ಧ್ಯಾನವನು ಮಾಡು ಬಿಂಬ ಮೂರುತಿಯ

ಧ್ಯಾನವನು ಮಾಡು ಬಿಂಬ ಮೂರುತಿಯ ಆನಂದದಲಿ ಕುಳಿತು ಅಂತರಂಗದಲಿ ಸದಾಚಾರನಾಗಿ ದ್ವಾದಶಗುರುಗಳಿಗೆರಗಿ ಮುದದಿಂದ ಮೂಲಮಂತ್ರವನು ಜಪಿಸಿ ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು ಪದಮಾಸನವ ಹಾಕಿ ಪರಮ ವಿಶ್ವಾಸದಲಿ||1|| ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು ಮಂಗಳ ಶೋಭಿತ ಅಖಂಡ ಧ್ಯಾನದಂತ ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ ||2|| ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ ಮಗುಳೆ ಪರಮ ಗುರುವಿನ ಮೂರ್ತಿಗೆ ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು||3|| ತಿರುಗಿ ಮೆಟ್ಟಿಕೆ […]

ಧ್ಯಾನವನು ಮಾಡು ಬಿಂಬ ಮೂರುತಿಯ Read More »

ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ

ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ | ಜ್ಞಾನಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ | ದಾನದಿಂ ಸಿದ್ಧಿಪುದು ಮಾನಸದಲಿ ಸಿರಿ | ಪ್ರಾಣೇಶ ಕುಣಿಯುವನಯ್ಯಾ ಅಯ್ಯಯ್ಯಾ ಹರಿವೀರ ದ್ರುಪದನುದ್ಧರಿಸಿವಾಗಲು ತನ್ನ | ಶರೀರದಿಂದಲಿ ಅಷ್ಟಕೇತ್ರಗಳ ಪುಟ್ಟಿಸಿ | ವರದೇಶ ವೈಕುಂಠದಲ್ಲಿಟ್ಟನು ಸಪ್ತ | ಪಿರಿಸಹಿತ ತೀರ್ಥರಾಜಾ || ಮೆರೆವದಿದೆ ಪುಂ ಕ್ಷೇತ್ರ ಉಳಿದವೇಳು ಸ್ತ್ರೀ | ಇರುತಿಪ್ಪವಲ್ಲಿ ಮಿಗಿಲಿದಾದಕೆ ಅತಿಶಯವೊ | ಧರಣಿಯೊಳಗಿದಿ ಕಾಲಾಂತರಕೆ ಹರಿತಂದ ವಟ | ತರು ಸಹವಾಗಿ ಅಯ್ಯಾ ಅಯ್ಯಾ ಅಯ್ಯಾ

ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ Read More »

ಧನ್ಯನೋ ಶೇಷಗಿರಿದಾಸ ನೀನೂ

ಧನ್ಯನೋ ಶೇಷಗಿರಿದಾಸ ನೀನೂ ಪುಣ್ಯವಂತನು ಅಹುದೊ ಮನೊ ವಾಚದಲಿ ನಿತ್ಯ ಮುಂಗೈಯ ಮ್ಯಾಲಿನ ಗಿಳಿ ಹಾರಿಹೋದಂತೆ ರಂಗ ಮಧ್ವನ ಸ್ಮರಣೆ ಮಾಡಿಕೊಳುತ ಮಂಗಳಾಂಗನಾಗಿ ಸ್ವರ್ಗಸ್ಥನಾದಿ ಕ್ಷಣ ಭಂಗುರವೆಂಬ ಪ್ರಮಾಣ ಸಿದ್ಧಿಸಿತು ಗಡ ||1|| ಸತ್‍ಶಿಷ್ಯನೆಂದೆನಿಸಿಕೊಂಡದಕೆ ಎನ್ನ ಮ ನೋತ್ಸಾಹ ಮಾತ್ರ ಬಂದಾಗಲಿಲ್ಲಾ ವತ್ಸ ಕೇಳು ಉಪಸರ್ಗ ಕೂಡಿದ ನಾಭಿ ತತ್ಸಮಾನಾಯಿತೊ ಇಂದಿನಾರಭ್ಯವೂ||2|| ಒಂದೆ ಪ್ರವಾಹದೊಳು ಈಸು ಬೀಳಲು ಸುಳಿ ಯಿಂದ ಹಿಂದಕೆ ಒಬ್ಬನಿಂದಂತೇವೆ ಇಂದು ಎನಗಾಯಿತೊ ಭೂಮಿಯೊಳಗೆ ಋಣಾನು- ಬಂಧ ಇಂತಿರಲಿಕ್ಕೆ ಯತ್ನ ಒಬ್ಬರದಿಲ್ಲ||3|| ಪರಿಣಾಮಕೆ ನಿನಗೆ

ಧನ್ಯನೋ ಶೇಷಗಿರಿದಾಸ ನೀನೂ Read More »

ದೋಷವರ್ಜಿತ ಬಾರೈ ವೆಂಕಟೇಶಾ

ದೋಷವರ್ಜಿತ ಬಾರೈ ವೆಂಕಟೇಶಾ ಶ್ರೀನಿವಾಸ ವಾಸವಿಸೂನು ಚರಣರಹಿತ ಪತಿ ತ್ಯಜನೆ ತಥ ಚರಣಪಾಣಿ ಪರಮಾನಂದಾ ಚರಣಾಯುಧನಾದವಗೆ ಸೋಕಿದಳ ಚರಣದಿ ಪಾವನಗೈಸಿದೆ ದೇವಾ||1|| ಪತಿ ಗುರು ಪಿತೃ ಪಿತಾಮಹಾ ದೈ ವತ ಗುರೋರ್ಗುರು ಸ್ವಶುರ ಜಾರಾ ಅತಿಶಯ ಭೂತಿರಭೂತಿ ಎಂದು ಸಂ ತತ ಉಪಾಸ್ಯತನಾಗಿ ಮೆರೆವನೆ ||2|| ಪಂಚಾದಿಗ್ಬರಸ್ಮಿಗಳಲ್ಲಿ ಪೂಜೆ ಪಂಚ ರೂಪದಿ ಕೊಂಬನಾಡಿಸ್ಥ ಪಂಚಜನ ಪಂಚಮೊಗವೇಶ ತಾಳಿದ ಪಂಚ ಕುಸುಮಸಾರ ಮಧು ವಿದ್ಯಮೂರ್ತಿ ||3|| ಹೃದಯಾಖ್ಯಪುರ ಪಂಚದ್ವಾರದಲಿ ನೀ ವಿಧಿ ಭವರಿಂದಾರ್ಚನೆ ಗೊಂಬೆ ಪದುಮಾಷ್ಟ ದಳದಲಿ ಪ್ರಹರೇಯ

ದೋಷವರ್ಜಿತ ಬಾರೈ ವೆಂಕಟೇಶಾ Read More »

ದೋಷ ದೂರ ಜನಾರ್ದನ ದೋಷ ದೂರಾ

ದೋಷ ದೂರ ಜನಾರ್ದನ ದೋಷ ದೂರಾ ದೋಷ ದೂರ ಎನ್ನ ಸಾಕುವುದು ಪರಾಶರವರದಾ ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನ ಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ ||1|| ಕಂಡೆ ನಾ ನಿನ್ನಯ ಪುಂಡರೀಕ ಪಾದ ಚಂಡಾಘ ತಿಮಿರ ಮಾರ್ತಾಂಡ ಮುರವೈರಿ ||2|| ಅಜಗೆ ಪ್ರಸನ್ನ ವಿರಜಭಾಗ್ಯ ಸಂಪನ್ನ ವಿಜಯಮೂರುತಿ ನಮ್ಮ ವಿಜಯವಿಠ್ಠಲರೇಯ ||3||

ದೋಷ ದೂರ ಜನಾರ್ದನ ದೋಷ ದೂರಾ Read More »

ದೇಶದೊಳಗೀ ಕ್ಷೇತ್ರ ಬಲು ಉತ್ತಮಾ

ದೇಶದೊಳಗೀ ಕ್ಷೇತ್ರ ಬಲು ಉತ್ತಮಾ ದಾಸೋಹಂ ಎಂದೆನಲು ಗತಿಗೆ ಪಥವ ಕೊಡುವ ಹರಿಸರ್ವೋತ್ತಮನೆಂದು ನೆರಪಿದಂಥ ಮುನಿ ವರನ ಶಾಪದಲಿ ಪಾವಕನು ಬಂದು ಪರಮತಪ ಮಾಡಿದನು ವರವಿತ್ತ ಹರನೊಲಿದು ಧರೆಯೊಳಗೆ ಈ ದೇವನಿ ಪುಷ್ಕರಣಿ ಎನಿಸುವುದು||1|| ದಿವಿಜರಿಗೆ ಸೋತು ದಾನವರು ಶುಕ್ರಗೆ ಹೇಳಿ ಶಿವನೊಲಿಸೆ ಅಮೃತವ ಮಾಳ್ಪೆನೆಂದು ಕವಿ ಇಲ್ಲೆ ತಪಮಾಡೆ ಅಂದು ಸುರಧೇನು ವಾ ಸವನ ಕೈಕೊಳಲು ಶ್ರೀರಾಮನಿಂದಲಿಗತಿ ||2|| ರಾಯ ಋಷಿಗಾಧೇಯು ಬ್ರಹ್ಮತ್ವಗೋಸುಗ ಗಾಯತ್ರಿ ಒಲಿಸಿದನು ಈ ಸಿಲೆಯಲೀ ಆಯು ಉಳ್ಳದರೊಳಗೆ ಇಲ್ಲಿ ಕುಳಿತು ಬಂದು

ದೇಶದೊಳಗೀ ಕ್ಷೇತ್ರ ಬಲು ಉತ್ತಮಾ Read More »

ದೇವಿ ಕಾರುಣ್ಯದಿಂದ ಬಂದು ಎಂದೆಂದು

ದೇವಿ ಕಾರುಣ್ಯದಿಂದ ಬಂದು ಎಂದೆಂದು ಬಿಡದೆಂದು ದಯದಿಂದ ಪಾಲಿಸಿ ನಿಂದು ಕಮಲಲೋಚನೆ ಸಾಮಜಯಾನೆ ಶಶಾಂಕ ವದನೆ ವಿಮಲಾಬ್ಜ ಸದನೆ ಕೋಕಿಲ ಗಾನೆ ಆನಂದಪೂರ್ಣೆ ನಮೋ ನಮೋ ರಮೆ ಉತ್ತಮೆ ಅನುಪಮೆ ಶಮೆಕ್ಷಮೆ ಹರಿಗಸಮೆ ಸತತಾಗಮೆ ಗಗನಿಜಿತ ಯಮೆ ಪರಮೇಶ್ವರಿ ಅ ಉಮೆ ಈ ಪರಾಕ್ರಮೆ||1|| ಲೋಕ ತರುವಾತ ತನಯವಾಕು ಇವು ಮೂರು ಬೇಕು ಬೇಕೆಂದು ತುತಿಸಿದೆ ಪರಾಕು ಸಂತಾಪ ನೂಕು ಲೋಕ ಜನನಿಯೆ ವೈದೀಕ ಪ್ರಾರ್ಥನೆ ಇದು ನೀ ಕೇಳು ಕರುಣದಿ ಸಾಕು ಸಕಲ ತನುಪ್ರಾಕು ಕುರ್ಮದಿ

ದೇವಿ ಕಾರುಣ್ಯದಿಂದ ಬಂದು ಎಂದೆಂದು Read More »

ದೇವರ ದೇವ ನಿನ್ನ ಬಲವಲ್ಲದೆ

ದೇವರ ದೇವ ನಿನ್ನ ಬಲವಲ್ಲದೆ ಮತ್ತೆ ಆವ ಗ್ರಹಗಳಿಂದಲಿ ಉಂಟು ಎನಗೆ ಇಂದು ನಿನ್ನ ನೆನಹು ಇಂದು ಬಲವೊ ಅರ ವಿಂದ ಪದ ನೋಡುವದು ಅರ್ಕ ಬಲವು ವಂದನ ಗೈದು ಮಂತ್ರಿ ಬಲವೋ ಎನಗೆ ನಿಂದು ಕೊಂಡಾಡುವದು ಕಾವ್ಯ ಬಲವೊ ||1|| ಆರಾಧನೆ ಮಾಡುವುದು ಅಂಗಾರಕನ ಬಲವೊ ಸಾರಿ ಪೇಳುವದೆನಗೆ ಸೌಮ್ಯ ಬಲವೊ ಕಾರುಣ್ಯ ಕಡುಸೋನೆ ಎನಗೆ ಶೌರಿಬಲವೊ ಹಾರೈಸಿ ಹಿಗ್ಗುವದು ರಾಹು ಬಲವೊ ||2|| ಕೇಳುವ ಕಥಾಶ್ರವಣ ಕೇತು ಬಲವೊ ಎನಗೆ ವಾಲಗ ಮಾಡುವದು ತಾರಾಬಲವೊ

ದೇವರ ದೇವ ನಿನ್ನ ಬಲವಲ್ಲದೆ Read More »

ದೂರ ನೋಡುವರೆ ರಂಗಯ್ಯ ಎನ್ನ

ದೂರ ನೋಡುವರೆ ರಂಗಯ್ಯ ಎನ್ನ ದೂರ ನೋಡುವರೇನೋ ಸಂಸಾರ ಶರಧಿಯೊಳಗೆ ಮುಳುಗಿ ದಾರಿಗಾಣದೆ ನೀನೆ ಗತಿ ಮು-ರಾರಿಯೆಂದು ಸಾರಿದ ಮೇಲೆ ಆಸೆ ಬಿಡದೆಲೊ ಕಾಸುವೀಸಕೆ-ಕ್ಲೇಶ ಘನ್ನವೆಲೊ ಈಶ ಯಾರಿಗೆ ಪೇಳಲೊಶವೆಲೊ-ಶ್ರೀಶ ಎನ್ನ ಮನಸಿನಲ್ಲಿ ಲೇಶಮಾತ್ರ ಭಕುತಿಯಿಲ್ಲ, ಆಸೆ ಬದ್ಧನಾಗಿ ಬಹಳ ಘಾಸಿಪಟ್ಟೆನೊ-ದಾಶರಥಿ ||1|| ಭಕುತಿಯಿಲ್ಲವೊ ಅದರ ಹೊರತು-ಮುಕುತಿಯಿಲ್ಲವೊ ಯುಕುತಿಯಿಂದಲಿ ವಲಿವನಲ್ಲವೊ- ಮುಕುತಿದಾಯಕ ನಿನ್ನ ಕಾಣದೆ ಭಕುತಿಗೋಸುಗ ಪರರ ತುತಿಸಿ, ಕಕುಲಾತಿಯಿಂದಲೆನ್ನ- ಶಕುತಿಯೆಲ್ಲ ನಷ್ಟವಾಯಿತು ||2|| ಪೊರೆಯದಿರುವರೆ ಕರುಣಾಳುಯೆಂಬ-ಬಿರುದ ಬಿಡುವರೆ ಹರಿಯೆ ಯೆನ್ನ ಮರೆತು ಬಿಡುವರೆ- ಕರಿಯು ಹರಿಯೇ

ದೂರ ನೋಡುವರೆ ರಂಗಯ್ಯ ಎನ್ನ Read More »

ದುರ್ಲಭ ಇದು ಕಲಿಯುಗದೊಳಗೆ ಕಾಣಾ

ದುರ್ಲಭ ಇದು ಕಲಿಯುಗದೊಳಗೆ ಕಾಣಾ ಎಲ್ಲರಿಗೆ ದೊರಕಬಲ್ಲದೆ ಶ್ರೀ ವಲ್ಲಭನ ಪಾದಸೇವೆ ಮಾಡೋ ನೀ ನಲಿದಾಡೋ ಎಲೆ ಮನುಜಾ ಸುರನರ ಉರಗರು ಕಿಂನರಕಿಂಪುರುಷರು ಗಂಧರ್ವರು ಸಿದ್ಧರು ವಿದ್ಯಾ ದರಸಾಧ್ಯ ಗುಹ್ಯಕ ಸುರಮುನಿಗಣ ಗರುಡಾದ್ಯರೆ ನೆರೆದು ಹರಿ ಸರಸಿಜ ಸಂಭವ ಪುರಹರ ಮೂವನ ಬಲ್ಲಿದರೀ ದರಿಯೊಳು ಇದರಲಿ ಹರಿ ಭಕುತಿಗೆ ಸರಿ ಇಲ್ಲವೆನುತಲಿ ಬರಿದು ರೇಖೆಯ ಬರಿಸಿದರೊ ಡಂಗುರ ಹೊಯಿಸಿದರೊ ಎಲೆ ಮನುಜಾ ||1|| ಹರಿಯೆಂತೆಂದವ ಧರ್ಮಕೆ ಸಂದವ ಕರದಲಿ ದಂಡಿಗೆ ಪಿಡಿದವ ಪುಣ್ಯವ ಪಡೆದವ ಚರಣದ್ವಯದಲಿ ಗೆಜ್ಜೆಯ

ದುರ್ಲಭ ಇದು ಕಲಿಯುಗದೊಳಗೆ ಕಾಣಾ Read More »

ದುರಿತ ದುರ್ಗತಿಗೆ ಆವಾನಂಜನೊ

ದುರಿತ ದುರ್ಗತಿಗೆ ಆವಾನಂಜನೊ ಹರಿಯ ಕರುಣವೆಂಬ ಕವಚ ತೊಟ್ಟಿರಲಿಕ್ಕೆ ಮಲಗಿ ಹೊರಳನೇಕೆ ಕುಳಿತುಕೊಂಡಿರನೇಕೆ ಬಲುದೂರ ತಿರುಗಾಡಿ ಬಪ್ಪನೇಕೆ ಮಲಿನ ವಸನವ ಪೊದ್ದು ಮೋರೆ ತೊಳಿಯನೇಕೆ ಜಲಜನಾಭನ ಪಾದ ನೆಳಲು ಸೇರಿದವ ||1|| ಸ್ನಾನ ಸಂಧ್ಯಾ ಮೌನ ಮಾಡದೆ ಇರನೇಕೆ ಕಾನÀನದಲಿ ಬಂದು ಸೇರನೇಕೆ ದಾನ ಧರ್ಮಂಗಳ ಮಾಡದೆ ಇರನೇಕೆ ದಾನವಾರಿಯ ಕಾಣುತಲಿಪ್ಪವ ||2|| ಮಡಿ ಉಡದೆ ಉಣನೇಕೆ ಅಡಿಗೆ ನೇಮನವೇಕೆ ಅಡಿಗಡಿಗೆ ಜಪಮಣಿ ಎಣಿಸನೇಕೆ ನಡೆಯುತ ಪಥದೊಳು ತಿನ್ನಲ್ಲಾ ಮೆಲ್ಲನೇಕೆ ಪೊಡವೀಶ ಶ್ರೀ ಹರಿಯ ಅಡಿಗಳ ಬಲ್ಲವಾ

ದುರಿತ ದುರ್ಗತಿಗೆ ಆವಾನಂಜನೊ Read More »

ದುರಿತ ಜೀಮೂತವಾತ

ದುರಿತ ಜೀಮೂತವಾತ ಪೊರಿಯಯ್ಯ ನಿನಗೆ ನಿರುತ ಧರಣಿಯೊಳಗೆ ವಿಸ್ತರಿಸಿ ಬಲ್ಲವರಾರು ಗುರುವೆ ನಿಜ ನಮಿತರ ಸುರತರುವೆ ನಂಬಿದೆ ನಿನ್ನ ಪಾದವಂಬುಜವನು ಗಾಲ ಬೆಂಬಿಡದಲೆ ನಾನೆಂಬೋದು ಬಿಡಿಸಿಂದು ಬೆಂಬಲವಾಗು ಆರೆಂಬ ಖಳರ ನೀಗು ಇಂಬಾಗಿ ನೋಡು ದಿವ್ಯಾಂಬಕದಿಂದ ವೇಗ ಡಿಂಬಾರೋಪಿರೆ ಡಂಬಕತನವೆಂಬುದು ಕೊಡದಲೆ ಸಂಭ್ರಮದಲಿ ಹರಿದೊಂಬಲ ಬಯಸುವ ಹಂಬಲಿಗರ ಕೂಡ ಇಂತು ತೋರು ಬಲು ಗಂಭೀರ ಕರುಣಿ ||1|| ಎಣೆಗಾಣೆÉ ನಿಮಗೆ ಕುಂಭಿಣಿಯೊಳಗೆಲ್ಲ ಯತಿ ಮಣಿಯೆ ರಾಮವ್ಯಾಸರ ಮಣಿಭೂಷಣ ಚರಣಾರ್ಚನೆ ಮಾಳ್ಪ ಮಹಿಮ ಮನಸಿಜ ಶರಭೀಮ ಮನದಣೆ ಗುಣಿಸಿ

ದುರಿತ ಜೀಮೂತವಾತ Read More »

ದಾಸರೆ ಪುರಂದರದಾಸರು

ದಾಸರೆ ಪುರಂದರದಾಸರು ಲೇಸಾಗಿ ಎನಗೆ ಸುಮಾರ್ಗವನು ತೋರಿದರು ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿ ಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂ ಅತಿ ದಯಾಪರರಾಗಿ ತನ್ನವನಿವನೆಂದು ಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು||1|| ಶಬ್ದಾದಿ ಮೊದಲಾದ ವಿಷಯಂಗಳಾ ಕರ್ಮ ದಬ್ಧ್ದಿಯೊಳಗೆ ಬಿದ್ದು ಪೊರುಳುತಿದ್ದಾ ಲುಬ್ಧಕನ ಕರೆದು ದೃಢವಾಗಿ ಸುಜ್ಞಾನದ ಅಬ್ಧಿಯೊಳಗಿಟ್ಟು ಕರುಣದಲಿ ನೋಡಿದರು ||2|| ಹಿಂದೆ ಏಸೇಸು ಜನ್ಮ ಜನಿಸಿ ಅನ್ಯ ರಿಂದಲಿ ಬಲು ಕಾಲ ನೊಂದ ನರನಾ ತಂದು ವೈರಾಗ್ಯದೊಳು ಪೊಗಸಿ ಸೌಖ್ಯವ ಪರಶಿ ತಂದೆ ಮಕ್ಕಳನು ಸಾಕಿದಂತೆ ಸಾಕಿದರು||3|| ಉಪದೇಶವಿತ್ತರು

ದಾಸರೆ ಪುರಂದರದಾಸರು Read More »

ದಾಸರ ಭಾಗ್ಯವಿದು ಪುರಂದರ

ದಾಸರ ಭಾಗ್ಯವಿದು-ಪುರಂದರ-ದಾಸರ ಭಾಗ್ಯವಿದು ಸರ್ವ-ದೇಶದೊಳು ತುಂಬಿ ಸೂಸುತಲಿದೆ ಭೂಸುರ ಜನುಮದಿ ಬಂದು ಬೆಳೆದು ಉಪ- ದೇಶಗೊಂಡು ಮಧ್ವಮತ ಪೊಂದಿ ಲೇಸಾಗಿ ಭಕ್ತಿ ವಿರಕ್ತಿಜ್ಞಾನದ ವಿ- ಶೇಷವಾಗಿ ನಾ ಬಾಳುವದೆಲ್ಲ ||1|| ಸಜ್ಜನ ಸಂಗತಿ ಮಾಡಿ ದುರುಳಜನ ವರ್ಜನಗೈದು ಸತ್ಕರ್ಮಗಳ ಆರ್ಜಿಸಿ ನಾಮ ಮುದ್ರೆ ಹಗಲು ಇರಳು ನಿ ರ್ಲಜ್ಜನಾಗಿ ನಾ ಬಾಳುವುದೆಲ್ಲ ||2|| ಶ್ರವಣ ಕೀರ್ತನೆ ವಂದನೆ ಸ್ತೋತ್ರ ಹರಿನಾಮ ತವಕದಿಂದ ನುಡಿಯುವ ಕವನ ನವನವ ವಚನವು ಮಂತ್ರ ಸಂಕಲ್ಪವು ಸವಿದು ಸ್ಮರಿಸಿ ನಾ ಬಾಳುವುದೆಲ್ಲ ||3||

ದಾಸರ ಭಾಗ್ಯವಿದು ಪುರಂದರ Read More »

ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು

ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು ಆಶೆಯಿಂದಲಿ ಗತಿ ಬೇಡಲಿಲ್ಲ ದಾಸತನ ಎನಗೆಲ್ಲಿಹುದು ಶ್ರೀನಿ- ವಾಸನೆ ಅನಂತ ಕಲ್ಪದಲ್ಲಿ ದಾಸನು ನಾನಲ್ಲ ನಾನಾ ಸುಬುದ್ಧಿಯ ನಾಶನ ಮಾಡಿಕೊಂಬ ದಾಸ ನಾನು ದಾಸನೆನಿಸಿಕೊಂಡು ತಿರುಗುವ ಜನಕ್ಕೆ ಲೇಸಾಗಿ ದಂಡಿಸಿ ಮೆದಿಯ ಬೇಕು ಕೇಶವ ವಿಜಯವಿಠ್ಠಲನೆ ನಿನ್ನ ಮರೆದು ಗ್ರಾಸಕ್ಕೆ ತಿರುಗುವ ಭಾಸಮಾನ ದಾಸ ||1|| ಮಟ್ಟತಾಳ ತಿರಕದಾಸ ನಾನು ಹರಕ ದಾಸ ನಾನು ಕರಕರಿಯನು ಮಾಡಿ ಪರರ ಪೀಡಿಸಿ, ಉ- ದರ ಪೊರೆವ ದಾಸನು ನಾನು, ಬರಿಯ

ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು Read More »

ದಾಸ ದಾಸ ದಾಸರ ದಾಸ್ಯವ

ದಾಸ ದಾಸ ದಾಸರ ದಾಸ್ಯವ ಕೊಡೊ- ದೋಷ ರಾಸಿಯಳಿದು ಶ್ರೀಶ ಧೀಶ ಸರ್ವೇಶ ಸುರೇಶ್ವರ – ಭಾಸುರ ಗುಣಗಣ ಭವ್ಯ ಶರೀರ ಚಿತ್ತ ನಿನ್ನ ಪದ ಸೇವೆಯೊಳಿರಲಿ-ಚಿಂತೆ ಇತರ ಬಿಡಲಿ ಅಂತರಂಗದಲ್ಲಾನಂದಿಸಲಿ-ಅಹಂಕೃತಿಯನ್ನೆ ಬಿಡಲಿ ಸಂತತ ನಿನ್ನ ಪದ ಪಂಕಜ ಭಕ್ತರ – ಪಂಥವ ಪಾಲಿಸೊ ಪರಮ ಪುರುಷ ಹರಿ ||1|| ಅರಿಷಡ್ವರ್ಗಗಳಟವಿಯ ಖಂಡಿಸು-ಆನಂದದಲಿರಿಸು ದುರುಳರ ಸಂಗವ ದೂರ ಮಾಡಿಸು- ದುರ್ಮತಿಯನೆ ಬಿಡಿಸು ಸರಸ ಸಂಭ್ರಮ ಸನ್ನುತ ಭಕುತರೋಳ್- ನಿರುತವು ನಿಲ್ಲಿಸೋ ನೀರಜಾಕ್ಷ ಹರಿ||2|| ತ್ರಿಜಗನ್ಮೋಹನಾಕಾರ ತ್ರಿ-ಗುಣಾತೀತ ತೀರ್ಥಪಾದ

ದಾಸ ದಾಸ ದಾಸರ ದಾಸ್ಯವ Read More »

ದಾಶರಥ ಪಾದಸರಸಿಜ ಮಧುಕರ

ದಾಶರಥ ಪಾದಸರಸಿಜ ಮಧುಕರ ಸಮೀರಜ ಹನುಮ ಎನ್ನ ಪ್ರಾಣಾಪದಕಾ ಶಿರಸನಾ ಮಗಗೊಲಿದು ರಾಮಚಂದ್ರನ ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ ಧರಿಸುವೆನು ರಿಪುನಿಕರ ಮಾರೀ||1|| ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ ಸಂಗರಕೆ ಬಂದ ವಿಕಾರಿಗಳ ನೋಡಿ ಭಂಗಬಡಿಸಿದೆ ಅವರ ಬಲವೆಲ್ಲ ತೂರಿ ||2|| ಸಭೆಯೊಳಗೆ ರಾವಣನ ರಕ್ತವನೆ ಕಾರಿಸಿದೆ ನಭಚರರು ಕೊಂಡಾಡೆ

ದಾಶರಥ ಪಾದಸರಸಿಜ ಮಧುಕರ Read More »

ದಯವಿರಲಿ ಎನ್ನಲ್ಲಿ ಧರಣಿಧರನೆ

ದಯವಿರಲಿ ಎನ್ನಲ್ಲಿ ಧರಣಿಧರನೆ ಭಯಗಳನು ಪೋಗಾಡು ಭಕ್ತಜನ ಪ್ರೀಯಾ ಎರಗಿಸುವದು ಚರಣದಲಿ ಶಿರಸು ಎರಗಲಿ ನಿನ್ನ ಧ್ಯಾನದಲಿ ಮನಸು ಎರವೆರವು ಮಾಡದಲೆ ನಿನ್ನ ನಾಮಾಮೃತವ ಎರದು ಸಾಕುವದು ಸಂತತ ಎನ್ನ ಬಿಡದೆ ||1|| ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ ಶ್ರುತಿಗಳೊಳು ಪೇಳುತಿದೆ ವರದೊರದೂ ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ ||2|| ಕೊಡುವಲ್ಲಿ ಕೊಳುವಲ್ಲಿ ಯಡಿಯಡಿಗೆ ಭಕುತಿರಸ ಕುಡಿಸುವಲಿ ಕಲಕಾಲ ಸಂತೋಷವ ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ ಮೃಡನೊಡಿಯಾ

ದಯವಿರಲಿ ಎನ್ನಲ್ಲಿ ಧರಣಿಧರನೆ Read More »

ದಯಮಾಡು ದಯಮಾಡು ಎನ್ನ ಮೇಲೆ

ದಯಮಾಡು ದಯಮಾಡು ಎನ್ನ ಮೇಲೆ | ಅಂತರಂಗದೊಳಿಪ್ಪ ಅಚ್ಚುತಮೂರ್ತಿ ಗಂಧ ಪರಿಮಳ ಕುಸುಮ ಜಾಜಿ ಮಲ್ಲಿಗೆ ಮಾಲೆ | ಮಂದಾರ ಹಾರ ಕೊರಳೊಳಿಡಲೂ || ಚಂದವಿಲ್ಲವೆಂದು ತೆಗೆದು ಬಿಸಾಟಿ ಊರ | ಹಂದಿಯಂದದಿ ಇಲ್ಲಿ ಇಪ್ಪ ನರಗೆ ||1|| ಹೆತ್ತ ತುಪ್ಪ ಸಣ್ಣಶಾವಿಗೆ ಪರಮಾನ್ನ | ಹೆತ್ತತಾಯಿ ತಂದು ಉಣ್ಣ ಬಡಿಸಲು || ಅತ್ತ ಮೊಗವಗಬೆ ತೊತ್ತು ಉಣಬಡಿಸಿದ | ಹೊತ್ತು ಓಗರ ತಿಂದು ಇಪ್ಪೆನೆಂಬ ನರಗೆ ||2|| ತುಂಬಿದ ಹೊಳೆಯಲ್ಲಿ ಹರಿಗೋಲಿಟ್ಟುಕೊಂಡು | ಅಂಬಿಗ ತಡೆಯದೆ

ದಯಮಾಡು ದಯಮಾಡು ಎನ್ನ ಮೇಲೆ Read More »

ದಯ ಬಾರದ್ಯಾಕೊ ರಾಘವಾ

ದಯ ಬಾರದ್ಯಾಕೊ ರಾಘವಾ ಕಾಯಬೇಕು ಯೆಂದು ಕೊರಗಿ ಮೊರೆಯಿಡೆ ನ್ಯಾಯವೇನು ಯೆನ್ನ ಮರತುಬಿಡುವದು ಅಂದು ಅಜಮಿಳನು ಅಂತ್ಯಕಾಲದಲ್ಲಿ ಕಂದ ನಾರ ಬಾಯೆಂದು ಕರಿಯಲು ಅಂದ ಮಾತುಗಳಿಗೆ ಅತಿ ಹರುಷಿಸಿ ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ ||1|| ಹರಿಯೆ ಗತಿಯೆಂದು ಹೊಗಳು ಕಂದನ ಹರುಷವಿಲ್ಲದೆ ಪಿತ ಕಷ್ಟಪಡಿಸಲು ಊರು ತೋರದಂತಾ ಸ್ತಂಭದಿಂದ ಬಂದು ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ ||2|| ಸರ್ಪಶಯನನೆ ಸಾರ್ವಭೌಮನೆ ಶೂರ್ಪನಖಿ ನಾಸಿಕ ಶ್ರೋತ್ರವಳಿದನೇ ಅಪ್ಪ ಗುರುವರ ವಿಜಯವಿಠ್ಠಲನೇ ಒಪ್ಪದಿಂದ ವಲಿವ ವರದರಾಜನೇ ||3||

ದಯ ಬಾರದ್ಯಾಕೊ ರಾಘವಾ Read More »

ತೋರೊ ನಿನ್ನಯ ಮೂರ್ತಿಯ

ತೋರೊ ನಿನ್ನಯ ಮೂರ್ತಿಯ ತೋರೊ ನಿನ್ನ ಮೂರ್ತಿ ಬೀರೊ ಹೃದಯವೆಂಬೊ ನೀರಜಹಾದೊಳಗೆ ಸಾರೋ ಸಾರಿ ಸಾರಿಗೆ ಸೇರೊ ಬಾರೊ ಬಾರೊ ಪರಿವಾರದೊಡನೆ ಮನಸೂರೆಗೊಡುವೆ ಕಂ ಸಾರಿ ಮುರಾರಿ ತುಂಬೆ ವಿಶ್ವಮಾಯಾದ ಬೊಂಬೆ ನಾಮ ಪೀಯೂಷ ಉಂಬೆ ಸೇವೆಯ ಕೈಕೊಂಬೆ ಅನ್ಯರ ನಂಬೆ ಕಾಂಬೆ ನಮಿಸಿ ಪಾಲಿಸೆಂಬೆ ಕಾಲಿಗೆ ಮನ ದುಂಬೆ ದಂತೆ ಎರಗಿ ಅಂಬೆ ಪಿಡಿವಾಕೊಂಬೆ ನಂಬಿದೆ ನಂಬಿದೆ ಅಂಬುಜಾಕ್ಷ ನೀ ನೆಂಬದು ಸುರನಿಕರಂಬ ಹಂಬಲಿಸಲು ದಿಂಬಾಗಿ ಕರ್ಣಾವಲಂಬನವಾಯಿತು ಇಂಬಿಡು ಪ್ರಾಙ್ಞನೆಂದೆಂಬ ಮೂರುತಿಯಾ||1|| ಸ್ನಾನ ಪ್ರಣಮ ವಾಚಾ

ತೋರೊ ನಿನ್ನಯ ಮೂರ್ತಿಯ Read More »

ತುಳಸಿಯ ಸೇವಿಸಿ

ತುಳಸಿಯ ಸೇವಿಸಿ ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆ ಯೆಂಬನಿತರೊಳು ಪಾತಕ ಪರಿಹರಿಸಿ ಪುನೀತರನು ಮಾಡುವಳು ಯಾತಕನುಮಾನವಯ್ಯ ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ | ಪದುವನಾಭನು ತಾನು ಉದುಭವಿಸಿ ಬರಲಂದು | ಉದುರಿದುವು ಕಣ್ಣಿಂದ ಉದಕವುತ್ಸಹದಿಂದಲದೆ ತುಳಸಿ ನಾಮನಾಗೆ || ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು | ಒದಗಿ ಸುಜನರು ತಮ್ಮ ಸದನದಲಿ ನಿತ್ಯ ತ್ಪದವಿಗೆ ಸಿದ್ಧವೆಂದು ಮುದದಿಂದ ತಿಳಿದು ವೃಂದಾವನ ರಚಿಸಿದರೈಯ||1|| ಮೂಲದಲಿ ಸರ್ವ ತೀರ್ಥಗಳುಂಟು ತನ್ಮದ್ಯೆ | ಕಾಲ ಮೀರದೆ ಸರ್ವ

ತುಳಸಿಯ ಸೇವಿಸಿ Read More »

ತುರುಕರಿಲ್ಲದ ಮನೆ ದಿರದಿಮ್ಮನೆ

ತುರುಕರಿಲ್ಲದ ಮನೆ ದಿರದಿಮ್ಮನೆ ತುರಕರ ನೋಡದ ಕಣ್ಣು ಶಿಖಿಗರಿಗಣ್ಣು ತುರಕರಿಗೆರಗದ ತಲೆ ಕಗ್ಗತ್ತಲೆ ತುರಕರ ಕಥಾಶ್ರವಣ ಕೇಳದ ಕರ್ಣ ಈಚಲಪರ್ಣ ತುರಕರುವಿನುಚ್ಛಿಷ್ಟ ಉಣ್ಣ ಬಾಯಿ ವಿಷಗಾಯಿ ||1|| ತುರಕರನಾಘ್ರಾಣಿಸದ ಮೂಗು ಅಡವಿಯ ಕೂಗು ತುರಕರಸೇವೆಸದಕರ ವಿಕಾರ ಪಾಮರ ತುರಕರ ಕೊಂಡಾಡದ ಜಿಹ್ವೆ ಅಧಮನ ಗುಂಹೆ ತುರಕರನೊದೆವ ಕಾಲು ಯಮನ ಪಾಲು ||2|| ತುರಕರ ಪ್ರಸಾದ ಉಣ್ಣದ ಹೊಟ್ಟೆ ಗೂಗಿನ ಮೊಟ್ಟೆ ತುರಕರನ ಚಿಂತಿಸದ ಮನ ಗಾರ್ಧಭ ಗಮನ ತುರಕರ ಕಾಯ್ದ ವಿಜಯವಿಠ್ಠಲರೇಯ ತುರಕರ ಕರುಣ ಪಡೆಯದವನು ಶುದ್ಧ

ತುರುಕರಿಲ್ಲದ ಮನೆ ದಿರದಿಮ್ಮನೆ Read More »

ತುತ್ತನ್ನವ ನಮಗಿಂದು ನೀಡಿರಮ್ಮಾ

ತುತ್ತನ್ನವ ನಮಗಿಂದು ನೀಡಿರಮ್ಮಾ ನಾನು ಹತ್ತು ಸಾರೆ ಬಾರದಲೆ ತೊಲಗೆನಮ್ಮ ನಿರಾಧಾರಾದಿ ನಿದ್ರೆ ಬಾರದಮ್ಮ ವಿ ಚಾರಿಸು ತಾಯಿ ಪಾಲುವಲ್ಲೆನಮ್ಮ ಧಾರುಣಿ ಸಂಬಂಧ ಎನಗಾಗದಮ್ಮ ಇದಕ್ಕೆ ಸಾರಿ ಸಾರಿಗೆ ಬಾಯಿ ತೆರೆವೆನಮ್ಮ ||1|| ದೇಹಿ ಎಂಬೊದೆನ್ನ ಜಾತಿಧರ್ಮವಮ್ಮ ನಾನು ದ್ರೋಹಿಗಳಿಗೆ ಕರ ಚಾಚೆನಮ್ಮ ಆಹಾರಕ್ಕೆ ಬಲುದಿನ ಮೀರಿತಮ್ಮ ಸಂ ದೇಹವಿಲ್ಲದೆ ನಾರೇರು ಬಡಿಸಲಮ್ಮ ||2|| ಇದೇ ಕೇಳಿದೆನು ಇನ್ನು ಮೌನವಮ್ಮ ಬಲು ಸದಮಲ e್ಞÁನಿಗಳಿಗೆ ಪ್ರೀತಿಯಮ್ಮ ಮಧುಹರಿ ವಿಜಯವಿಠ್ಠಲ ಪೂರ್ಣನಮ್ಮ ಸರ್ವರ ಹೃದಯದೊಳಗಾನಂದವಾಸನಮ್ಮ ||3||

ತುತ್ತನ್ನವ ನಮಗಿಂದು ನೀಡಿರಮ್ಮಾ Read More »

ತುಂಗೆ ಬಂದಳು ದೇವೋತ್ತುಂಗ ವರಹನಾ

ತುಂಗೆ ಬಂದಳು ದೇವೋತ್ತುಂಗ ವರಹನಾ ಮುಂಗೋರಿಯಲ್ಲಿ ಪುಟ್ಟಿ ಭಕ್ತ ನಿಕರನಾ ಹಿಂಗದೆ ಪೊರೆದು ಸುಖಂಗಳನೀವು ತಾ ಮಂಗಳಾಂಗೆ ಮಾತಂಗೆ ಸುಗಮನೆ ಕಾಳ ಪನ್ನಗವೇಣಿ ಕೋಕಿಲವಾಣಿ ಫಾಲ ಕಸ್ತುರಿ ಜಾಣೆ ಪಲ್ಲವಪಾಣಿ ವಾಲೆ ಮೂಗುತಿ ಅಣಿ ಮುತ್ತು ಕಠಾಣಿ ತೋಳು ಮಂದಾರಮಣಿ ಅರಿಗುಣಶ್ರೇಣಿ ಮೌಳಿಯಾ ಮೇಲಿನ ಜಾಳಿಗೆ ಸೂಸುಕಾ ವಾಲಲು ಕದಿಪಿನ ನೀಲಗೂದಲು ಭ್ರಮ ರಾಳಿಗಳಂತಿರೆ ಬಾಲ ಸುಧಾಕರ ಪೋಲುವ ವದನೇ||1|| ಕುಡುತೆಗಂಗಳ ನೀರೆ ಕಂಬುಕಂಧರೆ ಕಡಗ ಕಂಕಣದ್ವಾರೆ ಕೈಯ ಶೃಂಗಾರೇ ಜಡಿವ ಪದಕಹಾರೆ ಕಂಚಕಸೀರೆ ಮುಡಿದ ಪುಷ್ಪಂಗಳು

ತುಂಗೆ ಬಂದಳು ದೇವೋತ್ತುಂಗ ವರಹನಾ Read More »