ನೆನೆಸು ಮನವೆ ನಲಿವಿನಿಂದಲಿ

ನೆನೆಸು ಮನವೆ ನಲಿವಿನಿಂದಲಿ ನೆನೆಸು ಮನವೆ ನಲಿವಿನಿಂದಲಿ ಮನಸಿಜನ್ನ ಪೆತ್ತ ಹರಿಯ ವನಜ ಚರಣವನ್ನು ಹೃ ದ್ವನಜದೊಳಗೆ ನಿಲಿಸಿ ನಗುತ ಪ್ರಳಯದಲ್ಲಿ ವರ ರಮಾ ಕ ಳವ ತಾಳಿ ಲೀಲೆಯಲ್ಲಿ ಪೊಳವ ಕಂಗಳಿಂದ ಕಿಡಿ ಗಳನು ತೋರಿ ಕುಣಿವುತ ಜಲಜ ಪೀಠ ಸುರಪ ಪುಲಿದೊ ಗಲ ವಸನ ಉಳಿದ ಸುರರ ಅಳಿದು ಏಕಮೇವನಾಗಿ ನಲಿವ ನಾರಸಿಂಹನೆಂದು ||1|| ಜರಾಮರಣರಹಿತ ಸುಜ ನರನ ಕಾಯ್ದು ಕರುಣದಲ್ಲಿ ಜರಿದು ಅದ್ರಿಯಲ್ಲಿ ದನುಜರನ್ನು ಶೀಳಿ ವೇಗ ನಿ ರ್ಜರರ ಪೊರೆದು ನಿಗಮತತಿಗೆ […]

ನೆನೆಸು ಮನವೆ ನಲಿವಿನಿಂದಲಿ Read More »

ನೆನೆಬೇಕು ನೆನೆಬೇಕು ಶ್ರೀಹರಿಯ

ನೆನೆಬೇಕು ನೆನೆಬೇಕು ಶ್ರೀಹರಿಯ ನೆನೆಬೇಕು ಹರುಷದಿಂದಲಿ ಶ್ರೀ ಹರಿಪಾದಂಗಳ ನಿರುತದಿಂದ ಭಜಿಸಲು ದುರಿತ ನಿವಾರಣ||1|| ಅಖಿಳಾಂಡಗಳನ್ನು ಉದರದಿ ಧರಿಸಿದ ನಿಖಿಳ ಲೋಕದಿ ವ್ಯಾಪ್ತ ಶ್ರೀಹರಿಯೆನುತಾ ||2|| ಸಂತತ ಚಿಂತೆಯ ಸಂತಾನ ಬಿಡಿಸುವ ಚಿಂತನೆ ಶ್ರೀ ವಿಜಯವಿಠ್ಠಲನಡಿಗಳ ||3||

ನೆನೆಬೇಕು ನೆನೆಬೇಕು ಶ್ರೀಹರಿಯ Read More »

ನೆನೆದು ನೆನೆಸಿ ನಿಮ್ಮ

ನೆನೆದು ನೆನೆಸಿ ನಿಮ್ಮ ತನುಮನದಲ್ಲಿ ಯೋಚನೆ ಮಾಡೀ ಎಣಿಸಿ ಗುಣಿಸಿ ಮನಸಿಜನ್ನ ಜನಕನ ಲೀಲೆ ನರನಾರಾಯಣನೀತ ಕೃಷ್ಣ ಹರಿ ಹೃದ್ಭಾನು ಕಪಿಲನೀತ ಹರಿನಾರಾಯಣೇನೀತ ಯೋಗೀ ಶ್ವರ ತಾಪಸ ವೈಕುಂಠನೀತ ಹರನಸಖ ಸ್ವಧಾಮನೀತ ತುರಗವದನನೀತ ದಯಾ ಕರುಣಿ ಸಾರ್ವಭೌಮನನೀತಾ ||1|| ಅಜಿತಯಜ್ಞನಾಮನೀತ ಅಜಗೆ ಪೇಳಿದ ಹಂಸನೀತ ಸುಜನಪಾಲ ವ್ಯಾಸ ವೀ ರಜ ಮಹಿದಾಸ ದತ್ತನೀತ ನಿಜ ಮಹಿಮ ಧನ್ವಂತ್ರಿ ಈತ ತ್ರಿಜಗವಳೆದುಪೇಂದ್ರನೀತ ಭಜಕರೊಡಿಯ ವಿಷಕ್ಸೇನ ಭುಜಗಶಾಯಿವಿಭುವೆ ಈತ ||2|| ಚಲುವ ಧರ್ಮಶೇತು ಈತ ಬಲುವುಳ್ಳ ಶಿಂಶುಮಾರನೀತ ಪೊಳೆವ ಮತ್ಸ್ಯ

ನೆನೆದು ನೆನೆಸಿ ನಿಮ್ಮ Read More »

ನೆನೆದು ನಿಷ್ಕಳಂಕರಾಗಿರೋ

ನೆನೆದು ನಿಷ್ಕಳಂಕರಾಗಿರೋ ಪಂಕಜಾಕ್ಷನ ಕೂಡ ದ್ವೇಷ ಬಳಿಸುವ ಮಾಯಿ ಮಲವಿಸರ್ಜನೆಯಾಗುವಾಗ ಮೂತ್ರವನು ಬಿಡುವಾಗ ಹೊಲಗೇರಿಯೊಳಗೆ ಸುಳಿದಾಡುವಾಗ ಹೊಲಿಯಾದವನು ತನ್ನ ಎದುರಿಗೆ ಬರುವಾಗ ಕಲಿಶಿಷ್ಯನಾದ ಮಣಿವಂತನ ನೆನೆಸಿರೊ||1|| ಶ್ರದ್ಧವನು ಬಿಡುವಾಗ ಸ್ವಪ್ನದೊಳಗೆ ಇಂದ್ರಿಯ ಬಿದ್ದು ಹೋಗುವಾಗ ಉಗುಳುವಾಗ ಬದ್ಧವಾಗಿ ಗುಹ್ಯ ತೊಳೆಯುವಾಗ ಅಪ್ರ ಬದ್ಧನಾದ ಏಕಲವ್ಯನ ನೆನೆಯಿರೋ ||2|| ಶುದ್ಧ ಅಶುದ್ಧವನು ತುಳಿದು ನೆಲಕ್ಕೆ ವರಸುವಾಗ ವಮನವಾಗುವಾಗ ಮರಿಯದಲೆ ಅಮಲ ಸುಖ ಮುನಿ ಗುರು ವಿಜಯವಿಠ್ಠಲ ವೈದು ತಮಕೆ ಹಾಕುವ ಶುದ್ಧ ಕುಮತಿಯನು ನೆನೆಯಿರೋ ||3||

ನೆನೆದು ನಿಷ್ಕಳಂಕರಾಗಿರೋ Read More »

ನೆಚ್ಚಬೇಡಿ ಪತಿತನಾರಿಯ

ನೆಚ್ಚಬೇಡಿ ಪತಿತನಾರಿಯ | ಕಚ್ಚುವ ಹಾವಿನ ಸಂಗವೆನ್ನಿ || ಮೆಚ್ಚುಗೊಳಿಪಳು ಗುಣಿಸಿ ನೋಡಿ ನಿಚ್ಚದಲಿ ಚಿತ್ತ ಚಂಚಲಳಾಗಿ ಯುವ ತನಗೆ ಬರುವ ಪರಿಯಂತ | ಯಾವದನಿತು ಮೊಗವನೆತ್ತದಲೆ || ಎವೆ ತೆಗೆದು ದಿಕ್ಕುಗಳು ನೋಡದೆ | ಅವನಿಗೆ ಬಾಗಿ ನಡೆಯುತ || ತವರು ಮನೆಯವರನು ಹಳಿದು | ನವÀನವ ಪ್ರಾವರ್ತನವನು ತೋರುತ || ಅವಗುಣಂಗಳಿಲ್ಲ ದೋಷಾದಲಿ | ಲವಕಾಲವನು ಕಳೆವ ನಾರಿಯ ||1|| ಪ್ರಾಯಾವಸ್ಥೆ ಬಂದು ಪ್ರಾಪ್ತವಾಗಲು | ಆಯುತಾಕ್ಷಿಗಳ ತಿರುಹಿ ಮೆಲ್ಲನೆ || ಬಾಯಲ್ಲಿ ಒಂದೊಂದು

ನೆಚ್ಚಬೇಡಿ ಪತಿತನಾರಿಯ Read More »

ನೆಚ್ಚದಿರು ಸಂಸಾರ ಕಡೆಗೆ

ನೆಚ್ಚದಿರು ಸಂಸಾರ ಕಡೆಗೆ ಹಾಕುವುದಲ್ಲ ಮಚ್ಚುಗೊಳಿಸುವುದು ವಿಷಯದಲಿ ಎಚ್ಚತ್ತು ಪ್ರವರ್ತಿಸು ಇನ್ನಾದರೂ ಸಿರಿ- ಅಚ್ಯುತನ ಪಾದವನು ನಂಬೊ ಪ್ರಾಣಿ ಪುಂಪೆಣ್ಗಳಿಂದ ಪುಟ್ಟಿದ ದೇಹವನು ತಿಳಿ ಕೆಂಪು ಬಿಳಿದಿನ ವರ್ಣ ಮಿಳಿತ ಇಂಪಾಗಿದೆಯೆಂದು ಹಿಗ್ಗದಿರೆಲವೊ ಹೊಲೆ- ಗಂಪು ನಾರುವುದು ಅದ ತೊಳೆಯದೆ ಇರಲು ||1|| ಜನಿಸಿದಾಕ್ಷಣ ಕಾಯು ಕಡಮೆಂದು ತಿಳಿಯದಲೆ ಜನನಿ ಜನಕರು ಸುಖಿಸುತಿಹರು ತನುಭ್ರಮಣವಲ್ಲದೆ ಚಿದ್ರೂಪ ಬಲ್ಲರೆ ಕೊನೆಗೆ ಏನಾಗುವುದೊ ಪ್ರಾಣಿ ||2|| ಗಳಿಸಿ ಧನ ತರುವಾಗ ಸುತ್ತ ನೆರೆದಿಹರೆಲ್ಲ ಭಳಿರೆ ಇವ ಮಹಾತ್ಮನೆಂದು ಘಳಿಗೆ ತೊಲಗಲು

ನೆಚ್ಚದಿರು ಸಂಸಾರ ಕಡೆಗೆ Read More »

ನುತಿಸಿ ಬೇಡುವೆ ವರವ

ನುತಿಸಿ ಬೇಡುವೆ ವರವ ಕರವ ಮುಗಿದು ಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣ ಬದರಮಂಗಳಗಾತ್ರ ಬಲು ಸುಲಭ ಬುದ್ಧನಾಗಿ ಶಿಷ್ಯರ್ಗೆ ಸುಧಿಯ ಪೇಳುವ ಮೌನಿ ಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ ||1|| ಅಂದವಾದ ಕಾವ್ಯ ಸಾಮಥ್ರ್ಯಧೀರುವೆ ಮಂದಹಾಸದಿ ನೋಳ್ಪ ಭಕುತ ಜನರ ಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹು ನಂದತೀರ್ಥರ ಮತಕೆ ಕೇತುಸ್ಥಾನಿಯ ನಿತ್ಯ ||2|| ವಾದಿಗಳೆದೆಯ ಶೂಲ ಸತ್ಯಪ್ರಿಯ ಕರಜಾತ ಸಾಧು ಸಜ್ಜನಗೇಯ ಸತ್ಯಬೋಧ ಮೋದಿ ಹಯವದನ ರಾಮ ವಿಜಯವಿಠ್ಠಲ

ನುತಿಸಿ ಬೇಡುವೆ ವರವ Read More »

ನೀನೋಲಿದುದ್ದಕ್ಕೀ ಇಹ

ನೀನೋಲಿದುದ್ದಕ್ಕೀ ಇಹ ಸೌಖ್ಯವೇಯಿನ್ನು ನಾನೊಲ್ಲೆ ನಾನೊಲ್ಲೆ ಸರ್ವೇಶಾ ನಿನ್ನನುರಾಗದಿ ಗತಿಯೆಂದು ನಂಬಿದ ಮಾನವನೊಡನೆ ನೀನಾಡುವದೆಲ್ಲಾ ಷಡುರಸ ನಾನಾ ಸುಭೋಜನವ ಬಿಡಿಸಯ್ಯ ದಾನವ ಭಂಜನ ಒಡಲಿಗೋಸುಗ ನಿನ್ನನು ಸೇವಿಸುವೆ ಒಡೆಯ ದಾಂಟಿಸೊ ಭವಕಡಲವೇಗ ಜ್ಞಾನ ತೋರಿಸದಿರೆ | ದಿವ್ಯಾಂಬರಗಳ ಉಡಿಸಿ ಸ್ವರ್ಣಾಭರಣಗಳ ತೊಡಿಸಿ | ಬರಿ ಮಾತಿನಲಿ ಮೊರೆ ಯಿಡುವೆನೊ ವಾಕ್ಕಾಯದಿಂದಲೀ ||1|| ಜನರು ಜನಪರಿಂದ ಮನ್ನಣೆ ಸ್ವಲ್ಪ | ಎನಗೆ ಹತ್ತದು ಕಾಣೊ ನಿನ್ನಾಣೆ || ಮನುಜನ ಸೈಸಿದವನ ಬಾಯೆನೆ ಬರೆವಾ | ಹನತೇರು ಮೊದಲಾದ |

ನೀನೋಲಿದುದ್ದಕ್ಕೀ ಇಹ Read More »

ನೀನೇನ ಮಾಡಲಾಪಿಯೋ

ನೀನೇನ ಮಾಡಲಾಪಿಯೋ ಲಕುಮೀಶಾ | ನಾನೀಗ ಪಡೆದದ್ದು ಉಣದಲೆ ಪೋಗುವದೆ | ಲೋಕದೊಳಗೆ ನಿನ್ನ ಕೊಂಡಾಡಿ ಪ್ರತಿದಿನ ಏಕ ಭಕುತಿಲಿ ಸರ್ವೋತ್ತಮನೆಂದು ಏಕಾಂತ ಭಜಿಪÀ ಮನುಜಗಾದರು ಬರೆದ ವಾಕು ತಪ್ಪುವದೇನೋ ಅಜನು ನಿರ್ನೈಸಿದ||1|| ಮುಂದೆ ಕೊಡುವ ಫಲಕೆ ಕರ್ತ ನೀನಲ್ಲದೆ ಹಿಂದಣಿಂದಲಿ ಬರುವ ಕಾಲಾಖ್ಯಕೆ ಒಂದು ಬಿಂದು ಮಾತ್ರ ತೊಲಗಿಪ ನಡತಿ ಕಾಣೆ ಅಂದಲ್ಲಿ ಏನು ಫಲ ಎನ್ನ ಕರ್ಮವಷ್ಟೇ ||2|| ಇದ್ದದೊಂದು ಮರಿ ಅಡಗಾಣಿಸಿ ಬಂದು ಹದ್ದು ತಾ ವೈಯಲು ಆ ಕುರುಬ ಯೆಲ್ಲಿ ಇದ್ದರೇನು

ನೀನೇನ ಮಾಡಲಾಪಿಯೋ Read More »

ನೀನೆ ಮಾಡಿದ ಲೀಲೆ ಬಲು ಸುಖವೊ

ನೀನೆ ಮಾಡಿದ ಲೀಲೆ ಬಲು ಸುಖವೊ | ಆನೇನು ದು:ಖವನು ಬಡುವುದಿಲ್ಲವೋ ಜೀಯ | ತೋಟವನು ಮಾಡಿಸಿ ಅದರೊಳಗೆ ಒಂದು ಫಲ | ನಾಟಿಸಲು ಬೆಳೆದ ಫಲ ಪಕ್ವವಾಗೆ | ನೀಟಾದ ಫಲವೆಂದು ಅರಸು ಕೊಯ್ ತರಿಸಲು ತೋಟಿಗಾಗೇನು ದು:ಖ ಅರಸಿನಿಂಗೇನೈಯ||1|| ನಿನ್ನ ಸಂಕಲ್ಪನೆ ಸ್ಥಿರವಾಗಿ ಇದೆ ಇದೆ ಅನಂತ ವೇದಗಳು ಪೊಗಳೂತಿವಕೊ ಪನ್ನಗಶಯನನೆ ನೀನು ಮಾಡಿದ ಕ್ಲುಪ್ತ ಅನ್ಯಥಾವಾಗುವದೆ ಅನುಭವಾದಿಗಳಿಗೆ ||2|| ಸುಖ ದು:ಖವೆ ಎರಡು ನಿನ್ನ ವಶವಾಗಿದೆ ಸಖನಾಗಿ ಸುಖ ಉಣಿಸಲು ಹಿಗ್ಗುವೆ ದು:ಖ

ನೀನೆ ಮಾಡಿದ ಲೀಲೆ ಬಲು ಸುಖವೊ Read More »

ನೀನೆ ದೀನಜನ ಬಂಧೂ ದಯಾರಸ ಸಿಂಧೂ

ನೀನೆ ದೀನಜನ ಬಂಧೂ ದಯಾರಸ ಸಿಂಧೂ ದಿವಿಜರ ಸಮುದಾಯವಿದ್ದರೇನು ಅವನ ವ್ಯಾಳೆಗೆ ಒದಗಲಿಲ್ಲಾ ಅವನಿವಲ್ಲಭ ಅವ್ಯಯವೆಂದರೆ ಅವಸರಕ್ಕೊದಗಿ ಕಾಯದೇ ಕೃಷ್ಣಾ ||1|| ಭೂತ ಪರಿವಾರವಿದ್ದರೇನು ಆತನ ಅಭಂಗಕ್ಕೆ ಒದಗಲಿಲ್ಲಾ ಪೂತಾತ್ಮ ಪುರುಷೋತ್ತಮನೆಂದರೆ ಚಾತುರ್ಯದಿಂದ ಸಲಹಿದೆ ಕೃಷ್ಣಾ ||2|| ಚತುರಾಸ್ಯಾದಿಗಳು ಇದ್ದರೇನು ಶ್ರುತಿಯಹಾನಿರೆ ಒದಗಲಿಲ್ಲಾ ಚತುರಾತ್ಮ ಸಿರಿಪತಿ ಉರಗಾದ್ರಿ ಪತಿ ವಿಜಯವಿಠ್ಠಲನೇ ಕಾಯ್ದ ಕೃಷ್ಣಾ||3||

ನೀನೆ ದೀನಜನ ಬಂಧೂ ದಯಾರಸ ಸಿಂಧೂ Read More »

ನೀ ಪಾಲಿಸದಿರಲು ನಾ ಪೋಗುವುದು

ನೀ ಪಾಲಿಸದಿರಲು ನಾ ಪೋಗುವುದು ಎತ್ತ ನೀ ಪೇಳೊ ಪರಮ ಪುರುಷಾ ಅಪಾರ ಮಹಿಮ ಅಗಣಿತ ನಾಮ ಸುರ ಪ್ರೇಮ ಸ್ವರ್ಣ ಗಿರಿವಾಸ ನರಕೇಶ ಭೂಷಾ ಉದರ ಚಿಂತಿಯಲಿ ಉದಯದಲಿ ಯೆದ್ದು ಅವರಿವರ ಸದನದಲ್ಲಿಗೆ ಹೋಗದೆ ಮೃದು ವಾಕ್ಯವಾಡದಲೆ ಮದ ಗರ್ವ ಬಲದಿಂದ ಎದುರಾದವರ ಜರಿದೆ ಮನಸಿನ ಕ್ಲೇಶದ ಪರಸುದತಿಯರನೀಕ್ಷಿಸಿ ವಿದಿತ ಕರ್ಮಗಳ ತೊರೆದೆ ಒದಗಿ ಬಂದ ಪುಣ್ಯ ಬರಿಗೈದು ಪಾಪದ ಹುದಲೊಳಗೆ ಬಿದ್ದು ಸಂಪದವಿಗೆ ದೂರದವನಾ||1|| ಉತ್ತಮರ ನಿಂದಿಸಿದೆ ಉಚಿತಾರ್ಥ ತಿಳಿಯದಲೆ ಹೆತ್ತವರನ್ನ ಜರಿದೆ ಹತ್ತೆಗರೆದು

ನೀ ಪಾಲಿಸದಿರಲು ನಾ ಪೋಗುವುದು Read More »

ನಿನ್ನವರ ಸಂಗ ಎಂತಹದಯ್ಯಾ

ನಿನ್ನವರ ಸಂಗ ಎಂತಹದಯ್ಯಾ ಅನಂತ ಜನ್ಮದ ಪಾಪ ಪುಂಜರ ನಾನು ಬಾರೆ ಸುಜನರ ಮನಕೆ ತಾರೆ ಗಂಗೋದಕವ ಸೇರೆ ನಿನ್ನಡಿಗಳಲಿ ಸಾರೆ ಉತ್ತಮರ ಕೀರ್ತಿ ಬೀರೆ ನಿನ್ನಯ ಮಹಿಮೆ ಕೋರೆ ನಿರ್ಮಳ ದಾರಿಯಾ ನೀರೆಯರ ಶಶಿಬಿಂಬ ಮೋರೆ ಬಣ್ಣಕೆ ಮೆಚ್ಚಿ ಕಾರ್ಯ ಕಾರಣ ಜರಿದು ಭಾರಿ ತಿರುಗವನಿಗೆ||1|| ಏಕಾದಶಿ ದಿನ ಬೇಕೆಂದು ಮನವಿಟ್ಟು ಪಾಕನ್ನ ಮಾಡಿಸುವನೊ ಸಾಕಿದವರನ ಬಡಿದು ನೂಕಿ ಸತಿಯಳಿಂದಾ ನೇಕಪರಿ ಮಾಡಿಸುವನೊ ಪೋಕತನದಲ್ಲಿ ವಿವೇಕ ರಹಿತನಾಗಿ ಗೋಕುಲವ ಹಳಿದು ಕೋ ವಾರೆವಿದ್ದವನಿಗೆ||2|| ಪರರ ವಡವೆಯ

ನಿನ್ನವರ ಸಂಗ ಎಂತಹದಯ್ಯಾ Read More »

ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ ಮಧ್ವರಾಯಾ

ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ | ಮಧ್ವರಾಯಾ ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಮಧ್ವರಾಯಾ ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು || ಮಧ್ವರಾಯಾ || ಗತಿಯ ಕಲ್ಪಿಸಿ ಸಜ್ಜನರ ತತಿಗಳ ಕಾಯಿ || ಮಧ್ವರಾಯಾ ||1|| ತಂದೆ ತಾಯಿ ಬಂಧು ಬಳಗವೆಲ್ಲವು ನೀನೆ | ಮಧ್ವರಾಯಾ | ಎಂದೆಂದಿಗು ನಿಮ್ಮ ಪೋದಿರುವಂತೆ ಮಾಡೈ | ಮಧ್ವರಾಯಾ ||2|| ಬಾಲಕೃಷ್ಣನ ಸೇವೆ ಮೇಲಾಗಿ ಮಾಡುವ | ಮಧ್ವರಾಯಾ | ಮೂಲ ಮೂವತ್ತೇಳು ಮೇಲು ಗ್ರಂಥಗಳಿತ್ತೆ |

ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ ಮಧ್ವರಾಯಾ Read More »

ನಿನ್ನನಗಲಿ ಪೋಗಲಾರೆವೋ

ನಿನ್ನನಗಲಿ ಪೋಗಲಾರೆವೋ ನೀರಜಾಕ್ಷ ನಿನ್ನ ಸೇರಿ ಸುಖಿಸ ಬಂದೆವೊ ಮನ್ನಿಸದೆ ಮಮತೆಯಿಂದ ಭಿನ್ನ ನುಡಿಗಳಾಡಿ ನಮಗೆ ಹಣ್ಣು ತೋರಿ ಕಾಳಕೂಟವನ್ನು ಕೊಡುವರೇನೊ ಕೃಷ್ಣ ಐದುವದಕೆ ಶಕ್ಯವಲ್ಲದ ಅಪ್ರಮೇಯ ಆದಿಪುರುಷ ಅಮರಸನ್ನುತ ಶ್ರೀದ ನಮ್ಮ ಕೈಯ ಬಿಡದೆ ಆದರಿಸಬೇಕು ಪರವ- ರಾದರೇನು ನಿನ್ನ ಶರಣರಾದ ಮೇಲೆ ಬಿಡುವುದುಂಟೆ||1|| ಬಂಧುವರ್ಗವನ್ನು ಬಿಡುವುದು ಸ್ತ್ರೀಯರಿಗೆ ನಿಂದ್ಯವೆಂದು ಶಾಸ್ತ್ರ ಪೇಳ್ವುದು ಎಂದೆಗೆಂದಿಗೆಮಗೆ ನೀನೆ ಬಂಧುವೆಂದು ಬಂದಿಹೆವೊ ಸಿಂಧುಶಯನ ಎಮ್ಮನ್ಯಾಕೆ ಇಂದು ಹೋಗಿರೆಂಬೆ ನೀನು||2|| ಶಮದಮಾದಿ ಗುಣಗಳಿಂದಲಿ ಸಜ್ಜನರು ಕ್ರಮದಿ ನಿನ್ನ ಮೂರ್ತಿ ಮನದಲಿ

ನಿನ್ನನಗಲಿ ಪೋಗಲಾರೆವೋ Read More »

ನಿನ್ನ ವಶದಲಿ ಇದ್ದು ಇದ್ದು

ನಿನ್ನ ವಶದಲಿ ಇದ್ದು ಇದ್ದು ಮುನ್ನೆ ದುರ್ವೃತ್ತಿಗೆ ಪೋಗುವುದೆನ್ನ ಮನಾ ||ಪ|| ಚಿತ್ರವಾದ ಕರಿಯ ಶೃಂಗರಿಸಿ ಮೇಲೆ ಛತ್ರಿಗೆ ನೆರಳಲ್ಲಿ ಕುಳ್ಳಿರೆನೆ ಆನೆ ಕೆಳಗೆ ಇಳಿದು ಬೂದಿಯೊಳಗಿಪ್ಪ ಕತ್ತೆ ಏರುವನೆಂದು ಇಚ್ಛೆ ಮಾಡುತಲಿದೆ ||1|| ಕಾಲಕಾಲಕೆ ಸುಧಿಯ ಸವಿದು ಮಾಣಿಕದ ಉಯ್ಯಾಲೆ ಮೇಲಾಡುತ್ತ ಬಾಳು ಎನೆ ತಾಳವೃಕ್ಷವನೇರಿ ತಲೆಕೆಳಗಾಗಿ ತಾ ಬೀಳುವೆನೆಂದು ಅಪೇಕ್ಷೆ ಮಾಡುತಲಿದೆ ||2|| ವೇಣಿ ಮಾಧವರಾಯಾ ನಿನ್ನ ಚರಣಾಂಬುಜ ಕಾಣುವ ಪ್ರಕಾಶ ಉದಾಸಸಿ ಕ್ಷೋಣಿಯೊಳಗೆ ಮಹಾ ಕತ್ತಲೆ ಬಯಸುವೆ ಹೀನನಂತೆಯಾದೆ ವಿಜಯವಿಠ್ಠಲರೇಯಾ ||3||

ನಿನ್ನ ವಶದಲಿ ಇದ್ದು ಇದ್ದು Read More »

ನಿನ್ನ ಮೂರುತಿ ನಿಲ್ಲಿಸೊ ವೆಂಕಟಸ್ವಾಮಿ

ನಿನ್ನ ಮೂರುತಿ ನಿಲ್ಲಿಸೊ ವೆಂಕಟಸ್ವಾಮಿ ಪ್ರ ಸನ್ನ ವದನ ಭುಜಗನ ಗಿರಿಯ ತಿಮ್ಮಾ ಪೊಳೆವ ಕಿರೀಟಕುಂಡಲ ಕರ್ಣ ಪಣೆಯಲ್ಲಿ ತಿಲಕ ಬಿಲ್ಲಿನ ಪುಬ್ಬು ಸುಳಿಗೂದಲಿಂದೊಲಿವ ||1|| ಕದಪು ಕೂರ್ಮನಂತೆ ಸುಧೆಯ ಸುರಿವ ವದನ ಅಧರ ನಾಸಿಕ ಕಪೋಲ ಮುದ್ದುನಗೆಯಿಂದೊಲಿವ||2|| ಕೊರಳ ತ್ರಿರೇಖೆ ಉಂಗುರ ಬೆರಳ ಶಂಖ ಸುದರಶನ ಕಟಿ ಅಭಯ ಕರ ಚತುಷ್ಟಯಿಂದೊಲಿವ||3|| ಶ್ರೀವತ್ಸ ಕೌಸ್ತುಭ ನ್ಯಾವಳ ವೈಜಯಂತ ಆವಾವಾಸರ ಉದರ ತ್ರಿವಳಿಯಿಂದೊಲಿವಾ||4|| ಬಡ ನಡು ನಾಭಿಯು ಉಡುದಾರ ಪೊಂಬಟ್ಟೆ ಉಡಿಗೆ ಕಿಂಕಿಣಿಗಂಟಿ ನುಡಿ ತೊಡರಿಂದೊಲಿವಾ ||5||

ನಿನ್ನ ಮೂರುತಿ ನಿಲ್ಲಿಸೊ ವೆಂಕಟಸ್ವಾಮಿ Read More »

ನಿನ್ನ ಮಾತಿಗೆ ಮೆಚ್ಚುವನಾವಾವಾ

ನಿನ್ನ ಮಾತಿಗೆ ಮೆಚ್ಚುವನಾವಾವಾ ಪನ್ನಗಾದ್ರಿ ನಿವಾಸಾ ಪರಾಕು ಎಲೊ ಎಚ್ಚರಿಕೆ ಅಂತರ ಬಾಹೀರ ವ್ಯಾಪ್ತಾ ಆಪ್ತನೆಂಬುವ ಎಂತಾಗುವದೆಂದು ನುಡಿಯದಿರಿ ಕಂತುವಿನ ಪಿತ ನಿನಗೆ ನಮೊ ನಮೊ ಬಿನ್ನೈಪೆ ಸಂತು ಧ್ರುವರಾಯನು ಸಂತತ ಇದಕೆ ಸಾಕ್ಷಿ ||1|| ಒಂದೆ ರೂಪದಲಿ ಪೂಜೆಯಗೊಂಬೆ ಎನಗೆ ಮ ತ್ತೊಂದು ರೂಪಕೆ ಶಕ್ತಿ ಇಲ್ಲೆನ್ನದಿರು ಸಂದೇಹ ಎನಗಿಲ್ಲ ಎಲ್ಲಿದ್ದರು ದೇವ ನಂದನಂದನ ಇದಕೆ ರಾಯ ಬ್ರಾಹ್ಮಣ ಸಾಕ್ಷಿ ||2|| ಬದಿಯಲಿದ್ದರೆ ಇಷ್ಟೆ ಮುಂದೆ ಬರುವ ಆಪತ್ತು ಒದಗಿ ಕಳೆವೋಪಾಯ ಕಡಿಮೆನ್ನದಿರೊ ಮುದದಿಂದ ನಿನ್ನಂಘ್ರಿಗೆರಗುವೆನು

ನಿನ್ನ ಮಾತಿಗೆ ಮೆಚ್ಚುವನಾವಾವಾ Read More »

ನಿನ್ನ ಮಹಿಮೆ ಇದೇನೊ

ನಿನ್ನ ಮಹಿಮೆ ಇದೇನೊ ಕನ್ನಗಾರರ ಗುರುವೆ ಅಳಗಿರಿ ತಿಮ್ಮರಾಯಾ ಕ್ಷೋಣಿಯೊಳಗುಳ್ಳವರು ಕ್ಷಿಪ್ರದಲ್ಲಿ ನಿನ್ನ ಕಾಣಿವೇನೆಂಬ ತವಕದಲಿ ಬರಲು ಮಾಣದಲೆ ಅವರ ವಸನ ಸುಲಿಸಿ ತಡೆಯದೆ ಮಾನವನು ಕೊಂಬ ಅಭಿಮಾನಗೇಡಿ ||1|| ಬ್ರಹ್ಮಾದಿಗಳು ಇಲ್ಲಿ ಸುಲಿಸಿಕೊಳಬೇಕೆಂದು ಹೆಮ್ಮೆಯಿಂದಲಿ ನೋಡಿ ಹಿಗ್ಗುವರೋ ಹಮ್ಮಿನದೇವ ನಿನ್ನ ಸೋಜಿಗವೆ ತಿಳಿಯದು ಈ ಮ್ಮಹಿಯೊಳಗೆ ಇಂಥ ಸುಮ್ಮಾನವೇನೊ||2|| ಹಲವು ಕೇಳಿದರೇನು ನೀಚೋಚ್ಚ ಎಣಿಸಲೆ ಒಲಿಸಿದವರಿಗೆ ನೀನು ಒಲಿದು ಎಲ್ಲಾ ಸುಲಿಗೆಯನು ಯಿತ್ತು ಸಂತತಲವರ ಪಾಲಿಪ ಬಲು ದೈವ ವಿಜಯವಿಠ್ಠಲ ಅಳಗಿರಿ ತಿಮ್ಮಾ||3||

ನಿನ್ನ ಮಹಿಮೆ ಇದೇನೊ Read More »

ನಿನ್ನ ಮರೆದೆನೊ ರಂಗ

ನಿನ್ನ ಮರೆದೆನೊ ರಂಗ ನಿನ್ನ ಮರೆದೆ ಅನ್ಯರನ್ನಕೆ ಸಿಲುಕಿ ಅನುಗಾಲ ಮರುಳಾಗಿ ಊಟಕ್ಕೆ ಬರುವಲ್ಲಿ ತನುವುಬ್ಬಿ ಎನ್ನ ಮನ ನಾಟುವುದು ಅವರ ಕಡೆ ಅನುರಾಗದಿ ನೀಟಾದ ಭೋಜನವ ಬಯಸುವೆನು ಯಮರಾಯ ಪಾಟು ಬಡಿಸುವ ಭಂಗ ಕೇಳಿ ಎಚ್ಚರಿಯದಲೆ||1|| ಮತ್ತೆ ಕರೆಯಲು ಬರಲು ಉತ್ಸವ ಪಿಡಿಯಲೊಶವೆ ಹೊತ್ತು ಹೊತ್ತಿಗೆ ಅವರ ಕೊಂಡಾಡುತ ಹೆತ್ತವರಿಗಿಂತಲೂ ಅಧಿಕ ನಮಸ್ಕರಿಸುವೆನು ಚಿತ್ತಜನಪಿತ ನಿನ್ನ ಸ್ತೋತ್ರ ಪಠಿಸದಲೆ||2|| ಎಡೆಯ ಮುಂದೆ ಕುಳಿತು ಎಲ್ಲ ಕಾಲಗಳಿಂದ ಬಿಡದೆ ಮಾಡಿದ ಪುಣ್ಯಪಾಪಗಳೆದು ಎಡಬಲದವರ ಪಙÉ್ತ ನೋಡಿಕೊಳ್ಳುತ ದುಃಖ

ನಿನ್ನ ಮರೆದೆನೊ ರಂಗ Read More »

ನಿನ್ನ ಮನಸಿಗೆ ಬಂತೆ

ನಿನ್ನ ಮನಸಿಗೆ ಬಂತೆ ಪ್ರಾಣನಾಥಾ ಚಿಣ್ಣನೆಂದು ನೋಡದಲೆ ಕರಿಯಲಟ್ಟಿದೆ ವೇಗ ಸಾಕಿದೆನು ನಿನ್ನ ದಾಸನೆಂದು ತಿಳಿದು ವಿ- | ವೇಕದಿಂದಲಿ ಉಪನಯನ ಮಾಡೀ | ಲೋಕದೊಳಗೆ ಬೆಳಸಿ ಮುದುವೆಯ ಮಾಡಿ ಅ- ನೇಕ ತೀರ್ಥಯಾತ್ರೆ ತಿರುಗಿದವನಾ ಇಂದೆ 1 ಉದ್ಧಾರವಾಗುವೆನು ಕುಲಕೋಟಿ ಸಹಿತೆಂದು ಪದ್ದಿಟ್ಟುಕೊಂಡಿವೈ ಈ ತರಳನ ಸುದ್ದಿ ತಿಳಿಯಗೊಡದೆ ವಿಯೋಗ ಮಾಡಿಸಿದೆ ಸಿದ್ಧ ಮಾಡಿದೆ ನಿನ್ನ ಸಂಕಲ್ಪವೆ ಇಂದು ||2|| ನೆಚ್ಚಿ ನಿನ್ನ ಪಾದ ಭಜಿಸುವರಿಗೆ ಭಾಗ್ಯ ಹೆಚ್ಚುಗೊಡದಿಪ್ಪನೆಂದು ಬಿರುದು ಧರಿಸಿ ನಿಚ್ಚ ಮೆರೆವಾ ಮಹಿಮ

ನಿನ್ನ ಮನಸಿಗೆ ಬಂತೆ Read More »

ನಿನ್ನ ನೋಡಲಿ ಬಂದೆ ನಿತ್ಯ ತೃಪ್ತಾ

ನಿನ್ನ ನೋಡಲಿ ಬಂದೆ ನಿತ್ಯ ತೃಪ್ತಾ ಅನ್ಯರಿಂದಲಿ ಎನಗೆ ಏನು ಪ್ರಯೋಜನವೊ ದರುಶನಕೆ ಬಂದವ ನಾನಲ್ಲವೆಂದು ನಾನಂದು ಹರಿ ನಿನಗೆ ನುಡಿದದ್ದು ಮನಸ್ಸಿನೊಳಗೆ ಇರುತಿಪ್ಪದೇನಯ್ಯಾ ಬಿನ್ನಪವೆ ಲಾಲಿಸು ಶರಣ ಜನರ ಅಭಿಪ್ರಾಯವೊಂದು ಬಗೆ ಇಪ್ಪದೊ||1|| ನಿರುತ ವ್ಯಾಪ್ತತ್ವ ಕರುಣತ್ವ ಅಣುಮಹತ್ತು ಸರುವ ಚೇತನ ಜಡ ಮತ್ತೆ ಮತ್ತೆ ಪರಿ ಪರಿಯಿಂದಲಿ ನಿನ್ನಲಿ ಉಂಟು ನಿನ್ನ ವರ ಮೂರ್ತಿಗಳ ಪೇಳದೆ ಇದಷ್ಟು ವಿನಯದಲಿ ||2|| ಧ್ಯಾನಕ್ಕೆ ನೀನು ಪ್ರಧಾನನೆಂದು ನುಡಿದೆ ಆನಂದಮತಿ ಕೊಡುವ ಅಪ್ರಮೇಯ ಕ್ಷೋಣಿಜನಕಿಂತ ದ್ವಾರದವರು ವೆಗ್ಗಳವಾಗೆ

ನಿನ್ನ ನೋಡಲಿ ಬಂದೆ ನಿತ್ಯ ತೃಪ್ತಾ Read More »

ನಿನ್ನ ದರುಶನಕೆ ಬಂದವನಲ್ಲವೊ

ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ||1|| ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ ||2|| ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ||3|| ಧ್ಯಾನಕ್ಕೆ

ನಿನ್ನ ದರುಶನಕೆ ಬಂದವನಲ್ಲವೊ Read More »

ನಿನ್ನ ಚಿತ್ತಕೆ ಬಂದುದನು ಮಾಡು

ನಿನ್ನ ಚಿತ್ತಕೆ ಬಂದುದನು ಮಾಡು ಸರ್ವೇಶ ಎನ್ನ ಸ್ವಾತಂತ್ರ್ಯ ಲವಮಾತ್ರ ಉಂಟೇ ಸ್ವಾಮಿ ಅನಂತಾನಂತ ಜನ್ಮ ಕಾದರು ಒಮ್ಮೆ ಚೆನ್ನ ಗೋಪಾಲ ಕೃಷ್ಣದೇವ ಛೀ ಎನಿಸು ಜನರಿಂದ ನಿಂದ್ಯವನು ಮಾಡಿಸು ಬಾಯದೆರೆಸೊ ಹೊಟ್ಟೆಗಾಗಿ ಗಾಯನವ ಮಾಡಿಸು ಗುಪ್ತದಲ್ಲೇ ಇರಿಸು ದಾಯಾದಿಗಳಿಗೊಪ್ಪಿಸು ರಾಯಪದವಿಯ ಕೊಡಿಸು ರಾಜ್ಯವೆಲ್ಲವ ಮೆರೆಸು ಕಾಯಕ್ಲೇಶವನು ಪಡಿಸು ಮಾಯಾಧವನೆ ನಿನ್ನ ಮಹಿಮೆ ತಿಳಿದವರಾರು ನ್ಯಾಯ ಅನ್ಯಾಯವಾಗಿ ಶ್ರೀಶ ||1|| ಧನವನ್ನೆ ಕೊಡಿಸು ದಾನವನೆ ಮಾಡಿಸು ಗುಣವುಳ್ಳ ಮನುಜನೆನಿಸು ಮನಸು ಚಂಚಲನೆನಿಸು ಮಾತುಗಳ ಪುಸಿಯೆನಿಸು ಕ್ಷಣದೊಳಗೆ ಶುದ್ಧನೆನಿಸು

ನಿನ್ನ ಚಿತ್ತಕೆ ಬಂದುದನು ಮಾಡು Read More »

ನಿನ್ನ ಒಲುಮೆಯಿಂದ ನಿಖಿಳ

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಎನ್ನ ಪುಣ್ಯಗಳಿಂದ ಈ ಪರಿಯುಂಟೇನೊ ನಿನ್ನದೆ ಸಕಲ ಸಂಪತ್ತು ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು ತಬ್ಬಿಬ್ಬುಗೊಂಡನೊ ಹಿಂದೆ ನಿಬ್ಬರದಿಂದಲಿ ಸರ್ವರ ಕೂಡುಂಬೊ ಹಬ್ಬವನುಣಿಸುವಿ ಹರಿಯೆ ||1|| ಸಂಜೆತನಕವಿದ್ದು ಸಣ್ಣ ಸೌಟಿನ ತುಂಬ ಗಂಜಿ ಕಾಣದೆ ಬಳಲಿದೆನೋ ವ್ಯಂಜನ ಮೊದಲಾದ ನಾನಾ ರಸಂಗಳು ಭುಂಜಿಸುವುದು ಮತ್ತೇನೊ||2|| ಜೀರ್ಣ ಮಲಿನ ವಸ್ತ್ರ ಕಾಣದ ನರನಿಗೆ ಊರ್ಣ ವಿಚಿತ್ರ ಸುವಸನ ವರ್ಣವರ್ಣದಿಂದ ಬಾಹೋದದೇನೊ ಸಂ ಪೂರ್ಣಗುಣಾರ್ಣವ ದೇವ ||3|| ನೀಚೋಚ್ಚ ತಿಳಿಯದೆ

ನಿನ್ನ ಒಲುಮೆಯಿಂದ ನಿಖಿಳ Read More »