲೆನೆ ದೇವಾ ||2|| ಮಧ್ವ ಸರೋವರದಲ್ಲಿ ಇದ್ದು ಪೂಜೆಯಗೊಂಬ ಮುದ್ದು ವಿಜಯವಿಠಲ ಬಿದ್ದೆ ನಿನ್ನಯ ಪದಕೆ ||3||

ಕೃಷ್ಣ ಎನಗೆ ಬಂದರಿಷ್ಟವ Read More »

ಕೂಗೆಲೋ ಮನುಜ ಕೂಗೆಲೋ

ಕೂಗೆಲೋ ಮನುಜ ಕೂಗೆಲೋ ಸಾಗರಶಯನನೆ ಜಗಕೆ ದೈವವೆಂದು ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣ ಸಚ್ಚಿದಾನಂದೈಕ ಸರ್ವೋತ್ತಮ ಸಚ್ಚರಿತ ರಂಗ ನಾರಾಯಣ ವೇದ ಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು||1|| ನರಹರಿ ಮುಕುಂದ ನಾರಾಯಣ ದೇವ ಪರಮ ಪುರುಷ ಹರಿ ಹಯವದನ ಸಿರಿಧರ ವಾಮನ ದಾಮೋದರ ಗಿರಿ ಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು||2|| ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ ವರದ ಅಪಾರ ಸದ್ಗುಣನಿಲಯ ಮುರುಮರ್ದನ ಮಂಜು ಭಾಷಣ ಕೇಶವ ನಿರ್ಮಲ ದೇವ ಭೂವರಾಹಮೂರುತಿ ಯೆಂದು ||3|| ನಿಗಮವಂದಿತ ವಾರಿಜನಾಭ ಅನಿರುದ್ಧ ಅಘನಾಶ

ಕೂಗೆಲೋ ಮನುಜ ಕೂಗೆಲೋ Read More »

ಕೂಗಿದರು ಧ್ವನಿ ಕೇಳದೆ

ಕೂಗಿದರು ಧ್ವನಿ ಕೇಳದೆ ಶಿರ | ಬಾಗಿದರು ದಯ ಬಾರದೆ ಭೋಗಿಶಯನ ಭುವನಾಧಿಪತೇ ನಿನ್ನ | ಆಗಮನವೆಂದಿಗೆ ಆಗುವುದು ಪ್ರಭೊ ಭಕ್ತರಿಗೊಲಿದವ ನೀನು ಖರೆ ಎ| ನ್ನತ್ತ ನೋಡುವುದು ದೊರೆ || ಚಿತ್ತವಧಾನ ಪರಾಕು ಮಹಾಪ್ರಭು | ಎತ್ತಣ ರಥವನು ಎತ್ತಿ ಬಾ ನೀಡು ದೊರೆ||1|| ಸಿಂಧುಶಯನ ಶೇಷಾದ್ರಿ ವರ ಸಿರಿ | ಮಂದಿರ ಭಕ್ತ ಕುಟುಂಬಧರ || ಸುಂದರ ಮೂರುತಿ ಒಂದಿನ ಸ್ವಪ್ನದಿ | ಬಂದು ಪದದ್ವಯ ಚಂದದಿ ತೋರಿಸೊ||2|| ಕರುಣಾ ಶರಧಿಯು ನೀನಲ್ಲವೇ ಕೃಷ್ಣ

ಕೂಗಿದರು ಧ್ವನಿ ಕೇಳದೆ Read More »

ಕೂಗಿತು ತಾಮ್ರದ ಚೂಡ

ಕೂಗಿತು ತಾಮ್ರದ ಚೂಡ ಕ್ಷೀರಸಾಗರಶಯನನಲ್ಲದಿಲ್ಲಹ ಪರ ಇಲ್ಲ್ಲೆಂದು ಪಕ್ಕಗಳೆರಡು ಚಪ್ಪರಿಸಿ ಡಂಗುರುವ ಹೊಯ್ಯೆ ಸೂಕ್ಕಿದವರ ಎದೆ ಜರ್ಝರಿಸೆ ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು ಕೊಕ್ಕಟೆ ಕೊಕ್ಕಟೆ ಕೊಕ್ಕಟ್ಟೆ ಕೋ ಎಂದು||1|| ಒಂದು ಝಾವದಿ ಓಂಕಾರನೆಂದು ಕೂಗೆ ಇಂದಿರಾಪತಿ ವಿಧಿಜನಕನೆಂದೂ ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ ಬಿಂದುಮಾಧವನಲ್ಲದಿಹಪರವಿಲ್ಲವೆಂದು ||2|| ಎರಡು ಝಾವದಿ ಪುರುಷೋತ್ತಮನೆಂದು ಗರುಡಾಚಲ ನರಸಿಂಹನೆಂದು ಮೂರನೆ ಝಾವಕ್ಕೆ ವೀರನಾರಾಯಣ ಹÀರಿಗಯಾಗದಾಧರನಲ್ಲದಿಲ್ಲವೆಂದು||3|| ನಾಲ್ಕನೆ ಝಾವದಲಿ ಬದರಿವರನಿಲಯ ಏಕೋ ನಾರಾಯಣ ದೇವನೆಂದು ಶ್ರೀ ಕಂಚಿವರದನೆ ಐದನೆ ಝಾವಕ್ಕೆ ಗೋಕುಲಪತಿಯಲ್ಲದಿಹಪರ ಇಲ್ಲವೆಂದು ||4|| ಯಾಮ

ಕೂಗಿತು ತಾಮ್ರದ ಚೂಡ Read More »

ಕಿಂಕರನ ಧ್ವನಿಗೆ ಕೊಡು ಮತಿಯನು

ಕಿಂಕರನ ಧ್ವನಿಗೆ ಕೊಡು ಮತಿಯನು ಪಂಕಜಾನಾಭನ ಸೊಸೆ ಸರಸ್ವತಿಯೆ ಸಕಲ ವಿದ್ಯಾರಂಭೆ ಕನಕ ಪುತ್ಥಳಿ ಬೊಂಬೆ ವಿಕಸಿತ ಸುಲಲಿತಾಂಬೆ ಸುನಿತಂಬೆ ನಿಕುರುಂಬೆ ಸುರರಂಭೆ ದಂತ ದಾಳಿಂಬೆ ಭಕುತಿಯಲಿ ಕಾಂಬೆ ನಿನ್ನ ನಾಮವನುಂಬೆ||1|| ಗಂಗೆ ಯಮುನೆ ಉಭಯ ಸಂಗಮೆ ಭಕ್ತ ಭಯ ಹಿಂಗಿಸಿ ಕೊಡು ಅಭಯ ಅಖಿಳ ಧ್ಯೇಯೆ ಮಂಗಳ ಶೋಭನ ಮಣಿಯೆ ಅಭ್ಯುದಯೆ ಅತಿ ಸದಯೆ ರಂಗು ಮಾಣಿಕ ಪ್ರಭೆಯೆ ಸುಜನಾಬ್ಧಿಗೇಯೆ ||2|| ಪ್ರಯಾಗ ವರಕ್ಷೇತ್ರವಾಸೆ ಪುಣ್ಯಕ್ಷೇತ್ರೆ ಕ್ಷಯ ರಹಿತ ಮುನಿಸ್ತೋತ್ರೆ ಶುಭಚರಿತ್ರೆ ನಯವಿನಯ ನೇತ್ರೆ ಪವಿತ್ರ

ಕಿಂಕರನ ಧ್ವನಿಗೆ ಕೊಡು ಮತಿಯನು Read More »

ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ

ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ ||1|| ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ ||2|| ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ ||3|| ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ ||4|| ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ ||5|| ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ ಮತ್ಸ್ಯತೀರ್ಥದಿ

ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ Read More »

ಕಾವೇರಿ ತ್ರಿಭುವನಕಾಯೆ

ಕಾವೇರಿ ತ್ರಿಭುವನಕಾಯೆ | ಸುರಮುನಿಗೇಯೆ | ಕಾವೇರಿ | ಆವಾವ ಜನುಮಕೆ ಬಿಡದೆ ಎನ್ನನು ಕಾಯೆ ಅಜನನಂದನೆ ಚಂದ್ರವದಗೆ | ಚತುರಮಯೆ | ಸುಜನರಿಗಾನಂದ ಸದಗೆ | ಧವಳಕಾಯೆ | ಭಜಿಸಿ ಬೇಡುವೆ ನಿನಗಿದನೆ | ಸೃಜಿಸಿ ಕೊಡುವುದು | ತ್ರಿಜಗದೊಳಗೆ ಹರಿ | ನಿಜ ಭಕ್ತರಪಾದ | ರಜವಾಗಿ ಯಿಪ್ಪ ಸ | ಹಜ ಮತಿಯನುದಿನ | ಕುಜನ ನಿವಾರೆ ||1|| ಕಲಿನಾಶ ಕಾರುಣ್ಯ ನಿಧಿಯೆ | ನಿರ್ಮಳಶೀಲೆ | ಕಲಕಾಲಾ ಸುಜ್ಞಾನಾಂಬುಧಿಯೆ | ತಲೆವಾಗಿ

ಕಾವೇರಿ ತ್ರಿಭುವನಕಾಯೆ Read More »

ಕಾವನಯ್ಯಾ ಜಗವನನುದಿನ

ಕಾವನಯ್ಯಾ ಜಗವನನುದಿನ | ದೇವ ತಿರುಪತಿಯ ದಾಸಾ ಶ್ರೀ ವಲ್ಲಭವೆಂಕಟೇಶಾ ತರಳ ಉತ್ತಾನಪಾದಿಯ ನೋಡು | ಕರಿಯ ನೋಡು ಮಂದ ಕಾಯನ್ನ | ಕುರೂಪಿಯಾದ ಕುಬಜೆ ವ್ಯಭಿ | ಚರಿಯ ಅಜಮಿಳನ ಕಾಯದ ||1|| ಬಡವನಾಗಿದ್ದ ಸುಧಾಮ ಕೊಲೆ ಗಡಿಕನಾದ ಕಿರಾತನ್ನ ನೋಡು | ನಡತೆ ತಪ್ಪಿದ ಸುಗ್ರೀವ ಕುಲವ | ಕಡಿದ ಪಾರ್ಥನ್ನ ಕಾಯದಾ ||2|| ಇಟ್ಟಿಗೆ ವಗೆದ ಪುಂಡಲೀಕನ | ಬೆಟ್ಟಲೆ ಬೆಟ್ಟವ ನೆತ್ತಿಸಿದವನಾ | ಪೆಟ್ಟನು ಫಣಿಗೆಯಿಟ್ಟ ಭೀಷ್ಮನ | ಕಟ್ಟಿಬಿಗಿದ ಗೋಪಿಯ

ಕಾವನಯ್ಯಾ ಜಗವನನುದಿನ Read More »

ಕಾಯೆ ಕರುಣಾಂಬುಧಿಯೇ

ಕಾಯೆ ಕರುಣಾಂಬುಧಿಯೇ | ಇಂದಿರಾದೇವಿ ಕಾಯೆ ಕರುಣಾಂಬುಧಿಯೆ ಮಾಯೆ ನಾರಾಯಣನ್ನ ಜಾಯೆ ಸತತ ಜ್ಞಾನ | ವೀಯೆ ಭಕ್ತರ ಪ್ರೀಯೇ ಕನ್ನಾಮಣಿಯೆ ಕಾಮಿನಿ ಮಂಗಳವಾಣಿ | ಸನ್ನುತೆ ಲೋಕ ಜನನಿ | ನಿನ್ನ ಚರಣಯುಗ್ಮ | ವನ್ನೆ ನಂಬಿದೆ ಸುಪ್ರಸನ್ನೆ ಸರ್ವಜೀವರ | ಭಿನ್ನೆ ಭಾಗ್ಯಸಂಪನ್ನೆ || ಮನ್ನಿಸಿ ಮುದದಿಂದ | ಬಿನ್ನಪ ಲಾಲಿಸು | ಚನ್ನೆ ಚಕ್ರ ಪಾಂಚಜನ್ಯ ಧರಾದೇವಿ ||1 || ಅತಿದಯವಂತೆ ನೀನೆಂದು ಬೇಗದಿ ಬಂದು | ನುತಿಸಿದೆ ದೀನನಾಗಿಂದೂ | ಪತಿತರೊಳಿಡದಲೆ

ಕಾಯೆ ಕರುಣಾಂಬುಧಿಯೇ Read More »

ಕಾಮಹರ ಒಬ್ಬ ತಾನೆ ಬಲ್ಲಾ

ಕಾಮಹರ ಒಬ್ಬ ತಾನೆ ಬಲ್ಲಾ | ರಾಮ ರಾಮ ಸೀತಾರಾಮ ರಾಮನಲ್ಲದಿಲ್ಲವೆಂದು ಕೈಯಲಿ ಕಿನ್ನರಿ ಧರಿಸಿ ಸಿರಿಮೊಗದಿಂದ | ಮೈಯಲಿ ದ್ವಾದಶ ಪುಂಡ್ರ ಧರಿಸಿ | ಕೈಲಾಸಗಿರಿಯಲ್ಲಿ ಪಾರ್ವತಿ ಕೂಡ ಜಗ ದಯ್ಯನಯ್ಯ ಜಗದೊಡಿಯ ರಾಮನಲ್ಲದಿಲ್ಲೆಂದು ||1|| ಫಣಿಯಾಭರಣವು ಪೆಡೆಯೆತ್ತಿ ಇರಲು | ಮಣಿ ಮಣಿ ರುಂಡಮಾಲೆ ತೂಗಾಡಲು | ಕುಣಿದು ಕಣಕಾಲಿಂದ ಥಕ್ ಥಕ್ ಥೈ ರು ಕ್ಮಿಣಿ ಪತಿ ಸರ್ವೋತ್ತಮ ರಾಮನಲ್ಲದಿಲ್ಲವೆಂದು ||2|| ಕಾಳಕೂಟದ ವಿಷಬಿಂದು ಮಾತುರನುಂಗೆ | ತಾಳಲಾರದೆ ತಳಮಳವಗೊಂಡು | ಕಾಳಿಮರ್ದನ

ಕಾಮಹರ ಒಬ್ಬ ತಾನೆ ಬಲ್ಲಾ Read More »

ಕಾದನಾ ವತ್ಸವ ಹರಿ ಕಾದನಾ

ಕಾದನಾ ವತ್ಸವ ಹರಿ ಕಾದನಾ | ಮೋದದಿಂದ ಮಾಧವ ವೇದವೇದ್ಯ ಸಾಧುವಿನುತರಾದಿಕಾ ರಮಣ ಕೃಷ್ಣ ಎಳೆಯ ಗರಿಕೆ ಇರುವ ಸ್ಥಳದಿ ನೆರೆದು ವತ್ಸಗಳನೆ ನಿಲಿಸಿ || ಕೊಳಲು ಕೈಲಿ ಪಿಡಿದು ಮುರಲಿಗಾನ ಮಾಡುತ್ತಾ ||1||| ತನ್ನ ಶೆರಗು ತೆಗೆದು ಕೃಷ್ಣ ಕರುಗಳನ್ನೆ ಬೆನ್ನೊರಿಸಿ | ತಿನ್ನು ತಿನ್ನು ಪುಲ್ಲು ಯೆನುತ ಘನ್ನ ಕರುಗಳೊತ್ತುತ್ತ ||2|| ಉಡುಗಳಂತೆ ಕರಗಳು ನಡುವೆ ಚಂದ್ರ ಧರೆಯೊಳು || ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು||3|| ಒಂದು ತಿಂಗಳ ಕರುಗಳು ಇಂದಿರೇಶನು ಮೇಯಿಸಲು

ಕಾದನಾ ವತ್ಸವ ಹರಿ ಕಾದನಾ Read More »

ಕಲ್ಲಿನಿಂದ ಸರ್ವ ಫಲ ಬಾಹುದೊ

ಕಲ್ಲಿನಿಂದ ಸರ್ವ ಫಲ ಬಾಹುದೊ | ಕಲ್ಲು ಭಜಿಸಿದರೆ ಕೈವಲ್ಯ ತೋರುವುದೊ ಕಲ್ಲು ಕಡೆಯುತ್ತಿರಲು ಅಮೃತವೆ ಪುಟ್ಟಿತು | ಕಲ್ಲು ಎತ್ತಲು ಮಳೆಯೊಳೆಲ್ಲವರು ಉಳಿದರು | ಕಲ್ಲು ಹರಿಪಾದವನು ಸೋಕೆ ಹೆಣ್ಣಾಯಿತು | ಕಲ್ಲು ಲಂಕೆಗೆ ಮಾರ್ಗ ಚೆನ್ನಾಗಿ ಶೋಭಿಸಿತು||1|| ಕಲ್ಲಿನೊಳಗೆ ದೇವನೊಡಮೂಡಿ ಕಾಣಿಸುವ | ಕಲ್ಲು ಕೊರೆಯಲು ಮೂರ್ತಿ ಮಂತಾಹುದು | ಕಲ್ಲು ದೇವರ ಗುಡಿಗೆ ಗರುಡ ಗಂಬವು ಆಯ್ತು | ಕಲ್ಲು ಕೋಟ್ಯಾನು ಕೋಟಿಗೆಲ್ಲ ಬೆಲೆಯಾಯ್ತು||2|| ಕಲ್ಲೆಂದುಪೇಕ್ಷಿಸದೆ ಕಾಲಕಾಲದಿ ನಿಮ್ಮ | ಕಲ್ಲು ಮನಸನು

ಕಲ್ಲಿನಿಂದ ಸರ್ವ ಫಲ ಬಾಹುದೊ Read More »

ಕರುಣಿಸೋ ಕೃಷ್ಣ ಕರುಣಿಸೊ

ಕರುಣಿಸೋ ಕೃಷ್ಣ ಕರುಣಿಸೊ | ಕರುಣಿಸಿದರೆ ನಾ ನಿನ್ನನೆಂದಿಗು ಮರೆಯ ಭೂತಳದೊಳು ನಾನು ಈ ತನುವುತೆತ್ತು | ಪಾತಕದಲಿ ಯಮಯಾತನೆ ಪಟ್ಟೆ ||1|| ಇಂದೆನ್ನ ಹೃದಯವೆಂಬೊ ಮಂದಿರದೊಳು | ಬಂದು ವಾಸವಾಗೊ ಇಂದಿರೆ ರಮಣ ||2|| ಹಿಂದಿನ ಅವಗುಣ ಒಂದೂ ಎಣಿಸದೆ | ಮುಂದೆ ದೋಷಕ್ಕೆ ಮನವೆರಗಿಸದೆ ||3|| ಪಾಪ ಪುರುಷನೆಂಬೊ ಪಾಪಿಯ ಕೈಗೆ | ಪೋಪಗೊಡದೆ ಎನ್ನ ಕಾಪಾಡೊ ರನ್ನ ||4|| ಅಂತ್ಯಕಾಲದಲಿ ಅಂತಕರು ಬಂದು | ನಿಂತಾಗಲಿ ನಿನ್ನ ಚಿಂತೆ ಒದಗಲಿ ||5|| ಕನಸಿನೊಳಗೆ

ಕರುಣಿಸೋ ಕೃಷ್ಣ ಕರುಣಿಸೊ Read More »

ಕರುಣಿಸಯ್ಯಾ ಗುರುವರ್ಯ

ಕರುಣಿಸಯ್ಯಾ ಗುರುವರ್ಯ ಪರಮ ಸುಹೃದಯಾ | ನಿರುತ ನಿನ್ನವನೊ ನಾನು ಪುರಂದರರಾಯ ಯಿಂದು ಲೋಕದ ಜನರು ತಮ್ಮ ಸುಕುಮಾರರಿಗೆ ಪೆಸರು | ಯಾಕೆ ಯಿಡವರೊ ಜೀಯ್ಯಾ | ನೇಕ ಮಮತೆಯಲಿ || ಬೇಕೆ ಎನಗೆ ಯಿಂಥsÀ ಖ್ಯಾತಿ ನೀ ಕೊಟ್ಟ ಭಾಗ್ಯವೆಯಿರಲಿ | ವಾಕು ವ್ಯರ್ಥವಾಗದಂತೆ ಸಾಕುವದು ಬಿಡದೆ ಒಲಿದು ||1|| ಅಡವಿ ಹತ್ತಿ ಪೋಪ ನರನ ಒಡನೆ ಕೂಡಿಕೊಂಡು ಬಂದು | ಕಡು ಮಹೋತ್ಸವವ ಮಾಡಿ ವೇಗ ಪೊಡವಿಪತಿತನವು || ಧೃಢವಾಗಿ ವಾದಿಸಿ ಅವನ ತೊಡರು

ಕರುಣಿಸಯ್ಯಾ ಗುರುವರ್ಯ Read More »

ಕಮಲೆ ನಿನ್ನಯ ಪಾದ ಕಮಲದಲ್ಲೆನಗೆ

ಕಮಲೆ ನಿನ್ನಯ ಪಾದ ಕಮಲದಲ್ಲೆನಗೆ ವಿಮಲ ಮತಿಯನಿತ್ತು ಅಮಲನ್ನ ಮಾಡಿಸೇ ಗಜರಾಜ ಗಮನೆಯೆ ತ್ರಿಜಗದ್ವಂದ್ಯಳೆಂದು ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೇ ||1|| ಅಷ್ಟ ಸೌಭಾಗ್ಯ ವಿಶಿಷ್ಟವ ಕೊಟ್ಟು ಕಷ್ಟವ ತಿಳಿದು ಸಂತುಷ್ಟನ ಮಾಡಮ್ಮ ||2|| ಶ್ರೇಷ್ಠನ್ನ ಮಾಡು ಉತ್ಕøಷ್ಟನವನಿತ್ತು ಶಿಷ್ಟನೆಂದೆನಿಸಿ ಶ್ರೀಕೃಷ್ಣನ್ನ ರಾಣಿ||3|| ಅಜಭವ ಮೊದಲಾದ ದ್ವಿಜರಿಂದ ವಂದಿತಳೆ ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೆ ||4|| ದ್ವಿಜರಾಜಗಮನಳೆ ಭುಜಗಶಯನನಾದವಿಜಯವಿಠ್ಠಲನಂಘ್ರಿರಜವ ಧರಿಸುವೆ ||5||

ಕಮಲೆ ನಿನ್ನಯ ಪಾದ ಕಮಲದಲ್ಲೆನಗೆ Read More »

ಕಮಲಸಂಭವ ನಾಸಿಕ ಸಂಭವ ಕಾಯೊ

ಕಮಲಸಂಭವ ನಾಸಿಕ | ಸಂಭವ ಕಾಯೊ ನಮಿಸುವೆ ನಿನಗೆ ನಾನು ಅಂದು ಧರಣಿ ಜಲ ವಂದಾಗಿ ಕರಗಿರೇ | ನಂದನ ಚಿಂತಿಸಿ ಬಂದ ವರಹಮೂರ್ತಿ ||1|| ಮಧು ಪಾನಾವವ ಸಾ | ದದು ಅವನ ಚರ್ಮ | ಹೊದಿಸಿ ಹೆಪ್ಪುಗೊಟ್ಟು ಮೇದಿನೆಂದಿಸಿದೆ ||2|| ಕನಕಲೋಚನ ಭೂಮಿಯನು ಕದ್ದು ಮೈಯಲು | ಅನಿಮಿಷರೊಲಿಸೆ ಅವನ ಕೊಂದುದ್ಧರಿಸಿದೆ||3|| ಕರುಣಾಕಟಾಕ್ಷದಿ ಹೊರವಲ್ಲಿ ನಾನೆಲ್ಲಿ | ಸರಿಗಾಣೆ ನಿನಗೆ ಅಂತರ ಬಹಿರದೊಳು ||4|| ರಜೋಭಿಮಾನಿಯ ವಡಿಯಾ ಸುಜನಪಾಲಾ | ಭುಜಗ ಗಿರಿಯ ವಾಸಾ

ಕಮಲಸಂಭವ ನಾಸಿಕ ಸಂಭವ ಕಾಯೊ Read More »

ಕಟ್ಟೆಯ ಕಟ್ಟಿದರು ಭವ ಸಾಗರಕೆ ಸ್ವಲ್ಪ

ಕಟ್ಟೆಯ ಕಟ್ಟಿದರು ಭವ ಸಾಗರಕೆ ಸ್ವಲ್ಪ ಬಿಟ್ಟು ವೇಗದಿಂದ ಸಾಧ್ಯ ಮಾಡಿಕೊಂಡು ಮೆಟ್ಟಿಕೆಯಿಂದಲಿ ದಾಟಿ ಪೋದರು ಜಗ ಜಟ್ಟಿ ದಾಸರು ತಮಗೆ ಸುಲಭವಾದದು ಯನಗೆ ಇಟ್ಟುಪೋದರೆಯಿಂದು ಗುಟ್ಟು ತೋರುತಲಿದೆ ಸಾಧಾರಣವಲ್ಲ ||1|| ದಿಟ್ಟವಾದಕ ವನಯನ್ನಿಂದಾದದಲ್ಲ ಬಿಟ್ಟಿಯವರಿಗೆ ತಿಳಿಯಲಿಹದೆ ಕೊಟ್ಟಿಗೆ ಮೇಲುಪ್ಪರಿಗೆಯಾಗುವದೆ ಹುಟ್ಟಾರಭ್ಯವಾಗಿ ಮಂದನಾಗಿದ್ದವಗೆ ಮಟ್ಟಯಿಲ್ಲದೆ ಬುದ್ಧಿ ಬರುವದೆಂತೊ ಧಿಟ್ಟಳಿ ಮಹಿಮ ಶಿರಿ ವಿಜಯವಿಠಲ ಮನ ಮುಟ್ಟಿ ಭಜಿಸಿದವ ದಾಸರ ಕರುಣವೆನ್ನಿ||2||

ಕಟ್ಟೆಯ ಕಟ್ಟಿದರು ಭವ ಸಾಗರಕೆ ಸ್ವಲ್ಪ Read More »

ಕಂಡೆ ಕಮಲನಾಭನ ಕಣ್ಣಾರೆ

ಕಂಡೆ ಕಮಲನಾಭನ ಕಣ್ಣಾರೆ ಪುಂಡರೀಕನ ಪಾಲಿನ ಪಂಡರಿವಾಸನ ಸಕಲ – ಬೊ ಮ್ಮಾಂಡವ ಧರಿಸಿದನಾ ಪ ಸುಲಭ ದೇವರ ದೇವ ನಾನಾ – ಪರಿ ಮಳ ತುಲಸಿಗೆ ವಲಿವನ ಕಲಿಕಾಲ ಸಲಹುವನ ಭವದ – ಸಂ ಕಲೆ ಪರಿಹರಿಸುವನ ||1|| ಲಿಂಗ ಸಂಗವನೀವನ ಜಗದಂತರಂಗ ಮೋಹನರಾಯನ ಮಂಗಳ ದೇವೇಶನ ಸಿರಿಪಾಂಡು ರಂಗ ನೆನಸಿಕೊಂಬನ||2|| ಜಗದ ಸದ್ಭರಿತ ನಾನಾ ವನದಿ ಬಿಗಿದ ಪರಾಕ್ರಮನಾ ನಗವನೆತ್ತಿದ ಧೀರನಾ ತನ್ನನು ಪೊಗಳಲು ಹಿಗ್ಗುವನಾ ||3|| ಯಾದÀವ ಶಿರೋರನ್ನನ ಕೊಳಲು ಊದುವ ಚೆನ್ನಿಗನಾ

ಕಂಡೆ ಕಮಲನಾಭನ ಕಣ್ಣಾರೆ Read More »