ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ

ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ ಘನ್ನಗಿರಿಯ ವಾಸ ಕಮಲಾಸನ ಜನಕ ತಿರುಮಲೇಶಾ ಹರುವ ಸರ್ಪಯಿರುವ ಚೋರ ಮುರುವ ಮೀರಿ ಬರುವ ಶರಧಿ ಉರೆವ ಕಿಚ್ಚು ಕರೆವ ಮೃತ್ಯು ಸುರಿವ ಮಳೆ ಬಿರುವನೆಲ್ಲ ಹೊಡೆವ ದೈತ್ಯಾ ತೊರೆವ ಸನ್ನ್ಯಾವ ಮೇರೆ ತಪ್ಪಿ ಭರದಿ ತನಗೆ ಇದಿರು ಬಂದವ ಕಾಣುತತಿ ಹರಿಯ ನಾಮ ಮುಟ್ಟುವ ದೇವ ಶ್ರೀನಿವಾಸಾ||1|| ಸೃಷ್ಟಿ ಜನರಿಗೊಂದು ಆಳು ಕೊಟ್ಟು ವೇಗದಿಂದ ಕರಿಯ ಲಟ್ಟಿದವರ ಕಾಣೆನಯ್ಯಾ ಎಷ್ಟೆಷ್ಟು ದೂರದಿಂದಲಿ ಕಟ್ಟಿಕೊಂಡು ಹೊನ್ನು ಹಣಗಳ ತಮಗೆ ತಾನೆ ಅಟ್ಟಹಾಸದಿಂದ ಮಂಗಳವ […]

ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ Read More »

ನಿನಗೆ ಅಂಜುವನಲ್ಲ ನೀರಜಾಕ್ಷ

ನಿನಗೆ ಅಂಜುವನಲ್ಲ ನೀರಜಾಕ್ಷ ಮನವಚನ ಕಾಯದಿಂ ನಿನ್ನವರಿಗಂಜುವೆನು ರಾಗದಿಂದಲಿ ಇಂದ್ರದ್ಯುಮ್ನ ಭೂಪಾಲಕನು ಯೋಗ ಮಾರ್ಗದಿ ನಿನ್ನ ಭಜಿಸುತಿರಲು ಯೋಗ ಕುಂಭೋದ್ಭವನು ಬಂದು ಶಾಪವೆ ಕೊಡಲು ಆಗ ಮೌನದಲವನನೊಪ್ಪಿಸಿದ ಬಗೆ ಬಲ್ಲೆ ||1|| ಗುಣವಂತರೀರ್ವರು ಜಯವಿಜಯರು ನಿನ್ನ ಅನುಗಾಲ ಬಾಗಿಲನು ಕಾಯುತಿರಲು ಸನಕಾದಿಗಳು ಬಂದು ಶಪಿಸಲಾಕ್ಷಣದಲ್ಲಿ ಸನುಮತದಲವರ ನೀನೊಪ್ಪಿಸಿದ ಬಗೆಬಲ್ಲೆ ||2|| ನೃಗರಾಯ ಪುಣ್ಯ ಬರಬೇಕೆನುತ ವಿಪ್ರರಿಗೆ ನಿಗಮೋಕ್ತಿಯಿಂದ ಗೋದಾನ ಕೊಡಲು ಜಗಳ ಪುಟ್ಟಿತು ನೋಡು ಅನ್ಯೋನ್ಯರೊಡಗೂಡಿ ಮಿಗೆ ಶಾಪ ಕೊಡಲವನನೊಪ್ಪಿಸಿದ ಬಗೆ ಬಲ್ಲೆ ||3|| ಉಣಲಿತ್ತರೆ ಉಂಡು

ನಿನಗೆ ಅಂಜುವನಲ್ಲ ನೀರಜಾಕ್ಷ Read More »

ನಿನಗಿಂತ ಅಧಿಕರು ನಿನ್ನಯ ಭಕುತರು

ನಿನಗಿಂತ ಅಧಿಕರು ನಿನ್ನಯ ಭಕುತರು ಇದಕೆ ಅನುಮಾನಗೊಳಬೇಡ ಅಂಬುಧಿಶಯನ ಪದಿನಾಲ್ಕು ಲೋಕಗಳು ಪೊತ್ತೆನೆಂದೆನಬೇಡ ಅದುಸಹಿತ ನಿನ್ನನು ಹೃದಯದೊಳಗೆ ಹುದುಗಿಕೊಂಡಿಪ್ಪರೋ ಪದುಮನಾಭನೆ ಕೇಳೊ ಇದರಿಂದ ಸರಿಮಿಗಿಲು ಆರೊ ಜನದೊಳಗೆ ||1|| ವನಜಾಂಡಗಳೆಲ್ಲ ಪೊತ್ತೆನೆಂದೆನಬೇಡ ಕೊನೆಯ ನಾಲಿಗೆಯಲ್ಲಿ ನಿನ್ನ ನಿಲಿಸಿ ಅಣುಮಾತ್ರ ಭಾರ ಇಲ್ಲದಂತಿಪ್ಪರೊ ಘಣಿಶಯನ ಅಧಿಕಸಮರಾರೊ ಜಗದೊಳಗೆ ||2|| ಅಣುಮಹತ್ತು ಆದೆನೆಂದೆನೆಬೇಡವೊ ಗಣನೆ ಇಲ್ಲದೆ ನಿನ್ನ ಕರದಿ ಮುಚ್ಚಿ ಘಣಿ ಆಹಾರಗಾಮಿ ನಾ ವಿಜಯವಿಠ್ಠಲ ನಿನಗೆ ಮಣಿದು ಲೆಕ್ಕಿಸರೋ ನಿನ್ನನು ಮೆಚ್ಚಿದಾಳುಗಳು||3||

ನಿನಗಿಂತ ಅಧಿಕರು ನಿನ್ನಯ ಭಕುತರು Read More »

ನಿಚ್ಚಳಾಗಲಿ ಬೇಕು ತಿಳಿದು

ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು ನಿಚ್ಚಮಾಡುವ ದೋಷರಾಶಿಗಳಳಿದು ನಿಚ್ಚಳಾಗಲಿ ಬೇಕು ಪಾಪವೆಂಬುದು ಹೊರಗಿಹುದೆ ತನ್ನ ಕೋಪವಲ್ಲದೆ ಬೇರೆ ಹೊಸದಾಗಿ ಬಹುದೆ ಅಪವರ್ಗಕೆ ಮಾರ್ಗವಹುದೆ ಬಲು ತಾಪಸಿಗಾದರು ಅದು ಸಾಧನವಹುದೆ ||1|| ಪುಣ್ಯವೆಂಬದು ಬೇರೆಯಿಲ್ಲಾ ನಾನಾ ರಣ್ಯ ಚರಿಸಿದರು ದೊರಕುವದಲ್ಲಾ ಮನ್ಯು ಬಿಡದೆ ಮತ್ತೊಂದಲ್ಲಾ ನಿರುತ ಅನ್ಯರಾಶಿ ಬದಲು ಗತಿಗವಸಲ್ಲಾ ||2|| ವೈಕುಂಠವೆಂಬೋದು ಅಲ್ಲೆ ಬರಿದೆ ಲೌಕೀಕ ತೊರದರೆ ಇಪ್ಪದು ಇಲ್ಲೆ ಈ ಕಲಿಯೊಳಗೆ ಈ ಸೊಲ್ಲೆವೊಲಿಸ ಬೇಕೆನೆ ಮಾರಿ ಓಡುವುದು ನಾ ಬಲ್ಲೆ ||3|| ಹರಿಸ್ಮರಣೆಗೆ

ನಿಚ್ಚಳಾಗಲಿ ಬೇಕು ತಿಳಿದು Read More »

ನಾರಿ ಗೌರಿ ಕೌಮಾರಿ

ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ ವಾರಿಯನು ಧರಿಸುವ ನಾರಿ ಗೌರಿ ಕೌಮಾರಿಪ ಬಾಣ ಕುಂಭನೆಂಬೊ ದಾನವರೀರ್ವರು ಕ್ಷೋಣಿಯೊಳು ಬಂದಲ್ಲಿ ತಪವ ಮಾಡಿ ಮಾಣದಲೆ ಕಮಲ ಗರ್ಭನವೊಲಿಸಿ ವೇಗದಲಿ ಏನು ವರ ಬೇಡೆನಲು ನಗುತಲವನು ಸುರಿದನು ||1|| ಜಗಕ್ಕೊಡಿಯನಾವಾತ ಆತನ ತನು ಸಂಬಂಧಿಗಳೆಮ್ಮ ಕೊಲ್ಲಲ್ಲಿ ಉಳಿದವರ ಬಗಿಯದಂತೆ ವರವನು ಪಾಲಿಸೆನಲು ನಗುತ ಲೋಕೇಶ ದುರುಳರಿಗೆ ಸಲೆ ಇತ್ತಾ ||2|| ಚತುರ್ದಶ ಲೋಕವನು ಗೆದ್ದು ತ್ರಿದಶರಾ ಮಿತಿಯಿಲ್ಲದೆ ಮಾನಭಂಗ ಮಾಡಿ ಪತಿತರು ಈ ತೆರದಲಿರುತಿರಲು ವಿಬುಧರು ಚತುರ ಮುಖಗೆ

ನಾರಿ ಗೌರಿ ಕೌಮಾರಿ Read More »

ನಾರಾಯಣನು ನಾರಿಯಾದನು

ನಾರಾಯಣನು ನಾರಿಯಾದನು ನಾರಾಯಣನು ನಾರಿಯಾಗಲು ಉಗರು ಕಾಂತಿ ಪೋಗಿ ವಾರಿಜಭವ ಮಾರರಿಪು ಮುಖ್ಯರ ಸಾರಸುಂದರವ ತಿರಸ್ಕರಿಸೆ ಶೃಂಗಾರಸ ನಿಧೆ ಸುರರಸುರ ಕರೆಸಿ ವೈರೆವ ಮರೆಸಿ ಸ್ನೇಹದಿಂದಿರಿಸಿ ಈ ಕುಲ ವರಿಸಿ ನಿಮ್ಮೊಳು ಬೆರಸಿ ಸುಖವಂಕುರಿಸುವಂತೆ ಸಂಚರಿಸೆಂದು ಸರಸದಿಂದಲಾದರಿಸೆ ಸುರರ ಧರಿಸಿ ಬಿಡದುದ್ಧರಿಸುವೆ ನಿದ್ರಿ ತರಿಸಿ ದೈತ್ಯರ ವರಿಸೆಂದು ಸರಸಿಜಾಂಬಕ ಹರಿ ಸಿರಿ ||1|| ದಿತಿಜಾದಿತಿ ಜ್ಯಾತ ತತಿಗಳನು ಸ ಮ್ಮತ ಬಡಿಸಿ ಅಮೃತ ಬಪ್ಪದಕ್ಕೆ ಹಿತವ ಪೇಳುವೆನೆಂದತಿಶಯದಿಂದ ಚತುರಾತುಮ ಮಾರುತ ಪಿತಾ ಕ್ಷಿತಿಯೊಳು ನೂರು ಶತ ಯೋಜನ

ನಾರಾಯಣನು ನಾರಿಯಾದನು Read More »

ನಾಮತ್ರಯ ನೆನೆಯಿರೊ

ನಾಮತ್ರಯ ನೆನೆಯಿರೊ ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ ದುಶ್ಚರಿತವೆಂಬ ಮಹ ಕಾನನಕ್ಕೆ ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ ನಿಚ್ಚಳವಾಗಿದ್ದ ಸುಜ್ಞಾನ ಪಾಲಿಪದು||1|| ಅನಂತ ಅನಂತ ಎಂದು ಮನದಲ್ಲಿ ನೆನೆಯೆ ನಾನಾ ಭವಬಂಧ ದುಷ್ಕರ್ಮದಿ ಹೀನಾಯವನು ಕಳೆದು ಹಿತದಿಂದಲಿ ವೊಲಿದು ಆನಂದ ಆನಂದವಾದ ಫಲ ಕೊಡುವುದು. ||2|| ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ ಗೋವಿಂದ ಕಡೆಹಾಕಿ ಸಾಕುವದು ದೇವೇಶ ಶಿರಪತಿ ವಿಜಯವಿಠ್ಠಲೇಶನ ಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು ||3||

ನಾಮತ್ರಯ ನೆನೆಯಿರೊ Read More »

ನಾನು ನಿನ್ನ ಸೇವಕ ಏನಾದರೂ ಬರಲಿ

ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವನೆ ರಂಗಾ ಅಪತ್ತೆ ಬರಲಿ ಅತಿಶಯದ ಕ್ಲೇಶವೇ ಬರಲಿ ಕೋಪ ಕಾಮಾದಿಗಳು ವೆಗ್ಗಳಿಸಲಿ ಪಾಪದ ರಾಶಿಗಳು ಬಂದು ಬೆನ್ನಟ್ಟಲಿ ಶ್ರೀಪತಿ ನಿನ ಪಾದವನು ಬಿಡಬಲ್ಲನೆ ||1|| ಯಮನಪುರದ ಬಟ್ಟೆ ಅತಿ ಕಠಿಣವಾಗಲಿ ಯಮನಾಳು ಬಲು ಭಯಂಕರರಾಗಲಿ ಯಮನು ದಂಡಿಸಿ ತೀವ್ರ ನಿರಯದೊಳಗೆ ಇಡಲಿ ಕಮಲನಾಭನೆ ನಿನ್ನ ಪಾದವನು ಬಿಡಬಲ್ಲನೆ||2|| ಲೋಕದೊಳಗಿದ್ದ ಜನರಿಗೆ ಬಪ್ಪ ದೋಷಗಳು ಏಕವಾಗಿ ಎನಗೆ ಬರಲಿ ಇಂದೆ ನಾ ಕಳವಳಿಸಿದರು ನಿನ್ನಂಘ್ರಿಯಗಳಾಣೆ ಶ್ರೀಕಾಂತ ವಿಜಯವಿಠ್ಠಲರಂಗ ಕೇಳೊ||3||

ನಾನು ನಿನ್ನ ಸೇವಕ ಏನಾದರೂ ಬರಲಿ Read More »

ನಾಡ ದೈವಗಳ ಪೂಜೆಯನು

ನಾಡ ದೈವಗಳ ಪೂಜೆಯನು ಮಾಡಿದರೆ | ಕೇಡಲ್ಲದೆ ಮತ್ತೆ ಕೈವಲ್ಯವುಂಟೇ ಕೊಳಚಿ ನೀರನು ದಾಟಲರಿಯದ ಮನುಜಗೆ ನಿಲವುದ್ದ ದ್ರವ್ಯ ಕೊಡುವೆ ಎನ್ನ ನಾ- | ಜಲನಿಧಿಯ ಉತ್ತರಿಸಿಕೊಂಡು ಎಂದರೆ ಅವನು | ಅಳಿಯದಂತೆ ದಡಕೆ ತರಬಲ್ಲನೇ ||1|| ಕತ್ತಲೆಗಂಜುವನ ಕರೆತಂದು ಶೃಂಗರಿಸಿ | ಉತ್ತಮದ ವಾಜಿವಾಹನವ ಮಾಡಿ || ಕತ್ತಿಯನು ಕರದಲ್ಲಿ ಕೊಟ್ಟು ರಿಪುಪರಿವಾರ- | ದತ್ತ ಒಂದಡಿಯಿಟ್ಟು ಬರಬಲ್ಲ್ಲನೇ ||2|| ತನಗೆ ಬಂದಾವಸ್ತು ಪರಿಹರಿಸಿಕೊಳ್ಳದೆ ಪರ- | ಮನ ವಿಡಿದು ಭಜಿಸಿದರೆ ಏನಾಗದೊ || ಬಿನಗು

ನಾಡ ದೈವಗಳ ಪೂಜೆಯನು Read More »

ನವನೀತ ತಸ್ಕರಾಯ ಜಯಮಂಗಳಂ

ನವನೀತ ತಸ್ಕರಾಯ ಜಯಮಂಗಳಂ ಪವಮಾನ ವಂದಿತಾಯ ಶುಭಮಂಗಳಂ ಪರಿಪೂರ್ಣಾಯ ವಿಶ್ವ ಪರಬ್ರಹ್ಮ ಅಚ್ಯುತಾಯ ಶರನಿಧಿ ಮಂದಿರಾಯ ಜಯಮಂಗಳಂ ಪರವಸ್ತ ಪರಪರಂಜ್ಯೋತಿ ಪ್ರಕಾಶಾಯ ಸಿರಿದೇವಿ ಅರಸಾಯ ಶುಭಮಂಗಳಂ ||1|| ಈಶಾ ಇಂದ್ರಾ ವಂದಿತಾಯ ವಿಶ್ವನಯನಾಯ ವಾರಾ ಣಾಸಿ ಕ್ಷೇಮ ಸ್ಥಾಪಿತತಾಯ ಜಯಮಂಗಳಂ ಆಶಾ ದೋಷಾ ಕ್ಲೇಷಾ ಪಾಶಾ ನಾಶಾ ನಾರಾ ಪೋಷಕಾಯ ಶೇಷರಾಜ ಶಯನಾಯ ಶುಭಮಂಗಳಂ ||2|| ವಾಣೀಪತಿ ಜನಕಾಯ ವೇಣು ನಾದಾ ವಿನೋದಾಯ ಮಾಣಿಕ್ಯ ಹೀರಾ ಹಾರಾಯ ಜಯಮಂಗಳಂ ಬಾಣ ಬಾಹು ಖಂಡನಾಯ ಬಲಿ ಸದನವಾಸಾಯ ಚಾಣೂರ

ನವನೀತ ತಸ್ಕರಾಯ ಜಯಮಂಗಳಂ Read More »

ನರಸಿಂಹ ವಜ್ರಸಿಂಹ

ನರಸಿಂಹ ವಜ್ರಸಿಂಹ ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು ಪರಿಯ ದೈವವೆ ಮೊರೆಯೋಗಲೂ ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ||1|| ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟಿತಿರೆ ಪಗಲಿರಳು ಒಂದೆಂದರು ಸಕಲರೂ ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ ||2|| ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ ಕಕ್ಕಸದ ದೈವ ಅನಂತ ಪದುಮನಾಭ

ನರಸಿಂಹ ವಜ್ರಸಿಂಹ Read More »

ನರಕ ಎತ್ತಣದೋ ನರಕ

ನರಕ ಎತ್ತಣದೋ ನರಕ ಎತ್ತಣದೋ ನರ ಕಂಠೀರವನೆಂದು ಸ್ಮರಿಸುವ ಜನರಿಗೆ ಸ್ನಾನ ಮಾಡುವುದೇಕೆ ಧ್ಯಾನಗೈಯುವುದೇಕೆ ದಾನ ಧರ್ಮಂಗಳು ಮಾಡಲೇಕೆ ಶ್ರೀ ನಾರಾಯಣನೆಂದು ಆವಾಗಲೂ ಜಿಹ್ವೆ ತ್ರಾಣದಲಿ ಬಿಡದೆ ಎಣಿಸುವ ಜನರಿಗೆ||1|| ತೀರ್ಥ ಮೀಯುವದೇಕೆ ಯಾತ್ರೆ ಚರಿಪದೇಕೆ ಸ್ತೋತ್ರ ಮಂತ್ರಾದಿಗಳು ಪಠಿಸಲೇಕೆ ಚಿತ್ರಮಹಿಮ ನೀಲಗಾತ್ರನ್ನ ಚರಿತೆ ಕಾ ಲತ್ರಯ ಬಿಡದೆ ಉಚ್ಚರಿಸುವ ಜನರಿಗೆ ||2|| ದೀಪ ಧೂಪಗಳೇಕೆ ನಾನಾ ಪರಿಯಲ್ಲಿ ಸೋಪಸ್ಕರದ ಎಡೆ ಇಡಲೇತಕೆ ಅಪಾರ ಮಹಿಮ ಅನಾಥರೊಡೆಯ ರಂಗ ಶ್ರೀಪತಿ ಎಂದೀಗ ಸ್ಮರಿಸುವ ಜನರಿಗೆ ||3|| ಭೂತದಯಗಳೇಕೆ

ನರಕ ಎತ್ತಣದೋ ನರಕ Read More »

ನಮೋ ನಮೋ ಶ್ರೀ ಮಧ್ವರಾಯ ಸುರಮುನಿಗೇಯ

ನಮೋ ನಮೋ ಶ್ರೀ ಮಧ್ವರಾಯ ಸುರಮುನಿಗೇಯ ನಮೋ ನಮೋ ಶ್ರೀ ಮಧ್ವಾಚಾರ್ಯ ಆರ್ಯಾ ಭೃಗು ಕುಲೋತ್ತಮ ರಾಮ ಭೂಸುರರಿಗೆ ಸರ್ವ ಜಗವೆಲ್ಲ ಧಾರಿಯನು ಯೆರದು ಸಂಹ್ಯಾ ನಗದಲ್ಲಿ ನಿಂದು ಸಮುದ್ರನ್ನ ಹಿಂದಕ್ಕೆ ತೆಗಿಸಿ ಈ ಭೂಮಿಯನು ಸಾಧಿಸಿದನು||1|| ಅತಿ ದಯಾಪರ ಮೂರ್ತಿ ಅಲ್ಲಿಗಲ್ಲಿಗೆ ಕ್ಷೇತ್ರ ಗತಿ ತಪ್ಪಿದಂತೆ ನಿರ್ಮಾಣ ಮಾಡಿ ಸತಿಪತಿಯ ಉದ್ಧರಿಸಿ ಬರುತ ಕಂಡನು ಉ ನ್ನತವಾದ ಪರ್ವತವು ಯೋಜನವಿರೆ ||2|| ಬೆರಗಾಗಿ ಪರಶುರಾಮನು ಬಂದು ಈ ಗಿರಿಯಲ್ಲಿ ನಿಂದು ಅಗ್ರಭಾಗವೈದೆ ತರಹರಿಸಲಾರದೇ ಭೂಮಿಗಿಳಿಯಿತು ಅದ್ರಿ

ನಮೋ ನಮೋ ಶ್ರೀ ಮಧ್ವರಾಯ ಸುರಮುನಿಗೇಯ Read More »

ನಮೋ ನಮೋ ನಾರಾಯಣ ನಮೋ

ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣ ನಮೋ ಬಾದರಾಯಣ ನರನ ಪ್ರಾಣ ಶಿವನ ಮೋದದಲಿ ಪಡೆದೆ ಶಿವರೂಪದಲಿ ನಿಂದೆ ಶಿವನೊಳಗೆ ಏರಿದೆ ಶಿವನಿಗೊಲಿದೆ ಶಿವಗೆ ನೀ ಮಗನಾದೆ ಶಿವ ತಾತನೆನೆಸಿದೆ ಶಿವನ ಮಗನಾ ಪಡೆದೆ ಶಿವನ ಕಾಯ್ದೆ||1|| ಶಿವಗೆ ಸಹಾಯಕನಾದೆ ಶಿವನ ಕಂಗಡಿಸಿದೆ ಶಿವನ ಧನುವನು ಮುರಿದೆ ಶಿವನೊಲಿಸಿದೆ ಶಿವನ ಜಡ ಮಾಡಿದೆ ಶಿವನ ಒಡನೆ ಬಂದೆ ಶಿವಮುನಿಗೆ ಉಣಿಸಿದೇ ಕೇಶವನೆನಿಸಿದೇ ||2|| ಶಿವನ ಜಡೆಯೊಳಗಿದ್ದ ಶಿವಗಂಗೆಯ ಪೆತ್ತೆ ಶಿವನ ಕೂಡಲಿ ಕಾದಿದವನ ಭಾವ ಶಿವ

ನಮೋ ನಮೋ ನಾರಾಯಣ ನಮೋ Read More »

ನಮೋ ನಮೋ ಜಯ ತುಂಗಭದ್ರೆ

ನಮೋ ನಮೋ ಜಯ ತುಂಗಭದ್ರೆ ನಮಿತರನು ಪಾಲಿಸುವ ಸದ್ಗುಣ ಸಮುದ್ರೆ ವೈರಾಚ ನಗರಿಯಲಿ ವಿಧಾರುಣಿಯ ರೋಚಕನು ಮೀರಿ ದೇವಾದಿಗಳಿಗಂಜದಿರಲು ಘೋರ ರೂಪವ ತಾಳಿ ಅವನ ಕೊಲ್ಲಲು ಹರಿಯ ಮೋರೆ ಕರಿಬೆವರಿಡಲು ಅತಿ ಹರುಷದಿಂದ ||1|| ರೂಢಿಯೊಳಗೆಲ್ಲ ಸಮಸ್ತ ನದಿ ಉದಕಗಳು ನೋಡಿದರು ರುಚಿಕರವಿಲ್ಲವೆಂದೂ ದಾಡಿಯಲಿ ಧರಿಸಿದನು ಸುರರು ಕೊಂಡಾಡುತಿರೆ ಈಡ್ಯಾರು ನಿನ್ನ ಮಹಿಮೆಗೆ ವರಹತನಯೇ ||2|| ಸಲಿಲವೇ ಹರಿಯಾದ ಶಿವ ನಿನಗೆ ಶಿಲೆಯಾದ ಬಲು ಮುನಿಗಳು ಮಳಲವಳಗಾದರೂ ಜಲಜ ಸಂಭವನು ತೃಣನಾದ ಬಳಿಕ ವಿಷ್ಣು ಕೆಲವುಕಾಲ ನಿನ್ನೊಳಗೆ

ನಮೋ ನಮೋ ಜಯ ತುಂಗಭದ್ರೆ Read More »

ನದನದಿಗಳನು ಸ್ಮರಿಸಿರೋ

ನದನದಿಗಳನು ಸ್ಮರಿಸಿರೋ ನದನದಿಗಳನು ಸ್ಮರಿಸಿ ಹೃದಯ ನಿರ್ಮಳರಾಗಿ ಮುದದಿಂದ ನಿಮ್ಮ ಮನದಧಮತನ ಬಿಟ್ಟ ಸಂ ಪದವಿಗೆ ಸೋಪಾನದಂತಾಗುವದು ಶ್ರೀ ಪದುಮನಾಭನು ವೊಲಿವನು ಸುರ ತರಂಗಿಣಿ ಸಿಂಧು ಕುಶವರ್ತಳೆ ಸೀತ ಮರುಧೃತಿ ಹೇಮವತಿ ನೇಮಿ ನೇತ್ರವತಿ ತರಣಿಸುತೆ ನರ್ಮದಾ ಗಾಯತ್ರಿ ಗೋಮತಿ ಗರುಡ ಸಾಧರ್ಮಾ ಸರಸ್ವತಿ ಮಣಿಮುಕ್ತ ಮುಕ್ತನದಿಯು ಪ್ರಣತ ವರದಕಾಗಿಣಿ ಕೃಷ್ಣವೇಣಿ ವೇದವತಿ ಹರಿಧೃತಿ ಇಂದ್ರಾಣಿ ಪುನಃ ಪುನಃ ವಾಣಿವಂ ಜರಫಣಿ ಭೀಮರಥಿನೀ ||1|| ವಾರುಣಿ ವರುಣ ಅಸಿಭುವನಾಶಿ ಕುಮಾರ ಧಾರಿ ತುಂಗಾ ಭದ್ರಿಗಣಪತಿ ಶತಭಾಗ ನಾರದಿ

ನದನದಿಗಳನು ಸ್ಮರಿಸಿರೋ Read More »

ನಂಬಿದ್ದೆನೆಲೊ ದಾತ ಅಂಬುಜಾಸನ

ನಂಬಿದ್ದೆನೆಲೊ ದಾತ ಅಂಬುಜಾಸನ ತಾತ ಕುಂಭಿಣಿಯೊಳು ಪುಟ್ಟಿ ಜನನಿಯ ಮೊಲೆ ಪಾಲು ಉಂಬೋದು ಬಿಡಿಸೊ ಜನನವ ಕೆಡಿಸೊ ರಸಿಕೆ ಮುಹಕದಲಿ ನಿಶಿದಿನದಲಿ ಹೊರಳಿ ಅಸುರುಸುರೆನುತಲಿ ಹಸಗೇಡಿಯಾದೆನೊ ಅಸವು ನನ್ನದು ಎಂದು ಈ ಪರಿ ನೊಂದು ||1|| ಹಲವು ಲಂಪಟದೊಳು ಹಲುಬಿ ಹಕ್ಕಲನಾದೆ ಬಲೆಯೊಳಗಿದ್ದ ಎರಳೆಯಂತೆ ಮಿಡುಕುತ ಮಲಮೂತ್ರದೊಳು ಬಳಲಿದೆ ಕೇಳೊ ||2|| ಎಳ್ಳನಿತು ಸತ್ಕರ್ಮವುಳ್ಳದ್ದು ಚರಿಸಿದೆ ಬಲಿಷ್ಠ ನಾನೆಂದು ಬಲು ದುರ್ಮತಿಯಿಂದ ಎಲ್ಲರ ಜರಿದೆ ಧರ್ಮವ ಮರೆದೆ ||3|| ಚಾರುವಾಕರಗೂಡಿ ಮೂರೆ ವಿಕಾರದಲ್ಲಿ ನೀರೇರ ಒಡಗೂಡಿ ನೀತಿ

ನಂಬಿದ್ದೆನೆಲೊ ದಾತ ಅಂಬುಜಾಸನ Read More »

ನಂಬಿದೇ ನಿನ್ನಯ ಪಾದ ಮುಖ್ಯ ಪ್ರಾಣಾ

ನಂಬಿದೇ ನಿನ್ನಯ ಪಾದ ಮುಖ್ಯ ಪ್ರಾಣಾ ನಂಬಿದೇ ನಿನ್ನಯ ಪಾದಾ ಡಂಬರ ತೊಲಗಿಸಿ ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಹಂಸಮಂತ್ರ ತಪ್ಪದೆ ದಿನದಿನ ಒಪ್ಪದಿಂದಲಿ ಭಜಿಸಿ ತಪ್ಪಿಸೋ ಭವವಾ ಸ ಮೀಪದ ಜೀವ ಕೊ ಅಪ್ಪನಂದದಿ ಪುಣ್ಯ ವಪ್ಪಂತೆ ಕರುಣಿಸೊ ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೋ ||1|| ಹತ್ತೇಳು ಎರಡಾಯುತ ನಾಡಿಯೊಳು ಸುತ್ತಿ ಸೂತ್ರವ ಮಾರುತಾ ಉತ್ತರÀ ಪಾಲಿಸೋ ಉತ್ಕ್ರಮಣದಲ್ಲಿ ನೆತ್ತಿಯದ್ವಾರದಿಂದ ಎತ್ತಮರಿಯಲೀ ಸದದೆ ತತ್ತುವರೊಳು ಜೀವೋ ತ್ತಮನೆ ಸತ್

ನಂಬಿದೇ ನಿನ್ನಯ ಪಾದ ಮುಖ್ಯ ಪ್ರಾಣಾ Read More »

ನಂಬಿದೆನೊ ನಿನ್ನ ಪಾದಾರವಿಂದಾ

ನಂಬಿದೆನೊ ನಿನ್ನ ಪಾದಾರವಿಂದಾ ಇಂಬು ಈವದು ಎನಗೆ ವೈಕುಂಠಪುರದೊಳಗೆ ಮಲಭಾಂಡದಲ್ಲಿ ಪೊಕ್ಕು ನೆಲೆಗಾಣದಲೆ ಸಿಕ್ಕು ಸಲೆ ಸೊರಗಿ ತಿರುಗಿದೆನೊ ಬಳಲಿ ಮರುಗಿ ಉಳಿವದಕುಪಾಯವನು ಒಂದರೆ ಕಾಣೆನೊ ಎಲೊ ಬಲುದೈವ ನೀನೆ ದಯಾಳು ಎಂದೂ ||1|| ಕಂಡಮಾರುತದಲ್ಲಿ ಕೈವಲ್ಯ ಕೊಡುವಲ್ಲಿ ಮಂಡಲದೊಳು ಎಣಿಯಾರು ನಿನಗೆ ಭಂಡಕಾಯವ ತೆತ್ತು ಬರಲಾರೆ ನಿನ್ನ ತೊತ್ತು ತೋಂಡರೊಳು ಇಡು ನಿತ್ಯ ಎಳೆನೋಟದಲಿ ನೋಡು ||2|| ಯದುಕುಲಲಲಾಮ ಸುರಸಾರ್ವಭೌಮ ಮಹಿಮ ಮದನಪಿತ ಕಾಳಿಂಗಭಂಗ ರಂಗಾ ಮಧುಸೂದನ ವಿಜಯವಿಠ್ಠಲ ಲಕುಮಿನಲ್ಲಾ ಹೃದಯದೊಳು ಪೊಳೆವ ಬಲು ವಿಚಿತ್ರ

ನಂಬಿದೆನೊ ನಿನ್ನ ಪಾದಾರವಿಂದಾ Read More »

ನಂಬಿದೆನೊ ನಂಬಿದೆನೊ ಅಂಬುಜಾಕ್ಷ

ನಂಬಿದೆನೊ ನಂಬಿದೆನೊ ಅಂಬುಜಾಕ್ಷ ತೊಂಬಲಿಗೆ ಹಂಬಲಿಸಿ ಹಾರೈಸಿದೆ ನಿನ್ನ ಮೊದಲುಂಡ ಪಾಪದಲಿ ಕಳೆಗುಂದಿ ಕಳೆಗುಂದಿ ಮುದದಿಂದ ನಿತ್ರಾಣನಾದೆನಯ್ಯಾ ಪದುಮನಾಭನೆ ನಿನ್ನಭಯದೊಂಬಲನಿತ್ತು ವದನ ಚೇತನನಾಗುವಂತೆ ದಯಮಾಡೊ ||1|| ವಿಷವ ಸೇವಿಸಿದ ತರುಣನಂತೆ ಮೆಲವು ಭಾವಿಸದೆ ಬೀಳುತೀ ನೀ ನೆಲೆಗಾಣದೆ ಬಿಸಿಜಾಕ್ಷ ನೀನೆ ಕೃಪಾಳು ಎಂದೆಂದಿಗೆ ರಸ ಸುರಿವ ಸುರಿವ ಬಾಯದೊಂಬಲಾನಿತ್ತು ಸಲಹೊ||2|| ಆವದಾದರುವಲ್ಲೆ ಅನಿಮಿತ್ತ ಬಂಧು ಕೇಳು ಜೀವವೇ ನಿನ್ನ ಪಾದದಾಧೀನವೋ ಶ್ರೀವಧುರಮಣ ನಮ್ಮ ವಿಜಯವಿಠ್ಠಲ ನೀನೆ ದೇವ ಯನಗ ಹುದು ತೊಂಬಲನಿತ್ತು ಪೊರಿಯೊ ||3||

ನಂಬಿದೆನೊ ನಂಬಿದೆನೊ ಅಂಬುಜಾಕ್ಷ Read More »

ನಂಬಿದೆ ನಿನ್ನ ಪಾದವ ಕಾಣಬೇಕೆಂದು

ನಂಬಿದೆ ನಿನ್ನ ಪಾದವ ಕಾಣಬೇಕೆಂದು ಹಂಬಲಿಸಿದೆ ಮಾಧವ ಬೆಂಬಲವಾಗು ಪೀತಾಂಬರಧರ ಕುಟುಂಬಿ ಪಾಲಾ ಕಮಲಾಂಬಕ ರಂಗಾ ಚಂದಿರಹಾಸ ಸರ್ವೇಶ ಚಂಡ ಪ್ರಕಾಶಾ ಇಂದಿರಾ ಮನೋವಿಲಾಸ ಮಂದಿರ ವೈಕುಂಠವಾಸಾ ಮನಜವೇಷ ವೃಂದಾರಕರ ನಿಜಕೋಶಾ ಮಂದರಧರ ವಸುಂಧರಪತಿ ಪುರಂದರ ವಂದಿತ ಸುಂದರಾಂಗ ಕಂಬು ಕಂಧರ ಎನ್ನಯ ಒಂದರಗಳಿಗೆ ಕಂದನ ಇಂದೀಗ ತೊಂದರೆಕಿಡದಿರು ||1|| ತಂದಿತಾಯಿಗಳವರಾರೊ ತಾವಳಿದು ತಂದ ಸತಿ ನಂದನರೊ ಬಂಧುಬಳಗ ಮತ್ತಾರೊ ಬರಿದೆ ಊರು ಪೊಂದದೆನಲೊ ಇಳಿಜಾರು ಎಂದೆಂದಿಗಿದರ ಗಂಧದೊಳಗೆ ನಾ ಬಂದು ಬಳಲಿ ಸಂ ಬಂಧದೊಳುರಳಿದೆ ಮುಂದಾದರು

ನಂಬಿದೆ ನಿನ್ನ ಪಾದವ ಕಾಣಬೇಕೆಂದು Read More »

ನಂಬಿದೆ ನಿನ್ನ ನೀರಜಪಾದ

ನಂಬಿದೆ ನಿನ್ನ ನೀರಜಪಾದ | ಇಂಬಿನಲ್ಲಿಟ್ಟು ಸಲಹೊ ಪ್ರಸಾದ ಅಂಬರೀಷನ ಶಾಪ ಹಿಂಗಿಸಿ ಕಳೆದ ದ- | ಯಾಂಬುಧಿ ನೀನೆಂದು ಹಂಬಲಿಸಿದೆ ಹರಿಯೆ ಉಗ್ರನ್ನ ಖಳವಂಚಿಸಿ ತನ್ನ ಕ- | ರಾಗ್ರವಾ ಶಿರದಲ್ಲಿ ಇಡಬರಲು || ಅಗ್ರೇಶ ಕಾಯೆಂದು ಅವನೀಗ ಮೊರೆಯಿಡೆ | ಶೀಘ್ರದಿಂದಲಿ ಬಂದು ಕಾಯ್ದು ಕರುಣಿಯೆಂದು||1|| \ ಕಾಲದೂತರು ಅಜಾಮಿಳನೆಳೆಯಲು | ನಾಲಿಗೆಯಿಂದ ನಾರಗÀನೆನ್ನಲು || ಆಲಸ್ಯ ಮಾಡದೆ ನಿನ್ನ ದೂತರನಟ್ಟಿ | ಓಲಗ ವೈಕುಂಠವಿತ್ತ ಭಾಂದವನೆಂದು ||2|| ಭೂತಳದೊಳು ನಿನ್ನನು ಪೋಲುವ |

ನಂಬಿದೆ ನಿನ್ನ ನೀರಜಪಾದ Read More »

ನಂಬಿ ನೆಚ್ಚದಿರು ನರಲೋಕ

ನಂಬಿ ನೆಚ್ಚದಿರು ನರಲೋಕ ಸುಖವೆಂಬ, ಅಂಬಲಿ ಪರಮಾನ್ನ ಹಂಬಲಿಸುವುದು ಹರಿಲೋಕಾನಂದವೆಂಬ ಪೀಯೂಷಪಾನ ದುರುಳಜನರ ಸಂಗವೆಂಬುದು ಎಂದಿಗೂ ನೊಣ ಬೆರಸಿದ ಊಟ ಪರಮಭಾಗವತರ ಪದಸಂಗವೆಂಬುದು ಮಸ್ತಕದ ಮಕುಟ ಮರೆ ಮೋಸಗೊಳಿಸುವ ಸತಿಸುತರೆಂಬೋದೆ ಕೇವಲ ಯಮಕಾಟ ಪರತತ್ವವಾದ ಶ್ರೀಹರಿಯ ತಿಳಿವುದೆ ವೈಕುಂಠಕೆ ಓಟ ||1|| ಬಿದ್ದ ಕಾಳಿಗೆ ಕಾಳು ಕೂಡಿ ಹಾಕುವುದೆಲ್ಲ, ಹಾರಿ ಹೋಗುವ ಹೊಟ್ಟು ಇದ್ದಾಗ ದಾನ ಧರ್ಮಂಗಳ ಮಾಡೋಡು ಕೈವಲ್ಯಕೆ ಮೆಟ್ಟು ಹೊದ್ದಿರುವರ ಕಂಡಾಸೆಯಪಟ್ಟರೆ ಹೋಗುವಿ ನೀ ಕೆಟ್ಟು ಬುದ್ಧಿಹೀನರಿಗೆ ಪೇಳದಿರೆಲೊ ತತ್ವಸಾರ ಸುಂದರ ಗುಟ್ಟು ||2||

ನಂಬಿ ನೆಚ್ಚದಿರು ನರಲೋಕ Read More »

ನಂಬದಿರು ಈ ದೇಹ

ನಂಬದಿರು ಈ ದೇಹ ನರಲೋಕವೆಂಬುದು ಸುಖವೆಂದು ನಂಬದಿರು ಮಾಯಾ ಪ್ರಪಂಚವನು ಅನುಗಾಲಾ ನಂಬು ನಮ್ಮಂಬುಜಾಂಬಕನ ಪಾದಾಂಬುಜವ ನಂಬಿದರೆ ಮುಕ್ತಿಯಲಿ ಇಂಬುಂಟು ಮರುಳೆ ತಂದೆ ತಾಯಿ ತಮ್ಮ ಸುಖಕೆ ಏಕಾಂತದಲಿ ಒಂದು ದಿನಲಿರಲಾಗಲವರರೇತಸು ಬಿಂದುವಿನಲಿ ಉತ್ಪತ್ಯವಾಗಿ ಬೆರೆದಾಗ ದು ರ್ಗಂಧದೊಳು ಬಂದು ನಿಂದೂ ಬಂಧನದೊಳಗೆ ಸಿಲುಕಿ ಒಂದೆಂಟು ತಿಂಗಳು ಪೊಂದಿ ಯಾತನೆಬಟ್ಟು ಮಲಮೂತ್ರ ಹೇಸಿಕೆಯಿಂದ ಕುದಿದು ಬೆಂದೂ ಗರ್ಭದ ಮಧ್ಯದಲಿ ನೊಂದು ಬಿಂದು ಕೆಳಗೆ ಹೊರಳಿದಿರು ಮರುಳೆ ||1|| ತಾಮಸವ ಕವಿದು ಕಾವಳಗೊಂಡ ಕತ್ತಲೆಯ ಸೀಮೆಯೊಳಗೆ ಸಿಲ್ಕಿ ಬಾಲತ್ವತನದಲ್ಲಿ

ನಂಬದಿರು ಈ ದೇಹ Read More »

ಧ್ಯಾನಿಸು ಶ್ರೀಹರಿಯ ಧ್ಯಾನಿಸು

ಧ್ಯಾನಿಸು ಶ್ರೀಹರಿಯ ಧ್ಯಾನಿಸು ಧ್ಯಾನಿಸು ಮನವೆ ಶ್ರೀ ಹರಿಯ ಪಾದ ಧ್ಯಾನವಂತರ್ಯಾಮಿ ಹರಿಯ, ಆಹ ಪ್ರಾಣಾಪಾನ ವ್ಯಾನೋದಾನ ಸಮಾನರ್ಗೆ ಪ್ರಾಣನಾಗಿಹ ಮುಖ್ಯ ಪ್ರಾಣಾಂತರ್ಗತನ ಪರಮಾಣು ಪ್ರದೇಶದಲ್ಲಿ, ಪ್ರಾಣಿ ರಾಸಿ ಅನಂತವುಂಟಲ್ಲಿ ಹೀಗೆ ವರಲುತಿದೆ ವೇದದಲ್ಲಿ ದೃಷ್ಟಾಂ ತರವ ಪೇಳುವೆ ದೃಢದಲ್ಲಿ-ಆಹ ಪರಮ ಸೂಕ್ಷ್ಮ ವಟತರು ಫಲದಲ್ಲಿಹ ಪರಿಮಿತಲ್ಲದ ಬೀಜದಿರವನರಿತು ನಿತ್ಯ ||1|| ನಿರುತ ಸುವರಣ ಬ್ರಹ್ಮಾಂಡದಲ್ಲಿ ಪರಿಪೂರ್ಣವಾಗಿ ಅಖಂಡವಾಗಿ ಮೆರೆವುತಲಿಪ್ಪ ಮಾರ್ತಾಂಡ ದಿವ್ಯ ಕಿರಣದಂತಿರುವ ಪ್ರಚಂಡ-ಆಹ ಹೊರಗೆ ಒಳಗೆ ಹರಿ ಚರಿಸುವ ಪರಿಯ ನೀ ನರಿತು ಆವಾಗಲು

ಧ್ಯಾನಿಸು ಶ್ರೀಹರಿಯ ಧ್ಯಾನಿಸು Read More »