ಭಕ್ತರನ ನಂಬದಿರು ಭವದೂರನೆ

ಭಕ್ತರನ ನಂಬದಿರು ಭವದೂರನೆ ಮುಕ್ತಿಯನು ಬೇಡದಲೆ ನಿನ್ನೆ ಪೂಜಿಸುವರು ||ಪ|| ಪ್ರಸ್ತ ಮಾಡುವ ಸಾಧನಕ್ಕೆ ಪೋಗಿ ನಿಂದು ಬಲು ಹಸ್ತು ಬಂದವನು ತುತ್ತನ್ನ ಕೇಳೆ ಸ್ವಸ್ತವಾಗಿ ಕುಳಿತು ಭೋಜನ ಮಾಳ್ಪ ಆ ಗ್ರಹಸ್ತ ಪೊಟ್ಟಿ ತುಂಬದೆ ಬರಿದೆ ಏಳುವನೆ||1|| ಹಾದಿಕಾರನು ಬಂದು ವಸ್ತಿ ಮಾಡುವದಕ್ಕೆ ಆದರದಲಿ ಸ್ವಲ್ಪ ಸ್ಥಳವ ಕೇಳಿ ಪಾದ ಇಡುವನಿತರೊಳು ಕುಳಿತು ಆಮೇಲೆ ಸಂ ಪಾದಿಸುವ ತನ್ನ ತಕ್ಕಷ್ಟು ಧರಣಿಯನ್ನು||2|| ಆವದೊಲ್ಲೆವೆಂದು ಆಡುವರು ನಿತ್ಯದಲಿ ಕಾವ ಕರುಣಿ ನೀನೆಂದು ತಿಳಿದು ಶ್ರೀ ವನಿತೆಯರಸ ಸಿರಿ […]

ಭಕ್ತರನ ನಂಬದಿರು ಭವದೂರನೆ Read More »

ಭಕ್ತಜನ ಸಂರಕ್ಷಣ

ಭಕ್ತಜನ ಸಂರಕ್ಷಣ ಭಕ್ತಜನ ಸಂರಕ್ಷ ಭವದುರಿತ ಸಂಹಾರಿ ಭಕ್ತರಾ ಸುರಧೇನು – ತರುವೆ ಚಿಂತಾಮಣಿಯೆ ಭಕ್ತರಾಧೀನನೆಂಬುವ ಬಿರುದು ಅನುಗಾಲ ಪೊತ್ತ ತಿಮ್ಮಪ್ಪ ಏಳೊ ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು ಅಂಬುಜ ವಿರೋಧಿ ಕಳೆಗುಂದಿ ತಾರಾ ನಿಕರವಂಬರದಿ ರೂಹುಮಾಸೆ ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು ತಾಂಬ್ರ ಚೂಡವು ಧ್ವನಿಮಾಡಿ ಕೂಗಿತು ಸರಸಿಜಾಂಬುಕ ಮಂಚದಿಂದೇಳೊ ||1|| ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ ಉದಧಿತೆರೆ ತÀಗ್ಗಿದುವು ಉರಗ ಪೆಡೆಯೆತ್ತಿದನು ಗದÀಗದನೆ ನಡುಗಿ

ಭಕ್ತಜನ ಸಂರಕ್ಷಣ Read More »

ಭಕ್ತಜನ ಪಾಲಕ ಭಕ್ತಿಸುಖದಾಯಕ

ಭಕ್ತಜನ ಪಾಲಕ – ಭಕ್ತಿಸುಖದಾಯಕ ಮುಕ್ತೀಶ ದೀನಬಂಧು ಕೃಷ್ಣ ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ ಸತ್ಯವತಿ ಸುತÀನೆ ಕಾಯೋ ಕೃಷ್ಣ ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ | ಆನಂದದಲಿ ನಿಲಿಸೊ ಕೃಷ್ಣ || ದೀನಜನ ಮಂದಾರ ನೀನೆಂದು ನಂಬಿದೆನೊ | ಸಾನುರಾಗದಲಿ ಕಾಯೋ ಕೃಷ್ಣ ||1|| ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ | ಭ್ರಷ್ಟನಾಗಿ ಪೋದೆನೋ ಕೃಷ್ಣ || ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ | ಇಷ್ಟಗಳ ಎನಗೆ ಕೊಡಿಸೋ ಕೃಷ್ಣ ||2||

ಭಕ್ತಜನ ಪಾಲಕ ಭಕ್ತಿಸುಖದಾಯಕ Read More »

ಭಕುತಿಯ ಪಾಲಿಸು ಜೀಯಾ

ಭಕುತಿಯ ಪಾಲಿಸು ಜೀಯಾ ಮುಂದೆ ಮುಕುತಿಗೊಡವೆ ಯಾಕೆ ನೀನೊಲಿದ ಮೇಲೆ ತನುವೆ ನಿನ್ನಾಧೀನವೆನಿಸು ಇದು ಅನುದಿನ ಕೊಡು ಏಕಪ್ರಕಾರ ಮನಸು ಧನ ವಡವೆಯ ಕಂಡ ಕನಸು ಎಂದು ಎನಗೆ ತೋರಲಿ ನಿತ್ಯ ನಿನ್ನಂಘ್ರಿ ನೆನಸು ||1|| ತತ್ವದ ಮತದೊಳಗಿರುಸು ಪುಶಿ ಉತ್ತರ ಮತವೆಂಬ ಮಾರ್ಗವ ಮೆರೆಸು ಉತ್ತಮರೊಳಗೆನ್ನನಿರಿಸು ಭವ ವತ್ತುವ ನಿನ್ನ ನಾಮಮೃತ ಸುರಿಸು ||2|| ಶ್ರವಣ ಮನನ ಧ್ಯಾನವೀಯೋ ಎನ್ನ ಅವಗುಣವೆಣಿಸದೆ ಕರುಣಾಳು ಕಾಯೊ ಅವಸಾನದಲಿ ನೀನೆ ಗತಿಯೊ ತ್ರೈ ಭುವನೇಶ ವಿಜಯವಿಠ್ಠಲ ನೀ ದೊರೆಯೋ

ಭಕುತಿಯ ಪಾಲಿಸು ಜೀಯಾ Read More »

ಭಕುತಿ ಸುಖವೊ ರಂಗ

ಭಕುತಿ ಸುಖವೊ ರಂಗ ಮುಕುತಿ ಸುಖವೊ ಭಕುತಿ ಸುಖವೊ ಮುಕುತಿ ಸುಖವೊ | ಯುಕುತಿವಂತರೆಲ್ಲ ಹೇಳಿ ಭಕುತಿ ಮಾಡಿದ ಪ್ರಹ್ಲಾದ | ಮುಕುತಿಯನ್ನು ಪಡೆದುಕೊಂಡ | ಮುಕುತಿ ಬೇಡಿದ ಧ್ರುವರಾಯ | ಯುಕುತಿಯಿಂದ ಹರಿಯ ಕಂಡ ||1|| ಭಕುತಿ ಮಾಡಿದ ಅಜಮಿಳನು | ಅಂತ್ಯದಲಿ ಹರಿಯ ಕಂಡ | ಮುಕುತಿ ಬೇಡಿದ ಕರಿರಾಜ | ದುರಿತಗಳನು ಕಳೆದುಕೊಂಡ ||2|| ಭಕುತಿ ಮುಕುತಿದಾತ ನಮ್ಮ | ಲಕುಮಿಯರಸ ವಿಜಯವಿಠ್ಠಲ || ಶಕುತನೆನುತ ತಿಳಿದು ನಿತ್ಯ | ಭಕುತಿಯಿಂದ ಭಜನೆ

ಭಕುತಿ ಸುಖವೊ ರಂಗ Read More »

ಭಕುತ ಜನ ಮುಂದೆ ನೀನವರ

ಭಕುತ ಜನ ಮುಂದೆ ನೀನವರ ಹಿಂದೆ ಯುಕುತಿ ಕೈಗೊಳ್ಳದೊ ಗಯ ಗದಾಧರನೆ ಕಟ್ಟೆರಡು ಬಿಗಿದು ನದಿ ಸೂಸಿ ಪರಿಯುತ್ತಿರೆ | ಕಟ್ಟಲೆಯಲಿ ಹರಿಗೋಲು ಹಾಕಿ || ನೆಟ್ಟನೆ ಆಚೆಗೀಚೆಗೆ ಪೋಗಿ ಬರುವಾಗ | ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ ? ||1|| ಕಾಳೆ ಹೆಗ್ಗಾಳೆ ದುಂದುಛಿ ಭೇರಿ ತಮಟೆ ನಿ- | ಸ್ಸಾಳ ನಾನಾವಾದ್ಯ ಘೋಷಣಗಳು || ಸಾಲಾಗಿ ಬಳಿವಿಡಿದು ಸಂಭ್ರÀಮದಿ ಬರುವಾಗ | ಆಳು ಮುಂದಲ್ಲದೆ ಅರಸು ತಾ ಮುಂದೆ?||2|| ಉತ್ಸಾಹ ವಾಹನದಿ ಬೀದಿಯೊಳು ಮೆರೆಯುತಿರೆ

ಭಕುತ ಜನ ಮುಂದೆ ನೀನವರ Read More »

ಬೇಸರದೆ ಭಜಿಸಿರೋ ಪುರಂದರ

ಬೇಸರದೆ ಭಜಿಸಿರೋ ಪುರಂದರ ದಾಸರಾಯರ ಶ್ರೀಶ ನಿಮ್ಮನು ಉದಾಶೀನ ಮಾಡದೆ ಪೋಷಿಸುವ ಸಂತೋಷದಿಂದಲಿ ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ ಪರಿಪರಿಯ ಸೌಖ್ಯಗಳ ಸುರಿಸುತ್ತ ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ ಕರುಣದಲಿ ಅವರುದ್ಧ್ದರಿಸಲೋಸುಗ ಮನೆಗೆ ಪೋಗುತ್ತ ಯಜಮಾನ ಕಂಡು ಜರಿದು ಬ್ರಾಹ್ಮಣನ್ಹೊರಗೆ ಹಾಕಲು ಮರುದಿವಸ ಮತ್ಹೋಗಿ ನಿಂತ ||1|| ಭಾರಿಭಾರಿಗೆ ಸಾವುಕಾರನ ಮೋರೆಗ್ಹೊತ್ತಿ ಮೇರೆಯಿಲ್ಲದೆ ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು ಡ್ಡಾರಿಸಿಕೋ

ಬೇಸರದೆ ಭಜಿಸಿರೋ ಪುರಂದರ Read More »

ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ

ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ ಮಾಡು ಕರುಣವ ಫಲದಾಯ ಯತಿರತುನತಿ ದಶಮತಿ ಮತದಲಿ ಸ ನ್ನತಿ ಹಿತ ಭಕುತಿಲಿ ಪ್ರತಿದಿನ ಸ ದ್ಗತಿ ಪಥ ಚತುರತೆ ತತುವೇಷ ತತಿಸಮ್ಮತ ಹಿತವಾಗಿಪ್ಪ ಸುಖಮತಿಯನೀಯೋ ||1|| ಬಲಬಲ ಬಲರಿಪು ವೊಲಿದೊಲಿದು ಗಿರಿಯಲಿ ಬಲುವೊಲಿಮೆಲಿ ವೊಲಿಸಬಾರದೇ ಕಳವಳಿಸಲು ಬಲಗುಂದಿ ನಲವು ನಿ ಶ್ಚಲವಾಗಿ ಬಲವಾಗಿ ಗಿರಿಯೆಳದೆಲೊ ಸಲಹಿದಿ ||2|| ತ್ರಿಜಗವೀರ ಧ್ವಜ ಸುಜನರ ನಿಜಪದ ರಜರಜವಾದರು ಭಜಿಸುವ ಸರ್ವದ ವ್ರಜಗಳ ಸಂಗ ದ್ವಿಜನರವಿ ಈ ಮತದಿ ಸೃಜಿಸುವದು ಸಿರಿ ವಿಜಯವಿಠ್ಠಲರೇಯಾ ||3||

ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ Read More »

ಬೇಡುವರೊ ಸುಖ ಬೇಡರೊ ದುಃಖವ

ಬೇಡುವರೊ ಸುಖ ಬೇಡರೊ ದುಃಖವ ಮಾಡಾರೋ ಅವರ ಉಪಾಯವ ಜನ ಬೇಡುವರೋ ಇಟ್ಟಿಕಲ್ಲನು ತಂದು ಕಿಟ್ಟಿ ಬೀಸುವರೊ ಕುಟ್ಯಾರೋ ರಂಗವಲ್ಲಿಯಾ ಜನ ||1|| ಸಾಲು ಸಾಲೆಮ್ಮೆಯ ಸೋಲದೆ ತೊಳೆವರು ಸಾಲಿಗ್ರಾಮಕ್ಕ ಹಾಲೆರೆಯರೊ ಜನ ||2|| ತ್ರಿಜಗವಂದಿತ ನಮ್ಮ ವಿಜಯವಿಠ್ಠಲನ ಭಜನೆಯಾ ಮಾಡದೆ ಸೋಲ್ವರೋ ಜನ||3||

ಬೇಡುವರೊ ಸುಖ ಬೇಡರೊ ದುಃಖವ Read More »

ಬೆಳಗಿನ ಝಾವದಿ ಬಾರೊ ಹರಿಯೆ

ಬೆಳಗಿನ ಝಾವದಿ ಬಾರೊ ಹರಿಯೆ, ನಿನ್ನ ಚರಣ ತೊಳೆದು ಜಲಪಾನ ಮಾಡುವೆನೊ ನೀರೊಳು ನಿನ್ನನು ಕಾಂಬೆ ಗಿರಿ ಭಾರಪೊತ್ತರೆ ನಗುವಳೊ ನಿನ್ನ ರಂಭೆ ಮೋರೆ ತಗ್ಗಿಸಿದರೇನೆಂಬೆ ಅಲ್ಲಿ ನಾರಸಿಂಹನಾಗಿ ಪೂಜೆಯ ಗೊಂಬೆ ||1|| ಬಲಿಯದಾನವ ಬೇಡಿದ್ದೆಲ್ಲ ನೀ ಛಲದಿ ಕ್ಷತ್ರಿಯರ ಸಂಹಾರ ಮಾಡೆದ್ಯಲ್ಲ ಛಲವಂತ ನಿನಗೆದುರಿಲ್ಲ ನೀ ನೊಲಿದ್ಹನುಮನಿಗೆ ಅಜಪದವನಿತ್ಯೆಲ್ಲ ||2|| ರುಕ್ಮಿಣೀಶಗೆ ಸಮರಿಲ್ಲ ಕೃಷ್ಣ ಬಿಮ್ಮನೆ ತ್ರಿಪುರ ಸತಿಯರಪ್ಪಿದ್ಯೆಲ್ಲ ಬ್ರಹ್ಮಾದಿಗಳು ಸಮರಲ್ಲ ಬಲು ಹಮ್ಮಿಲಿ ಹಯವೇರಿ ವಿಜಯವಿಠ್ಠಲ|| 3||

ಬೆಳಗಿನ ಝಾವದಿ ಬಾರೊ ಹರಿಯೆ Read More »

ಬಿನ್ನಪವ ಕೇಳು ಜೀಯಾ

ಬಿನ್ನಪವ ಕೇಳು ಜೀಯಾ ಬನ್ನಬಡಿಸುವ ಮಾಯಾ ಬೆನ್ನು ಬೀಳದಂತೆ ಮಾಡು ಎನ್ನ ಕೂಡಾಡು ಹತ್ತದ ಜನಕೆ ನೀನು ಹತ್ತಿಲಿ ಇದ್ದರೆ ಏನು ಉತ್ತರ ಲಾಲಿಸದಿಪ್ಪ ಉತ್ತಮ ಶ್ಲೋಕಾ ತತ್ವ ಬಲ್ಲವಂಗೆ ದೂರತ್ತಲಿದ್ದರೇನು ಅವನ ಪತ್ತಿಗೆ ಬಂದೊದಗುವ ಚಿತ್ತಜನಯ್ಯಾ ||1|| ಇಂದೆ ಕೈವಲ್ಯವ ಕೊಡುವೆ ಒಂದು ಕ್ಷಣ ಮಾಯಿಗಳ ಮಂದಿರದಲ್ಲಿ ಜನಿಸಿ ಎಂದು ನುಡಿದಡೆ ಮಂದರಧರನೆ ಕೇಳು ಎಂದೆಂದಿಗೆ ಎನ್ನ ನರಕ ಬಂಧನದಲ್ಲಿಡು ಅಲ್ಲಿ ಪೊಂದುವರಾರೊ ||2|| ಶ್ವಾನ ಸೂಕರ ಗಾರ್ಧಭ ನಾನಾ ಕೆಟ್ಟ ಜಾತಿಯವರ ಯೋನಿಯೊಳು ಕಟ್ಟಿಹಾಕಿ

ಬಿನ್ನಪವ ಕೇಳು ಜೀಯಾ Read More »

ಬಿಡು ಬಿಡು ಮಾಯವನು ಕೆಡದಿರು

ಬಿಡು ಬಿಡು ಮಾಯವನು ಕೆಡದಿರು ಕಪಟದಲಿ | ನಡಿ ನಡಿ ಸುಪಥವ ಜಗದೊಡಿಯೆನ ನೆನೆ ಮನವೆ ನಾನು ನನ್ನದು ಎಂಬೊ ಹೀನ ವಚನ ಸಲ್ಲ ಗೇಣುದರವಲ್ಲದೆ ಪೊರೆವದು ಮತ್ತೇನಾದರು ಉಂಟೆ ||1|| ಮಡದಿ ಮಕ್ಕಳ ನೋಡಿ ಕಡು ಹಿಗ್ಗಿ ಕೆಡಬೇಡ | ಕಡು ಮುನಿದೆಮನಾಳುಗಳು ಪಿಡಿದೆಳೆದೊಯ್ವಾಗ ||2|| ಇರುಳು-ಹಗಲು ನೀನು ಹರಿಸ್ಮರಣೆ ಚಿತ್ತದಲಿ | ಸ್ಥಿರವಾಗಿ ಇರಿಸೋದು ಅನಂತ ಜನ್ಮಾಂತರ ಪಾಪ ಪೋಗುವುದು ||3|| e್ಞÁನ ಮಾರ್ಗವಿಡಿದು ಆನಂದ ಮೂರುತಿಯ ಧ್ಯಾನದಿಂದಲಿ ಕಾಣ್ಯ ದೈನ್ಯವೃತ್ತಿಯ ಬಿಟ್ಟು ಹಾನಿ

ಬಿಡು ಬಿಡು ಮಾಯವನು ಕೆಡದಿರು Read More »

ಬಿಡು ಬಿಡು ಇನ್ನು ಸೋಗಾಚಾರ

ಬಿಡು ಬಿಡು ಇನ್ನು ಸೋಗಾಚಾರ | ಒಡಿಯ ಬಲ್ಲನು ನಾನು ನಿನ್ನ ವಿಚಾರ ತುಡಗತನ ಕಲಿತು ನೆರೆಹೊರೆಯವರ ಮನೆಯಲ್ಲಿ | ಗಡಿಗೆ ತುಪ್ಪಾ ಬೆಣ್ಣೆ ಮೊಸರು | ಹಾಲು | ಕುಡಿದು ಛೀ ಹಳಿ ಕದ್ದ ಕಳ್ಳನೆನೆಸಿಕೊಂಡ | ಪಡಚುತನವಲ್ಲದೆ ಭಾರಕನು ನೀನಲ್ಲ ||1|| ಸೀರಯನು ಕದ್ದಂದು ಕಡವಿನ ಮರವನೇರಿ | ಊರ ನಾರಿಯರ ಮಾನಕ್ಕೆ ಸೋತು || ಜಾರತನದವನಾಗಿ ತಿರಗಿ ಜಗದಾ ಭಂಡ | ಪೋರರಿಗೆ ಪೋರನಲ್ಲದೆ ಹಿರಿಯನಲ್ಲ||2|| ಮುನಿಗಳೆಜ್ಞದಲ್ಲಿ ತಿರಿತಂದು ಗೊಲ್ಲತೆರ | ತನುಜರ

ಬಿಡು ಬಿಡು ಇನ್ನು ಸೋಗಾಚಾರ Read More »

ಬಾರೋ ಮನೆಗೆ ಬಾರೋ ವೆಂಕಟರಮಣಾ

ಬಾರೋ ಮನೆಗೆ ಬಾರೋ ವೆಂಕಟರಮಣಾ ಕಂಸಾಸುರಮರ್ದನನೆ ಬಾರೊ | ಕೌಶಿಕಯಜ್ಞಪ ಬಾರೊ | ಹಂಸಡಿಬಿಕನಂತಕ ಬಾರೊ | ಹಂಸವಾಹನನ ಪಿತನೆ ಬಾರೊ ||1|| ಸಾಸಿರ ಮುಖನ ಪೆತ್ತವನೆ ಬಾರೊ | ಸಾಸಿರ ಗಣ್ಣಿನ ಅನುಜ ಬಾರೊ | ಸಾಸಿರ ವದನ ಶಯನ ಬಾರೊ | ಭೂಸುರರಿಗೆ ಪ್ರಿಯನೆ ಬಾರೊ ||2|| ವಾರಿಧಿಯೊಳು ಪೊಕ್ಕವನೆ ಬಾರೊ | ವಾರಿಧಿಯ ಮಾನಭಂಗನೆ ಬಾರೊ | ವಾರಿಧಿಸುತೆಯ ಪಡೆದ ಕರುಣಾ – | ವಾರಿಧಿ ಸಿರಿ ವಿಜಯವಿಠ್ಠಲ ಬಾರೊ ||3||

ಬಾರೋ ಮನೆಗೆ ಬಾರೋ ವೆಂಕಟರಮಣಾ Read More »

ಬಾರೊ ಭಕ್ತರ ಮನಮಂದಿರಕೆ

ಬಾರೊ ಭಕ್ತರ ಮನಮಂದಿರಕೆ | ಶ್ರೀ ರಮಣ ಪ್ರಯಾಗವೇಣಿ ಮಾಧವರಾಯಾ ಅಂಬುಧಿ ಚರನೆ ಬಾರೊ | ಅಂಬುಧಿ ಮಥನ ಬಾರೊ | ಅಂಬುಜಾಕ್ಷಿಯ ತಂದ ರ | ಕ್ತಾಂಬು ಪಾನನೆ ಬಾರೊ | ||1|| ಅಂಬುಪೆತ್ತವನೆ ಬಾರೊ | ಅಂಬುಧಿ ತೊಲೆಗಿನ | ಅಂಬುಧಿ ಬಂಧನ ಬಾರೊ | ಅಂಬೆ ಕಾಯ್ದವನೆ ಬಾರೊ ||2|| ಅಂಬಾರ ಪುರಾಲಯ ನ | ರಾಂಬು ಹಯಗಮನ ಪೀ ತಾಂಬರ ವಿಜಯವಿಠ್ಠಲ | ಎಂಬ ವೆಂಕಟರಾಯ ಬಾರೊ ||3||

ಬಾರೊ ಭಕ್ತರ ಮನಮಂದಿರಕೆ Read More »

ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ

ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ ತೋರಯ್ಯ ನಿನ್ನ ದಯ ತೋಯಜಾಂಬಕನೆ ದುರುಳರ ತರಿವಂಥ ವರಚಕ್ರಧಾರಿ ಪರಮಾತ್ಮ ಪರಬೊಮ್ಮ ಪರರಿಗುಪಕಾರಿ||1|| ಅರಣ್ಯದಿ ಮೊರೆಯಿಟ್ಟು ಕರಿರಾಜಗೊಲಿದಿ ತರಳ ಪ್ರಹ್ಲಾದನ್ನ ವೈರಿಯ ಮುರದಿ ||2|| ವರ ಷೋಡಶ ಗಿರಿಯಲ್ಲಿ ನಿರುತ ನೀನಿರುವಿ ಹರಿದಾಸರು ಕರೆದರೆ ಎಲ್ಲಿದ್ದರೆ ಬರುವಿ||3|| ಅನಂತನಾಮನೆ ನಿನ್ನ ಅನಂತ ಸದ್ಗುಣವ ನೆನೆವರಿಗೊಲಿವಂಥ ಪವಮಾನನೀಶಾ ||4|| ಅಜಭವಾಧಿಪ ನೀನು ವಿಜಯಸಾರಥಿಯೇ ತ್ರಿಜಗವಂದಿತ ಈಶ ವಿಜಯವಿಠ್ಠಲನೇ ||5||

ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ Read More »

ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು

ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು | ತಾರಯ್ಯಾ ಒಂದು ಚುಂಬನ ಕರುಣ | ಬೀರಯ್ಯಾ ನಮ್ಮ ವಶಕೆ ಶೋಭಾನೆ || ನಿಲ್ಲು ನಿಲ್ಲೆಲೊ ದೇವಾ | ಎಲ್ಲಿ ಪೋಗುವಾ ನೀನು ಸಲ್ಲದು ನಿನ್ನ ಚೋರಂಗ ಲೀಲಿಗೆ ಪಳ್ಳಿಸೋಕುದೆ ಇಲ್ಲ ಇಲ್ಲದೆ ||1|| ನೀರೊಳು ಈಸುವ ನಾರಿಯೆರ ಶೀರೇ ಹಾರಿಸಿ ವೈದು ಮರನೇರಿ | ಹಾರಿಸಿ ಮರನೇರಿದ ಸಣ್ಣ | ಪೋರ ಬುಧ್ಧಿಗಳ ಬಿಡವಲ್ಲಿ ||2|| ತುರುಕರಗಳ ಕಾಯ್ದು | ಚರಿಸಿದೆ ಅಡವಿಯ | ಪರಸತಿಯರ ವ್ರತಗಳ |

ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು Read More »

ಬಾ ಬಾ ಭಕುತರ ಹೃದಯ ಮಂದಿರ

ಬಾ ಬಾ ಭಕುತರ ಹೃದಯ ಮಂದಿರ ಬಾ ಬಾ ಜಗದೋದ್ಧಾರ ಬಾ ಬಾ ವೇಂಕಟಾಚಲ ವಿಹಾರ ಬಾ ಬಾನೇಕಾವತಾರ ಧೀರ-ಶೂರ ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ ಮೋಕ್ಷದಾಯಕ ಪಾಂಡವ ಪಕ್ಷ ಅಕ್ಷಯವಂತ ಸೂಕ್ಷ್ಮಾಂಬರ ಧರಾ- ಧ್ಯಕ್ಷ ಪ್ರತ್ಯಕ್ಷದ ದೈವ ಅಕ್ಷತನಾರೇರ ತಕ್ಷಣದಲಿ ತಂದ ಅಕ್ಷರ ಪುರುಷ ಗೋವಿಂದ ||1|| ಜಾಂಬೂನಾದಾಂಬರ ಸಾಂಬಜನಕ-ನೀ ಲಾಂಬುದ ವರ್ಣಸುಪೂರ್ಣ ಸಾಂಬವಿನುತ ಸುಗುಣಾಂಬುಧಿ ನಾನಾ ವಿ ಡಂಬನ ತೋರಿದ ಮಹಿಮ ಕಾಂಬುವೆ ನಿನ್ನ ಚರಣಾಂಬುಜ

ಬಾ ಬಾ ಭಕುತರ ಹೃದಯ ಮಂದಿರ Read More »

ಬಲ್ಲವಾಗಿಲ್ಲೆ ಪರಮಾತ್ಮಾ

ಬಲ್ಲವಾಗಿಲ್ಲೆ ಪರಮಾತ್ಮಾ ಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದು ಆಡಿÀದವೆಲ್ಲ ಹರಿಯ ರೂಪವೆಂದು ಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದು ಕೂಡಿದದ್ದೆಲ್ಲ ಹರಿ ಭಕ್ತರೆಂದು ||1|| ತಾಪತ್ರಯಗಳೆಲ್ಲ ಮಹಾ ತಪಸು ಎಂದು ರೂಪಗಳೆÀಲ್ಲ ಹರಿಕಾಂತಿ ಎಂದು ಪೋಪದು ಬರುವುದೆಲ್ಲ ವ್ಯಾಪಾರ ಹರಿ ಅಧೀನವೆಂದು ||2|| ತಾರತಮ್ಯಕಿದು ಪರಲೋಕದಿ ಸರಿಯಿಲ್ಲ ಸಿರಿ ಹರಿಯದೊರೆ ತನಗೆ ಎಂದೆನುತಾ ಇರುಳು ಹಗಲು ಏಕ ಭಕ್ತಿಯಿಂದಲಿ ನಿತ್ಯ ಕಾಲಕಾಲಕೆ ಹರಿಯ ವ್ಯಾಪಾರ ಸ್ಮರಿಸುತ್ತ ಓಡ್ಯಾಡುತ ||3|| ಒಲಿಸಿ ಒಲಿಸಿ ಒಲಿದು ಒಲಿದು

ಬಲ್ಲವಾಗಿಲ್ಲೆ ಪರಮಾತ್ಮಾ Read More »

ಬಣ್ಣಿಸಲಾರೆ ನಿಂದು ಈ ಮೂರುತಿಯ

ಬಣ್ಣಿಸಲಾರೆ ನಿಂದು ಈ ಮೂರುತಿಯ ಬಣ್ಣಿಸಲಾರೆ ನಿಂದು ಕನ್ಯಾರೂಪವ ತಾಳಿದ ಚನ್ನಿಗ ಕೃಷ್ಣರಾಯನಾ ದಾನವರ ಮರಳು ಮಾಡಿ ಮಾಣದೆ ಸುಧೆಯನೆರೆದು ಆ ನಿರ್ಜರರ ಪಾಲಿಸಿದ ಶ್ರೀ ನಾರಾಯಣಿ ವೇಷವಾ ||1|| ಆರಾರು ಸಾವಿರ ಸಕಲ ಶರೀರದ ಎಡಕೆ ಇಪ್ಪ ಸಾರಸುಂದರವಾಗಿದ್ದ ನಾರಿ ರೂಪಗಳು ಇದೊ ||2|| ಭೂತಳದೊಳಗೆ ಜನಕೆ ಮಾತೆಯಾಗಿ ಕಾವುತಿಪ್ಪ ಜಾತರಹಿತ ವಿಜಯವಿಠ್ಠಲ ಶ್ರೀ ತರಣಿಯಾಳಿದ ಪೆಣ್ಣಿನ ||3||

ಬಣ್ಣಿಸಲಾರೆ ನಿಂದು ಈ ಮೂರುತಿಯ Read More »

ಬಡನಡುವು ಬಾಲೆಯರ ಕೂಡಿ

ಬಡನಡುವು ಬಾಲೆಯರ ಕೂಡಿ ಲ್ಗಡಲೋಡಿಯನೊಡನೊಡನೆ | ಬಿಡದೆ ಆಡಿದರೊ ವಸಂತ ಪಾಲ್ಗೆನೆಗಧಿಕ ಮೃದುವಸನಮಂ ಉಟ್ಟ್ಟು ನು | ಣ್ಗೂದಲು ತಿದ್ದಿ ಪಲಪು ಬೈತಲೆ ಸೊಗಸು | ಪಾಲ್ಗೊನಿಗೆ ಬಂದಿರಲು | ತುಂಬಿ ಕುಂಕುಮ ಮಿಗೆ | ಬಲ್ಕಸ್ತುರಿಯ ತಿಲಕ | ಅರೆರೆ | ಕಾಳ್ಗತ್ತಲೆ ಮೀರಿ ತೋರುತಿರೆ ತಿರ್ತಿತಿರಗಿ | ವಾಲ್ಗಣ್ನು ನೋಟ ವೈಯಾರ ಸೋಲ್ದುರುಬು ವಿ | ಶಾಲ್ಗೊಂಚಲು ಮುತ್ತುಸುತ್ತು ಸೂಸುತಲಿರೆ ಪೇಳ್ಗಾಣೆ ಪೆಂಗಳು ಶೃಂಗರಿಸುವ ಮದವೊ ||1|| ಸಣ್ಮೊಗ್ಗೆ ಜಗದ ವಿಚಿತ್ರ ಕಂಚುಕವು ಮೋ

ಬಡನಡುವು ಬಾಲೆಯರ ಕೂಡಿ Read More »

ಬಂದೆ ನಾ ನಿಂದೆ ಇಂದೇ

ಬಂದೆ ನಾ ನಿಂದೆ ಇಂದೇ | ವಂದಿಸಿದೆನೊ ವಂದೆ | ಬಿಂದು ಮಾಧವ ತಂದೆ | ಆನಂದ ಇಂದಿರೇಶ ಬಂದೆ ಪುರುಹೂತ ಜಾತ ಸೂತ | ಸರಸಿಜ ತಾತಾ | ಪರಮ ಪುರುಷ ಖ್ಯಾತ | ಸರವಂದ್ಯ ದೈತ್ಯ ಘಾತಾ | ಹಾಹಾ ಚರಣವ ನಿರುತರ ನೆರೆನಂಬಿದೆ | ದು ಸ್ತರ ಭವಶರಧಿ ಉತ್ತರಿಸೊ ಉರಗಶಾಯಿ ||1|| ಕರಿ ಪಾಶ ನಾಶ ಈಶಾ | ವರ ಮೂರ್ತಿ ವರದೇಶಾ ಶರಣರ ಪರಿತೋಷಾ | ತರತಮ್ಯ e್ಞÁನ ಕೋಶ

ಬಂದೆ ನಾ ನಿಂದೆ ಇಂದೇ Read More »

ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ

ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ ಬಂದು ನಿಲ್ಲೋ ನಿನಗೊಂದಿಸುವೆನು ಗೋ ವಿಂದ ಗೋವಳರಾಯ ಸಂದೇಹಗೊಳಿಸದೆ ಸದೋಷಕ ನಾನು ಸದಾ ನಿರ್ಮಲ ನೀನು ಪದೆಪದೆಗೆ ಪೇಳುವುದುಚಿತವಲ್ಲ ||1|| ಮನದೊಳು ಪೊಳದು ಚಿಂತನೆಗೆ ನೆಲೆಯಾಗಿ ಘನಮಹಿಮನೆ ಮಧ್ವಮುನಿ ಮನ ಮಂದಿರ ||2|| ಕಡೆಗೋಲು ನೇಣಪಿಡಿದ ಪರಮಾನಂದ ಉಡುಪಿಯ ಶ್ರೀ ಕೃಷ್ಣ ವಿಜಯವಿಠ್ಠಲರೇಯ||3||

ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ Read More »

ಬಂದು ನಿಂದಾ ಕಣ್ಣ ಮುಂದೆ

ಬಂದು ನಿಂದಾ | ಕಣ್ಣ ಮುಂದೆ | ಬಂದು ನಿಂದಾ ಬಂದು ನಿಂದಾ ಭಾಗವತರ ಪ್ರಿಯಾ | ಕಂದರ್ಪಜನಕ ಶ್ರೀ ಕರುಣಾಸಾಗರ ಮೂರ್ತಿ ಕುಟಿಲ ಕುಂತಲ ದೇವ | ವಟು ವೇಷದಿಂದಲಿ || ನಟನೆ ಮಾಡುತ ದಿವ್ಯ | ಪಟುತರದಲಿ ತಾನು ||1|| ಮುರಳಿನೂದುತ್ತ | ಮರುಳುಗೊಳಿಸಿ ಜನರ || ಕೊರಳ ಪದಕಹಾರ | ಧರಿಸಿ ತಾ ನಲಿಯುತ ||2|| ಸುಜನರ ಪೊರೆಯುವ | ಕುಜನರ ತರಿಯುವ | ವಿಜಯ ಸಾರಥಿ ದಿವ್ಯ | ವಿಜಯವಿಠಲರೇಯಾ ||3||

ಬಂದು ನಿಂದಾ ಕಣ್ಣ ಮುಂದೆ Read More »

ಬಂದು ಕಂಡೆನೊ ಇಂದು

ಬಂದು ಕಂಡೆನೊ ಇಂದು | ಇಂದುಧರನ ಪಾದದ್ವಂದ್ವಗಳನು ದಿನವು | ಎಂದೆಂದಿಗೆ ಬಿಡದೆ | ಪೊಂದಿದ್ದ ಪಾಪಗಳು | ನಿಂದಿರದಲೆ ಓಡಿ ಬೆಂದು ಪೋದವು ನೋಡಾ ಸತಿಗೆ ಅಧರ್Àಕಾಯ ಹಿತದಿಂದಲಿ ಇತ್ತು | ಚತುರತನದಲಿಳೆಯೊಳು ಪತಿತ ಮಾನವರಿಗೆ | ಮತಿಬಾಹದೊ ಮಾನಸ ಸತತ ದೃಢವನೀವ | ಪ್ರತಿದಿನದಲಿ ಕಾಯ್ವಾ ||1|| ವಿಷವ ಧರಿಸಿ ಸುಮನಸರ ನಡುವೆ ಮೆರೆದೆ | ಪಶುವಾಹನ ಪರಮೇಶ ಅಸುರಾರಿಗಲ್ಲದ | ಅಸುರರ ಕೊಲ್ಲುವ ರಂಜಿಸುವಾ | ಶಶಿ ಜಟಾ ಕಮನೀಯ ಮಣಿಮಕುಟಾ ||2||

ಬಂದು ಕಂಡೆನೊ ಇಂದು Read More »