ತಿಳಿದು ವಿಚಾರಿಸು ವಿಶ್ವದಲ್ಲಿ

ತಿಳಿದು ವಿಚಾರಿಸು ವಿಶ್ವದಲ್ಲಿ ಹಲವು ಜೀವಿಗಳೊಂದೆ ಪ್ರಕಾರ ಚರಿಸುವದು ಇರವು ನೊಣ ಪೋದರೆ ಏನಾದರೂ ಕ್ಲೇಶ ಬರುವುದೇ ಪ್ರತ್ಯಕ್ಷ ನೋಡಿದರು ಭರದಿಂದ ಆಲಿಸು ದೇಹ ಮಾತುರ ಬ್ಯಾರೆ ಇರುವದಲ್ಲದೆ ಒಳಗೆ ಚೇತನಾಡುವದೊಂದೆ ||1|| ಕೂಡಿಕೊಂಡವು ತಮ್ಮತಮ್ಮೊಳಗೆ ಭೂತಗಳು ಆಡಲೇನದು ಪೂರ್ವದ ನಿರ್ಮಾಣ ನಾಡೊಳಾಗಿದ್ದನಿತೆ ಸಮ್ಮಂಧವಲ್ಲದೆ ಬೀಡು ತೊರದಾಮ್ಯಲೆ ಬಿಂಕವೆತ್ತಣದೊ ||2|| ಹರಿಮಾಯದಿಂದಲಿ ನಾನು ನನ್ನದು ಎಂಬ ಗರುವಿಕೆ ಪುಟ್ಟುವದು ಮೋಹ ಪೆಚ್ಚಿ ನಿರಯದೊಳಿಳಿಯದೆ ವಿಜಯವಿಠ್ಠಲನ ಸ್ಮರಣೆಯಲಿ ಕುಣಿದಾಡು ಎಲ್ಲ ಸಮನ ನೋಡು||3||

ತಿಳಿದು ವಿಚಾರಿಸು ವಿಶ್ವದಲ್ಲಿ Read More »

ತಿರುದುಂಬುವ ನೀನು ತಿರುಮಲೇಶಾ

ತಿರುದುಂಬುವ ನೀನು ತಿರುಮಲೇಶಾ ಮರುಗಲ್ಯಾತಕೆ ಇನ್ನು ಮನಸಿನೊಳಗೆ ಪ್ರತಿದಿನವು ಬಲಿರಾಯ ಬಲು ದಾನವನು ಮಾಡುತಿರಲಾಗಿ ಇಳಿಯ ಸುರÀವೇಷವನು ಧರಿಸಿ ಪೋಗಿ ಹಲುಬಿ ಬಾಯಿದೆರದು ತ್ರಿಪಾದ ತಿರಕೆ ಕೊಂಡು ನಿಳಿಯ ಬಾಗಿಲ ಕಾಯ್ದೊ ನಿಗಮ ಕುಲದಾತಾರಾ ||1|| ಗೋಪಳ್ಳಿಯಲಿ ಜನಿಸಿ ಗೋವುಗಳ ಕಾವುತ್ತ ಗೋಪಾಲತತಿ ವಡನೆ ವಡನಾಡುತ ತಾಪಸರು ಯಜ್ಞ ಕರ್ಮಾದಿಗಳು ಮಾಡುತಿರೆ ಶ್ರೀಪತಿ ಅನ್ನ ತಿರಿದುಂಡು ಕ್ಷುದಿಯನ್ನ ಕಳೆದೆ ||2|| ಅಂದು ಈ ಪರಿಯ ಯಾಚಕ ವೃತ್ತಿಯನು ಮಾಡಿ ಇಂದೆನ್ನ ಹೃತ್ಕಮಲದೊಳಗೆ ಬಂದೂ ನಿಂದು ಮನೆಮನೆ ತಿರದುಂಬುವ

ತಿರುದುಂಬುವ ನೀನು ತಿರುಮಲೇಶಾ Read More »

ತಿಮ್ಮ ನಿನ್ನಯ ಪಾದ ಒಮ್ಮಿಗಾದರು ನೆನೆದು

ತಿಮ್ಮ ನಿನ್ನಯ ಪಾದ ಒಮ್ಮಿಗಾದರು ನೆನೆದು ಕರ್ಮ ಪೋಪುವುದು ಎಂತೊ ಇಮ್ಮನಾವಾಗುವುದು ವ್ಯಾಮೋಹ ಸಂಗತಿಗೆ ಕಮ್ಮಗೋಲನ ಬದುಕೀಲಿ ರಂಗಾ ಹಾಳ ಹರಟಿಗೆ ಮನಾ ಹೇಳಿಸಿಕೊಳದೆವು ಬ್ಬಾಳುತನದಿಂದ ಕುಳಿತು ಕೇಳುವುದು ಕಿವಿಗೊಟ್ಟು ಅವರ ಕಿಂಕರನಾಗಿ ಹೇಳು ಇನ್ನೊಮ್ಮೆ ಎನುತಾ ಲಾಲಿಸಿ ಗತಿ ತಪ್ಪದಂತೆ ಜೋಡಿಸಿ ಮಾತು ಪೇಳುವೆನು ಕೈತಿರುವುತಾ ಶ್ರೀಲೋಲ ನಿನ್ನ ಕೀರ್ತನೆಗೆಯಿಲ್ಲದೊಂದು ಕೀಳು ವಾರ್ತೆಯ ತಾಹದೊ ಮನಸು||1|| ಧರೆಯನಾಳುವವನ ಸಮ್ಮುಖದಲ್ಲಿ ನಿಂದು ಕರವೆರಡು ನೊಸಲಿಗೆ ಚಾಚಿ ಕರುಣಿಸುವದೆಂದು ಮೊಗವೆತ್ತಿ ಪೊಗಳುವೆ ನಿನಗೆ ಸರಿ ಮಿಗಿಲು ಯಿಲ್ಲವೆಂದೂ ಮರಿಯದಲೆ

ತಿಮ್ಮ ನಿನ್ನಯ ಪಾದ ಒಮ್ಮಿಗಾದರು ನೆನೆದು Read More »

ತಾರೋ ವಸನ-ಎಷ್ಟೋ ವಿನೋದ

ತಾರೋ ವಸನ-ಎಷ್ಟೋ ವಿನೋದ ಕಡಹದ ಮರನೇರಿ ಕಾಡುವುದುಚಿತವೆ ತಡವಾಗುವುದೈ ಒಡೆಯರುಳ್ಳವರಿಗೆ ||1|| ಚಿತ್ತಜನೈಯನೆ ಮತ್ತಗಮನೆಯರ ಬತ್ತಲೆ ನಿಲಿಸುವುದುತ್ತಮವಲ್ಲವೊ||2|| ಪರಮಪುರುಷ ನಿನ್ನವರು ಎಂದಿಗು ನಾವುಕರುಣಿಸು ಎಮ್ಮ ಸಿರಿ ವಿಜಯವಿಠ್ಠಲ ||3||

ತಾರೋ ವಸನ-ಎಷ್ಟೋ ವಿನೋದ Read More »

ತರತಮದಿ ಶರಣು ಮಾಡುವೆ ನಿಮಗೆ

ತರತಮದಿ ಶರಣು ಮಾಡುವೆ ನಿಮಗೆ ಕರಣಶುದ್ಧಿಯಲ್ಲಿ ಕರುಣ ಮಾಡಿ ಎನ್ನ ಪರಿಪಾಲಿಸಬೇಕು ನಿರುತ ಬಿಡದೆ ಮನ ಸಿರಿಹರಿ ಚರಣಕ್ಕೆ ಎರಗುವಂತೆ ವರಭಕುತಿಯಲ್ಲಿ ಸಿರಿ ಪರಮೇಷ್ಠಿ ವಾಯು ಸರಸ್ವತಿ ಭಾರತೀ ಗರುಡ ಉರಗ ಈಶ ಹರಿ ಸತಿಯರು ಮೂ ರೆರಡು ಜನರು ಆ ತರುವಾಯ ಸೌಪರ್ಣಿ ವರವಾರುಣಿ ಗಿರಿಜೆ ಸಿರಿ ಮತ್ತೆ ಇಂದ್ರ ಕಾಮ ಮರುತಾಹಂತಾರನ ಸ್ಮರಿಸುತಲೆ ಮನು ಗುರು ದಕ್ಷನೆ ಶಚಿ ಮರುತ ಪ್ರವಾಹ ಮೂ ವರು ಸನಕಾದ್ಯರು ದುರಿತಶಾಸನ ಶಶಿ ತರಣಿ ಶತರೂಪ ವರುಣ ನಾರದರ

ತರತಮದಿ ಶರಣು ಮಾಡುವೆ ನಿಮಗೆ Read More »

ತಕ್ಕೋ ಗಂಟ ನಿನ್ನಾಟವ ತಿಳಿಸುವೆ

ತಕ್ಕೋ ಗಂಟ ನಿನ್ನಾಟವ ತಿಳಿಸುವೆ ಸಖಿಯರ ಕೂಡಿದಂತೆಲ್ಲೊ ಠಕ್ಕುಬಿಕ್ಕಿನ ಮಾತುಗಳಾಡಲು ಯುಕುತಿಯ ನಾ ಕೇಳೆನೆಲವೊ ಮದಗಜಮನೇರ ಹೆದರಿಸಿ ಬೆದರಿಸಿ ಅಧರವ ಸವಿದಂತಲ್ಲೊ ಸುದತಿಯರೆಲ್ಲರ ಅಂಜಿಸಿ ವಂಚಿಸಿ ದಧಿ ಘೃತ ಸವಿದಂತಲ್ಲೋ ||1|| ಕ್ಷೋಣಿಯೊಳೆಲ್ಲಿಗೆ ಹೋದರು ಎನ್ನಯ ವೀಣೆಯ ಹೊರಬೇಕಲ್ಲೊ ಗಾಣದೆತ್ತಿನ ಪರಿಯಲಿ ತಿರುಗುತ ತ್ರಾಣ ತಪ್ಪಲು ಬಿಡೆನಲ್ಲೊ ||2|| ಸಣ್ಣಾಮಾತುಗಳಾಡಲು ಕೇಳುತ ಚಿಣ್ಣನಂತಿರಬೇಕಲ್ಲೊ ಘನ್ನ ಮಹಿಮ ಶ್ರೀ ವಿಜಯವಿಠ್ಠಲ ಇನ್ನೆಂದಿಗೂ ಬಿಡೆನಲ್ಲೊ ||3||

ತಕ್ಕೋ ಗಂಟ ನಿನ್ನಾಟವ ತಿಳಿಸುವೆ Read More »

ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ

ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ | ಓಡಿ ಓಡಿ ಬಂದು ತಲಿಗೆ ನೀ ಡೀ ಡೀ ಡೀ ಎಂದು ಮರಕತ ನವರತ್ನ ವಜ್ರ | ಹರಳು ತೆತ್ತಿಸಿದ ದ್ಯುಮಣಿ || ಕಿರಣ ಮುಕುಟ ಧರಿಸಿದ ಶಿರದಲಿ | ಸರಿ ಸರಿ ಸರಿ ಸರಿ ಹಾಯಿದು ||1|| ಚಂದ್ರಶೇಖರ ಹಂಸವಾಹನ| ಇಂದ್ರಾದ್ಯರಾಕಾಶದಲಿ ಧುಂ ಧುಂ || ಧುಂ ಧುಂ ದುಂದುಭಿ ನುಡಿಸೆ | ಬಂದೆ ಇಕ್ಕೋ ಬಂದೆ ಬಂದೆನುತ ||2|| ಪಿಂತಿರುಗಿ ಪೋಗಿ ನೀನು

ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ Read More »

ಡಂಗುರ ಹೊಡಿಸಿದ ಯಮನು

ಡಂಗುರ ಹೊಡಿಸಿದ ಯಮನು | ಪಾಪಿ ಹೆಂಗೆಳೆಯವರ ತಂದು ಭಂಗಪಡೆಸಿದರೆಂದು ಮೃತಿಕೆ ಶೌಚÀದ ಗಂಧ ಪೋಗುವಂತೆ | ನಿತ್ಯದಲ್ಲಿ ಸ್ನಾನ ಮಾಡದೆ ಸುಮ್ಮನೆ || ತೊತ್ತು ಒಡತಿಯಾಗಿ ಮುಖವ ತೊಳಿಯದಿಪ್ಪ | ಕತ್ತೆ ಹೆಂಗಸರನು ಕಡಿದು ಕೊಲ್ಲಿರೊ ಎಂದು ||1|| ಪತಿಗೆರಗದೆ ಗೃಹಕೃತ್ಯ ಮಾಡುವಳ | ಮತಿವಿರದೆ ಚಂಚಲದಿಪ್ಪಳ || ವ್ರತಗೇಡಿ ಅನ್ಯರ ಮಾತಿಗೆ ಸೋಲುವ | ಪತಿತಳ ಎಳೆತಂದು ಹತವ ಮಾಡಿರೆಂದು ||2|| ಒಬ್ಬರಿಬ್ಬರ ಕೂಡ ಸಖತನ ಮಾಡುವಳ ಒಬ್ಬೊಬ್ಬರಿಗೆ ಮೈಯಿತ್ತು ಪಾಡುವಳೆ || ಅಬ್ಬರದ

ಡಂಗುರ ಹೊಡಿಸಿದ ಯಮನು Read More »

ಟೀಕಾಚಾರ್ಯರ ಪಾದ

ಟೀಕಾಚಾರ್ಯರ ಪಾದ | ಸೋಕಿದ ಕೊನೆಧೂಳಿ ತಾಕಿದ ಮನುಜರಿಗೆ ಕಾಕುಬುದ್ಧಿಗಳೆಲ್ಲ ಪರಿಹಾರವಾಗುವವೊ | ಬೇಕಾದ ಪದವಿಯ ಕೊಡುವನು ಶ್ರೀ ಹರಿ ಮಧ್ವಮತವೆಂಬ ಅಬ್ಧಿಯೊಳಗೆ ಪೂರ್ಣ | ಉದ್ಭವಿಸಿದ ಚಂದ್ರನಾ ಗುಣಪೂರ್ಣನಾ || ಅದ್ವೈತಮತÀ ತಮನಿಧಿ ನಿಶಿಕುಠಾರ | ವಿದ್ಯಾರಣ್ಯವ ಗರುವಕೆ ಪರಿಹಾರ ||1|| ತತ್ವ ವಾರಿಧಿಗಳ ತತ್ವಸುಧೆಯ ಭಾಷ್ಯ | ವಿಸ್ತರಿಸಿ ಇರಲು ಬೇಗದಲಿ || ಚಿತ್ರವಲ್ಲಭನÀ ಸೇವೆಯ ಮಾಡಿ ಟೀಕಂಗಳ || ಸುತ್ತೇಳು ಲೋಕಕ್ಕೆ ಪ್ರಕಟಿಸಿ ಮೆರೆವರ ||2|| ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ |

ಟೀಕಾಚಾರ್ಯರ ಪಾದ Read More »

ಜೋಕುಮಾರನೆಂದು ಪಾಡಿದಳೊ

ಜೋಕುಮಾರನೆಂದು ಪಾಡಿದಳೊ ಲೋಕಮೋಹಿಸುವಂಥ ಹೋಲಿಕೆಯವನ ಗೋಪಿ ಬಾಯಲ್ಲಿ ಬೆಣ್ಣೆ ಬಗೆಬಗೆ ವಯ್ಯಾರ ಕಾಯ ನೋಡಿದರದು ಬಲು ಕಪ್ಪು ಮಾಯದ ವೇಷದವ ಮನೆ ಮನೆ ತಿರುಗುವ ಸ್ತ್ರೀಯರ ಕಾಣುತ ಭಂಡಾಟನಾಡುವ ||1|| ವಾವಿಗಳಿಲ್ಲದವಳ ತಾ ಮಾರಿ ಗಂಡು ಆವಾಗ ಬಂದರಿವ ಇದೆ ತೆರನು ದೇವದಾನವರೊಳಗಿವನೆ ಬಲು ಚಲುವ ಕೇವಲ ನಾಚಿಕೆ ತೊರೆದ ಲಂಡನ್ನ ||2|| ಅಷ್ಟಮಿ ದಿನದಲ್ಲಿ ಒಬ್ಬರ ವಶನಾಗಿ ಬುಟ್ಟಿಯೊಳಗೆಯಿದ್ದು ಹೊರಗೆ ಪೋಪಾ ಪಟ್ಟ ಗುಡುಪಾ ನಮ್ಮ ವಿಜಯವಿಠ್ಠಲರೇಯಾಸೊಟ್ಟವಳನ ಬಿಡದಿಪ್ಪಕುವಲ್ಲಭಾ||3||

ಜೋಕುಮಾರನೆಂದು ಪಾಡಿದಳೊ Read More »

ಜೋ ಜೋ ಹರಿ ಜಾಹ್ನವಿ ಜನಕ

ಜೋ ಜೋ ಹರಿ ಜಾಹ್ನವಿ ಜನಕ ಮೂಜಗತ್ಪತಿ ಸುರಕುಲ ಸನಕಾ ದೀಜನ ಮನೋಹರ ಮಾಣಿಕ್ಯ ಕನಕಾ ವೈಜಯಂತಿ ಹಾರ ಪಾವನ್ನ ಪದಕ ಕೇಶಿಭಂಜನ ವ್ಯೋಮಕೇಶ ವಂದಿತ ಪಾದ ಕ್ಲೇಶನಾಶನ ವಾತೇಶನ ಜನಕ ಕೇಶರಿರುಹ ಮುಂಜಿಕೇಶನೆ ಕುಂಕುಮ ಕೇಸರಿಭೂಷಣ ಕೇಶವ ಶೌರಿ ||1|| ವಾರುಣಿ ಪತಿನುತ ವಾರುಣನ ಭಯ ನಿ ವಾರಣಾ ವಾರಣಾಶಿ ಪುರದರಸೆ ವಾರಣ ನಗರಿಯ ವಾರನಹತಪಲ್ಲ ವಾರುಣಿ ಪಾಣಿಯೆ ನಾರಾಯಣನೆ ಜೋ ಜೋ ||2|| ಮಾದೇವಿ ರಮಣ ಭೂಮಿದೇವಿ ಉದ್ಧಾರ ಮಾಧುರ್ಯ ವಚನ ಉಮಾದೇವಿ ವಿನುತಾ

ಜೋ ಜೋ ಹರಿ ಜಾಹ್ನವಿ ಜನಕ Read More »

ಜಾನಕಿರಾಮ ಜಾನಕಿರಾಮ

ಜಾನಕಿರಾಮ ಜಾನಕಿರಾಮ ಜಾನಕಿರಾಮ ಜಾನಕಿರಾಮ ಭಕ್ತರ ನೋಡು ಗೀತವ ಪಾಡು ನೃತ್ಯವನಾಡೊ ವರಗಳ ನೀಡೋ ||1|| ವಾರಿಧಿ ಬಂಧ ವಸುದೇವ ಕಂದ ಸ್ವಾರಸ್ಯ ತಂದ ಸತ್ಕರುಣದಿಂದ ||2|| ಶಿರಿವಾಸ ಸಿರಿದೇವಿ ತೋಷ ಶಿರಿ ವಿಜಯವಿಠ್ಠಲ ಉದ್ಧವ ಘೋಷ||3||

ಜಾನಕಿರಾಮ ಜಾನಕಿರಾಮ Read More »

ಜಾಣ ನಿನಗೆ ಸರಿಗಾಣೆ

ಜಾಣ ನಿನಗೆ ಸರಿಗಾಣೆ ಪ್ರಮಾಣ ಕೊಟ್ಟ ತರುವಾಯ ತಪ್ಪುವ ನೀನಲ್ಲ ಅಸುರ ತಾರಕನು ಸುಮನಸರ ಬಳಲಿಸುತಿರಲು ಬಿಸಿಗಣ್ಣವನ ತಪಸು ಹಾನಿಮಾಡಿ ಶಶಿವದನೆ ಪಾರ್ವತಿಯಲ್ಲಿ ಗರ್ಭವನಿಡಿಸಿ ಹಸುಳೆ ಕೈಯಿಂದ ರಾಕ್ಷಸನ ಕೊಲ್ಲಿಸಿದೆ ||1|| ಶಂಬರ ದೈತ್ಯಜನ ವರದಿಂದ ಅನಿಮಿಷ-ಕ ದಂಬವನು ಸೋಲಿಸಿ ಮೆರೆವುತಿರಲು ಅಂಬುತನಯುದರದಲ್ಲಿ ಹೊಕ್ಕು ಬೆಳೆದದು ಬಂಡು ಅಂಬರರು ನಲಿಯೆ ವನಶಿರವ ಚಂಡಾಡಿದಾ ||2|| ಮನಮುಟ್ಟಿ ನಿನ್ನನು ವಂದನೆಮಾಡಿ ನರಗೆ ಮನದ ತಾಪವ ಬಿಡಿಸಿ ಮುಕ್ತಿ ಕೊಡುವಾ ಘನ ಕೃಪಾನಿಧಿ ಸಿರಿ ವಿಜಯವಿಠ್ಠಲರೇಯನ ಅನುಸರಿಸಿ ಬಾಳುವಂತೆ ಏಕಚಿತ್ತವನೀವಾ

ಜಾಣ ನಿನಗೆ ಸರಿಗಾಣೆ Read More »

ಜರಿಯಬೇಡ

ಜರಿಯಬೇಡ ಹರಿಯ ಮರೆಯಬೇಡೆಂದೆಂದು |ತಿರಿಯಬೇಡ ಖಳರ ಮನೆಗೆ ಪೋಗಿ |ಒರೆಯಬೇಡನ್ಯರಿಗೆ ರಹಸ್ಯ ತತ್ವಗಳನು |ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ಮೂಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ |ಶ್ರೀಕಾಂತ ಚರಿತೆಯನು ಕೇಳದಿರಬೇಡ |ಪಾಕವನು ಮಾಡಿ ಏಕಾಂಗಿಯಾಗುಣಬೇಡ|ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||1|| ಪಂಡಿತರು ಪಾಮರರು ಆರಿಗಾದರೂ ನಿನ್ನ |ಕಂಡವರಿಗೆಲ್ಲ ಕೌತುಕವು ತೋರಿದರೂ |ಹೆಂಡಿರು ಮಕ್ಕಳು ಅಳಿಯ ಸೋಸೆ ಮೊಮ್ಮಕ್ಕಳು |ಉಂಡುಟ್ಟು, ದ್ವಿಜರು ಸಹ ಗಂಡುಗಲಿಯಾದರೂ||2|| ಮಂದಮತಿಗಳ ಕೂಡೆ ಮಾತಾಡಲಿ ಬೇಡ |ನಿಂದಕರ ಕಣ್ಣೆತ್ತಿ ನೋಡಬೇಡ |ಇಂದಿರೆಯರಸ ಶ್ರೀ ವಿಜಯ ವಿಠಲರ ಚರಣ|ದ್ವಂದ್ವದಲಿ ಮಸ್ತಕವನಿಡದಿರಬೇಡ

ಜರಿಯಬೇಡ Read More »

ಜಯರಾಯರ ನೋಡಿರೋ ಸಜ್ಜನರೆಲ್ಲ

ಜಯರಾಯರ ನೋಡಿರೋ ಸಜ್ಜನರೆಲ್ಲ ಜಯರಾಯರ ನೋಡಿರೋ ಜಯರಾಯರ ನೋಡಿ ಜಪಿಸಿ ಮನದಿ ಪಾಡಿ ಜಯವಾಗುವುದು ನಿಮಗೆ ಭಯನಾಶ ಸಂತತ ದುರುಳಮತವೆಂಬೊ ಕರಿಗೆ ಅಂಕುಶವಿತ್ತು ಸುರಸಾದ ಗ್ರಂಥ ಆನಂದಮುನಿ ವಿರಚಿಸಿ ಇರಲಾಗಿ ಪರಮಭಕ್ತಿಯಿಂದ ವಿ ಸ್ತರ ಮಾಡಿದಾ ಕರದ ಕನ್ನಡಿಯಂತೆ ||1|| ವಾದಿಗಳನ್ನೆಲ್ಲಾ ಜೈಸಿ ಡಂಗುರ ಹೊಯ್ಸಿ ಭೇದಾರ್ಥe್ಞÁನ ಸತ್ಯವೆನಿಸಿ ಈ ಧರಿಯೊಳಗೆ ಹರಿಪರ ದೈವವೆಂದು ಸಾಧಿಸಿ ಉದ್ದಂಡವಾದ ಗುರುತಿಲಕ ||2|| ಅಕ್ಷೋಭ್ಯತೀರ್ಥರ ಕರದಿಂದ ಜನಿಸಿ ಮೋಕ್ಷಕೆ ಜಯ ಪತ್ರಿಕೆ ಕೊಡಿಸಿ ಪಕ್ಷಿವಾಹನ ಸಿರಿ ವಿಜಯವಿಠ್ಠಲನನ್ನ ನೀಕ್ಷಿಸುವದಕೆ ಉಪದೇಶ

ಜಯರಾಯರ ನೋಡಿರೋ ಸಜ್ಜನರೆಲ್ಲ Read More »

ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ

ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ ಜಯ ಮಂಗಳವನೀಯೆ ಜಯ ನಮ್ಮ ಕಾಯೆ ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ- ಕಮಲವನು ತೊಳೆಯಲಾವೇಗದಿಂದ ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ||1|| ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ ಭುವನದೊಳಗೀರೈದು ನೂರು ಯೋಜನದಗಲ ತವಕದಿಂದಲಿ ಧುಮುಕಿ ಚತುರ ಭಾಗವಾದೆ ||2|| ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ ಭವದೊರೆ ಭಗೀರಥಗೆ ವಲಿದು ಬರುತ ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ

ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ Read More »

ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿ

ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿ ಜಯ ಪ್ರದಾಯಕ ವೀವೆ ಜಯ ಎಮ್ಮ ಕಾವೆ ಅಜನ ಸಭೆಯಲಿ ವರುಣಗೆ ಶಾಪವು ಬರಲು ಪ್ರಜಪಾಲನಾದ ಶಂತುನ ನಾಮದೀ ನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆ ಭಜಿಸಬಲ್ಲೆನೆ ನಿನ್ನ ಬಹು ಭಾಗ್ಯವಂತೇ||1|| ಭಗೀರಥಗೆ ವೊಲಿದು ಭವದೂರ ಪಾವನಕಾರೆ ಸಗರರಾಯನ ವಂಶವನ್ನೆ ಉದ್ಧಾರೆ ಅಗಣಿತೋದಯ ಪಾರಂವಾರೆ ಶುಭಶರೀರೆ ಮುಗುವೆನು ಕರವೆತ್ತಿ ಸಂತತ ವಾರಂವಾರೆ ||2|| ಏನು ಧನ್ಯರೊ ಎನ್ನ ಕುಲಕ ಪಾವನೆಯೆನಲು ನೀನುಬ್ದಿ ಪೊರದೆ ಉತ್ಸಾಹದಿ ಮೆರೆದೆ ಮಾನನಿಧಿ ವಿಜಯವಿಠ್ಠಲನ ಸನ್ನಿಧಿಯಲ್ಲಿನಪೂರ್ವಕ

ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿ Read More »

ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ

ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ ಜಯ ನಾಗಾಭರಣಾ ಜಯ ಏಕದಂತ ಜಯ ಜಯ ಮತಿಯ ಕೊಡು ಪಾರ್ವತಿಯ ನಿಜ ತನುಜನೆಬಿಡದೆ ನಿನ್ನನು ನಾನು ನುತಿಸುವೆ ಕ್ಷಿತಿಯೊಳಗೆಶ್ರೀ ಲಕುಮಿ ಪತಿಯ ಕೊಂಡಾಡಿ ಸದ್ಗತಿಯಪಡೆಯುವದಕ್ಕೆ ಸಾರಥಿಯಾಗು ದೇವಾ ||1|| ಆಕಾಶದಭಿಮಾನಿ ಅಂಗಜನ ಚಾಪನಿರಾಕರಿಸಿ ಬಿಸುಟ ಲಂಬೋದರನೆಏಕ ಪಿಂಗಾದಿಗಳ ಪ್ರಿಯ ಹಸ್ತಚತುಷ್ಟಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ ||2|| ಸೀತಾರಮಣನಿಂದ ಪೂಜಿತನಾಗಿವನಧಿ ತೀರದಲ್ಲಿ ಮೆರೆವ ಗಣೇಶಾಸೇತುಮಾಧವ ವಿಜಯವಿಠ್ಠಲರೇಯನದೂತನು ನೀನೆ ಪಾಶಾಂಕುಶಧರನೆ ||3||

ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ Read More »

ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ

ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ ನೀ ತಮತಗುಣ ಶ್ರೇಣಿ ನಿತ್ಯ ಕಲ್ಯಾಣಿ ಹರಜಡಿಯಲಿ ಜನಿಸಿ ಹರಿಪಾದ ಜಲವೆನಿಸಿ ಮುರಹರನ ವರ್ಣ ಪೆಸರವನೇ ಪೊತ್ತು ಧರೆಯೊಳಗೆ ಮಹಾಬಳೇಶ್ವರದಲ್ಲಿ ನೆಲೆಯಾಗಿ ಪೊರಿದೆ ಶರಣಾಗತರ ದುರಿತಗಳ ತರಿದೆ ||1|| ದೋಷರಹಿತಾಥೆರೆಯೊಳು ಸಾಸಿರ ಭಾಗದಲಿ ಆ ಸಲಿಲ ಬಿಂದು ಪವಮಾನ ಬಂದೂ ಬೀಸಿದಾ ಸಮಯದಲಿ ಜೀವರಾಸಿಯ ಮೇಲೆ ಸೂಸಿ ಬೀಳಲು ಕ್ಲೇಶ ಶೋಕ ವಿನಾಶ ||2|| ಅಷ್ಟಾರ್ಥಮಾಸ ಕೃಷ್ಣಪಕ್ಷ ಚತುರ್ದಶಿ ಕೃಷ್ಣವಾರ ವಿಷ್ಣು ತಾರೆಯಲ್ಲೀ ಕೃಷ್ಣಕೃಷ್ಣಾ ಎಂದು ನಿಷ್ಠೆಯಿಂದಲಿ ಮನ ಮುಟ್ಟಿ ಸ್ನಾನವ

ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ Read More »

ಜನಿಸಲಾರೆನು ಜಗದೊಳಗೆ ಹರಿಯೆ

ಜನಿಸಲಾರೆನು ಜಗದೊಳಗೆ ಹರಿಯೆ ಕನಸಿನೊಳು ನೆನೆಯೆ ಕಂಪನವಾಗುತಿದೆ ಮನಕೆ ವಾರಿಮಂಡಲ ವೃಷ್ಟಿಧಾರೆ ಧಾರುಣಿ ಜನಕ ದ್ವಾರದಿಂ ಸರಿದುಪೋಗಿ-ಸಾಗಿ ಜಾರಿ ಜನನೀ ಜಠರ ನಾರುವ ದುರ್ಗಂಧ ಸೇರಿ ಬೊಬ್ಬುಳಿಯ ತೆರದಿ-ಭರದಿ ವಾರಿವಾರಕೆ ಬೆಳೆದು ತಾರಿತಗಲಿ ಬಳಲಿ ಶರೀರವನ್ನೆ ಪೊತ್ತು-ತೆತ್ತು ಖಾರ ಕಟು ಲವಣಾದಿ ಘೋರತರ ಮಹಕ್ಲೇಶ ವಾರಿಧಿಯೊಳಗೆ ಮುಳುಗಿ ಮರುಗಿ ಸೊರಗಿ ||1|| ಲೇಶಾವಕಾಶವಿಲ್ಲದ ದೇಶದೊಳು ಸನ್ನಿ ವಾಸ ಉಲ್ಬಣದೊಳಿದ್ದು-ಕುದ್ದು ಘಾಸಿಯಲ್ಲಿ ಪರಿತಾಪ ಸೂಸಲು ಹಾಹಾಯೆಂಬ ಘೋಷಧ್ವನಿಯಿಂದ ಬೆದರಿ-ಅದರಿ ರೋಷವಾಗಿದ್ದ ಕ್ರಿಮಿರಾಶಿ ಮುಖ ಕಾಟದಿಂ ಏಸು ಬಗೆಯಿಂದ ನೊಂದು

ಜನಿಸಲಾರೆನು ಜಗದೊಳಗೆ ಹರಿಯೆ Read More »

ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ

ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ ಅಘಗಳ ಕಳೆವ ಅಮೋಘದೇವನ ಭಕುತರ ಕಾವನ ಎನ್ನಯ ಜೀವನ ಮೃಗಲಾಂಛನ ವದನೆ ಮೃದು ಸರಸಿಜ ಸದನೆ ಹಗಲು ಇರುಳು ನಿನ್ನ ಸಂಯೋಗನ್ನ ಅನಂತ ಭೋಗನ್ನ ಕಿರೀಟಿಯ ಬೀಗನ್ನ||1|| ಭ್ರಮರ ಕುಂತಳೆ ಜಾಣೆ ಸುಮನ ಕೋಕಿಲಗಾನೆ ಕಮಲ ತುಳಸಿ ಮಣಿಹಾರನ್ನ ಜಗದಾಧಾರನ್ನ ದಶಾವತಾರನ್ನ ||2|| ಅಜರಾಮರಣ ಸಿಧ್ದಿ ತ್ರಿಜಗದೋಳ್ ಪ್ರಸಿದ್ಧಿ ವಿಜಯವಿಠ್ಠಲ ಶ್ರೀನಿವಾಸನ ತಿರುವೆಂಗಳೇಶನ ಜಗವÀ ಪೋಷನ ||3||

ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ Read More »

ಛೀ ಹಳಿ ಥೂ ಖೋಡಿ

ಛೀ ಹಳಿ ಥೂ ಖೋಡಿ ಪಾಪಿ ಮನವೆ, ನಿನ್ನ ಕುಹಕ ಬುದ್ಧಿಗಳೆಲ್ಲ ಬಿಡು ಕಂಡ್ಯ ಮನವೆ ಬಣ್ಣದ ಬೀಸಣೆಗ್ಯಂತೆ ಹೆಣ್ಣು ತಿರುಗೋದ ಕಂಡು ಕಣ್ಣು ಸನ್ನೆಯಮಾಡಿ ಕೈ ಹೊನ್ನು ತೋರಿ ತಣ್ಣೀರು ಹೊಯಿದ ಹೊಸ ಸುಣ್ಣದಂತೆ ಕುದಿದು ನಿನ್ನ ಕಣ್ಣಿಗೆ ಮಣ್ಣು ಚೆಲ್ಲಿಕೊಂಬರೆ ಮನವೆ ||1|| ನೆರೆಹೊರೆ ಮನೆಗಳಲಿ ಪ್ರಸ್ಥವನ್ನು ಮಾಡಿದರೆ ಕರೆಯದೆಲೆ ಮೊದಲ್ಹೋಗಿ ಹಾಳು ಹರಟೆ ಬಡಿಗಂಟು ಸುದ್ದಿ ನೂರಾರು ಹೇಳಿ ಅವರ ಹಿರಿಯ ಮಗನಂತೆ ಉದರವ ಪೊರೆವೆ ಮನವೆ ||2|| ಉತ್ತಮಾನ್ನವ ನೀಡೆ ಮುಸುರೆ

ಛೀ ಹಳಿ ಥೂ ಖೋಡಿ Read More »

ಚಿರಂಜೀವಿಯಾಗಿರೆಲೊ ಚಿಣ್ಣ ನೀನು

ಚಿರಂಜೀವಿಯಾಗಿರೆಲೊ ಚಿಣ್ಣ ನೀನು ಪರಮ ಭಾಗವತರ ಪದಧೂಳಿ ಧರಿಸುತಲಿ ಜರಿಯಬೇಡ ಹರಿಯ ಮರೆಯಬೇಡೆಂದೆಂದು ತಿರಿಯಬೇಡ ಖಳರ ಮನೆಗೆ ಪೋಗಿ ಜರೆಯಬೇಡನ್ಯರಿಗೆ ರಹಸ್ಯ ತತ್ತ್ವಗಳನ್ನು ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ||1|| ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ ಶ್ರೀ ಕಾಂತ ಚರಿತೆಯನು ಕೇಳದಿರಬೇಡ ಪಾಕವನು ಮಾಡಿ ಏಕಾಂಗಿಯಾಗುಣಬೇಡ ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||2|| ಸಾಲ ಮಾಡಲಿ ಬೇಡ ಸಾಲದೆಂದೆನಬೇಡ ನಾಳೆಗೆ ಹ್ಯಾಗೆಂಬ ಚಿಂತೆ ಬೇಡ ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ ಬಾಳುವರ ಸಂಗದಲಿ ಬಾಳೆಲವೊ ಬಾಲ ||3|| ಪಂಡಿತರು

ಚಿರಂಜೀವಿಯಾಗಿರೆಲೊ ಚಿಣ್ಣ ನೀನು Read More »

ಚಿನ್ಮಯ ಚಿದಾನಂದ ನೀನೆ

ಚಿನ್ಮಯ ಚಿದಾನಂದ ನೀನೆ ಸನ್ನುತಾಂಗಿಯ ರಮಣ ಸಕಲ ಲೋಕಕೆ ಕರುಣ ಭೃಗು ಮುನಿಪ ಹರಿಹರಾ ಹಿರಣ್ಯಗರ್ಭಾ ದಿಗಳ ವೆಗ್ಗಳವ ನೋಡಲಿ ಬಂದ್ಯೋ ಮಿಗಿಲಾದ ಪರದೈವ ಹರಿಯೆಂದು ಕೊಂಡಾಡೆ ಗಗನ ವಾಸಿಗಳು ಪೂಮಳೆಗರಿಯೆ ಹರುಷದಲಿ ||1|| ಮಡುವಿನೊಳ್ ಕರಿರಾಜ ಸಿಕ್ಕಿ ಸಾವಿರದ ವರುಷ ಬಿಡದೆ ನಕ್ರನ ಕೂಡ ಕಾದಿ ಸೋತು ಒಡಿಯರಾರುಂಟೆ ತ್ರಿಮೂರ್ತಿಗಳೊಳಗೆನಲು ಮೃಡನಜರು ಬೆರಗಾಗಿ ಸಾಮಜನ ಪಾಲಿಸಿದೆ ||2|| ಸೃಷ್ಟಿಜಲ ಮುಸುಕಿ ಬ್ರಹ್ಮಾಂಡ ಪ್ರಳಯಕಾಲದಲಿ ನಿಟಿಲಾಕ್ಷ ಮೊದಲಾದ ದೇವತೆಗಳು ಜಠರದೊಳು ಜಗಕರ್ತುನೆಂದೆನಿಸಿದೆ ವಟಪತ್ರಶಯನ ಸಿರಿವಿಜಯವಿಠ್ಠಲರೇಯಾ||3||

ಚಿನ್ಮಯ ಚಿದಾನಂದ ನೀನೆ Read More »

ಚಿಂತೆಯಾತಕೆ ಮನವೆ ನಿನಗಿದು

ಚಿಂತೆಯಾತಕೆ ಮನವೆ ನಿನಗಿದು ಸತತ ಸಲ್ಲದು ಕಾಣೊ ನಿಂತು ಪುರಂದರ ದಾಸರನುದಿನ ಇಂತು ಬಗೆಯಲಿ ಪಾಲಿಸೊ ಅಗ್ರ ಬುದ್ಧಿಯ ತಾಳು ನಿನಗೆ ಸಾ ಮಗ್ರಿ ಆಲೋಚನಿ ಯಾತಕೆ ಸ ಮಗ್ರ ಸೋಪಸ್ಕರವನು ಅನುಗ್ರಹವನು ಮಾಡುತಾ ಉಗ್ರ ಮನುಜರ ಕೂಡಿಸದೆ ಪಾ ಣಿಗ್ರಹ ಮಾಡಿಪ (ರಾವ) ಗವುಗಾದರೂ ಅಂದು ಪೊಗಳಲು ಶೀಘ್ರದಲಿ ನಿಂದಿಹರೊ ||1|| ಹರಿಗುರುಗಳ ಸಂಕಲ್ಪ ತಪ್ಪದು ಗಿರಿಗಹ್ವರದೊಳಗಿದ್ದರು ಅದು ಬರಿದೆಯಾಗದು ಕೇಳು ಸ್ಮರಿಸಿ ಬಳಲಿ ನಲಿದಾಡಿ ಸುರ ನರೋರುಗ ಏಕತ್ರಗಳ ಮಾಡಿ ಶರಣರಿಂದಾಳಿಸುವ ನಿಶ್ಚಯ ಪರಿದ

ಚಿಂತೆಯಾತಕೆ ಮನವೆ ನಿನಗಿದು Read More »