ಚಿಂತೆಯಾತಕೆ ನಿನಗೆ ಎಲೆ

ಚಿಂತೆಯಾತಕೆ ನಿನಗೆ ಎಲೆ ಪ್ರಿಯಳೆ | ಸಂತತ ತಿಳುಪುವೆನು ಭಕುತಿಯಿಂದಲಿ ಕೇಳು ಈ ಭೋಗ ನಮಗೆ ಯಾಕೆಂದು ನೀ ಕೇಳುವಿಯಾ | ಲಾಭವಲ್ಲದ ಇದು ನೋಡುವದಕೆ ಶ್ರೀ ಭೂರಮಣ ತಾನೆ ತಂದಿತ್ತ ವಿಚಿತ್ರ ವೈಭೋಗವಲ್ಲೆನೆಂದರೆ ಬಿಡದು ರಮಣೀ ||1|| ಹಿರಿಯರು ಈರ್ವಗೆ ಮಾಡಿದ ನಿಷ್ಠೆ ವಿ ಸ್ತರ ಪುಣ್ಯ ಬಂದು ಈ ಪರಿ ಸೌಖ್ಯವ ಹಿರಿದಾಗಿ ಕೊಟ್ಟು ನಮ್ಮನು ಪಾಲಿಸುವುದು ಬಲು ಮೊರೆಯಿಟ್ಟರೆ ಕೇಳು ಹರಿಯ ಮಹಿಮೆಗೆ ನಮೋ ||2|| ಕ್ಷೀರಸಾಗರದೊಳಗೆ ಓಲ್ಯಾಡುವವನ ವಿ ಚಾರಮಾಡದೆ ತಂದು […]

ಚಿಂತೆಯಾತಕೆ ನಿನಗೆ ಎಲೆ Read More »

ಚಿಂತೆ ಮಾಡುವುದ್ಯಾಕೆ ಮನವೆ ನೀನು

ಚಿಂತೆ ಮಾಡುವುದ್ಯಾಕೆ ಮನವೆ ನೀನು ಪಿಂತೆನ್ಯೆಸಗಿದ ಕರ್ಮ ಎಂದಿಗಾದರೂ ಬಿಡದು ಮಗÀನಾರು ನೀನಾರು ಪೇಳೊ ಸಿದ್ಧ ನಿಗಮಾರ್ಥಗಳಿಂದ ಸಜ್ಜನರ ಕೇಳೊ ತಗಿದು ಕಳಿ ಶೋಕದ ಗೋಳು ನಿತ್ಯ ನಗಧರನ ಭಕ್ತಿಯಲಿ ಸುಖದಲ್ಲಿ ಬಾಳೋ ||1|| ಸಾಹನಶಕ್ತಿಯನ್ನು ಮಾಡೊ ಬರಿದೆ ಸ್ನೇಹ ಮಾಡಿದರಿಂದ e್ಞÁನಕ್ಕೆ ಕೇಡು ತಾಹಾದು ಸ್ಥಿರವೆಂದು ನೋಡೊ ನೀನೂ ಮಾಹಪದವಿಗೆ ಬಂದೆ ಸುದೃಢವೆ ಬೇಡು||2|| ವಿರಕ್ತಿ ತೊಡು ತೊಡು ಬಿಡದೆ ಎಂದು ಸಾರಿದೆ ಪೇಳಿ ಧರ್ಮದಲಿನ್ನು ನುಡಿದೆ ವಾರವಾರಕೆ ಹೀಗೆ ಕೆಡದೇ ಶ್ರಿಂ ಗಾರ ಶ್ರೀ

ಚಿಂತೆ ಮಾಡುವುದ್ಯಾಕೆ ಮನವೆ ನೀನು Read More »

ಚರಣವ ತೋರೈ ಚಲುವರಸನೇ

ಚರಣವ ತೋರೈ ಚಲುವರಸನೇ ಚರಣವ ತೋರೈ ಸ್ಮರಣೆಮಾತ್ರದಲಿ ಮುಕುತಿಯ ಕೊಡುವ ಚರಣವ ತೋರೈ ರಮ್ಮೆಯ ಮನಕೆ ಬೆಡಗು ತೋರುವ ಚರಣ ಬೊಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ ಚಿಮ್ಮಿ ರಾವಣನ ಬಲು ದೂರಗೈದ ಚರಣವ ತೋರೈ ಘಮ್ಮನೆ ಮೊಸರು ಮೆದ್ದು ಓಡುವ ಚರಣ ತೋರೈ ||1|| ಗೋಕುಲ ಭೂಮಿಯ ಪಾವನ ಮಾಡಿದ ಚರಣವ ತೋರೈ ಲೋಕವನೆಲ್ಲಾ ಅಡಗಿಸಿಕೊಂಡಾ ಚರಣವ ತೋರೈ ಬೇಕೆಂದು ಕುಬುಜಿಯ ಮನೆಗೆ ಪೋದ ಚರಣವ ತೋರೈ ನೂಕಿ ಭವಾಬ್ಧಿ ಬತ್ತಿಸಿ ಬಿಡುವಾ ಚರಣವ ತೋರೈ

ಚರಣವ ತೋರೈ ಚಲುವರಸನೇ Read More »

ಗೌರೀವರನೆ ಎನ್ನ ಮೊರೆ ಕೇಳೊ ಚೆನ್ನ

ಗೌರೀವರನೆ ಎನ್ನ ಮೊರೆ ಕೇಳೊ ಚೆನ್ನ ಹೌರನೆ ಮತಿಯಿತ್ತು ಸಲಬೇಕೆನ್ನ ಗೌರವ ಗಾತುರ ತೌರ ಮನೆಯ ಹರ ಕೌರವಾಂತಕನೊಳು ಶೌರಿಯ ತೋರಿಸೋ ಮೃಗಲಾಂಛನ ಸನ್ಮೌಳಿ ಶಿವ ಮಹಾದೇವ ತ್ರಿಗುಣಾತುವ ಗಾತುರ ಭಕ್ತ ಸಂಜೀವ ನಿಗಮತುರಗ ಪಾವ ವನಮಾಲ ಪಾವಾ ಮೃಗಪಾಣಿ ಮೃತ್ಯುಂಜಯ ಸುಪ್ರಭಾವ ನಗೆಪಗೆ ಮಗನನು ಮೃಗನೆವನದಿ ಕಾ ಳಗಮಾಡಿ ಮೆಚ್ಚಿದೆ ಅಗಣಿತ ಗುಣಮಣಿ ಯುಗಯುಗದಲಿ ವಾಲಗ ನಿನ್ನವರೊಳು ಮಗಳೆ ಮಗುಳೆ ಕೊಡು ಗಗನೇಶ ಜನಕ ||1|| ಭವಹರ ತ್ರಿಯಂಬಕ ತ್ರಿಪುರಾರಾತಿ ಪವನ ಸಪುತ ಸಪ್ತ ವಂದಿತ

ಗೌರೀವರನೆ ಎನ್ನ ಮೊರೆ ಕೇಳೊ ಚೆನ್ನ Read More »

ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ

ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ ಶ್ರೀಪತಿ ಬಂದು ನಿಂದು ಏಕಾಂತವನ್ನ ಆಡುತಾನೆ | ಪಾಪ ಇಂಥಾದುಂಟೇನೆ ಕೇಳೆ ಲಕ್ಷ್ಮೀಕಾಂತನೀತನೆ || ಮಂಥನ ಮಾಡುವಲ್ಲಿ ಮಂಥಣಿಯ ಒಡೆದನು | ಕುಂತಳವ ಪಿಡಿದು ಎನ್ನ ಕುಳ್ಳಿರಿಸಿದಾ ಕಿರಿಬೆವರನೊರಸಿದಾ ||1|| ಚಿಕ್ಕಮಕ್ಕಳ ಕೂಡಿ ಚಕ್ಕನೆ ತಾ ಬಂದು ಬೇಗ | ಬೆಕ್ಕು ಕುನ್ನಿ ಮರ್ಕಟವ ತಂದನಮ್ಮಾ ಇದು ಚಂದವೇನಮ್ಮ || ಉಕ್ಕುತಿಹ ಪಾಲ್ಗೊಡಗಳ ಉರುಳಿಸಿದಾ ಸುಮ್ಮನೆ | ಚೊಕ್ಕವೇನೆ ಸುಮ್ಮನೆ ಮೊಸರ ಸುರಿದಾ ಮೀಸಲು ಮುರಿದಾ ||2|| ರಕ್ಕಸರ ಗಂಡ

ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ Read More »

ಗೋಪಾಲವಿಠ್ಠಲ ನಿನ್ನ ಪೂಜೆ

ಗೋಪಾಲವಿಠ್ಠಲ ನಿನ್ನ ಪೂಜೆ ಮಾಡುವೆನು ಕಾಪಾಡೊ ಈ ಮಾತನು ಅಪರಾ ಜನುಮದಲಿಡುವನೆ ಮ್ಯಾಲೆ ನೀ ಪ್ರೀತಿಯನು ಮಾಡಿ ನಿಜದಾಸರೊಳಿದು ಶ್ರುತಿಶಾಸ್ತ್ರ ಪುರಾಣ ಮಿಕ್ಕಾದ ಗ್ರಂಥಗಳ ಸತತ ಅಭ್ಯಾಸ ಮಾಡಿ ಮಿತಿಯಿಲ್ಲದಲೆ ತೀರ್ಥಯಾತ್ರೆ ನಾನಾ ದಾನ ವ್ರತಗಳನೆ ಬಿಡದೆ ಮಾಡಿ ಮತಿಯಲ್ಲಿ ನಿಮ್ಮಯ ಸ್ತೋತ್ರಗಳ ಗೈದುನ್ನ ತೋಪಾಸನಗಳನು ಮಾಡಿ ಹಿತ ಪುಣ್ಯದಿಂದವಗುಪದೇಶವನು ಮಾಡಿದೆನು ಚ್ಯುತಿದೂರ ನಿನ್ನ ಕೊಂಡಾಡಿದೆ ||1|| e್ಞÁನವೆ ಭಕುತರಿಗೆಯಿತ್ತು ಯಥಾರ್ಥದಲಿ ಕ್ಷೋಣಿಯೊಳಗೆ ನಡಿಸುತ ಮಾನವರೊಳಗಿದ್ದು ವಿಚಿತ್ರವನು ತೋರಿ ಮೇಣು ಧನ್ಯನ್ನ ಮಾಡು ಮಾಣದಲೆ ಈ ಪರಿ

ಗೋಪಾಲವಿಠ್ಠಲ ನಿನ್ನ ಪೂಜೆ Read More »

ಗೋದೆ ಅತಿ ಪುಣ್ಯ ಸಾಧೆ

ಗೋದೆ ಅತಿ ಪುಣ್ಯ ಸಾಧೆ ಮಾಧವನ ಚರಣಾರವಿಂದೆ ಪಾದೆ ಇದ್ದಲ್ಲಿ ನಿನ್ನ ಸ್ಮರಣೆಯನು ಮಾಡಲು ಪಾಪ ಎದ್ದೋಡಿ ತಿರುಗಿ ನೋಡದೆ ಹೋಹವು ಸದ್ಬಕ್ತಿಯಿಂದ ನಿನ್ನನು ನೋಡಬೇಕೆನುತ ಉದ್ಯುಕ್ತವಾಗೆ ಬ್ರಹ್ಮಹತ್ಯ ಪರಿಹಾರವೊ ||1|| ಬಂದು ಹರುಷದಲಿ ಕಣ್ಣಲಿ ಕಂಡು ಶಿರವಾಗಿ ವಂದನೆಯ ಮಾಡಿ ಸಾಷ್ಟಾಂಗೆರಗಲೂ ಹಿಂದಣ ಶತಕೋಟಿ ದುರಿತ ರಾಸಿಗಳೆಲ್ಲ ಒಂದು ಉಳಿಯದಂತೆ ಬೆಂದು ಹೋಹವು ||2|| ಅತಿವೇಗದಿಂದ ಬಂದು ಸ್ನಾನವನು ಮಾಡಲು ಮತಿವಂತರನ ಮಾಡಿ ದುರ್ಮಾರ್ಗ ಬಿಡಿಸಿ ರತಿಪತಿ ಜನಕ ಸಿರಿ ವಿಜಯವಿಠ್ಠಲನ್ನ ಸ್ತುತಿಸಿ ಗತಿ ಪಡೆವಂತೆ

ಗೋದೆ ಅತಿ ಪುಣ್ಯ ಸಾಧೆ Read More »

ಗೋತ್ರ ಪ್ರವರ ಉಚ್ಚಾರಣೆ

ಗೋತ್ರ ಪ್ರವರ ಉಚ್ಚಾರಣೆ ವಂದೇ ಕಾಣೊ ಧಾತ್ರಿಯೊಳಗೆ ತಂದೆ ಮಕ್ಕಳು ಮಾಡುವ ಕಾ | ಲತ್ರಯದ ಸಂಧ್ಯಾವೆಲ್ಲ ಎಂದಿಗೂ ಭೇದವಿಲ್ಲಾ ಪುತ್ರನಿಗೆ ಪಿತನು ಆನಾರಂಭದಿ ನಾಮ ಮಾತ್ರ ನುಡಿಸುವ ಬುದ್ಧಿ ಪೇಳಿ | ಚಿತ್ರವ ಗೋಡೆಯ ಮೇಲೆ ರಚಿಸಿರಲು ನೋಡಿ ಸ್ತೋತ್ರ ಮಾಡಿದರೆ ಯೇನಾಹದೋ||1|| ಚಿತ್ರಿಕ ಬಲು ವಿವೇಕ ಉಳ್ಳವನೆಂದು ಪಾತ್ರರ ಮುಂದೆ ಕೊಂಡಾಡಿದಂತೆ | ಧಾತ್ರಿಯೊಳಗೆ ನಮ್ಮ ಪುರಂದರದಾಸರ ಸ್ತೋತ್ರ ಮಾಡಿರಯ್ಯ ಸಚಲರಾಗೀ ||2|| ಗಾತ್ರ ನಿರ್ಮಲವಕ್ಕು ಯೆಂದೆಂದಿಗೆ ದಿವ್ಯ | ನೇತ್ರದಿಂದಲಿ ಹರಿಯ ಸರಿದರುಶನಾ

ಗೋತ್ರ ಪ್ರವರ ಉಚ್ಚಾರಣೆ Read More »

ಗುರುವೇ ನಿಮ್ಮ ಮಹಿಮೆ ಅರಿವೇ ವಿಚಿತ್ರವೆಂದು

ಗುರುವೇ ನಿಮ್ಮ ಮಹಿಮೆ ಅರಿವೇ ವಿಚಿತ್ರವೆಂದು ಕರವೇ ವಂದಿಸಿ-ನಮಸ್ಕರಿಸಿ ಮಾತನುಸುರುವೆ ಪರಮಾದರದಲಿ ಕರುಣ ಎನ್ನ ಮೇಲೆ ಹರಹಿ ದುರುಮತಿಯ ಪರಿಹರಿಸುವುದು ವಾತತನಯ ವಾರಿಜಾತ ಬಾಂಧವ ಸಂ ಭೂತ ಸಹಾಯ ರಘುನಾಥನ್ನ ಪ್ರಿಯದೂತ ಶಾತಕುಂಭ ಮಕುಟ ಶೀತಕರ ಕುಂಡಲ- ತೀತ ಸುಂದರ ಕಾಯ-ಜಾತ ಶರವರ್ಜಿತ ದಾತನಿಂದಲಿ ಬಹಳಾತುರದಲಿ ಗು- ರುತು ಪಡೆದು ನಿರ್ಭೀತನಾಗಿ ಪೋಗಿ ಮಾತೆಗೆರಗಿ ಖಳವ್ರಾತವ ಘಾತಿಸಿ ಪ್ರೀತಿಯಿಂದಲಿ ನಿಜರಾತಿಯ ತಣಿಸಿದ ||1|| ಪಾಂಡುತನಯ ಗಿರಿ ಖಂಡಿತ ಶತಶೃಂಗ ಮಂಡಲದೊಳಗೆ ಉದ್ದಂಡ ವಿಷವನುಂಡು ಕುಂಡಲಿಯಿಂದ ಕೈಗೊಂಡು ಮನ್ನಣೆಯ

ಗುರುವೇ ನಿಮ್ಮ ಮಹಿಮೆ ಅರಿವೇ ವಿಚಿತ್ರವೆಂದು Read More »

ಗುರುವಶಕೆ ನಮೋ ಎಂಬೆ

ಗುರುವಶಕೆ ನಮೋ ಎಂಬೆ ನಮ್ಮ ಮರುತ ಮತಾಬ್ದಿಗೆ ನಮೋ ಎಂಬೆ ಶ್ರೀ ಮದಾನಂದತೀರ್ಥ ಪದ್ಮನಾಭರಿಗೆ | ರಾಮದೇವರ ಕಂದ ನರಹರಿಗೆ || ಕಾಮಿತ ಫಲವೀವ ಮಾಧವಕ್ಷೋಭ್ಯರಿಗೆ | ಆ ಮಹಾಮಹಿಮ ಜಯತೀರ್ಥ ರಾಯರಿಗೆ ||1|| ವಿದ್ಯಾಧಿರಾಜರಿಗೆ ವಿಜಯ ಕವೀಂದ್ರ ಸು | ಸದ್ಗುಣ ವಾಗೀಶ ರಾಮಚಂದ್ರರಿಗೆ || ವಿದ್ಯಾನಿಧಿ ರಘುನಾಥ ರಘುವರ್ಯತೀರ್ಥರಿಗೆ | ಅದ್ವೈತಮತ ಖಂಡ ರಘೋತ್ತರಾಯರಿಗೆ ||2|| ವೇದವ್ಯಾಸ ವಿದ್ಯಾಧೀಶ ವೇದನಿಧಿ ಮುನಿಗೆ | ಸಾಧುಜನ ಪ್ರಿಯ ನಿತ್ಯ ವತ್ರರಿಗೆ || ಮೇದಿನಿಯಲಿ ಮೆರೆದ ಸತ್ಯನಿಧಿತೀರ್ಥರಿಗೆ

ಗುರುವಶಕೆ ನಮೋ ಎಂಬೆ Read More »

ಗುರು ವಾದಿರಾಜ ರವಿಕೋಟಿ

ಗುರು ವಾದಿರಾಜ ರವಿಕೋಟಿ ತೇಜಾ ಶರಣೆಂಬೆನಯ್ಯಾ ಸತತಗೇಯಾ ನಂಬಿದೆನು ನಿನ್ನ ದಯ ಸಂಪನ್ನ ಸಂಭ್ರಮದಲ್ಲೆನ್ನ ಪೊರೆಯೊ ಪ್ರಸನ್ನ ||1|| ವೇದಶಾಸ್ತ್ರ ಬಲ್ಲ ಭಳಿರೆ ಮಲ್ಲ ಭೇದ e್ಞÁನವೆ ಎಂಬೊ ನಿಜವೆಂಬ ಫಲ ||2|| ಮಾಯಿಗಳ ವದ್ದ ಮಮತಾ ಗೆದ್ದ ಗಾಯನ ಪ್ರಸಿದ್ಧ ಗುಣದಲಿ ಇದ್ದ ||3|| ನಾನಾ ಚಾರಿತ್ರ ತೋರಿದ ಮಿತ್ರ ಧೇನಿಸಿ ಸಿರಿ ಹರಿಯ ಗಾತ್ರದೊಳಿಟ್ಟ ಪಾತ್ರ||4|| ಸಂತತ ವಿರಕ್ತ ಜೀವನ ಮುಕ್ತಾ ಸಂತಾರಿ ಸುಶಕ್ತಾ ಹರಿನಾಮ ಭೋಕ್ತಾ ||5|| ಸ್ವಾದಿಪುರವಾಸ ಸಾಧುಗುಣ ಭಾಸಾ ಸದ್ಭಕುತ

ಗುರು ವಾದಿರಾಜ ರವಿಕೋಟಿ Read More »

ಗುರು ವಾದಿರಾಜ ಯತಿಯಾ

ಗುರು ವಾದಿರಾಜ ಯತಿಯಾ ನೆನಸುವದು ನಿರುತ ಕರುಣಿಪ ಮತಿಯಾ ಆರ್ತನಾ ಸರಿದಾರು ನವನ ವರ್ತಮಾನವನೆ ಕೇಳಿ ಕರ್ತೃತ್ವ ಪರಿಹರಿಸಿ ಸಂಸೃತಿಯ ಗರ್ತದಿಂದೆತ್ತಿ ನೋಳ್ಪ ||1|| ದುರಿತ ರಾಶಿಗಳ ಶೀಳಿ ಹೊರದೆಗೆದು ಮರುತ ಶಾಸ್ತ್ರವನೆ ಪೇಳಿ ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿ ಧರಿಯೊಳಗೆ ಮೆರೆದೆ ಧೀರ ||2|| ವಂದಿಸಿ ಸೌಂದರ್ಯಪುರಿಯ ವಾಸ ವರಪ್ರದ ನಂದ ಸತ್ಕೀರ್ತಿ ಭೂಪ ವಂದಿಸಿದವರಿಗೆ ಲೇಸಾಗಿ ಕೊಡುವ ಮು ಕುಂದನಂಘ್ರಿಯ ದಾಸ ||3|| ತೀರ್ಥಯಾತ್ರೆಯನೆ ಮಾಡಿ ಹರಿ ಭೇದಾರ್ಥದಿಂದಲೆ ಕೊಂಡಾಡಿ ಅರ್ಥಾಸೆಗಳ ಈಡಾಡಿ ಹಯಮೊಗನ

ಗುರು ವಾದಿರಾಜ ಯತಿಯಾ Read More »

ಗುರು ಪುರಂದರ ದಾಸರೇ

ಗುರು ಪುರಂದರ ದಾಸರೇ ನಿಮ್ಮ ಚರಣ ಸರಸಿಜ ನಂಬಿದೆ ಗುರುವ ರಹಿತರ ಮಾಡಿ ನಮ್ಮನು ಪೊರೆವ ಭಾರವು ನಿಮ್ಮದೆ ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ ಇಂದಿರೇಶನ ತಂದು ತೋರಿಸಿ ತಂದೆ ಮಾಡೆಲೊ ಸತ್ಕøಪೆ ||1|| ಪುರಂದರ ಗಡದೊಳಗೆ ನಿಂದು ನಿರುತ ದ್ರವ್ಯವÀ ಗಳಿಸಿದೆ ಪರಮ ಪುರುಷನು ವಿಪ್ರನಂದದಿ ಕರವ ನೀಡಿ ಯಾಚಿಸೆ ||2|| ಪರಮ ನಿರ್ಗುಣ ಮನವರಿತು ಹರಿಗೆ ಸೂರೆಯ ನೀಡುತ ಅರಿತು ಮನದೊಳು ಹರಿದು ಭವಗಳ ತರುಣಿ ಸಹಿತಾ ಹೊರಟನೆ ||3|| ಮಾರಜನಕನ

ಗುರು ಪುರಂದರ ದಾಸರೇ Read More »

ಗಿರಿರಾಜ ಚಿತ್ತ ಉದಾರ ಜೀಯಾ

ಗಿರಿರಾಜ ಚಿತ್ತ ಉದಾರ ಜೀಯಾ ನಾ ನಿನ್ನ ಪಾದ ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾನೆರೆ ನಂಬಿದವರನು ಎರವು ಮಾಡಲು ನಿನಗೊಳತೇನಯ್ಯಾ ಪಿಡಿ ಬೇಗನೆ ಕೈಯ್ಯ ಕರದಶಿಗಳರಸನೆ ಕಾಮಿತ ಫಲದನೆ ಕರಿರಾಜನ ಭೀಕರ ಹರ ವೆಂಕಟ ಆಪಾರ ಮಹಿಮಾ ಆಪದ್ಬಂಧೋ ಆಪನ್ನರ ಪಾಲಿಪ ವ್ಯಾಪಾ ನಿನಗಲ್ಲದೆ ಮತ್ತೊಂದು ಕಾಣೆನೊ ಜಗದೀ ಭೂಪಾನೆ ಭೂಮ್ನ ಗುಣಗಣಸಿಂಧೋ ಸ್ವಾಮಿಯೆ ಎನಗಿಂದು ಪಾಪದ ಪರ್ವತ ಲೇಪವಾಗದಂತೀ ಪರಿಪಾಲಿಸು ಶ್ರೀಪತಿ ಅಂಜನ ಗಿರಿರಾಜ ||1|| ಕಲಿಯುಗದೊಳಗೀ ಪರ್ವತಕೆಲ್ಲಿ ಸರಿಗಾಣೆನು ಯೆಂದು ನೆಲಸಿದೀ ನೀನೆ ಈ

ಗಿರಿರಾಜ ಚಿತ್ತ ಉದಾರ ಜೀಯಾ Read More »

ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ

ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ ಮೆರೆದು ಚತುರ ಬೀದಿ ತಿರುಗಿ ಬಪ್ಪುದು ನೋಡೆ ಸರಸಿಜಭವಾಗ್ರಜರುಳಿದವಾರು ವರ ಸಕಲ ಮನೋಭೀಷ್ಟ ಕೈಕೊಳುತಾ ನೆರೆದು ಸುತ್ತಲು ತಮ್ಮ ಭಕುತಿಯಲಿ ಸೂಸುತ್ತ ಹರುಷ ವಾರಿಧಿಯಾಳು ಮುಳಗಿದಟ್ಟಿಡಿಯಿಂದಾ ||1|| ಎತ್ತಿದ ಸತ್ತಿಗೆಯಿಂದ ಪೀಯೂಷ ಸುತ್ತಲುದರೆ ಬಿಂದುಗಳೊಂದು ಮುತ್ತಿನ ಸೂರ್ಯಪಾನಾ ಪತಾಕೆಗಳು ಬೀ ಸುತ್ತಲಿಪ್ಪದು ಚಾಮರ ಪಂಜುಗಳೆಸೆಯೆ ||2|| ದಂಡಿಗೆ ತಾಳ ಬೆತ್ತವ ಪಿಡಿದು ನಿಂದು ತಂಡ ತಂಡದಲಿಂದ ಮಹಿಮೆಯನ್ನು ಕೊಂಡಾಡುತ ಮನ ಉಬ್ಬಿ ಮಹೋತ್ಸವದಲ್ಲಿ ತೊಂಡರು ಹರಿದಾಡಿ ಹಾಡಿ ಪಾಡುತಲಿರೆ||3|| ಪವನ ಗರುಡ

ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ Read More »

ಗಜವದನ ಪಾಲಿಸೊಗಜವದನ

ಗಜವದನ ಪಾಲಿಸೊಗಜವದನ ಪಾಲಿಸೊ ಪತ್ರಿಜಗದೊಡೆಯ ಶ್ರೀ ಭುಜಗಭೂಷಣಗಜವದನ ಪಾಲಿಸೊ ಪಭಕ್ತಿಯೊಳು ಭಜಿಪೆನು ರಕ್ತಾಂಬರಧರಮುಕ್ತಿಪಥವ ತೋರೊ ಶಕ್ತಿ ಸ್ವರೂಪನೇ ||1|| ಏಸು ದಿನಕೆ ನಿನ್ನ ವಾಸವ ಪೊಗಳುವೆಲೇಸಪಾಲಿಸೊ ನಿತ್ಯವಾಸವನುತ||2|| ಪೊಡವಿಯೊಳಗೆ ನಿನ್ನ ಬಿಡುವರ್ಯಾರೊ ಎನ್ನಕಡುಹರುಷದಿ ಕಾಯೋ ವಿಜಯ ವಿಠ್ಠಲದಾಸ ||3||

ಗಜವದನ ಪಾಲಿಸೊಗಜವದನ Read More »

ಗಂಗೆ ಸನ್ಮಂಗಳಾಂಗೆ

ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ ತುಂಗೆ ಕಾರುಣ್ಯ ಪಾಂಗೆ ಅಸಿತಾಂಗೆ ತಿಂಗಳಾನನೆ ಪರಮೇಷ್ಟಿ ಪಾತ್ರಜಾತೆ ವರುಣನ್ನ ನಿಜದೈಯಿತೆ ಸುರ ಮುನಿಗಣವಿನುತೆ ವರದಾತೆ ಸರ್ವಖ್ಯಾತೆ ತರಣಿಸುತನ ಉದ್ಧರಿಸಿದೆ ಕರುಣದಿ ಧರೆಯೊಳು ನಿನಗೆ ಎ ದುರುಗಾಣೆ ಶರಣಾ ||1|| ಭಯ ಪಾಪ ತಾಪದೊರೆ ಜಯ ಜಯ ಗುಣಸಾರೇ ತ್ರಯಭುವನ ಉದ್ಧಾರೆ ಆಯುತಾರ್ಕವರ್ನ ನೀರೆ ನಯವ ಭಕುತಿ ಹೃ ದಯದೊಳಗಿತ್ತು ಸಹಾಯ ದಿನ ದಿನ ನಯನ ಶ್ರವಣವೇಣಿ||2|| ಘನ್ನ ವಾರಣಾಸಿ ಕಾಸಿವನ ಆನಂದ ನಿವಾಸಿ ಪ್ರಣತ ಜನರಘನಾಶ ಮಣಿಭೂಷೆ ಸೌಖ್ಯರಾಸಿ ಅನನುತ

ಗಂಗೆ ಸನ್ಮಂಗಳಾಂಗೆ Read More »

ಗಂಗೆ ಶೋಭನ ತರಂಗೆ

ಗಂಗೆ ಶೋಭನ ತರಂಗೆ ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ ಇಂದ್ರಸೇನನು ಸ್ವರ್ಗವ ಪರಿಹರಿಸಿ ಯಿರಲು ಉಪೇಂದ್ರ ಭಗವಂತ ಪಟುರೂಪ ಧರಿಸಿ ಚಂದ್ರಮಂಡಲ ಮೀರಿ ಬೆಳದಜಾಂಡವನೊಡಿಯೆ ಸಾಂದ್ರಗುಣದಿಂದ ಉದ್ಭವಿಸಿದೆ ಜನನಿ ||1|| ಕಮಲಜನು ಪಾತ್ರಿಯೊಳು ಧರಿಸಿ ಸಿರಿಹರಿಪಾದ ಕಮಲವನು ತೊಳಿಯಲಾವೇಗದಿಂದ ವಿಮಲಗತಿಯಲಿ ಬಂದು ಮಂದಾಕಿನಿ ಎನಿಸಿ ಸುಮನ ಸಾವನಿಯಲ್ಲಿ ಪರಿದೆ ಸ್ವರ್ಣನದಿಯೇ||2|| ಧ್ರುವಲೋಕಕಿಳಿದು ಅಮರಾಲಯವ ಸಾರಿದೆ ರವಿಯಂತೆ ಪೊಳೆವುತ ಅಜನಮಧ್ಯ ತವಕದಿಂದಲಿ ಧುಮುಕಿ ಚತುರಭಾಗವಾದೆ ಭವ ಪರಿಹರಿಸಿ ಭಾಗೀರಥಿ ಎನಿಸಿದೆ ||3|| ಶಿವನ ಮಸ್ತಕದಲ್ಲಿ ಶೋಭಿಸುವ ಮಹಾಮಹಿಮೆ ಭವದೊರೆ ಭಗೀರಥಗೆ

ಗಂಗೆ ಶೋಭನ ತರಂಗೆ Read More »

ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ

ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ ಈರೇಳು ಲೋಕನಾಯಿಕೆ ವಾರವಾರಕೆ ಆರಾಧಿಪುದಕೆ ಚಾರುಮತಿಯ ಕೊಡು ದೂರ ನೋಡದಲೆ ಅಪ ಶ್ರೀಧರಾ ದುರ್ಗಿ ಆಂಭ್ರಣಿ ನಿತ್ಯ ಕಲ್ಯಾಣಿ ವೇದವತಿಯೆ ರುಕ್ಮಿಣಿ ವೇದ ವೇದಾಂತದಭಿಮಾನಿ ವಾರಿಜ ಪಾಣಿ ಆದಿ ಮಧ್ಯಾಂತ ಗುಣಮಣಿ ಸಾಧು ಜನರ ಹೃನ್ಮಂದಿರ ವಾಸಿನಿ ಭೇದಗೊಳಿಪ ಕಾಮಕ್ರೋಧಗಳೋಡಿಸಿ ನೀ ದಯದಿಂದಲೆ ಮುಂದೆ ಗತಿಗೆ ಪಂಚ ಭೇದಮತಿಯ ಕೊಡು ಮಾಧವ ಪ್ರಿಯಳೆ ||1|| ಶ್ರೀ ಮಾಯಾ ಜಯಾ ಕೃತಿ ಶಾಂತಿದೇವಿ ಜಯಂತೆ ನಾಮದೊಳಪ್ಪ ಗುಣವಂತೆ ಕೋಮಲವಾದ ವೈಜಯಂತೆ ಧರಿಸಿದ ಶಾಂತೆ

ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ Read More »

ಕ್ಷಿತಿಪರನ ಸ್ಮರಿಸಿ ಜನರು

ಕ್ಷಿತಿಪರನ ಸ್ಮರಿಸಿ ಜನರು ಕ್ಷಿತಿಪರನ ಸ್ಮರಿಸಿ ನಿಮಗಪವಿಜಯವೆಂದಿಗೆ ಇಲ್ಲ-ಸು ಪಥವಾಗಿಪ್ಪದನುದಿನ ಸಂಚರಿಪ ಮಾರ್ಗತಪನಾಬ್ಬವಂಶದಲಿ-ದಿ ಪುತರಾದ ವರನೆ ಕೃಪವನಧಿ ಹರಿವೊಲಿವಾ ಬಲಿ ವಿಭೀಷಣ ರಂಧ್ರಗಣ ರಂತಿರೇವತ ಮಲಯಧ್ವಜ ರಾಮಭೋಜಾ ಯದು ಬಲಗಿರಿಕ ಗಾಂಧಾರ ಗಯಸೇತು ಈಶ್ವರ ಕುಲಿಶಧ್ವಜ ಸಗರ ವೀರಾ ನಳ ಹರಿಶ್ಚಂದ್ರ ಚಂದ್ರಕಾಂತ ಆಕಾಶ ಸುರಭ ಶಶಿಬಿಂದು ಮಾಂಧಾತ ಧ್ರುವ ಶಿವಪ್ರಿಯ ಛಲಭರತ ಆಷ್ಮಾಕ ವಾಲಿ ಲೋಹಿತನೃಗಸು ಬಲ ಕುಕ್ಷಿ ಯದು ಭೂಷಣ||1|| ವಸುಪ್ರದ ಸುಖವೀರ್ಯ ಯದು ಕುರು ಋತುಪರ್ನ ವಸುಧರ್ಮ ಖಟ್ಟಾಂಗ ಧೃತರಾಷ್ಟ್ರ ಸೌವರ್ನ ಶಿಶುಪಾಲ

ಕ್ಷಿತಿಪರನ ಸ್ಮರಿಸಿ ಜನರು Read More »

ಕ್ಲೇಶಮಾಡಲಿ ಬೇಡ ಮನವೆ ನೀನೂ

ಕ್ಲೇಶಮಾಡಲಿ ಬೇಡ ಮನವೆ ನೀನೂ ದೇಶದೊಳಗೆ ಕೇಳು ಜ್ಞಾನಿಗಳ ಸಮ್ಮತಾ ವಸಿಷ್ಠ ಮಹಾಋಷಿಗೆ ನೂರುಮಂದಿ ಸುತರು ಅಸಮಸಾಹಸರು ಬಲು ಶೀಲಜ್ಞರು ಕುಶಲದಲಿ ಇರುತಿದ್ದು ಕಾಲ ಮೃತ್ಯುವಿನ ಕೈ ವಶವಾಗಿ ಹೋದರದು ನೋಡು ದು:ಖವ ಬಿಡು ||1|| ಕೃಷ್ಣ ಸೋದರಮಾವ ಮತ್ತೆ ಭೀಮಸೇನ ಜೇಷ್ಠಪಿತ, ಪಾರ್ಥನು ಪಡೆದ ಶೂರ ಇಷ್ಟು ಜನ ಇರಲಾಗಿ ಅಭಿಮನ್ಯು ದೇಹವನು ಬಿಟ್ಟು ಪೋಗಲು ಒಬ್ಬರಾದರು ಉಳುಹಿದರೆ||2|| ಇಂಥವರಿಗೀತ್ಯರನು ನಿನಗಾವ ಸ್ವಾತಂತ್ರ್ಯ ಸಂತೋಷವೆ ಬಡು ಧೈರ್ಯದಲ್ಲಿ ಕಂತು ಜನಕ ನಮ್ಮ ವಿಜಯವಿಟ್ಠಲನಂಘ್ರಿ ಅಂತರಂಗದಲಿಡು ಮುಂದಿನಗತಿ

ಕ್ಲೇಶಮಾಡಲಿ ಬೇಡ ಮನವೆ ನೀನೂ Read More »

ಕೋಪವೆ ತಾಪ ಬ್ರಹ್ಮೇತಿ

ಕೋಪವೆ ತಾಪ ಬ್ರಹ್ಮೇತಿ ಶ್ರೀ ಪುರುಷ ಬಾಲ ಅಣುರೇಣುತ್ರಿಣಗಳಿಗೆಲ್ಲ ವಿಷ್ಣಪದೆ ಯಮುನೆ ಸರಸ್ವತಿ ಸಿಂಧು ಕಾವೇರಿ ಕೃಷ್ಣವೇಣಿ ಗೋದೆ ತುಂಗೆ ನರ್ಮದಾ ಇಷ್ಟು ಮಹಾನದಿಯಲ್ಲಿ ಮುಣಗಿ ಮಿಂದರೇನು ಕಾಷ್ಟಕಭ್ಯಾಂಗವನು ಮಾಡಿ ನೀರೆರದಂತೆ||1|| ಭಕುತಿಯಲಿ ನಡೆದು ಭವಿಷೊತ್ತರ ಪೇಳಿದರೇನೊ ವಿಕಳಮತಿಯಲಿಟ್ಟು ವರನಾದರೇನು ಕಕುಲಾತಿ ತೊರೆದು ನಿಷ್ಕಳಂಕನಾದರೆ ಏನು ಶುಕಪಕ್ಷಿ ಅನುಗಾಲ ಓದಿ ತಿಳಿದಂತೆ ||2|| e್ಞÁನದಲ್ಲಿ ಪರರಿಗೆ ನ್ಯಾಯ ಪೇಳಿದರೇನು ಹಾನಿ ನೆನೆಸಿ ಕೀರ್ತಿಯ ಪಡೆದರೇನು ಧ್ಯಾನದಲಿ ಮಾನಸ ಪೂಜೆ ಮಾಡಿದರೇನು ಶ್ವಾನದಲಿ ಬೂದಿಯೊಳಗೆ ವರಗಿ ಇದ್ದಂತೆ ||3||

ಕೋಪವೆ ತಾಪ ಬ್ರಹ್ಮೇತಿ Read More »

ಕೊಲ್ಹಾಪುರ ನಿಲಯ ಸರಸಿಜಾಲಯ ಹರಿ

ಕೊಲ್ಹಾಪುರ ನಿಲಯ ಸರಸಿಜಾಲಯ ಹರಿ ವಲ್ಲಭೆ ಬಲು ಸುಲಭೆ ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆ ಲೋಕ ಜನನಿ ಕಾಮಿನಿಸಾಕಾರ ಗುಣವಂತೆ ಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ ||1|| ಕೋಲ ಮುನಿಗೊಲಿದಮಲ ಮೃಗನಾಭಿ ಫಾಲೆ ಸಜ್ಜನರ ಪಾಲೆಬಾಲೆ ಜಾತರಹಿತೆ ಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ||2|| ಶಿವದುರ್ಗೆ ನೀನೆಂದು ಶ್ರವಣಮಾಡಲು ಮನುಜ ರವರವ ನರಕದಲ್ಲಿ ಬವಣೆಪಟ್ಟ ಮೇಲೆ ಸವಿಯದಂತೆ ತಮಸುನಿವಹದೊಳಗೆ ಇಪ್ಪನು ||3|| ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆ ಸೀಮೆಯೊಳಗೆ ನಿನ್ನಯ ನಾಮಕೊಂಡಾಡಲು ತಾಮಸಗಳ ಕಳೆದು ನಿಷ್ಕಾಮ ಫಲ

ಕೊಲ್ಹಾಪುರ ನಿಲಯ ಸರಸಿಜಾಲಯ ಹರಿ Read More »

ಕೊಡುವವನು ನೀನು

ಕೊಡುವವನು ನೀನು ಕೊಂಬುವನು ನಾನು ಬಡಮನದ ಮನುಜನ ಬೇಡಿ ಫಲವೇನು ಹದಿನಾರು ಹಲ್ಲುಗಳ ಬಾಯ್ದೆರದು ಬೇಡಿದರೆ ಇದು ಸಮಯವಲ್ಲೆಂದು ಪೇಳಿ ತಾನು ಮದನ ಕೇಳಿಗೆ ನೂರನೊಂದಾಗಿ ನೋಡುವನು ಮದಡ ಮಾನವನೇನು ಕೊಡಬಲ್ಲ ಹರಿಯೆ ||1|| ಗತಿಯಲ್ಲವೆಂತೆಂದು ನಾನಾ ಪ್ರಕಾರದಲಿ ಮತಿಗೆಟ್ಟು ಪೊಗಳಿದರೆ ಅವನು ತನ್ನ ಸತಿಸುತರ ಕೇಳಬೇಕೆಂದು ಮೊಗ ತಿರುಹುವ ಅತಿ ದುರುಳ ಮತ್ತೇನು ಕೊಡಬಲ್ಲ ಹರಿಯೆ ||2|| ಹೀನ ವೃತ್ತಿಯ ಜನರಿಗಾಸೆಯನು ಬಡುವದು ಗಾಣದೆತ್ತು ತಿರುಗಿ ಬಳಲಿದಂತೆ ಭಾನು ಕೋಟಿ ತೇಜ ವಿಜಯವಿಠ್ಠಲರೇಯ ನೀನಲ್ಲದನ್ಯತ್ರ ಕೊಡುಕೊಂಬುರಂಟೆ

ಕೊಡುವವನು ನೀನು Read More »

ಕೊಂಡಾಡಲಳವೆ ಕಪಿಕುಲೋತ್ತಮ

ಕೊಂಡಾಡಲಳವೆ ಕಪಿಕುಲೋತ್ತಮ ನಿನ್ನ ಚಂದ್ರಕೋಟಿ ತೇಜ ಚಕ್ರಧರನ ಭೃತ್ಯಾ ತ್ರಿದಶ ದೈತ್ಯರು ಕೂಡಿ ತೀವ್ರದಿಂದಲಿ ತಾವು ವೊದಗಿ ಮಂದರ ಶೈಲ ತವಕದಿ ತಂದಾಗ ಉದಧಿಯೊಳಿಟ್ಟು ಸರ್ಪವನೆ ಸುತ್ತಿದರು ಪಿಡಿದು ಮುದದಿಂದ ಕಟಿಯಲು ಮುನಿದು ಮಹರೋಷದಿ ಉದಧಿಯೊಳು ವಿಷ ಹೊರಡಲು ಅದು ನೋಡಿ ಮದನಾರಿ ಕಂಗೆಡಲು ಅಂಜದೆ ನೀನು ಉದರದೊಳು ತಾಳಿದಿ ಸುರರು ಸುಖಬಡಲು ||1|| ವಾತನ ಸುತನಾಗಿ ವಾಲಿಯ ತಮ್ಮನ ಕೂಡಿ ಭೂತಳಾಧಿಪ ರಾಮಚಂದ್ರನ ಪದವಾರಿ ಜಾತಕ್ಕೊಂದನೆ ಮಾಡಿ ವೃತ್ತಾಂತವನು ಪೇಳಿ ಆತುರದಲಿ ಪುರಹೂತನಂದನ ನಿ ರ್ಭೀತನ

ಕೊಂಡಾಡಲಳವೆ ಕಪಿಕುಲೋತ್ತಮ Read More »